ಸ್ವರ್ಗದ ಸುವಾರ್ತೆ ಪಡೆದ ಹತ್ತು ಸಹಚರರು

ಹತ್ತು ಸಹಚರರು ಸ್ವರ್ಗದ ಸುವಾರ್ತೆ ಪಡೆದಿರುವರು ಆ ಹತ್ತು ಸಹಚರರಿಗೆ ಮುಹಮ್ಮದ್(ಸ)ರು ತಮ್ಮ ಜೀವಿತಾವಧಿಯಲ್ಲೇ ಸ್ವರ್ಗದ ಸುವಾರ್ತೆಯನ್ನು ನೀಡಿದ್ದರು.

ಪರಿವಿಡಿ

ಅರ್ಥ

   ಹತ್ತು ಜನ ಸಹಚರರಿಗೆ ಸ್ವರ್ಗದ ಸುವಾರ್ತೆ ಪಡೆದ ಹತ್ತು ಸಹಚರರು ಎಂದು ಹೇಳಲಾಗುವ ಇವರಿಗೆ. ತಮ್ಮ ಜೀವಿತಾವಧಿಯಲ್ಲೇ ಈ ಸುವಾರ್ತೆಯನ್ನು ತಿಳಿಸಲಾಗಿತ್ತು. ಮುಹಮ್ಮದ್(ಸ)ರು ತಮ್ಮ ನಾಲಗೆಯಿಂದ  ಹತ್ತು ಸಹಚರರ ಹೆಸರುಗಳನ್ನು ತೆಗೆದುಕೊಂಡು “ಸ್ವರ್ಗದಲ್ಲಿ”

 ಹತ್ತು ಸಹಚರರ ಹೆಸರುಗಳು

1.            ಅಬೂಬಕರ್ ರಜಿಯಲ್ಲಾಹು ಅನ್’ಹು

2.            ಉಮರ್ ಇಬ್ನೆ ಖತ್ತಾಬ್ ರಜಿಯಲ್ಲಾಹು ಅನ್’ಹು

3.            ಉಸ್ಮಾನ್ ಇಬ್ನೆ ಅಫ್ಫಾನ್ ರಜಿಯಲ್ಲಾಹು ಅನ್’ಹು

4.            ಅಲಿ ಇಬ್ನೆ ಅಬೀತಾಲಿಬ್ ರಜಿಯಲ್ಲಾಹು ಅನ್’ಹು

5.            ತಲ್ಹಾ ಬಿನ್ ಉಬೇದುಲ್ಲಾ ರಜಿಯಲ್ಲಾಹು ಅನ್’ಹು

6.            ಜುಬೇರ್ ಬಿನ್ ಅವ್ವಾಮ್ ರಜಿಯಲ್ಲಾಹು ಅನ್’ಹು

7.            ಅಬ್ದುರ್ರಹಮಾನ್ ಬಿನ್ ಔಫ್ ರಜಿಯಲ್ಲಾಹು ಅನ್’ಹು

8.            ಸಾದ್ ಬಿನ್ ಅಬಿವಖ್ಖಾಸ್ ರಜಿಯಲ್ಲಾಹು ಅನ್’ಹು

9.            ಸಯಿದಾ ಬಿನ್ ಜೈದ್ ರಜಿಯಲ್ಲಾಹು ಅನ್’ಹು

10.          ಅಬೂ ಉಬೇದಾ ಬಿನ್ ಜರ್’ಹಾ ರಜಿಯಲ್ಲಾಹು ಅನ್’ಹು ಹೋಗುವರು ಎಂದರು”

ಹದೀಸ್

  ಸಾದ್ ಬಿನ್ ಜೈದ್ (ರ ಅ)ರವರು ಉಲ್ಲೇಖಿಸಿದರು; ಅಬ್ದುರ್ರಹಮಾನ್ ಬಿನ್ ಅಖ್ನಸ್ (ರ ಅ) ಹೇಳಿದರು; ನಾವು ಮಸ್’ಜಿದ್’ನಲ್ಲಿದ್ದಾಗ ಒಬ್ಬರು ಅಲಿ(ರ ಅ)ರವರ ಹೆಸರನ್ನು ಹೇಳಿದಾಗ ಸಾದ್ ಇಬ್ನೆ ಜೈದ್ ಎದ್ದು ಹೇಳಲಾರಂಭಿಸಿದರು, ಮುಹಮ್ಮದ್(ಸ)ರಿಗೆ ಹೀಗೆ ಹೇಳುತ್ತಿರುವುದನ್ನು ಕೇಳಿದ್ದೇನೆ, ಹತ್ತು ಜನ ಸ್ವರ್ಗದಲ್ಲಿ ಪ್ರವೇಶಿಸುವರು, ಅಬುಬಕರ್ ಸ್ವರ್ಗ ಪ್ರವೇಶಿಸುವರು, ಉಮರ್ ಸ್ವರ್ಗ ಪ್ರವೇಶಿಸುವರು, ಉಸ್ಮಾನ್ ಸ್ವರ್ಗ ಪ್ರವೇಶಿಸುವರು, ಅಲಿ ಸ್ವರ್ಗ ಪ್ರವೇಶಿಸುವರು, ತಲ್ಹಾ ಸ್ವರ್ಗ ಪ್ರವೇಶಿಸುವರು, ಜುಬೈರ್ ಇಬ್ನೆ ಅವ್ವಾಮ್ ಸ್ವರ್ಗ ಪ್ರವೇಶಿಸುವರು, ಸಾದ್ ಬಿನ್ ಅಬಿವಖ್ಖಾಸ್ ಸ್ವರ್ಗ ಪ್ರವೇಶಿಸುವರು, ಅಬ್ದುರ್ರಹಮಾನ್ ಬಿನ್ ಔಫ್ ಸ್ವರ್ಗ ಪ್ರವೇಶಿಸುವರು, ಅಬು ಉಬೆದಾ ಬಿನ್ ಜರ್’ಹಾ ಸ್ವರ್ಗ ಪ್ರವೇಶಿಸುವರು, ನಾನು ಬಯಸಿದರೆ ಹತ್ತನೇ ಹೆಸರನ್ನೂ ಹೇಳುವೆನು, ಅಲ್ಲಿನ ಜನರು ಕೇಳಿದರು ‘ಅವರು ಯಾರು?’ ಎಂದು, ಅವರು ಏನನ್ನೂ ಹೇಳಲಿಲ್ಲ, ಜನರು ಮತ್ತೆ ಕೇಳಿದರು ‘ಅವರು ಯಾರು?’ ಎಂದು ಆಗ ಅವರು ಉತ್ತರಿಸಿದರು ಸಯಿದಾ ಇಬ್ನೆ ಜೈದ್ ಆಗಿದ್ದಾರೆ ಎಂದರು. ( ಸುನನ್ ಅಬಿ ದಾವೂದ್ 4649, ಶೇಖ್ ಅಲ್ಬಾನಿಯವರೂ ಹೀಗೆಯೇ ಹೇಳಿರುವರು)

   ರಿಯಾಹ ಇಬ್ನೆ ಹಾರಿಸ್’ರವರು ಹೇಳಿದರು; ನಾನು ಯಾರೊಂದಿಗೆ ಮಸ್’ಜಿದ್ ಎ ಕುಫಾದಲ್ಲಿ ಕುಳಿತಿದ್ದೆ ಆ ಸಮಯದಲ್ಲಿ ಕುಫಾದ ಜನತೆ ಅವರೊಂದಿಗಿದ್ದರು, ಆಗ ಅಲ್ಲಿಗೆ ಸಯೀದ್ ಇಬ್ನೆ ಅಮ್ರ ಇಬ್ನೆ ನುಫ್ಐಲ್(ರ ಅ) ಬಂದರು, ಅವರಿಗೆ ಸ್ವಾಗತಿಸಲಾಯಿತು ಸತ್ಕರಿಸಲಾಯಿತು, ಅವರಿಗೆ ತಮ್ಮ ತೊಡೆಯ ಮೇಲೆ ಕೂರಿಸಲಾಯಿತು, ನಂತರ ಕುಫಾದ ಒಂದು ವ್ಯಕ್ತಿ ಖೈಸ್ ಇಬ್ನೆ ಅಲ್ಖಮಾ ಅಲ್ಲಿಗೆ ಬಂದು ಬೈಯಲು ಶುರುಮಾಡಿದನು. ಸಯಿದಾ(ರ ಅ)ರವರು ಕೇಳಿದರು ‘ಇವನು ಯಾರಿಗೆ ಬೈಯುತ್ತದ್ದಾನೆ?’ ಅವರು ಉತ್ತರಿಸಿದರು; ಅವನು ಅಲಿ(ರ ಅ)ರವರಿಗೆ ಬೈಯುತ್ತಿದ್ದಾನೆ, ಎಂದರು ಆಗ ಹೇಳಿದರು ‘ ಮುಹಮ್ಮದ್(ಸ)ರ ಸಹಚರರಿಗೆ ಬೈಯಲಾಗುತ್ತಿದೆ ನೀವೇನೂ ಹೇಳುವುದಿಲ್ಲ ಹಾಗೂ ಏನೂ ಮಾಡುತ್ತಿಲ್ಲವಲ್ಲ?’ ಎಂದರು, ಆಗ ನಾನು ಮುಹಮ್ಮದ್(ಸ)ರನ್ನು ಹೀಗೆ ಹೇಳುತ್ತಿರುವುದನ್ನು ಕೇಳಿದ್ದೇನೆ, ಅವರೇನು ಹೇಳಲಿಲ್ಲವೂ ಅದನ್ನು ಹೇಳಲಾರೆನು, ಮುಂದೆ ಅವರೇನಾದರು ಕಂಡಲ್ಲಿ ನನಗೆ ಕೇಳುವರು ಎಂದು ಮುಂದೆ ಹೇಳಿದರು- ಅಬೂಬಕರ್ ಸ್ವರ್ಗ ಪ್ರವೇಶಿಸುವರು, ಉಮರ್ ಸ್ವರ್ಗ ಪ್ರವೇಶಿಸುವರು, ಉಸ್ಮಾನ್ ಸ್ವರ್ಗ ಪ್ರವೇಶಿಸುವರು, ಅಲಿ ಸ್ವರ್ಗ ಪ್ರವೇಶಿಸುವರು, ಎಂದು ಮುಂದಿನ ಎಲ್ಲರ ಬಗ್ಗೆಯೂ ತಿಳಿಸಿದರು. (ಹದೀಸ್ 4632ರ ಪ್ರಕಾರ)

   ನಂತರ ಅವರು ಹೇಳಿದರು; ಒಬ್ಬ ವ್ಯಕ್ತಿಗೆ ಪೈಗಂಬರ್ ನೂಹ್ (ಅ) ರಿಗೆ ನೀಡಿದಷ್ಟು ಆಯುಶ್ಯವನ್ನು ನೀಡಿ, ಅವನು ಅವನ ಜೀವನ ಪೂರ್ತಿಯೂ ಸತ್ಕರ್ಮಗಳನ್ನು ಮಾಡಿದರೂ ಮುಹಮ್ಮದ್(ಸ)ರ ಒಂದು ಕರ್ಮದ ಸರಿಸಮನಾಗಲಾರ, (ಸುನನ್ ಅಬಿದಾವೂದ್ 4650, ಇದನ್ನು ಶೇಖ್ ಅಲ್ಬಾನಿಯವರು ಹೇಳಲಿಲ್ಲ)

ಆಧಾರ

http://islamic-dictionary.tumblr.com/post/3932678213/al-asharatu-mubashsharun-bil-jannah-o (english)

774 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ