ಆಶುರಾ(ಹತ್ತನೆಯ)

   ಆಶುರಾ ಶಬ್ದದ ಅರ್ಥವೆಂದರೆ ‘ಹತ್ತನೇಯ’ ಎಂಬುದಾಗಿದೆ. ಇಸ್ಲಾಮಿನಲ್ಲಿ ಆಶುರಾ ಎಂದರೆ, ಇಸ್ಲಾಮಿ ಕ್ಯಾಲೆಂಡರ್ (ದಿನದರ್ಶಿಯ)ನ ಮೊದಲನೇ ತಿಂಗಳಾದ ಮುಹರ್ರಮ್’ನ ಹತ್ತನೇ ದಿನ. ಇಸ್ಲಾಮಿ ದಿನದರ್ಶಿಯು ಚಂದ್ರಮಾನದೊಂದಿಗೆ ಅಥವ ಚಂದ್ರನ ಅಸ್ತಮ ಉಗಮದ ಲೆಕ್ಕಾಚಾರದಿಂದ ನಡೆಯುತ್ತದೆ. [1]

ಪರಿವಿಡಿ

ಆಶುರಾದ ಇತಿಹಾಸ

   ಇಬ್ನೆ ಅಬ್ಬಾಸ್(ರ ಅ) ರವರು ಹೇಳಿದರು, “ಮುಹಮ್ಮದ್(ಸ)ರು ಮದೀನಾ ಪಟ್ಟಣಕ್ಕೆ ಬಂದಾಗ ಅವರು ಕಂಡಿದ್ದು, ಯಹೂದಿಯರು ಆಶುರಾದಿನ ಉಪವಾಸವಿಟ್ಟಿದ್ದರು. ಆಗ ಅವರು ಇದೇನೆಂದು ಕೇಳಿದರು? ಜನರು ಉತ್ತರಿಸಿದರು “ಇದೊಂದು ಒಳ್ಳೆಯ ದಿನ  ಈ ದಿನದಂದು ಅಲ್ಲಾಹ್’ನು ಇಸ್ರಯಿಲ್ ಜನರನ್ನು ಶತ್ರುಗಳಿಂದ ರಕ್ಷಿಸಿದ್ದನು, ಆದ್ದರಿಂದ ಪೈಗಂಬರ್ ಮೂಸಾ(ಅ ಸ)ರವರು ಈ ದಿನ ಉಪವಾಸವಿಟ್ಟರು” ಎಂದಾಗ ಮುಹಮ್ಮದ್(ಸ)ರು ಹೇಳಿದರು; “ಮೂಸಾ(ಅ ಸ)ರವರ ಮೇಲೆ ನಮ್ಮ ಅಧಿಕಾರ ಹೆಚ್ಚಿದೆ” ಎಂದರು, ಹಾಗಾಗಿ ಮುಹಮ್ಮದ್(ಸ)  ಆ ದಿನ ಉಪವಾಸವಿಟ್ಟರು ಹಾಗೂ ಜನರಿಗೂ ಉಪವಾಸವಿಡುವ ಆಜ್ಞೆ ನೀಡಿದರು. (ಬುಖಾರಿ : 1865)

ಹದೀಸ್

   ಆಯಿಶಾ (ರ ಅ)ರವರು ಉಲ್ಲೇಖಿಸಿದರು. “ರಮಜಾನಿನ ಉಪವಾಸಗಳು ಕಡ್ಡಾಯವಾಗುವ ಮುಂಚೆಯೇ ಜನರು ಆಶುರಾದ ಉಪವಾಸವಿಡುತ್ತಿದ್ದರು ರಮಜಾನಿನ ಉಪವಾಸಗಳು ಕಡ್ಡಾಯವಾದ ನಂತರ ಆಶುರಾದ ಉಪವಾಸ ಐಚ್ಛಿಕವಾಗಿದೆ. (ಸಹಿ ಬುಖಾರಿ : vol 3: 116. 117. & vol 6: 29.)

ಅಬ್ದುಲ್ಲಾಹ್ ಬಿನ್ ಅಬ್ಬಾಸ್(ರ ಅ)ರು ಉಲ್ಲೇಖಿಸಿದರು. “ಮುಹಮ್ಮದ್(ಸ)ರು ಆಶುರಾದ ದಿನ ಉಪವಾಸವಿಟ್ಟರು ಹಾಗೂ ಇತರರಿಗೂ ಉಪವಾಸವಿರುವಂತೆ ತಿಳಿಸಿದಾಗ, ಸಹಚರರು ಹೇಳಿದರು, ಯಹೂದಿ ಹಾಗೂ ಕ್ರಿಶ್ಚಿಯನ್ನರು ಈ ದಿನಕ್ಕೆ ಮಹತ್ವ ಕೊಡುವರು ಎಂದಾಗ, ಮುಹಮ್ಮದ್(ಸ)ರು ಹೇಳಿದರು, ಬರುವ ಮುಂದಿನ ವರ್ಷ ಅಲ್ಲಾಹ್’ನು ಬಯಸಿದರೆ 9ನೇ ಮುಹರ್ರಮ್ ಸಹ ಪವಾಸವಿಡುವೆವು ಎಂದರು. ಮುಂದೆ ಇಬ್ನೆ ಅಬ್ಬಾಸ್(ರ ಅ) ಹೇಳಿದರು ಮುಂದಿನ ವರ್ಷದ ಆ ದಿನದ ಮುಂಚಿತವಾಗಿಯೇ ಮುಹಮ್ಮದ್(ಸ)ರ ಮರಣವಾಯಿತು” (ಸಹಿಹ್ ಮುಸ್ಲಿಮ್ 1916)

  ಜಾಬಿರ್ ಬಿನ್ ಸಮುರಾ ಉಲ್ಲೇಖಿಸಿದರು; ಮುಹಮ್ಮದ್(ಸ)ರು ಆಶುರಾದದಿನ ಪವಾಸವಿಡುವಂತೆ ತಿಳಿಸಿದರು, ಅಂತೆಯೇ ಈ ದಿನಕ್ಕೆ ವಿಶೇಷವಾಗಿ ಗಮನಹರಿಸುತ್ತಿದ್ದರು, ಆದರೆ ರಮಜಾನಿನ ಉಪವಾಸಗಳು ಕಡ್ಡಾಯವಾದ ನಂತರ ಆಶುರಾದ ಉಪವಾಸದ ವಿಷಯದಲ್ಲಿ ಅವರು ಯಾವುದೇ ರೀತಿಯಿಂದ ಉಪವಾಸವಿರುವ ಆಜ್ಞೆಯನ್ನು ನೀಡಲಿಲ್ಲ, ಬಿಟ್ಟು ಬಿಡುವಂತೆಯೂ ಹೇಳಲಿಲ್ಲ, ಅಲ್ಲದೆ ಈ ಉಪವಾಸಕ್ಕೆ ಹೆಚ್ಚಿನ ವಿಶೇಷತೆಯನ್ನು ನೀಡಲಿಲ್ಲ. ( ಸಹಿ ಮುಸ್ಲಿಮ್ 1128, 1125) [2]

ಆಶುರಾ ಯಾವದಿನ ಆಗುತ್ತದೆ

   ನವವಿ(ರ ಅ)ರವರು ಹೇಳಿದರು; ಸಹಚರರು ಹೇಳಿದರು; ‘ಆಶುರಾ’ ಮುಹರ್ರಮ್ ತಿಂಗಳ ಹತ್ತನೇ ದಿನವಾಗಿದೆ. ‘ತಾಸುಆ’ ಈ ತಿಂಗಳ ಒಂಭತ್ತನೇ ದಿನವಾಗುತ್ತದೆ. ಹೆಚ್ಚಾಗಿ ವಿದ್ವಾಂಸರ ಇದೇ ಅಭಿಪ್ರಾಯವಿದೆ, ಇಬ್ನೆ ಅಬ್ಬಾಸ್(ರ ಅ)ರು ಮುಹರ್ರಮ್ ತಿಂಗಳ ಹತ್ತನೆ ದಿನ ಆಶುರಾದಂದು ಉಪವಾಸವಿಡುವಂತೆ ಹೇಳಿದ್ದಾರೆ. (ತಿರ್ಮಿಜಿ)

ಆಶುರಾದ ದಿನ ಉಪವಾಸವಿಟ್ಟರೆಷ್ಟು ಪುಣ್ಯ

   ಇಬ್ನೆ ಅಬ್ಬಾಸ್(ರ ಅ) ಹೇಳಿದರು; ಮುಹಮ್ಮದ್(ಸ)ರು ಈ ದಿನದ ಪವಾಸಕ್ಕೆ ನೀಡಿದಷ್ಟು ಮಹತ್ವ ಇತರ ಯಾವುದೇ ದಿನದ ಉಪವಾಸಕ್ಕೂ ನೀಡುತ್ತಿರಲಿಲ್ಲ, ರಮಜಾನ್ ತಿಂಗಳ ಉಪವಾಸಗಳಿಗೆ ನೀಡಿದಷ್ಟು ಮಹತ್ವ ಇತರ ಯಾವುದೇ ತಿಂಗಳಿಗೆ ಮಹತ್ವ ನೀಡುತ್ತಿರಲಿಲ್ಲ. (ಸಹಿ ಬುಖಾರಿ 1867)

  ಆ ದಿನದ ಉಪವಾಸದ ಪ್ರತಿಫಲವನ್ನು ಪಡೆಯಲು ಮುಹಮ್ಮದ್(ಸ)ರು ಬಹಳಷ್ಟು ಮಹತ್ವವನ್ನು ಕೊಡುತ್ತಿದ್ದರು. ಮುಹಮ್ಮದ್(ಸ)ರು ಹೀಗೆ ಹೇಳಿರುವರು; “ ನಾನು ಆಶುರಾದ ಉಪವಾಸದ ಪ್ರತಿಫಲವನ್ನು ನನಗೆ ಅಲ್ಲಾಹ್’ನು ಗತ ವರ್ಷದ ಪಾಪಗಳನ್ನು ಪರಿಹರಿಸುವ ರೂಪದಲ್ಲಿ ನೀಡುವನೆಂದು ಆಶಿಸುತ್ತೇನೆ” ಎಂದರು. (ಸಹಿಹ್ ಮುಸ್ಲಿಮ್ 1976)

 

ವಿದ್ವಾಂಸರ ದೃಷ್ಟಿ ಕೊನ

   ಶೇಖ್ ಇಬ್ನೆ ತೈಮಿಯಾ ರಹಿಮಹುಲ್ಲಾರವರು ಹೇಳಿದರು; “ರಮಜಾನ್ ತಿಂಗಳಲ್ಲಿ ಅರಫಾದ ದಿನದ ಶುದ್ಧಿಯು ನಮಾಜ್ ಮತ್ತು ಉಪವಾಸದ ಪ್ರತಿಫಲವೆಂದರೆ, ಕೇವಲ ಕೆಳದರ್ಜೆಯ ಪಾಪಗಳು ಕ್ಷಮಿಸಲ್ಪಡುತ್ತವೆ, ( ಅಲ್ ಫತಾವಾ ಅಲ್ ಕುಬ್ರ ಭಾಗ 5) [3].

 ಆಧಾರ

 

 [1] http://www.islam21c.com/islamic-law/3852-when-to-fast-ashoura (english)

[2] http://www.sunnah.com/search/commanded-us-to-fast--sq-Ashura-sq- (english)

[3] http://sunnahonline.com/library/hajj-umrah-and-the-islamic-calendar/324-virtues-of-muharram-and-fasting-on-ashura-the (english)

850 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ