ಮುಹಮ್ಮದ್(ಸ)ರು ಮಾನವ ಕುಲಕ್ಕೆ ಏನನ್ನು ನೀಡಿದ್ದಾರೆ

      ಅನೇಕ ಮುಸ್ಲಿಮೇತರರು ಮುಹಮ್ಮದ್(ಸ) ಮಾನವ ಕುಲಕ್ಕೆ ಏನನ್ನು ಕೊಟ್ಟಿದ್ದಾರೆ ಎಂದು ಪ್ರಶ್ನಿಸುತ್ತಾರೆ. ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳ ಸುದ್ದಿ ವಾಹಿನಿಗಳು ಮುಹಮ್ಮದ್(ಸ)ರನ್ನು ಆಪಪ್ರಚಾರ ಮಾಡವಲ್ಲಿ ತೊಡಗಿದ್ದಾರೆ. ಇದರಿಂದ ಮನುಕುಲಕ್ಕೆ ಉಂಟಾಗಿರುವ ಗೊಂದಲವನ್ನು ಶಿಕ್ಷಣದ ಮೂಲಕ ನಿವಾರಿಸುವುದೇ ಈ ಸಮಸ್ಯೆಯ ಸೂಕ್ತವಾದ ಪರಿಹಾರವಾಗಿದೆ.

ಪರಿವಿಡಿ

   10ಪ್ರಮುಖ ಪಾಠಗಳು


1.            ಎಕೈಕನಾದ ಅಲ್ಲಾಹ್’ನನ್ನು ಆರಾಧಿಸುವುದು.

   ಅಲ್ಲಾಹ್’ನ ಪೈಗಂಬರ್ ಮುಹಮ್ಮದ್(ಸ)ರು ಮಾನವ ಕುಲಕ್ಕೆ ದೈವವಾಣಿಯ ಮೂಲಕ ಮಿಥ್ಯ ಆರಾಧ್ಯ ವಸ್ತುಗಳ ಆರಾಧನೆಯಿಂದ ಮುಕ್ತಗೊಳಿಸಿ, ಸತ್ಯ ಏಕೈಕ ಅಲ್ಲಾಹ್’ನ ಆರಾಧನೆ ಮಾಡುವ ಶಿಕ್ಷಣ ನೀಡಿದರು. ಅಲ್ಲಾಹ್’ನೊಂದಿಗೆ ಇತರ ಯಾರನ್ನೂ ಸೇರ್ಪಡೆ ಮಾಡದಿರುವಂತೆ ಉಪದೇಶಿಸಿದರು. ಹೀಗಾಗಿ ಮಾನವಕುಲ ಅಲ್ಲಾಹ್’ನ ಹೊರತು ಇತರರ ಆರಾಧನೆಯಿಂದ ಮುಕ್ತಿ ಪಡೆದರು. ಮಾನವರಿಗೆ ಇದು ಅತ್ಯಂತ ಗೌರವಾನ್ವಿತ ವಿಷಯವಾಗಿದೆ.

2.            ಮಿಥ್ಯ ಆರಾಧ್ಯರಿಂದ ಮುಕ್ತಿ ಪಡೆಯುವುದು.

  ಅಲ್ಲಾಹ್’ನ ಪೈಗಂಬರ್ ದೈವವಾಣಿಯ ಅನುಸಾರ ಮಾನವಕುಲಕ್ಕೆ ಅಂಧವಿಶ್ವಾಸ, ಮೋಸ,  ಮತ್ತು ಮಿಥ್ಯ ದೇವರುಗಳ ಮುಂದೆ ತಮ್ಮನ್ನು ಸಮರ್ಪಿಸಿಕೊಳ್ಳುವುದರಿಂದ ಮುಕ್ತಿಗೊಳಿಸಿದರು, ದೀವನಿಗೊಬ್ಬ ಮಗನಿದ್ದಾನೆ, ಅವನು ಮಾನವಕುಲದ ಪಾಪಗಳ ಪರಿಹಾರಕ್ಕಾಗಿ ತನ್ನನ್ನು ಅರ್ಪಿಸಿಕೊಂಡನು ಎಂಬ ಮಿಥ್ಯ ವಿಶ್ವಾಸ ಹಾಗೂ ಆಚರಣೆಗಳಿಂದ ಮನುಕುಲವನ್ನು ವಿಮುಕ್ತಗೊಳಿಸಿದರು.

3.            ಮುಸ್ಲಿಮೇತರರ ಹಕ್ಕು ಬಾಧ್ಯತೆಗಳನ್ನು ನಿರ್ಧರಿಸಿದರು.

   ಅಲ್ಲಾಹ್’ನ ಪೈಗಂಬರ್ ಮುಹಮ್ಮದ್(ಸ)ರು ಜನರ ಮಧ್ಯ ಸಹನಶೀಲತೆಯ ಬುನಾದಿಯನ್ನು ಹಾಕಿದರು. ಅಲ್ಲಾಹ್’ನು ಹೇಳಿದನು ; “ಧರ್ಮದಲ್ಲಿ ಯಾವುದೇ ಬಲವಂತವಿಲ್ಲ” ಅಲ್ ಬಖರ : (256.) ಮುಹಮ್ಮದ್(ಸ)ರು ಮುಸ್ಲಿಮೇತರರಿಗೆ ಕೆಲವು ಹಕ್ಕುಬಾಧ್ಯತೆಗಳನ್ನು ನಿರ್ಧರಿಸಿದ್ದಾರೆ. ಅವು, ಯಾವ ಮುಸ್ಲಿಮೇತರರು ಮುಸ್ಲಿಮರೊಂದಿಗೆ ಯುದ್ಧ ಮಾಡಲು ಬಯಸುವುದಿಲ್ಲವೋ ಅಂತಹವರ ಜೀವ ರಕ್ಷಣೆ, ಸಂತಾನ ರಕ್ಷಣೆ, ಧನ ಹಾಗೂ ಅವರ ಮರ್ಯಾದೆಯ ಸುರಕ್ಷತೆಯು ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಿದ್ದಾರೆ. ಇಂದು ಬಹಳಷ್ಟು ಮುಸ್ಲಿಮ್ ದೇಶಗಳಲ್ಲಿ ಯಹೂದಿಗಳು ಹಾಗೂ ಕ್ರಿಶ್ಚಿಯನ್ನರು ಸುರಕ್ಷಿತವಾಗಿದ್ದಾರೆ ಹಾಗೂ ಶಾಂತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ.

4.            ಅಲ್ಲಾಹ್’ನ ದಯೆ.

  ಅಲ್ಲಾಹ್’ನು ಪೈಗಂಬರ್ ಮುಹಮ್ಮದ್(ಸ)ರನ್ನು ಯಾವುದೇ ಒಂದು ಸೀಮಿತ ಜಾತಿ, ಭಾಷೆ, ಜನಾಂಗ, ಅಥವ ಸಮೂಹಕ್ಕಲ್ಲದೆ, ಇಡೀ ಮಾನವ ಕುಲಕ್ಕೆ ದಯಾಮಯರಾಗಿ ಕಳುಹಿಸಿದ್ದಾನೆ. ಅಥವ ಪೈಗಂಬರ್ ಮುಹಮ್ಮದ್(ಸ)ರು ತಮ್ಮ  ಉಪದೇಶದಲ್ಲಿ ಪ್ರಾಣಿ ಪಕ್ಷಿಗಳ ಮೇಲೂ ದಯೆ ತೋರುವಂತೆ ಉಪದೇಶಿಸಿದರು. ಕಾರಣವಿಲ್ಲದೇ ಅವುಗಳಿಗೆ ಹಾನಿ ಮಾಡದಿರಲು ಉಪದೇಶ ನೀಡಿದರು. (ಸಹಿ ಬುಖಾರಿ : 3381)

5.            ಪೈಗಂಬರರ ಮಧ್ಯದಲ್ಲಿ ತಾರತಮ್ಯವಿಲ್ಲ.

  “(ದೂತರೆ) ನಾವು ನಿಮಗಿಂತ ಮುಂಚೆ ಕಳಿಸಿದ್ದ ಎಲ್ಲ ದೂತರಿಗೂ ನನ್ನ ಹೊರತು ಬೇರೆ ದೇವರಿಲ್ಲ, ಆದ್ದರಿಂದ ನನ್ನನ್ನು ಮಾತ್ರ ಆರಧಿಸಿರಿ, ಎನ್ನುವ ದಿವ್ಯ ಸಂದೇಶವನ್ನೇ ಕಳುಹಿಸಿದೆವು” (ಅಲ್ ಅಂಬಿಯಾ 2 : 25.)

6.            ಮಾನವ ಕುಲದ ಹಕ್ಕು ಬಾಧ್ಯತೆಗಳನ್ನು ನಿರ್ಧರಿಸಿದರು.

  ಪೈಗಂಬರ್ ಮುಹಮ್ಮದ್(ಸ)ರು ಸ್ತ್ರೀ, ಪುರುಷ, ಯುವ, ವೃದ್ಧ, ಎಲ್ಲರಿಗೂ ಮಾನವೀಯ ಅಧಿಕಾರಗಳನ್ನು ರೂಪಿಸಿದರು. ಅವರೊಂದು ಉದಾಹರಣೆಯಾಗಿ ಅವುಗಳನ್ನು ಸ್ಥಾಪಿಸಿದರು. ತಮ್ಮ ಅಂತಿಮ ವಿದಾಯ ಹಜ್ಜ್ ಭಾಷಣದಲ್ಲಿ ಒಬ್ಬರು ಮತ್ತೊಬ್ಬರೊಂದಿಗೆ ಅನ್ಯಾಯವೆಸಗುವುದನ್ನು ತಡೆದರು. (ಸಹಿ ಬುಖಾರಿ ; 1623. 1626. 6361)

  ಈ ಎಲ್ಲಾ ನಿರ್ಧಾರಗಳು ಪ್ರಪಂಚದ ದೊಡ್ಡ ದೊಡ್ಡ ಕಾನೂನು ನಿಯಮಾವಳಿಗಳನ್ನು ಸಂಸ್ಥಾಪಿಸಲಾಯಿತೋ ಅದಕ್ಕಿಂತಲೂ ಬಹಳ ಮುಂಚಿತವಾಗಿಯೇ ಇದು ಸ್ಥಾಪಿತವಾಗಿದೆ. Magna charta 1215ರಲ್ಲಿ, The declaration of rights 1628ರಲ್ಲಿ.The personal  freedom law 1679ರಲ್ಲಿ. The american dicleration of independence 1776ರಲ್ಲಿ. The human and citizen rights charter 1789ರಲ್ಲಿ. The worldwide diclaration of human rights 1948ಹಕ್ಕುಗಳ ಬಹಳಷ್ಟು ಮುಂಚಿತವಾಗಿಯೇ ಮುಹಮ್ಮದ್(ಸ)ರು ಮಾನವೀಯ ಹಕ್ಕುಬಾಧ್ಯತೆಯ ಅಧಿಕಾರಗಳನ್ನು ಸ್ಥಾಪಿಸಿದ್ದರು.

7.            ದುರ್ಮಾರ್ಗ ಅಥವ ದುಷ್ಟ ಕಾರ್ಯಗಳಿಂದ ಎಚ್ಚರಿಸಿದರು.

   ಮುಹಮ್ಮದ್(ಸ) ಪೈಗಂಬರರು ನೈತಿಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಅದರೆಡೆಗೆ ಹೆಚ್ಚು ಗಮನಹರಿಸಿದ್ದಾರೆ, ಹಾಗೂ ಉತ್ತಮ ರೀತಿಯಲ್ಲಿ ಸಂವಹನಾ ವರ್ತನೆಯನ್ನು ಕಲಿಸಿದ್ದಾರೆ. ಪ್ರಾಮಾಣಿಕತೆ, ನಿಷ್ಠೆ, ಪಾವಿತ್ರ್ಯತೆ ಹಾಗೂ ತಂದೆ ತಾಯಿಯರ ಅಂತೆಯೇ ಸಂಭಂಧಿಕರ ಆಜ್ಞಾಪಾಲನೆಯ ಆದೇಶವನ್ನೂ ನೀಡಿದರು. ತಾವು ನುಡಿದಂತೆ ನಡೆದು ತೋರಿಸಿದ್ದಾರೆ. ಎಲ್ಲಾ ಕೆಟ್ಟ ಕಾರ್ಯಗಳಿಂದ ಎಚ್ಚರಿಸಿದರು ಅವುಗಳೆಂದರೆ  ಸುಳ್ಳು, ಶತ್ರುತ್ವ, ಮೋಸ, ವೈಭಿಚಾರ, ತಂದೆ ತಾಯಿಯರೊಂದಿಗೆ ದುರ್ವರ್ತನೆ, ಮುಂತಾದ ವಿಷಯಗಳಿಂದ ದೂರವಿರುವಂತೆ ಪಾಠ ಕಲಿಸಿಕೊಟ್ಟರು. ( ಸಹಿ ಬುಖಾರಿ ; 1623. 1626. 6361.)

8.            ಜನರಿಗೆ ವಿಚಾರ ವಿಮರ್ಶೆ ಮಾಡುವ ಶಿಕ್ಷಣವನ್ನು ನೀಡಿದರು.

   ಪೈಗಂಬರ್ ಮುಹಮ್ಮದ್(ಸ)ರು ಅಲ್ಲಾಹ್’ನ  ಸಂದೇಶದ(ವಾಣಿ) ಮೇಲೆ ವಿಚಾರ ಚಿಂತನೆ ನಡೆಸುವಂತೆ ಕಲಿಸಿಕೊಟ್ಟರು, ಈ ವಿಶ್ವದ ಕುರಿತು ವಿಚಾರ ಚಿಂತನೆ ನಡೆಸಿದರೆ ಜ್ಞಾನ ಪ್ರಪ್ತಿಯಾಗಲು (ಲಭಿಸಲು) ಸಾಧ್ಯ.

9.            ಇಸ್ಲಾಮ್ ಮಾನವೀಯ ಸ್ವಾಭಾವಿಕ ಧರ್ಮವಾಗಿದೆ.

   ಮುಹಮ್ಮದ್(ಸ) ಪೈಗಂಬರರು ಅಲ್ಲಾಹ್’ನ ದುವ್ಯವಾಣಿಯ ಅವತೀರ್ಣದೊಂದಿಗೆ ಇಸ್ಲಾಂನ್ನು ಮಾನವಕುಲದ ಮುಂದಿಟ್ಟಿದ್ದಾರೆ, ಇಸ್ಲಾಮ್ ಒಂದು ಸ್ವಾಭಾವಿಕ ಧರ್ಮವಾಗಿದೆ, ಇದು ಮಾನವನ ಆತ್ಮ ಹಾಗೂ ಶಾರೀರಿಕ ಎರಡೂ ಅವಶ್ಯಕತೆಗಳನ್ನು ಪೂರೈಸುತ್ತದೆ. ಪ್ರಾಪಂಚಿಕ ಹಾಗೂ ಮರಣೋತ್ತರ ಜೀವನಗಳಲ್ಲಿ ಸಮತೊಲನೆಯನ್ನು ಉಂಟುಮಾಡುತ್ತದೆ.

  ಇತರೆ ಧರ್ಮಗಳಂತೆ ಮನುಷ್ಯನ ಶಾರೀರಿಕ ಇಚ್ಛೆಗಳನ್ನು ಇಸ್ಲಾಮ್ ಒತ್ತಿಡುವುದಿಲ್ಲ, ಅಲ್ಲದೆ ಅವರಿಗೆ ಧಾರ್ಮಿಕ ರೀತಿಯಿಂದ ಪೂರ್ಣಗೊಳಿಸುವ ಅವಕಾಶವನ್ನು ನೀಡುತ್ತದೆ, ಉದಾಹರಣೆಗೆ; ವಿವಾಹ ಮುಂತಾದವು ಇಂತಹ ಅನ್ಯಧರ್ಮದ ಪಾಲನೆ ಮಾಡುವವರು ಕೆಲ ಸಮಯದ ನಂತರ ಧಾರ್ಮಿಕ ವಿಷಯಗಳನ್ನು ತಿರಸ್ಕರಿಸುವರು ಹಾಗೂ ಸಂಪೂರ್ಣವಾಗಿ ಪ್ರಾಪಂಚಿಕ ಜೀವನದಲ್ಲಿ ತೊಡಗುವರು. ತಮ್ಮ ಶಾರೀರಿಕ ಅವಶ್ಯಕತೆಗಳಿಗಷ್ಟೇ ಆದ್ಯತೆ ನೀಡಿ ಆತ್ಮದ ಅವಶ್ಯಕೆಗಳನ್ನು ಮರೆತುಬಿಡುವರು.

10.          ಸಹೋದರತೆಯ ಉತ್ತಮ ಉದಾಹರಣೆ ಹಾಗೂ ಮಾದರಿಯನ್ನು ತೋರಿಕೊಟ್ಟರು.

  ಮುಹಮ್ಮದ್(ಸ)  ಪೈಗಂಬರರು ಇಡೀ ಪ್ರಪಂಚದ ಮುಂದೆ ಸಹೋದರತೆಯ ಉನ್ನತ ಮಾದರಿಯನ್ನು ತೋರಿದ್ದಾರೆ. ಹೇಳಿದರು; “ಯಾವುದೇ ಒಬ್ಬ ಮನುಷ್ಯನು ತನ್ನ ಜಾತಿ ಅಥವ ವರ್ಗಕ್ಕಿಂತ ದೊಡ್ದವನಾಗಿರುವುದಿಲ್ಲ. ಎಲ್ಲರೂ ತಮ್ಮಲ್ಲಿ ಸರಿಸಮನಾಗಿದ್ದಾರೆ, ಯಾರಾದರು ಉತ್ತಮ ಹಾಗೂ ಶ್ರೆಷ್ಟವೆಂದಾದರೆ ಅವರು ಪಾಲಿಸುತ್ತಿರುವ ಧರ್ಮ ಪಾಲನೆ, ಅನುಸರಣೆಯ ಭಯಭಕ್ತಿಯಿಂದ ಮಾತ್ರ,” ಮುಹಮ್ಮದ್(ಸ) ಪೈಗಂಬರರು ಸಹಚರಿಗೆ ಧರ್ಮದ ಸೇವೆ ಮಾಡುವ ಅವಕಾಶವನ್ನು ಎಲ್ಲರಿಗೂ ಸರಿಸಮಾನವಾಗಿ ನೀಡಿದ್ದರು. ಅವರಲ್ಲಿ ಬೆನ್ಜನ್’ಟೈನ್(Bainzantine)ನ ಶುಹೈಬ್ (ರ ಅ) ರವರೂ ಇದ್ದರು. ಅಬಿಸೀನಿಯಾದ ಬಿಲಾಲ್ (ರ ಅ)ರವರೂ ಇದ್ದರು ಇಂತಹಾ ಅನೇಕ ಅರಬೇತರ ಸಹಚರರು ಇದ್ದರು.

  ತೀರ್ಮಾನ

   ಇದರ ಫಲಿತಾಂಶವೇನೆಂದರೆ ಮುಹಮ್ಮದ್(ಸ)ರ ಈ ಚಿಕ್ಕ ಪಾಠಗಳ ಲೇಖನದಲ್ಲಿ ಸಂಪೂರ್ಣ ಚರಿತ್ರೆ ತಿಳಿಸಿಕೊಡುವುದು ಕಠಿಣವಾಗಿದೆ, ತಮ್ಮ ಜೀವನ ಚರಿತ್ರೆಯನ್ನು ಓದಿದ ಬಳಿಕ ಬಹಳಷ್ಟು ಪಾಶ್ಚಿಮಾತ್ಯರು ಪೂರ್ವ ದೇಶದ ಅನ್ವೇಷಕರು ಮುಹಮ್ಮದ್(ಸ)ರ ಕುರಿತು ಬಹಳಷ್ಟು ಬರೆದಿದ್ದಾರೆ. 

 

ಆಧಾರ

782 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ