ಸ್ವರ್ಗದ ಮಾರ್ಗಕ್ಕೆ ಜ್ಞಾನವನ್ನು ಪಡೆಯುವುದುನಮ್ಮ ಜೀವನದಲ್ಲಿ ಎಷ್ಟು ಬಾರಿ ನಾವು ಈ ನುಡಿಗಟ್ಟು ಕೇಳಿದ್ದೇವೆ? ನಮ್ಮ ಹೆತ್ತವರು, ಶಿಕ್ಷಕರು, ಹಿರಿಯರು ಎಷ್ಟು ಬಾರಿ ಇದೇ ವಿಷಯವನ್ನು ಮತ್ತೊಮ್ಮೆ ತಿಳಿಸಿದ್ದಾರೆ? ಸರ್ ಫ್ರಾನ್ಸಿಸ್ ಬೇಕನ್ ಅವರ ಈ ಉಲ್ಲೇಖವು ನಿಮಗೆ ಜ್ಞಾನವಿರುವಾಗ, ನಿಮಗೆ ಅಧಿಕಾರವಿದೆ ಎಂದು ಹೇಳುತ್ತದೆ. ಜ್ಞಾನ ಮತ್ತು ವಿದ್ವಾಂಸರು ಇಲ್ಲದಿರುವ ರಾಷ್ಟ್ರಗಳು ಭ್ರಮೆಯಲ್ಲಿ ಬದುಕುತ್ತವೆ ಮತ್ತು ಕತ್ತಲೆಯಲ್ಲಿ ಮುಳುಗುತ್ತವೆ. ಅಲ್ಲಾಹ್ سبحانهوتعالىಮನುಷ್ಯನನ್ನು ಸೃಷ್ಟಿಸಿದನು ಮತ್ತು ಜ್ಞಾನವನ್ನು ಪಡೆಯುವ ಸಾಧನಗಳನ್ನು ಅವನಿಗೆ ಒದಗಿಸಿದ, ಅವುಗಳೆಂದರೆ ವಿಚಾರಣೆ, ದೃಷ್ಟಿ ಮತ್ತು ಬುದ್ಧಿವಂತಿಕೆ. [1]
ಇಸ್ಲಾಮ್ ಜ್ಞಾನದ ಧರ್ಮವಾಗಿದೆಇಸ್ಲಾಂ ಧರ್ಮದ ಧಾರ್ಮಿಕ ಬೋಧನೆಗಳು ಪೈಗಂಬರ್ ಮುಹಮ್ಮದ್(ಸ)ರವರ ಮೂಲಕ 1400 ವರ್ಷಗಳ ಹಿಂದೆ ನಮ್ಮ ಬಳಿಗೆ ಬಂದವು. ಪವಿತ್ರ ಖುರ್’ಆನಿನ ಅವತೀರ್ಣದ ಆರಂಭದಿಂದಲೂ ಜ್ಞಾನವನ್ನು ಪಡೆಯಲು ಮತ್ತು ಸ್ವಾಧೀನಪಡಿಸಿಕೊಳ್ಳುವಲ್ಲಿ ಮಹತ್ವ ಇತ್ತು. ಅವತೀರ್ಣದ ಮೊದಲ ಪದಗಳು "ಓದಿರಿ!" ಅಥವ “ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿನಿಂದ”. ಖುರ್’ಆನ್ ಅಧ್ಯಾಯ ಅಲ್ ಅಲಖ್ 96 : 1. ಮೊದಲ ವಿಷಯವೆಂದರೆ ಅಲ್ಲಾಹ್’ನು سبحانهوتعالىಲೇಖನಿಯನ್ನು ಸೃಷ್ಟಿಸಿದ. ಅಲ್ಲಾಹ್’ನ ಪೈಗಂಬರರು ಹೇಳಿದರು: ಅಲ್ಲಾಹ್’ನು سبحانهوتعالىಮೊಟ್ಟಮೊದಲು ಲೇಖನಿಯನ್ನು ಸೃಷ್ಠಿಸಿದನು. ಅವನು ಅದಕ್ಕೆ ಬರೆಯಲು ಆದೇಶಿಸಿದನು. ಅದು ಕೇಳಿತು: ನಾನು ಏನು ಬರೆಯಬೇಕು ಎಂದಾಗ? ಅವನು ಗತಕಾಲದಲ್ಲಿ ಗತಿಸಿಹೋದ ಹಾಗೂ ಮುಂದೆ ಅಂತಿಮ ದಿನದವರೆಗೂ ಬರುವ ಎಲ್ಲಾ ವಿಧಿಗಳನ್ನು ಬರೆ ಎಂದನು. ತಿರ್ಮಿಜಿ 2155. ಇಸ್ಲಾಂನಲ್ಲಿ, ಕಾರ್ಯ(ಕೆಲಸ/ಕ್ರಿಯೆ)ಕ್ಕಿಂತ ಮೊದಲು ಜ್ಞಾನ ಪಡೆಯುವುದು ಕಡ್ಡಾಯವಾಗಿದೆ; ಜ್ಞಾನವಿಲ್ಲದೆ ಯಾವುದೇ ಕಾರ್ಯವಿಲ್ಲ. ಒಬ್ಬ ಮುಸ್ಲಿಮ್ ಲಾ ಇಲಾಹಾ ಇಲ್ಲಲ್ಲಾಹ್’ದ ಸಾಕ್ಷ್ಯವಹಿಸುವ ಮುಂಚೆ ಅವನಿಗೆ ಅದರ ಬಗ್ಗೆ ಜ್ಞಾನವಿರಬೇಕು. ಅಲ್ಲಾಹ್’ನು سبحانهوتعالىಖುರ್’ಆನಿನಲ್ಲಿ ಹೇಳುತ್ತಾನೆ: “ ಆದ್ದರಿಂದ ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರಿಲ್ಲ ಎಂಬುದನ್ನು ಅರಿತುಕೊಳ್ಳಿ ಮತ್ತು ತಮ್ಮ ಪಾಪಕ್ಕೆ ಕ್ಷಮೆಯನ್ನು ಬೇಡಿರಿ. ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಯವಿಶ್ವಾಸಿನಿಯರಿಗೆ (ಕ್ಷಮೆಯನ್ನು ಬೇಡಿರಿ) ನಿಮ್ಮ ಚಲನವಲನಗಳನ್ನು ಮತ್ತು ವಾಸಸ್ಥಳವನ್ನು ಅಲ್ಲಾಹು ಅರಿಯುವನು”, ಖುರ್’ಆನ್ ಅಧ್ಯಾಯ ಮುಹಮ್ಮದ್ 47 : 19. ಜ್ಞಾನವನ್ನು ಪಡೆಯುವುದು ಸತ್ಯವಿಶ್ವಾಸಿಯ ಒಂದು ಸಂಕೇತಜ್ಞಾನವು ಸತ್ಯವಿಶ್ವಾಸಿಗಳಿಂದ ಹಾಗೂ ಕಪಟಿಗರಿಂದ ಭಿನ್ನವಾಗಿದೆ, ಏಕೆಂದರೆ ಅವನು (ಕಪಟವೇಷಕ) ಅಲ್ಪವಾದ ವಿಷಯಗಳನ್ನು ಸೂಕ್ಷ್ಮವಾಗಿ ಪರಿಚಯಿಸುತ್ತಾನೆ ಮತ್ತು ಹಲವಾರು ಇತರ ಉಪಯುಕ್ತ ಸತ್ಯಗಳು ಅವರಿಗೆ ಹಿತವಾಗುವುದಿಲ್ಲ, ಆದರೆ ದೀನ್(ಧರ್ಮದ)ನ ತಿಳುವಳಿಕೆಯ ಸಂದರ್ಭ ಬಂದಾಗ, ಒಂದು ವಿಷಯವಲ್ಲ ಎಲ್ಲವೂ ಬಲ್ಲವನಂತೆ ಇರುತ್ತಾನೆ, ಅಲ್ಲಾಹ್’ನ ಪುಸ್ತಕದಲ್ಲಿಯೂ ಸಹ ಉಲ್ಲೇಖಿಸಲಾಗಿದೆ: “ ಆದರೆ ಕಪಟಿಗಳಿಗೆ ಇದು ಅರ್ಥವಾಗುವುದಿಲ್ಲ”ಖುರ್’ಆನ್ ಅಧ್ಯಾಯ ಅಲ್ ಮುನಾಫಿಕೂನ್ 63 : 7. ಒಬ್ಬನ ವಿಶ್ವಾಸವು ಅವನ ಧರ್ಮದೊಂದಿಗೆ ಪರಿಚಯವಾಗುತ್ತದೆ ಮತ್ತು ಅವನಿಗೆ ಪ್ರಯೋಜನವಿರುವ ವಿಷಯಗಳ ಬಗ್ಗೆ ತನ್ನ ಜ್ಞಾನವನ್ನು ನಿರಂತರವಾಗಿ ಹೆಚ್ಚಿಸುತ್ತದೆ ಮತ್ತು ಅವರು ಎಂದೂ ಒಳ್ಳೆಯದನ್ನೇ ಬಯಸುತ್ತಾರೆ, ಹಾಗೆಯೇ ಇದು ಒಳ್ಳೆಯದಕ್ಕಾಗಿ ಬೇರ್ಪಡಿಸಲ್ಪಟ್ಟಿರುವ ಸಭೆಗಳನ್ನೂ ಒಳಗೊಂಡಿದೆ. ದೀನ್’ನ ಜ್ಞಾನವನ್ನು ಹುಡುಕುವುದು ಸ್ವರ್ಗದ ಮಾರ್ಗವಾಗಿದೆ. ಹೆಚ್ಚು ವಿಮರ್ಶೆ ಮಾಡವುದು ಮತ್ತು ಕಲಿಯುವುದು ತಸ್ಬೀಹ್ ಇದ್ದ ಹಾಗೆ. ಪೈಗಂಬರ್ ಮುಹಮ್ಮದ್(ಸ)ರ ಸಹಚರರೊಬ್ಬ ಹೇಳಿರುವ ಪ್ರಕಾರ; ಮುಆದ್ ಇಬ್ನೆ ಜಬಲ್ (ರ) ಹೇಳಿದರು: "ಜ್ಞಾನವನ್ನು ಪಡೆಯಲೇಬೇಕು, ಏಕೆಂದರೆ ಅದು ಅಲ್ಲಾಹ್’ನ ನೈಜ ಆರಾಧನೆಗೊಸ್ಕರ ಅವಶ್ಯವಿದೆ, ಮತ್ತು ಅದನ್ನು ತಿಳಿದುಕೊಳ್ಳುವುದರಿಂದ ನಿಮಗೆ ಹೆಚ್ಚು ದೇವಭಯವಿರುತ್ತದೆ; ಮತ್ತು ಜ್ಞಾನವನ್ನು ಹುಡುಕುವುದು ಪ್ರಯತ್ನವಾಗಿದೆ, ತಿಳಿದಿಲ್ಲದವರಿಗೆ ಅದನ್ನು ಕಲಿಸುವುದು ದಯಾಧರ್ಮವಾಗಿದೆ, ಅದನ್ನು ಪರಿಶೀಲಿಸುವುದು ಮತ್ತು ಕಲಿಯುವುದು ತಸ್ಬೀಹ್ ಮಾಡಿದ ಹಾಗೆ. ಜ್ಞಾನದ ಮೂಲಕ ಅಲ್ಲಾಹ್’ನನ್ನು سبحانهوتعالىಕರೆಯಲಾಗುತ್ತದೆ ಮತ್ತು ಆರಾಧಿಸಲಾಗುತ್ತದೆ. ಜ್ಞಾನದ ಮೇಲ್ಮಟ್ಟವನ್ನೇರಿದ ಜನರನ್ನು ಅಲ್ಲಾಹ್’ನು سبحانهوتعالىಮೇಲಕ್ಕೆರಿಸಿ ಯಾರು ಇತರ ಜನರಿಗೆ ಮಾರ್ಗದರ್ಶನ ನೀಡುತ್ತಾರೆ ಅವರನ್ನು ನಾಯಕರು ಮತ್ತು ಇಮಾಮ್’ಗಳನ್ನಾಗಿ ಮಾಡಿರುವನು, . "ಫತಾವಾ ಇಬ್ನ್ ತಯ್ಮಿಯಾ ಸಂಪುಟ 10., ಪುಟ 39. ಅದೇ ಧಾಟಿಯಲ್ಲಿ, ಇಮಾಮ್ ಶಾಫಿ (ರ)ಹೇಳಿದರು: "ಈ ಜೀವನದ ಫಲವನ್ನು ಹುಡುಕುವವನು ಇಸ್ಲಾಮೀ ಜ್ಞಾನವನ್ನು ಪಡೆಯಬೇಕು, ಮತ್ತು ಇನ್ನು ಮುಂದೆ ಅಂತಿಮದಿನದಂದು ಪ್ರತಿಫಲ ಹುಡುಕುವವನು (ಇಸ್ಲಾಮೀ) ಜ್ಞಾನವನ್ನು ಪಡೆಯಬೇಕು. " ಅನ್’ನವವಿ ಮಜ್’ಮುಅ ಸಂಪುಟ 1, ಪುಟ;12. ಖುರ್’ಆನ್“ಅಥವ, ಪರಲೋಕದ ಬಗ್ಗೆ ಎಚ್ಚರವಹಿಸಿ ತನ್ನ ಪ್ರಭುವಿನ ಕಾರುಣ್ಯವನ್ನು ಆಶಿಸಿ, ಸಾಷ್ಟಾಂಗವೆರಗುತ್ತಾ,ನಿಂತು ನಮಾಜ್ ಮಾಡುತ್ತಾ ರಾತ್ರಿ ವೇಳೆಗಳಲ್ಲಿ ಶರಣಾಗತಿ ಪ್ರಕಟಿಸುವವನೋ (ಉತ್ತಮನು? ಅಥವ ಸತ್ಯನಿಷೇಧಿಯೋ)? ಹೇಳಿರಿ: ‘ಅರಿವುಳ್ಳವರು ಮತ್ತು ಅರಿವಿಲ್ಲದವರು ಸಮಾನರಾಗುವರೇ?’ ಬುದ್ಧಿವಂತರು ಮಾತ್ರ ಆಲೋಚಿಸಿ ಅರ್ಥಮಾಡಿಕೊಳ್ಳುವರು”. ಖುರ್’ಆನ್ ಅಧ್ಯಾಯ ಅಝ್’ಝುಮರ್ 39 : 9. “ತನ್ನ ಹೊರತು ಬೇರೆ ದೇವರಿಲ್ಲವೆಂದು ಅಲ್ಲಾಹ್’ನು ಘೋಷಿಸಿರುವನು, ಮಲಕ್’ಗಳು ಮತ್ತು ಸ್ಥಿರವಾಗಿ ನ್ಯಾಯಮಾರ್ಗದಲ್ಲಿರುವ ಜ್ಞಾನಿಗಳೆಲ್ಲರೂ (ಇದನ್ನೇ ಘೋಷಿಸುತ್ತಾರೆ) ಪ್ರಚಂಡನೂ ಯುಕ್ತಿವಂತನೂ ಆಗಿರುವ ಅವನ ಹೊರತು ಯಾರೂ ನೈಜ ಆರಾಧ್ಯನಿಲ್ಲ”. ಖುರ್’ಆನ್ ಅಧ್ಯಾಯ ಅಲಿ ಇಮ್ರಾನ್ 3 : 18. ವಿದ್ವಾಂಸರು ಇಸ್ಲಾಂ ಧರ್ಮದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿದ್ದಾರೆ, ಮತ್ತು ಈ ಜಗತ್ತಿನಲ್ಲಿರುವ ಇತರರ ಸ್ಥಾನಕ್ಕಿಂತ ಹೆಚ್ಚಾಗಿದೆ ಮತ್ತು ಮುಂದೆ ಬರಲಿರುವ ಅಂತಿಮ ದಿನದಂದು. “ ಅಲ್ಲಾಹ್’ನು ನಿಮ್ಮಲ್ಲಿನ ವಿಶ್ವಾಸಿಗಳಿಗೆ ಔನ್ನತ್ಯವನ್ನು ನೀಡುವನು ಮತ್ತು ಜ್ಞಾನಿಗಳಿಗೆ ಉನ್ನತ ಸ್ಥಾನಗಳನ್ನು ನೀಡುವನು”. ಖುರ್’ಆನ್ ಅಧ್ಯಾಯ ಅಲ್ ಮುಜಾದಲಾಃ 58 : 11. ಹದೀಸ್"ಯಾರು ಜ್ಞಾನದ ಅನ್ವೇಷಣೆಯಲ್ಲಿ ಅದರ ಮಾರ್ಗವನ್ನು ಹಿಂಬಾಲಿಸುತ್ತಾನೋ, ಅಲ್ಲಾಹ್’ನು سبحانهوتعالىಅವನಿಗೆ ಸ್ವರ್ಗದ ಮಾರ್ಗವನ್ನು ಸುಲಭಗೊಳಿಸುವನು. "ಸಹಿಹ್ ಬುಖಾರಿ ಕಿತಾಬುಲ್ ಇಲ್ಮ್, ಪೈಗಂಬರ್(ಸ)ರು ಹೇಳಿದರು; "ಇಸ್ಲಾಮ್ ಧರ್ಮವನ್ನು ಅದರ ಸಹಾಯದಿಂದ ಪುನರುಜ್ಜೀವನಗೊಳಿಸುವ ದೃಷ್ಟಿಯಿಂದ ಜ್ಞಾನವನ್ನು ಪಡೆದುಕೊಳ್ಳುವಲ್ಲಿ ಅವನು ತೊಡಗಿದರೆ, ಸ್ವರ್ಗದಲ್ಲಿ ಅವನ ಮತ್ತು ಪೈಗಂಬರರ ನಡುವೆ ಕೇವಲ ಒಂದು ಪದವಿ ಅಂತಸ್ಥು ಮಾತ್ರ ಇರುತ್ತದೆ. " ತಿರ್ಮಿಜಿ : 249. ಪೈಗಂಬರ್(ಸ)ರು ಹೇಳಿದರು; "ಒಬ್ಬ ಮನುಷ್ಯನು ಮರಣಹೊಂದಿದಾಗ, ಮೂರು ವಸ್ತುಗಳನ್ನು ಹೊರತುಪಡಿಸಿ ಅವನ ಎಲ್ಲಾ ಕಾರ್ಯಗಳು ಸ್ಥಗಿತಗೊಳ್ಳುತ್ತವೆ - ಚಾಲ್ತಿಯಲ್ಲಿರುವ ದಯಾಧರ್ಮದ ಕಾರ್ಯ, ಪ್ರಯೋಜನಕಾರಿ ಜ್ಞಾನ ಮತ್ತು ಆತನನ್ನು ಪ್ರಾರ್ಥಿಸುವ ಒಬ್ಬ ನ್ಯಾಯಯುತನಾದ(ಸತ್ಯವಿಶ್ವಾಸಿ) ಮಗ. "ಮುಸ್ಲಿಂ, 1631. ಪೈಗಂಬರ್(ಸ)ರು ಹೇಳಿದರು; "ಒಬ್ಬ ವ್ಯಕ್ತಿಗೆ ಅಲ್ಲಾಹ್’ನು ಒಳ್ಳೆಯದನ್ನು ಮಾಡ ಬಯಸಿದರೆ, ಅವನಿಗೆ ಧರ್ಮದ ಜ್ಞಾನವನ್ನು ದಯಪಾಲಿಸುವನು." ಸಹಿಹ್ ಅಲ್ ಬುಖಾರಿ, ಸಂಪುಟ 71. ಜ್ಞಾನವನ್ನು ಪಡೆಯಲು ಯೋಗ್ಯತೆಗಳು"ಜನರನ್ನು ಸರಿಯಾದ ಮಾರ್ಗದರ್ಶನದೆಡೆಗೆ ಕರೆಯುವವನಿಗೆ ಅವನನ್ನು ಹಿಂಬಾಲಿಸುವವನಂತೆಯೇ ಪ್ರತಿಫಲವನ್ನು ಪಡೆಯುತ್ತಾನೆ, ಮತ್ತು ಅವರ ಪ್ರತಿಫಲದಲ್ಲಿ ಸ್ಲ್ಪವೂ ಕಡಿಮೆಯಾಗುವುದಿಲ್ಲ, ಮತ್ತು ಜನರನ್ನು ತಪ್ಪು ದಾರಿಗೆ ಕರೆಯುವವನಿಗೆ ಆತನ ಪಾಪದ ಭಾರವನ್ನು ಹಿಂಬಾಲಿಸುವವನಂತೆಯೇ ಇವನೂ ಪ್ರತಿಫಲವನ್ನು ಪಡೆಯುತ್ತಾನೆ, ಮತ್ತು ಅವನ ಪಾಪದ ಭಾರದಿಂದ ಒಂದಿಷ್ಟೂ ಕಡಿಮೆಯಾಗುವುದಿಲ್ಲ. " ಸಹಿಹ್ ಮುಸ್ಲಿಮ್ 6470 (ಸಂಪುಟ 5: 4899) ಮತ್ತು ಇಬ್’ನೆ ಮಾಜಃ : 206. ಖುರ್’ಆನ್ ಕಡೆಗೆ ಗಮನ ಕೊಡುವುದು ಮತ್ತು ಕಲಿಕೆ ಹಾಗು ಬೋಧನೆ ಮಾಡುವ ವಿಷಯದ ಬಗ್ಗೆ, ಪೈಗಂಬರ್(ಸ)ರು ಹೇಳಿದರು; " ನಿಮ್ಮಲ್ಲಿ ಖುರ್’ಆನ್’ನ್ನು ಕಲಿಯುವವರು ಮತ್ತು ಕಲಿಸುವವರೇ ಅತ್ತ್ಯುತ್ತಮರು." ಬುಖಾರಿ, 4639. "ಯಾರಾದರೂ ಜ್ಞಾನದ ಹುಡುಕಾಟದಲ್ಲಿ ಹಾದಿಯಲ್ಲಿ ಪ್ರಯಾಣಿಸಿದರೆ, ಅಲ್ಲಾಹ್’ನು سبحانهوتعالىಅವನಿಗೆ ಸ್ವರ್ಗದ ರಸ್ತೆಗಳಲ್ಲಿ ಒಂದು ರಸ್ತೆಯ ಮೇಲೆ ಪ್ರಯಾಣಿಸುವಂತೆ ಕರುಣಿಸುತ್ತಾನೆ. ಜ್ಞಾನವನ್ನು ಹುಡುಕುವವರೊಂದಿಗೆ ದೇವದೂತರು ತಮ್ಮ ರೆಕ್ಕೆಗಳನ್ನು ತಮ್ಮ ಆನಂದದಿಂದ ಅವನಿಗೆ ಹಾಸುತ್ತಾರೆ, ಆಳವಾದ ನೀರಿನಲ್ಲಿನ ಮೀನುಗಳು ಹಾಗು ಆಕಾಶ ಮತ್ತು ಭೂಮಿಯ ಜೀವಿಗಳೂ ಸಹ ಆ ವ್ಯಕ್ತಿಗೆ ಕ್ಷಮೆ ಕೇಳುತ್ತವೆ. ಜ್ಞಾನವುಳ್ಳ ವ್ಯಕ್ತಿಯ ಶ್ರೇಷ್ಠತೆಯು ಆರಾಧನೆ ಮಾಡುವ ವ್ಯಕ್ತಿಯ ಮೇಲೆ ಪೂರ್ಣ ಚಂದ್ರದ ರಾತ್ರಿಯಲ್ಲಿ ಎಲ್ಲಾ ನಕ್ಷತ್ರಗಳ ಮೇಲೆ ಚಂದ್ರನ ಶ್ರೇಷ್ಠತೆಯಂತೆ. ಜ್ಞಾನವುಳ್ಳವರು ಪೈಗಂಬರರ ವಾರೀಸುದಾರರು, ಮತ್ತು ಪೈಗಂಬರರ ಬದಲಾಗಿ ಜ್ಞಾನದ ವಾರೀಸುದಾರರನ್ನಾಗಿ ಮಾಡಿದ್ದಾರೆ ದಿನಾರ್’ಗಳ ಅಥವ ದಿರ್ಹಮ್’ಗಳ ವಾರೀಸುದಾರನ್ನಾಗಿ ಮಾಡಲ್ಪಟ್ಟಿಲ್ಲ, ಮತ್ತು ಅದನ್ನು ಪಡೆಯುವವನು ಧಾರಾಳ ಅದೃಷ್ಟವನ್ನು ಪಡೆದನು. "ಅಬೂ ದಾವೂದ್ ಮತ್ತು ರಿಯಾದ್ ಉಸ್ ಸ್ವಾಲಿಹೀನ್ 1388. ಮೇಲೆ ಉಲ್ಲೇಖಿಸಲಾಗಿರುವ ಜ್ಞಾನವು ದೀನಿನ ಜ್ಞಾನವಾಗಿದೆ ಎಕೆಂದರೆ ಅದೊಂದೇ ಜ್ಞಾನ ವಾಜಿಬ್ ಆಗಿದೆ ಅಥವ ಕಡ್ಡಾಯವಾಗಿರುವ ಜ್ಞಾನವಾಗಿದೆ. ಈ ಹದೀಸ್ ಜ್ಞಾನವನ್ನು ಪಡೆಯಲು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ, ಆದರೆ ನಾವು ಎರಡು ಪ್ರಮುಖ ಪ್ರಯೋಜನಗಳನ್ನು ಗಮನಿಸುತ್ತೇವೆ. ಜ್ಞಾನದ ಸಂಪಾದನೆಯ ಪಥದಲ್ಲಿ ಚಲಿಸುವ ಎರಡು ಮುಖ್ಯ ಪ್ರಯೋಜನಗಳೆಂದರೆ ದೇವಚರರ ಮೂಲಕ ರಕ್ಷಣೆ ಮತ್ತು ಅಲ್ಲಾಹ್’ನ تعالىಜೀವಿಗಳ ಮೂಲಕ ಅವರಿಗೆ ಪ್ರಾರ್ಥನೆ. ದೇವದೂತರುಗಳು ಎರಡು ವಿಧಗಳಲ್ಲಿ ರಕ್ಷಣೆ ನೀಡುತ್ತವೆ: ಅವರು ಜ್ಞಾನದ ವಿದ್ಯಾರ್ಥಿಗಾಗಿ ತಮ್ಮ ರೆಕ್ಕೆಗಳನ್ನು ಹಾಸುತ್ತಾರೆ (ಅಂದರೆ ಅವರು ಜ್ಞಾನ ಪಡೆಯುವ ವಿದ್ಯಾರ್ಥಿಯು ದೂತರ ರೆಕ್ಕೆಗಳ ಮೇಲೆ ನಡೆಯುವನು), ಮತ್ತು ಗೌರವದಿಂದ ಜ್ಞಾನ ಸಂಪಾದನೆಗೆ ತೊಡಗಿದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳು ಹಾದುಹೋಗುವವರೆಗೂ ಅವರುಗಳು ಹಾಸಿಕೊಂಡೇ ನೀತಿರುವರು. ‘ಅಲ್ಲಾಹು ಅಕ್ಬರ್’ಪರಿಶುದ್ಧ ದೇವದೂತರ ಹೊರತಾಗಿಯೂ, ಜ್ಞಾನವು ನಮಗೆ ಅಲ್ಲಾಹನ ದೃಷ್ಟಿಯಲ್ಲಿ ಹೆಚ್ಚು ಶ್ರೇಣಿಯನ್ನು ಪಡೆಯಲು ಅವಕಾಶ ನೀಡುತ್ತದೆ ! ಸ್ವರ್ಗದ ಮತ್ತು ಭೂಮಿಯ ನಿವಾಸಿಗಳು ಜ್ಞಾನದ ವಿದ್ಯಾರ್ಥಿಗಾಗಿ ದುಆವನ್ನು ಮಾಡುತ್ತಾರೆ. ಇದರಲ್ಲಿ ದೇವದೂತರ ದುಆ ಮತ್ತು ಈ ಭೂಮಿಯ ಮೇಲಿನ ಎಲ್ಲ ಜೀವಿಗಳು ಸೇರಿವೆ, ಉದಾಹರಣೆಗೆ ಇರುವೆಗಳು ಮತ್ತು ಸಮುದ್ರದಲ್ಲಿನ ಎಲ್ಲಾ ಮೀನುಗಳು. ಜ್ಞಾನಕ್ಕಾಗಿ ಶ್ರಮಿಸುವ ಆದಮನ ಮಕ್ಕಳಿಗೆ ಇದು ಅಲ್ಲಾಹುವಿನ ಕರುಣೆ ಸಾಧಿಸಲು ನಾವು ಮಾಡಬಹುದಾದ ಅತ್ಯುತ್ತಮ ಕಾರ್ಯಗಳಲ್ಲಿ ಒಂದಾಗಿದೆ. ಅಲ್ಲಾಹ್’ನು ಜ್ಞಾನವಿಲ್ಲದೆ ಮಾತನಾಡುವುದರ ವಿರುದ್ಧವಾಗಿ ಪ್ರತಿಯೊಬ್ಬ ಮುಸ್ಲಿಮರನ್ನು ಎಚ್ಚರಿಸುತ್ತಾನೆಅಲ್ಲಾಹ್’ನು ಖುರ್’ಆನಿನಲ್ಲಿ ಹೇಳುವನು ; “ನಿನಗೆ ಅರಿವಿಲ್ಲದ ವಿಷಯದ ಬೆನ್ನು ಹಿಡಿಯಬೇಡ (ಅಂದರೆ ಓ ಮನುಷ್ಯ ಹೇಳಬೇಡ, ಅಥವ ಮಾಡಬೇಡ, ಅಥವ ಸಾಕ್ಷಿಯಾಗ ಬೇಡ) ಖಂಡಿತವಾಗಿಯೂ, ಕಿವಿ ಕಣ್ಣು ಮತ್ತು ಹೃದಯ ಇವೆಲ್ಲವೂ ವಿಚಾರಣೆಗೆ ಒಳಗಾಗುವವು”. ಖುರ್’ಆನ್ ಅಧ್ಯಾಯ ಬನಿ ಇಸ್ರಾಯೀಲ್ 17 : 36. “ಓ ವಿಶ್ವಾಸಿಗಳೇ; ನೀವು ಮಾಡದ್ದನ್ನು ಯಾಕೆ ಹೇಳುತ್ತೀರಿ? ನೀವು ಮಾಡದ್ದನ್ನು ಹೇಳುವುದು ಅಲ್ಲಾಹ್’ನ ದೃಷ್ಟಿಯಲ್ಲಿ ತೀರಾ ಅಪ್ರಿಯವಾಗಿದೆ”ಖುರ್’ಆನ್ ಅಧ್ಯಾಯ ಅಸ್ಸಫ್ಫ್ 61 : 2-3. ಹೆಚ್ಚಿದ ದರ್ಜೆ ಮತ್ತು ಶ್ರೇಣಿಇಸ್ಲಾಮೀ ಜ್ಞಾನವನ್ನು ಮುಂದುವರಿಸಲು ನಿಮ್ಮನ್ನು ಪ್ರೇರೇಪಿಸುವುದು ಈ ಲೇಖನದ ಪ್ರಮುಖ ಗುರಿಯಾಗಿದೆ, ಮತ್ತು ಆರಾಧನೆಯ ಈ ಕ್ರಿಯೆಯನ್ನು ಮಾಡುವಲ್ಲಿ ಸಂತೋಷ ಮತ್ತು ಹುಮ್ಮಸ್ಸು ಬರಲು ಪ್ರೋತ್ಸಾಹವಾಗಲೆಂದಾಗಿದೆ, ಏಕೆಂದರೆ ಇದನ್ನು ನಾವು ವಿವಿಧ ಖುರ್’ಆನಿನ ಹೇಳಿಕೆಗಳಿಂದ ಅರ್ಥಮಾಡಿಕೊಳ್ಳಬಹುದು ಮತ್ತು ಹದೀಸ್ (ಪೈಗಂಬರರ ಹೇಳಿಕೆಗಳು) ಅಲ್ಲಾಹ್’ನಿಂದ ಬಂದ ಪ್ರತಿಫಲಗಳು ಮತ್ತು ಆಶೀರ್ವಾದಗಳ ರೂಪದಲ್ಲಿ ಈ ಪ್ರಯತ್ನಗಳಿಗೆ ನಿರ್ದಿಷ್ಟವಾಗಿ ಮರಳಿ ನಮಗೆ ಸಿಗಲಿದೆ ಎಂದು. “ಅಲ್ಲಾಹ್’ನು ನಿಮ್ಮಲ್ಲಿನ ವಿಶ್ವಾಸಿಗಳಿಗೆ ಔನ್ನತ್ಯವನ್ನು ನೀಡುವನು ಮತ್ತು ಜ್ಞಾನಿಗಳಿಗೆ ಉನ್ನತ ಸ್ಥಾನಗಳನ್ನು ನೀಡುವನು. ಖುರ್’ಆನ್ ಅಧ್ಯಾಯ ಅಲ್ ಮುಜಾದಿಲಾಃ 58 : 11. ಅಲ್ಲಾಹ್’ನು ಎಲ್ಲಾ ವಿಷಯಗಳ ಹೆಸರುಗಳನ್ನು ಆದಮರಿಗೆ("ಅಲೈಹಿಸ್ಸಲಾಮ್ - ಅವರ ಮೇಲೆ ಶಾಂತಿ ಇರಲಿ)" ಕಲಿಸಿದಾಗ, ಅವನು ದೇವದೂತರನ್ನು ಮತ್ತು ಇಬ್ಲಿಸ್ ಅನ್ನು ಆದಮರಿಗೆ ಸಾಷ್ಟ್ರಾಂಗವೆರಗಲು ಹೇಳಿದನು. ನಾವು ನಿಮಗೆ ನೆನಪಿಸುತ್ತಿದ್ದೇವೆ ದೇವದೂತರು ಅಲ್ಲಾಹ್’ನ ಶುದ್ಧ ಸೃಷ್ಟಿ ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ ಅವರು ಸಂಪೂರ್ಣ ಪ್ರಕಾಶದಿಂದ ಸೃಷ್ಟಿಯಾಗಿರುವರು, ಮತ್ತು ಅವನಿಗೆ ಸಂಪೂರ್ಣ ವಿಧೇಯತೆಯಿಂದ ಇರುವವರು, ಮತ್ತು ಎಲ್ಲಾ ಸಮಯದಲ್ಲೂ ತಾಸ್ಬಿಹ್ (ಅಲ್ಲಾಹ್’ನನ್ನು ವೈಭವೀಕರಿಸುವುದು/ ಗುಣಗಾನಮಾಡುವುದು) ಮಾಡುತ್ತಿರುವವರು. ನಮ್ಮ ಪೂರ್ವಜ ಆದಮರಿಗೆ (ಅ ಸ) ಗೌರವವನ್ನು ತೋರಿಸಲಿಕ್ಕಾಗಿ(ಬಾಗಲಿಕ್ಕಾಗಿ) ಅಲ್ಲಾಹ್’ನ ಆ ಪರಿಶುದ್ಧವಾದ ಸೃಷ್ಟಿಗೆ ಆಜ್ಞಾಪಿಸಲಾಗಿತ್ತು, ಯಾರಿಗೆ ಮಣ್ಣಿನಿಂದ ಸೃಷ್ಟಿಸಲ್ಪಟ್ಟಿತೋ ಮತ್ತು ತಪ್ಪು ಕಾರ್ಯಗಳಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿತ್ತೋ ಅವರಿಗೆ. ಈ ಆದೇಶವನ್ನು ಗೌರವ ರೂಪವಾಗಿ ನಿರ್ವಹಿಸಲಾಯಿತು ಮತ್ತು ಅದು ಕೇವಲ ಒಂದು ಅಂಶವನ್ನು ಆಧರಿಸಿ ನಡೆಯಿತು: ಅದುವೇ ಜ್ಞಾನ. ಜ್ಞಾನದ ಅಂತಸ್ತು ಮತ್ತು ವಿದ್ವಾಂಸರುಜ್ಞಾನ ಮತ್ತು ವಿದ್ವಾಂಸರ ಸ್ಥಾನಮಾನವನ್ನು ಒತ್ತಿ ಹೇಳಲಾಗಿದೆ, ಅಲ್ಲಾಹ್ ವರಿಷ್ಠರಿಗೆ ತನ್ನ ಏಕೈಕತೆಗೆ ಸಾಕ್ಷಿಯಾಗಲು ವಿದ್ವಾಂಸರಿಗೆ ಕರೆ ನೀಡುತ್ತಾನೆ, ಅಲ್ಲಾಹ್’ನ ಸಾಕ್ಷ್ಯವೇನೆಂದರೆ “ಲಾ ಇಲಾಹ ಲ್ಲಾಹುವ(ಅವನೊಬ್ಬನಲ್ಲದೆ ಇತರ ಯಾರೂ ಆರಾಧನೆಗೆ ಅರ್ಹರಿಲ್ಲ) “ತನ್ನ ಹೊರತು ಬೇರೆ ಆರಾಧ್ಯನಿಲ್ಲವೆಂದು ಅಲ್ಲಾಹ್’ನು ಘೋಷಿಸಿರುವನು. ಮಲಕ್’ಗಳು ಮತ್ತು ಸ್ಥಿರವಾಗಿ ನ್ಯಾಯ ಮಾರ್ಗದಲ್ಲಿರುವ ಜ್ಞಾನಿಗಳೆಲ್ಲರೂ (ಇದನ್ನೇ ಘೋಷಿಸುತ್ತಾರೆ) “ಲಾ ಇಲಾಹ ಲ್ಲಾಹುವ(ಅವನೊಬ್ಬನಲ್ಲದೆ ಇತರ ಯಾರೂ ಆರಾಧನೆಗೆ ಅರ್ಹರಿಲ್ಲ) ಪ್ರಚಂಡನೂ ಯುಕ್ತಿವಂತನೂ ಆಗಿರುವ ತನ ಹೊರತು ಬೇರೆ ಆರಾಧ್ಯನಿಲ್ಲ”ಖುರ್’ಆನ್ ಅಧ್ಯಾಯ ಆಲಿ ಇಮ್ರಾನ್ 3 : 18.
“ಇವು ಮಾನವರಿಗಾಗಿ ನಾವು ಮುಂದಿಡುವ ಉದಾಹರಣೆಗಳು, ಆದರೆ ಬಲ್ಲವರು ಮಾತ್ರ ಇವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಖುರ್’ಆನ್ ಅಧ್ಯಾಯ ಅಲ್ ಅನ್’ಕಬೂತ್ 29 : 43. ಈ ಸೂಕ್ತಿಯು ವಾಸ್ತವವಾಗಿ ಎಲ್ಲಾ ಜ್ಞಾನದ ಜನರನ್ನು ಉಲ್ಲೇಖಿಸುತ್ತದೆ (ಮತ್ತು ಕೇವಲ ವಿದ್ವಾಂಸರಿಗಲ್ಲ) ಎಂದು ವಿದ್ವಾಂಸರು ಒಪ್ಪುತ್ತಾರೆ. ಖುರ್’ಆನ್ ಅನ್ನು ಓದುವ, ಕಲಿಯುವ ಮತ್ತು ಅರ್ಥಮಾಡಿಕೊಳ್ಳುವ ಪ್ರಜ್ಞಾವಂತ ಜನರು ಖುರ್’ಆನ್ ಹೊಂದಿರುವ ದೃಷ್ಟಾಂತಗಳನ್ನು ನಿಜವಾಗಿಯೂ ಗ್ರಹಿಸುವರು. ಖುರ್’ಆನಿನ್ನಲ್ಲಿ ಉಲ್ಲೇಖಿಸಲಾದ ದೃಷ್ಟಾಂತಗಳು ನಮ್ಮ ಅಂತಿಮದಿನಕ್ಕೆ ಹಾನಿಕಾರಕವಾದ ಕ್ರಮಗಳನ್ನು ನಮಗೆ ಹೇಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಹಾಗಾಗಿ ಆ ಹಾನಿಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಇವರು ಮಾಡುವ ಸತ್ಕಾರ್ಯಗಳು ಹೆಚ್ಚು ಲಾಭದಾಯಕವೆಂದು ಅವರು ನಮಗೆ ಮಾರ್ಗದರ್ಶನ ನೀಡುತ್ತಾರೆ, ಆದ್ದರಿಂದ ನಾವು ಅವುಗಳನ್ನು ಅನುಸರಿಸಲು ಶ್ರಮಿಸುತ್ತೇವೆ. ಅಲ್ಲಾಹ್ ವಿದ್ವಾಂಸರನ್ನು ಶ್ಲಾಘಿಸುತ್ತಾನೆ, ಅವನು ಹೇಳುತ್ತಾನೆ; “ಹೇಳಿರಿ ಅರಿತಿಲ್ಲದವರು ಮತ್ತು ಅರಿತಿರುವವರು ಸಮಾನರಾಗಬಲ್ಲರೆ? ಬುದ್ಧಿಯುಳ್ಳವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ”. ಖುರ್’ಆನ್ ಅಧ್ಯಾಯ ಅಝ್’ಝುಮರ್ 39 : 9. ಜ್ಞಾನ ಹೊಂದಿರುವವರು ಸತ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರಲ್ಲಿ ನಂಬಿಕೆ ಹೊಂದಿದ ಜನರಲ್ಲಿ ಮುಂಚೂಣಿಯಲ್ಲಿರುವವರಾಗಿದ್ದಾರೆ: “ ಜ್ಞಾನವುಳ್ಳವರು, ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ ಎಂಬುದನ್ನು ಅರಿತು ಇದರಲ್ಲಿ ನಂಬಿಕೆ ಇಡಲಿ ಹಾಗೂ ಅವರ ಮನಸ್ಸುಗಳು ಇದರ ಪರ ಒಲಿಯಲಿ (ಎಂಬ ಉದ್ದೇಶದಿಂದ ಇದನ್ನೇಲ್ಲಾ ತಿಳಿಸಲಾಗುತ್ತಿದೆ) ಖಂಡಿತವಾಗಿಯೂ ಅಲ್ಲಾಹ್’ನೇ ವಿಶ್ವಾಸಿಗಳಿಗೆ ನೇರ ದಾರಿ ತೋರುವವನಾಗಿದ್ದಾನೆ”. ಖುರ್’ಆನ್ ಅಧ್ಯಾಯ ಅಲ್ ಹಜ್ಜ್ 22 : 54. ಒಬ್ಬ ವ್ಯಕ್ತಿಯ ಮೇಲೆ ಅಲ್ಲಾಹುವಿನ ಪ್ರೀತಿಯ ಸಂಕೇತ"ಅಲ್ಲಾಹನು ಯಾರೊಂದಿಗೆ ಒಳ್ಳೆಯದನ್ನು ಬಯಸುತ್ತಾನೆಯೋ, ಅವರಿಗೆ ಧರ್ಮದ ಜ್ಞಾನವನ್ನು (ಫಿಕ್ಹ್) ನೀಡುತ್ತಾನೆ." ಸಹಿಹ್ ಅಲ್ ಬುಖಾರಿ ಸಂಪುಟ 1: 71 ಮತ್ತು ಮುಸ್ಲಿಮ್ 1037. ಮಕ್ಕಳಂತೆ ನಾವು ಯಾವಾಗಲೂ ನಮ್ಮ ಪೋಷಕರಿಂದ ಪ್ರೀತಿಯ ಚಿಹ್ನೆಗಳನ್ನು ಹುಡುಕುತ್ತೇವೆ. ಪೋಷಕರು ತಮ್ಮ ಮಗುವಿಗೆ ಉಡುಗೊರೆಗಳನ್ನು ಖರೀದಿಸಿದರೆ, ಅವರ ಹೆತ್ತವರು ಅವರನ್ನು ಪ್ರೀತಿಸುತ್ತಾರೆಂದು ಮಗುವಿಗೆ ಭರವಸೆ ಇರುತ್ತದೆ. ಹೆತ್ತವರ ಪ್ರೀತಿ ಮತ್ತು ಸಹಾನುಭೂತಿಯು ಮಗುವಿಗೆ ಸಂತಸ ಮತ್ತು ವಿಶೇಷವೆನಿಸುತ್ತದೆ. ಅಲ್ಲಾಹ್’ನು ನಮ್ಮನ್ನು ಪ್ರೀತಿಸುತ್ತಿದ್ದರೆ, ಇಸ್ಲಾಮ್ ಧರ್ಮದ ಬಗ್ಗೆ ನಮಗೆ ತಿಳುವಳಿಕೆ ನೀಡುತ್ತಾನೆ ಎಂದು ಪೈಗಂಬರರ ಮೂಲಕ ನಮಗೆ ಹೇಳುತ್ತಾನೆ. ವ್ಯತ್ಯಾಸವೇನೆಂದರೆ, ಅಲ್ಲಾಹನ ಪ್ರೀತಿ ಬೇರೆಯವರ ಪ್ರೀತಿಗಿಂತ ತುಂಬಾ ದೊಡ್ಡ(ಅಪಾರ)ದಾಗಿದೆ. ಅಲ್ಲಾಹಿವಿನ ಪ್ರೀತಿಯನ್ನು ಪಡೆಯುವುದು ಈ ಜೀವನದ ಅಂತಿಮ ಗುರಿಯಾಗಿದೆ. ಆದಾಗ್ಯೂ, ಈ ಪ್ರೀತಿ ಶ್ರಮಿಸದೆ ಬರುವುದಿಲ್ಲ, ಕಷ್ಟಪಟ್ಟು ಪ್ರಯತ್ನಿಸಬೇಕಾಗುತ್ತದೆ ಮತ್ತು ಬಹಳಷ್ಟು ಶ್ರಮ ಬಯಸುತ್ತದೆ. ಇಸ್ಲಾಮೀ ಜ್ಞಾನವನ್ನು ಪಡೆಯಲು ಪ್ರಯತ್ನಿಸುವ ಮೂಲಕ ನೀವು ಅಲ್ಲಾಹ್’ನ ಪ್ರೀತಿ ಸಂಪಾದಿಸಬೇಕು - ನಿಮ್ಮ ಸುತ್ತಲಿನ ಅನೇಕ ಸಂಪನ್ಮೂಲಗಳು ಇಲ್ಲದಿದ್ದರೂ ಸಹ, ಜ್ಞಾನ ಉಳಿಸಿಕೊಳ್ಳಲು ಕಷ್ಟವಾದರೂ ಸಹ, ನಿಮ್ಮ ಸುತ್ತಮುತ್ತಲು ಹಲವು ಗೊಂದಲಗಳು ಇದ್ದರೂ ಸಹ. ಜ್ಞಾನವನ್ನು ಮರೆಮಾಚುವವರಿಗೆ ಎಚ್ಚರಿಕೆಖುರ್’ನಿನ ಜ್ಞಾನವನ್ನು ಅಡಗಿಸುವುದರಿಂದ ಅಲ್ಲಾಹ್’ನು ಜನರನ್ನು ಎಚ್ಚರಿಸುತ್ತಾನೆ: “ನೀವು ಸತ್ಯವನ್ನು ಮಿಥ್ಯದ ಜೊತೆ ಬೆರೆಸಬೇಡಿ ಹಾಗು ಸತ್ಯವನ್ನು ತಿಳಿದಿರುತ್ತಾ ಅದನ್ನು ಅಡಗಿಸಿಡಬೇಡಿ”. ಖುರ್’ಆನ್ ಅಧ್ಯಾಯ ಅಲ್ ಬಖರಃ 2 : 42. ಅಲ್ಲಾಹ್’ನ ಪೈಗಂಬರರು ಹೇಳಿದರು : ಯಾರು ಜ್ಞಾನವನ್ನು ಪಡೆದು ನೆನಪಿಟ್ಟುಕೊಂಡು ಅದನ್ನು ಮರೆಮಾಚುವನೊ, ಅವನಿಗೆ ಪುನರುತ್ಥಾನದ ದಿನದಂದು ಬೆಂಕಿಯ ಲಗಾಮು ಧರಿಸಿ ತರಲಾಗುವುದು. ಸುನನ್ ಇಬ್ನಮಾಜಾ ಸಂಪುಟ 1: 261 ಇಬ್ನೆ ಹದಮ್’ರವರ ಹೇಳಿಕೆಕಲಿತಿದ್ದರೆ ಆಲೋಚಿಸುತ್ತೀರಿ ಎಷ್ಟು ಗಂಟೆಗಳ ನೀವು ಕಲಿಕೆಯಲ್ಲಿ ಕಳೆಯುವಿರೋ ಅಷ್ಟೇ ಕಲಿಕೆ ನಿಮ್ಮಲ್ಲಿ ಉಳಿಯುತ್ತದೆ ಈ ಪ್ರಾಬಲ್ಯದಿಂದ ಅಸ್ತಿತ್ವದಲ್ಲಿರುವ ಅಜ್ಞಾನದಿಂದಾಗುವ ಅವಮಾನವನ್ನು ತಪ್ಪಿಸಬಹುದು ಮತ್ತು ಸತ್ಯಕ್ಕೆ ತೊಂದರೆ(ಯಾತನೆ) ಪ್ರವೇಶವಾಗುವುದಿಲ್ಲ, ಮತ್ತು ಇತರರು ಮರೆಮಾಡಲ್ಪಟ್ಟಿದ್ದನ್ನು ಪತ್ತೆಹಚ್ಚುವುದು ಹೇಗೆ ಎಂಬುದಕ್ಕೆ ಆ ಶ್ರಮಿಸಿದ ಗಂಟೆಗಳೇ ಅವರಿಗೆ ಸಂತೋಷದಿಂದ ಪರಿಹಾರ ಒದಗಿಸಿಕೊಡುವುವು, ಅವರು ಮಹತ್ತರವಾದ ಅಲ್ಲಾಹ್’ನನ್ನು ಮಿಂಚುತ್ತಾ ಪೂರ್ಣ ಘನತೆಯಿಂದ ಶ್ಲಾಘಿಸುತ್ತಿರುತ್ತಾರೆ, ಮತ್ತು ಅವರು ಹೊಂದಿರುವ ಜ್ಞಾನದ ಬಗ್ಗೆ ಹೆಚ್ಚು ಸಂತೋಷವಾಗುತ್ತದೆ ಮತ್ತು ಅದು ಅವರ ಜ್ಞಾನವನ್ನು ಹೆಚ್ಚಿಸುವ ಬಯಕೆಯನ್ನು ಸಹ ಹೆಚ್ಚಿಸುತ್ತದೆ. "
ನೀವು ಇತರರ ಬಗ್ಗೆ ಯಾವಾಗ ಅಸೂಯೆ ತೋರಿಸಬೇಕು?"ಎರಡು ಜನರನ್ನು ಹೊರತುಪಡಿಸಿ ಅಸೂಯೆ (ಹಸದ್) ತೋರಿಸಬಾರದು, ಒಬ್ಬ ವ್ಯಕ್ತಿಗೆ ಅಲ್ಲಾಹ್’ನು ಖುರ್’ಆನಿನ(ಜ್ಞಾನವನ್ನು) ನೀಡಿದನೋ, ಅವನು ರಾತ್ರಿ ಮತ್ತು ಹಗಲು ಪಠಿಸುತ್ತಾನೆ, ಮತ್ತು ಅಲ್ಲಾಹನು ಯಾರಿಗೆ ಸಂಪತ್ತನ್ನು ನೀಡಿದ್ದಾನೆ ಅದರಿಂದ ಅವನು ಒಳ್ಳೆಯ ಕಾರ್ಯಗಳಲ್ಲಿ ತೊಡಗಿಸಿ ರಾತ್ರಿ ಮತ್ತು ಹಗಲನ್ನು ವ್ಯಯಿಸುತ್ತಾನೆ. "ಸಹಿಹ್ ಮುಸ್ಲಿಮ್, 815. ಈ ಹದೀಸ್ ಜ್ಞಾನವನ್ನು ಪಡೆಯಲು ಯಥಾರ್ಥತೆಗಳನ್ನು ಸೂಚಿಸುತ್ತದೆ. ಪೈಗಂಬರ್ ಮುಹಮ್ಮದ್ (ಸ)ರು ನಾವು ಎರಡು ವಿಷಯಗಳನ್ನು ಹೊರತು ಬೇರೆ ಯಾವ ಇತರರ ಕುರಿತು ಅಸೂಯೆ ಪಡೆಯಲೇಬಾರದು ಎಂದು ಹೇಳಿದ್ದಾರೆ, ಅವುಗಳಲ್ಲಿ ಒಂದು ಜ್ಞಾನದ ಅಸ್ಥಿತ್ವ. ಖುರ್’ಆನ್ ಮತ್ತು ಸುನ್ನತ್ತಿನ ಜ್ಞಾನವನ್ನು ಹೊಂದಿದ ಇತರ ಜನರನ್ನು ನೋಡಿದಾಗ ನಮಗೆ ಅಸೂಯೆಯಾಗಬೇಕು. ಈ ಕಲ್ಪನೆ ಜ್ಞಾನವನ್ನು ಪಡೆಯಲು ಪ್ರೇರಣೆಯಾಗುತ್ತದೆ. ಈ ಹದೀಸ್ ಇನ್ನೊಬ್ಬ ವ್ಯಕ್ತಿಯು ಏಕೆ ಜ್ಞಾನವನ್ನು ಪಡೆದಿದ್ದಾನೆ ಎಂಬುದರ ಕುರಿತು ಮತ್ತು ಏಕೆ ಅಂತಹ ಜ್ಞಾನವನ್ನು ಅಲ್ಲಾಹನು ನನಗೆ ನೀಡಲಿಲ್ಲ ನಾವು ಅಲ್ಲಾಹ್’ನಿಗೆ ತೀರ್ಪು ಕೇಳುತ್ತೇವೆ ಎಂದು ಸೂಚಿಸುವ ಬದಲಾಗಿ, ನಮ್ಮ ದೀನ್ ನಮಗೆ ಕಲಿಸಿದಂತೆ ನಾವು ಕಲಿಯಲು ಶಕ್ತರಾಗುವಂತೆ ಅಲ್ಲಾಹನನ್ನು ಕೇಳಬೇಕು. [2] ವಿದ್ವಾಂಸರ ದೃಷ್ಟಿಕೋನಶೇಖ್ ಇಬ್ನೆ ಉಸೈಮೀನ್ ಲಿಖಾ ಅಲ್ ಬಾಬ್ ಇಲ್ ಮಫ್’ತೂಹ್ (1/330) ದಲ್ಲಿ ಹೇಳಿದರು; ಒಬ್ಬ ವ್ಯಕ್ತಿಯು ನೈಜ ಜೀವನದ ಜ್ಞಾನವನ್ನು ಹೊಂದಿರಬೇಕು, ಅದರಿಂದ ಜನರು ಹೇಗೆ ವಾಸಿಸುತ್ತಿದ್ದಾರೆಂದು ಅವನು ತಿಳಿಯುತ್ತಾನೆ. ಅವರು ಮುಆದ್ ಇಬ್ನ್ ಜಬಲರನ್ನು ಯೆಮೆನ್’ಗೆ ಕಳುಹಿಸಿದಾಗ ಅವರಿಗೆ ಹೇಳಿದ ಮಾತುಗಳಲ್ಲಿ ಪೈಗಂಬರರು ಇದನ್ನು ಸೂಚಿಸಿದರು “"ನೀವು ಗ್ರಂಥ ಹೊಂದಿರುವ ಕೆಲವು ಜನರ ಕಡೆಗೆ ಹೋಗುತ್ತಿದ್ದೀರಿ" ಮತ್ತು ಅವರು ತಮ್ಮ ಪರಿಸ್ಥಿತಿ ಬಗ್ಗೆ ತಿಳಿಸಿದರು. ಆದರೆ ಯಾವುದೇ ಸಂದರ್ಭಗಳಲ್ಲಿ ಅದು ಧರ್ಮದ ಅಧ್ಯಯನವನ್ನು ಮೀರಿಸುತ್ತದೆ ಎಂದು ಅನುಮತಿಸುವುದಿಲ್ಲ. ಯುವಕರು ಅಥವ ಬೇರೆ ಯಾರೂ ಇಲ್ಲಿ ಮತ್ತು ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾತ್ರ ಕೇಂದ್ರೀಕರಿಸಬೇಕು ಮತ್ತು ಅವರು ಏನನ್ನೂ ಮಾಡಲಾಗದ ಸಮಸ್ಯೆಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತಾರೆ. ಇದಲ್ಲದೆ, ಅವರು ಉಮ್ಮತ್’ಅನ್ನು ನೇರವಾಗಿ ಹೊಂದಿಸಲು ಉತ್ಸುಕರಾಗಿದ್ದರೆ, ಧರ್ಮದ ಸರಿಯಾದ ತಿಳುವಳಿಕೆ ಮೂಲಭೂತ ಅವಶ್ಯಕತೆಯಾಗಿದೆ. ಆದ್ದರಿಂದ ಪೈಗಂಬರ(ಸ)ರು ಹೇಳಿದರು: ಅಲ್ಲಾಹ್’ನು ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಆಶಿಸಿದಾಗ ಅವನು ಧರ್ಮದ ಕುರಿತು ಸರಿಯಾದ ತಿಳುವಳಿಕೆಯನ್ನು ನೀಡುತ್ತಾನೆ". ಜನರ ಜೀವನಕ್ಕೆ ಇಸ್ಲಾಮ್ ಧರ್ಮದ ಸರಿಯಾದ ತಿಳುವಳಿಕೆ ಅನ್ವಯಿಸುವ ಅಗತ್ಯವಿದೆ, ಆದರೆ ಯಾವುದೇ ಸಂದರ್ಭಗಳಲ್ಲಿ ಜೀವನವನ್ನು ಅಧ್ಯಯನ ಮಾಡುವುದರ ಮೇಲೆ ಕೇಂದ್ರೀಕರಿಸಲು ಅದು ಅನುಮತಿಸುವುದಿಲ್ಲ ಮತ್ತು ವಾಸ್ತವದಲ್ಲಿ ಒಬ್ಬ ವ್ಯಕ್ತಿಯು ಕಳವಳವನ್ನು ಹೊಂದಬೇಕಾಗಿಲ್ಲ ಆದರೆ ಪತ್ರಿಕೆಗಳನ್ನು ನಿಯತಕಾಲಿಕೆಗಳನ್ನು ಓದಲು ಮಾಡುವ ವೆಚ್ಚದಲ್ಲಿ ಧರ್ಮವನ್ನು ಅಧ್ಯಯನ ಮಾಡಬಹುದು ಆದರೆ ಜನರು ಖುರ್’ಆನ್ ಮತ್ತು ಸುನ್ನತ್ತಿನ ವಿಷಯಗಳನ್ನು ಅಧ್ಯಯನ ಮಾಡಲು ನಿರ್ಲಕ್ಷಿಸುತ್ತಾರೆ. [3] ಇಬ್ನೆ ಹದಮ್(ರ ಅ)ರವರ ಹೇಳಿಕೆಕಲಿತಿದ್ದರೆ ಆಲೋಚಿಸುತ್ತೀರಿ ಎಷ್ಟು ಗಂಟೆಗಳ ನೀವು ಕಲಿಕೆಯಲ್ಲಿ ಕಳೆಯುವಿರೋ ಅಷ್ಟೇ ಕಲಿಕೆ ನಿಮ್ಮಲ್ಲಿ ಉಳಿಯುತ್ತದೆ ಈ ಪ್ರಾಬಲ್ಯದಿಂದ ಅಸ್ತಿತ್ವದಲ್ಲಿರುವ ಅಜ್ಞಾನದಿಂದಾಗುವ ಅವಮಾನವನ್ನು ತಪ್ಪಿಸಬಹುದು ಮತ್ತು ಸತ್ಯಕ್ಕೆ ತೊಂದರೆ(ಯಾತನೆ) ಪ್ರವೇಶವಾಗುವುದಿಲ್ಲ, ಮತ್ತು ಇತರರು ಮರೆಮಾಡಲ್ಪಟ್ಟಿದ್ದನ್ನು ಪತ್ತೆಹಚ್ಚುವುದು ಹೇಗೆ ಎಂಬುದಕ್ಕೆ ಆ ಶ್ರಮಿಸಿದ ಗಂಟೆಗಳೇ ಅವರಿಗೆ ಸಂತೋಷದಿಂದ ಪರಿಹಾರ ಒದಗಿಸಿಕೊಡುವುವು, ಅವರು ಮಹತ್ತರವಾದ ಅಲ್ಲಾಹ್’ನನ್ನು ಮಿಂಚುತ್ತಾ ಪೂರ್ಣ ಘನತೆಯಿಂದ ಶ್ಲಾಘಿಸುತ್ತಿರುತ್ತಾರೆ, ಮತ್ತು ಅವರು ಹೊಂದಿರುವ ಜ್ಞಾನದ ಬಗ್ಗೆ ಹೆಚ್ಚು ಸಂತೋಷವಾಗುತ್ತದೆ ಮತ್ತು ಅದು ಅವರ ಜ್ಞಾನವನ್ನು ಹೆಚ್ಚಿಸುವ ಬಯಕೆಯನ್ನು ಸಹ ಹೆಚ್ಚಿಸುತ್ತದೆ. " ಇದು ಇಬ್ನ್ ಹದಮ್(ರ ಅ) ಅವರ ಸುಂದರ ಹೇಳಿಕೆಯಾಗಿದೆ ಅವರ ಹೇಳಿಕೆಯ ನೇರ ಪರಿಣಾಮಗಳು ಸ್ಪಷ್ಟವಾಗಿವೆ. ಅವಮಾನದ ಅಸ್ತಿತ್ವದಿಂದ ಅಜ್ಞಾನಿ ಜನರ ಆಜ್ಞೆಗಳ ಮೇರೆಗೆ ಜ್ಞಾನದ ಸ್ವಾಧೀನವು ನಮ್ಮನ್ನು ಉಳಿಸುತ್ತದೆ. ಇದಲ್ಲದೆ, ಜ್ಞಾನವನ್ನು ಸ್ವಾಧೀನಪಡಿಸಿಕೊಳ್ಳುವುದು ವಿಶ್ವಾಸಾರ್ಹತೆಗೆ ಯಾವುದೇ ಪ್ರವೇಶವನ್ನು ಹೊಂದಿರದ ತೊಂದರೆಯಿಂದ ಮತ್ತು ಅನಧಿಕೃತ ಮಾಹಿತಿಯಿಂದ ನಮ್ಮನ್ನು ರಕ್ಷಿಸುತ್ತದೆ ಇದಲ್ಲದೆ, ಜ್ಞಾನದ ಸ್ವಾಧೀನವು ಇತರರಿಗೆ ತಿಳಿದಿಲ್ಲದ್ದು ನಮಗೆ ತಿಳಿದಿರುವ ಸಂತೋಷವನ್ನು ನೀಡುತ್ತದೆ. ಸರಿಯಾದ ಜ್ಞಾನವು ನಮ್ಮ ಒಡೆಯನನ್ನು ಉತ್ತಮ ರೀತಿಯಲ್ಲಿ ಆರಾಧಿಸಲು ಅವನನ್ನು ಸಂತೋಷಪಡಿಸುವ ವಿಧಾನಕ್ಕೆ ನಮಗೆ ಅವಕಾಶ ನೀಡುತ್ತದೆ. ತೀರ್ಮಾನಅಲ್ಲಾಹನ ಕೃಪೆಯಿಂದ ಈ ಲೇಖನವು ಹಲವಾರು ಪ್ರಯೋಜನಗಳ ಕಾರಣದಿಂದಾಗಿ ಜ್ಞಾನವನ್ನು ಮುಂದುವರಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸಿದೆ, ಜ್ಞಾನವನ್ನು ಪಡೆದುಕೊಳ್ಳುವುದು ನಮ್ಮ ದೀನ್ ಅನ್ನು ಪ್ರಶಂಸಿಸಲು ಸಹಾಯ ಮಾಡುತ್ತದೆ, ಅಲ್ಲಾಹ್’ನ ಜೊತೆ ನಮ್ಮ ಸಂಪರ್ಕವನ್ನು ಉತ್ತಮ ಮತ್ತು ನಮ್ಮ ಜೀವನವನ್ನು ಸರಳಗೊಳಿಸುವ ಖುರ್’ಆನ್ ಮತ್ತು ಸುನ್ನತ್’ಗಳಿಂದ ನಮ್ಮ ಸಮಸ್ಯೆಗಳ ಪರಿಹಾರಗಳನ್ನು ಕಂಡುಹಿಡಿಯಲು ನಮಗೆ ಅವಕಾಶ ಮಾಡಿಕೊಡುತ್ತದೆ. ಮತ್ತು ಪೈಗಂಬರರ ಮಾತುಗಳನ್ನು ನಾವು ನಿಮಗೆ ನೆನಪಿಸುತ್ತೇವೆ ಯಾರು ಅಲ್ಲಾಹನ ಮಾರ್ಗವನ್ನು ಅನುಸರಿಸುವರೋ ಅವರಿಗೆ ಮಾರ್ಗದರ್ಶನವನ್ನು ಕೊಡುವನು, " ನೀವು ಏನು ಮಾಡಬೇಕೆಂದು ಮೊದಲು ಗುರಿ ಮಾಡಿಕೊಳ್ಳಿರಿ ಮತ್ತು ಅದನ್ನೇ ಒಳ್ಳೆಯರೀತಿಯಿಂದ ಮಾಡಿರಿ. ದಿನದ ಆರಂಭದಲ್ಲಿ ಅಥವ ಮಧ್ಯಾಹ್ನದ ಅಥವ ರಾತ್ರಿ ನಿಮ್ಮ ಕರ್ತವ್ಯಗಳನ್ನು ಮಾಡಿ, ಮತ್ತು ಅದರಲ್ಲಿ ಮಿತವಿರಲಿ. ಮತ್ತು ನೀವು ಯಶಸ್ವಿಯಾಗುತ್ತೀರಿ. "ಸಹಿಹ್ ಅಲ್ ಬುಖಾರಿ 6463 ಮತ್ತು ಮುಸ್ಲಿಮ್ 2818. ಪೈಗಂಬರ್(ಸ)ರು ಹೇಳಿದರು; ಯಾರು ಕೆಲ ಜ್ಞಾನವನ್ನು ಕಲಿಸುತ್ತಾರೋ ಅದರ ಮೇಲೆ ಅನುಸರಿಸುವವನಿಗೆ ತನ್ನ ಪ್ರತಿಫಲದಿಂದ ಒಂದಿಷ್ಟೂ ಕಡಿಮೆಯಾಗದೆ ಸಂಪೂರ್ಣ ಪ್ರತಿಫಲ ಸಿಗಲಿದೆ,. ಸುನನ್ ಇಬ್ನೆ ಮಾಜಾ ಸಂಪುಟ 1: 240 [4] ಉಲ್ಲೇಖಗಳು[1] [4] http://www.suhaibwebb.com/islam-studies/blessings-of-seeking-knowledge/ [2] http://www.turntoislam.com/forum/showthread.php?t=7197 [3] http://islamqa.info/en/ref/76010 |
.