ಹದಿ

  ಹದಿಯು ಪ್ರಾಣಿ ತ್ಯಾಗವಾಗಿದ್ದು, ಹಜ್ಜ್ ಸಮಯದಲ್ಲಿ ಯಾತ್ರಿಕರು ದಾನಕ್ಕಾಗಿ ನೀಡುತ್ತಾರೆ (ಯಾಹ್’ದೀಹಿ). ಇದು "ಅಲ್-ಅನ್-ಆಮ್" ಪ್ರಾಣಿಗಳಲ್ಲಿ ಒಂದಾಗಿದೆ, ಅಂದರೆ, ಕುರಿಗಳು, ಜಾನುವಾರುಗಳು ಅಥವ ಒಂಟೆಗಳು, ಅವು ಇಹ್ರಾಮ್’ಗೆ ಪ್ರವೇಶಿಸುವ ಮೊದಲು ಅವುಗಳನ್ನು ತರುವರು. ಒಂದು ಮಾತ್ರ ‘ತಮತ್ತೊ’ ಮಾಡುವವರ ನಡುವಿನ ವ್ಯತ್ಯಾಸಗಳಲ್ಲಿ ಒಂದಾಗಿರುವುದೆಂದರೆ ‘ಖಿರಾನ್’ ಮಾಡುವವನು, ಖಿರಾನ್ ಮಾಡಿಮುಗಿಸಿ ನಂತರ ತನ್ನ ಉಮ್ರಾವನ್ನು ಮುಗಿಸುವವರೆಗೆ ಇಹ್ರಾಮ್’ನಿಂದ ನಿರ್ಗಮಿಸುವುದಿಲ್ಲ; ಅವರು ಎಂಟನೆಯ ದುಲ್-ಹಿಜ್ಜಾವರೆಗೂ ಇಹ್ರಾಮ್ನಲ್ಲಿರುತ್ತಾರೆ, ಇದು ಹಜ್ಜ್’ನ ಉದ್ದೇಶಕ್ಕಾಗಿ ಪ್ರವೇಶಿಸಿದ ದಿನವಾಗಿದೆ.

ಜುಲ್-ಹಿಜ್ಜಾದ ಹತ್ತನೇಯ ದಿನದಂದು ಅಥವ ಈದ್ ಉಲ್ ಅದ್’ಹಾ ದಿನದಂದು ಹಜ್ಜ್’ಯಾತ್ರಾರ್ಥಿಯಲ್ಲದ ಇತರರು ಮಾಡಿದ ತ್ಯಾಗವನ್ನು ‘ಉದುಹ್’ಯ್ಯ’ ಎಂದು ಕರೆಯಲಾಗುತ್ತದೆ.

ಪರಿವಿಡಿ

   ಹದೀಸ್

   ಇದು ಸಾಲಿಮ್ ಬಿನ್ ಅಬ್ದುಲ್ಲಾಹ್’ರಿಂದ ವರದಿಯಾಗಿದೆ ಇಬ್ನೆ ಉಮರ್(ರಅ)ರವರು ಹೇಳಿದರು; “ತಮ್ಮ ಕೊನೇಯ ಹಜ್ಜ್ ಯಾತ್ರೆ ಸಂದರ್ಭದಲ್ಲಿ, ಅಲ್ಲಾಹ್’ನ ಪೈಗಂಬರರು ಉಮ್ರಾಃ ಮತ್ತು ಹಜ್ಜ್’ನ್ನು ನಿರ್ವಹಿಸಿದರು. ಅವರು ಹದಿ(ಬಲಿದಾನದ ಪ್ರಾಣಿ)ಯನ್ನು ಅವರೊಂದಿಗೆ ಹೊಂದಿದ್ದರು, ನಂತರ ಅವರು ಸಫಾ ಮತ್ತು ಮರ್ವಾಗೆ ಹೋದರು ಮತ್ತು ಏಳು ಬಾರಿ ಅವೆರಡರ ನಡುವೆ ಓಡಿಹೋದರು ಮತ್ತು ಇಹ್ರಾಮ್ ಕಾರಣದಿಂದಾಗಿ ಯಾವುದೇ ಕೆಲಸವನ್ನು ನಿಷೇಧಿಸಲಿಲ್ಲ, ಅವರು ತಮ್ಮ ಹಜ್ಜ್ ಅನ್ನು ಪೂರ್ಣಗೊಳಿಸಿದ ಮತ್ತು ನಹ್ರ್’ನ ದಿನದಲ್ಲಿ ತನ್ನ ಹದಿಯನ್ನು ಅರ್ಪಿಸುವವರೆಗೆ, (ಜುಲ್-ಹಿಜ್ಜಾದ ಹತ್ತನೆಯ ದಿನ). ನಂತರ ಅವರು (ಮಕ್ಕಾಗೆ) ಹಠಾತ್ತನೆ ಮುಂದಾದರು ಮತ್ತು  ಕಾಬಾದ ತವಾಫ್’ನ್ನು ನಿರ್ವಹಿಸಿದರು, ಮತ್ತು ನಂತರ ಇಹ್ರಾಮ್ ಸ್ಥಿತಿಯಲ್ಲಿ ನಿಷೇಧಿಸಲ್ಪಟ್ಟ ಎಲ್ಲವನ್ನೂ ಅನುಮತಿಸಲಾಯಿತು.ಸಹಿಹ್ ಅಲ್ ಬುಖಾರಿ 1691ಮತ್ತು ಸಹಿಹ್ ಮುಸ್ಲಿಮ್ 1227.

 ಭಕ್ತರಲ್ಲಿ ಯಾರೂ ತಮ್ಮ ಸ್ವಂತ ದೇಶದಲ್ಲಿ ತ್ಯಾಗ ನೀಡುತ್ತೇನೆ ಎನ್ನುವಂತಿಲ್ಲ. ಏಕೆಂದರೆ ತ್ಯಾಗವು (ಹಜ್ಜ್’ನ) ಆಚರಣೆಗಳಲ್ಲಿ ಒಂದಾಗಿದೆ, ಆದ್ದರಿಂದ ಮಕ್ಕಾದಲ್ಲಿ ಮಾತ್ರ ಇದನ್ನು ಮಾಡಬಹುದು. ಯಾತ್ರಿಕರು ತ್ಯಾಗವನ್ನು ನೀಡಬೇಕಾಗಿದ್ದರೂ ಸಹ, ಏಕೆಂದರೆ ಅವರು ಹಜ್ಜ್ ಸಮಯದಲ್ಲಿ ಅನುಮತಿಸದ ಏನಾದರೂ ಮಾಡಿದರೆ, ಅವನು ತನ್ನ ಸ್ವಂತ ದೇಶದಲ್ಲಿ ಈ ಪ್ರಯಶ್ಚಿತ ತ್ಯಾಗವನ್ನು ನೀಡಬಾರದು, ಬದಲಿಗೆ ಇದು ಮಿನಾ ಅಥವ ಮಕ್ಕಾದಲ್ಲಿ ಮಾಡಬೇಕು.

  ವಿಸ್ವಾಂಸರ ದೃಷ್ಟಿಕೋನ

 

   ಅಬ್ದುಲ್ ಅಜೀಮ್ ಆಬಾದಿ ಹೇಳಿದರು; ಪವಿತ್ರ ಭೂಮಿಯಲ್ಲಿರುವ ಎಲ್ಲಾ ಕಡೆಗೆ(ಮಕ್ಕಾದ ಹರಮ್) ತ್ಯಾಗದ ಪ್ರಾಣಿಗಳನ್ನು ಬಲಿನೀಡುವುದಕ್ಕೆ ಅನುಮತಿಯಿದೆ ವಿದ್ವಾಂಸರ ಒಮ್ಮತದ ಪ್ರಕಾರ, ಆದರೆ ಹಾಜಿಯು ತ್ಯಾಗವನ್ನು ಅರ್ಪಿಸಲು ಮಿನಾ ಉತ್ತಮ ಸ್ಥಳವಾಗಿದೆ.

  ನೋಡಿರಿ

ಹಜ್ಜ್, ಉಮ್ರಾಃ, ಜುಲ್’ಹಿಜ್ಜಾ, ಯೌಮ್ ಉನ್ ನಹರ್, ಇಹ್ರಾಮ್, ಮಸ್’ಜಿದ್ ಎ ಹರಮ್, ಮಕ್ಕಾ;

  ಉಲ್ಲೇಖಗಳು

http://islamqa.info/en/10549

261 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ