ವಿಚ್ಛೇದನ ಅಥವ ತಲಾಖ್

ವಿಚ್ಛೇದನವು ವಿವಾಹಿತ ಮಹಿಳೆಯನ್ನು ತನ್ನ ಗಂಡನಿಂದ ಬೇರ್ಪಡಿಸುವುದು. ನ್ಯಾಯಾಲಯ (ಕೋರ್ಟ್) ಅಥವ ಇತರ ಸಮರ್ಥ ಅಧಿಕಾರ ಹೊಂದಿರುವ ಗುಂಪು ಮದುವೆಯ ಒಪ್ಪಂದವನ್ನು ಕಾನೂನುಬದ್ದವಾಗಿ ಬೇರ್ಪಡಿಸುವುದು. [1]

   ಮದುವೆ, ಅಲ್ಲಾಹ್’ನಿಂದ ಸೂಚಿಸಲ್ಪಟ್ಟಂತೆ, ಪರಸ್ಪರ ಒಪ್ಪಿಗೆಯನ್ನು ಆಧರಿಸಿ ಪುರುಷ ಮತ್ತು ಮಹಿಳೆಯ ಕಾನೂನುಬದ್ಧ ಒಕ್ಕೂಟವಾಗಿದೆ. ತಾತ್ತ್ವಿಕವಾಗಿ, ಮದುವೆ ಉದ್ದೇಶವು ಶಾಂತಿ ಸ್ಥಿತಿಗೆ ಉತ್ತೇಜನ ನೀಡುವುದು, ಇಸ್ಲಾಮ್ ಧರ್ಮದಲ್ಲಿ ಪ್ರೀತಿ ಮತ್ತು ಸಹಾನುಭೂತಿ, ಆದರೆ ಅದು ಯಾವಾಗಲೂ ಅಲ್ಲ. ಇಸ್ಲಾಂ ಧರ್ಮ ವಿಚ್ಛೇದನವನ್ನು ನಿರುತ್ಸಾಹಗೊಳಿಸುತ್ತದೆ(ಪ್ರಚೋದಿಸುವುದಿಲ್ಲ) ಆದರೆ, ಹೋಲಿಕೆಯಿಲ್ಲದ ಕೆಲವು ಧರ್ಮಗಳು, ಎರಡೂ ಪಕ್ಷಗಳ ವಿಚ್ಛೇದನಕ್ಕೆ ನಿಬಂಧನೆಗಳನ್ನು ಒದಗಿಸುತ್ತವೆ.

   ತಲಾಖ್ (ಅರೇಬಿಕ್: الطلاق) ವಿಚ್ಛೇದನದ ಇಸ್ಲಾಮಿಕ್ ಪದ. ತಲಾಖ್ ಎನ್ನುವ ಪದವನ್ನು ಒಂದು ಮದುವೆ ಅಥವ ನಿಖಾಃದ ಸಂಭಂಧಗಳನ್ನು ಕೊನೆಗೊಳಿಸಲು ಬಳಸಲಾಗುತ್ತದೆ, ಇಸ್ಲಾಮಿಕ್ ಕಾನೂನು (ಷರಿಯಾ) ನಿಯಮಗಳಡಿಯಲ್ಲಿ. [2]

ಪರಿವಿಡಿ
  1. ತಲಾಖ್’ನ ಕರಾರುಗಳು
  2. ಖುಲಾದ ಕರಾರುಗಳು

ಪರಿಚಯ

o        ತಲಾಖ್’ನ ಕರಾರುಗಳು

   ವಿಚ್ಛೇದನದ ಪ್ರಕ್ರಿಯೆಯಲ್ಲಿ ರಾಜೀ ಮಾಡಿಕೊಳ್ಳಲು ಪತಿ ಮತ್ತು ಪತ್ನಿಯರಿಗೆ ಸಹಾಯ ಮಾಡುವ ಮಧ್ಯಸ್ಥಗಾರರನ್ನು ನೇಮಿಸಿಕೊಳ್ಳುವಂತೆ ಹಾಗು ಇದು ಮೊದಲ ಹೆಜ್ಜೆಯೆಂದು ಇದನ್ನು ಅಲ್ಲಾಹ್ ಪ್ರೋತ್ಸಾಹಿಸುತ್ತಾನೆ.ರಾಜೀ ಮಾಡಿಸುವ ಹಂತವು ವಿಫಲವಾದರೆ, ಪುರುಷ ಮತ್ತು ಮಹಿಳೆ ಇಬ್ಬರಿಗೂ ಖುರ್’ಆನಿನ್ನಲ್ಲಿ ಸ್ಥಾಪಿಸಲ್ಪಟ್ಟಂತೆ ವಿಚ್ಛೇದನ ಮಾಡುವ ಹಕ್ಕನ್ನು ಹಾಗು ಭರವಸೆಯನ್ನು ನೀಡುತ್ತಾರೆ, ಆದರೆ ಪ್ರತಿಯೊಂದು ಕಾರ್ಯವಿಧಾನದಲ್ಲಿ ವ್ಯತ್ಯಾಸವಿದೆ. ಪುರುಷನಿಂದ ವಿಚ್ಛೇದನ ಪ್ರಾರಂಭವಾದಾಗ, ಅದನ್ನು ತಲಾಖ್ಎಂದು ಕರೆಯಲಾಗುತ್ತದೆ.

   ಪತಿಯ ಹೇಳಿಕೆಯು ಮೌಖಿಕವಾಗಿರಬಹುದು ಅಥವ ಬರವಣಿಗೆಯಲ್ಲಿರಬಹುದು, ಆದರೆ ಮೊದಲ ವಿಚ್ಛೇದನ ಮಾಡಿದ ನಂತರ, ಋತುಸ್ರಾವದ ನಿಯಮದ ಅವಧಿಯಂತೆ ಇರಬೇಕು ('ಇದ್ದತ್) ಆ ಸಮಯದಲ್ಲಿ ಲೈಂಗಿಕ ಸಂಬಂಧಗಳನ್ನು ತ್ಯಜಿಸಬೇಕು. ಇಬ್ಬರೂ ಒಂದೇ ಛಾವಣಿಯಡಿಯಲ್ಲಿ ವಾಸಿಸಬೇಕು.

   ಕೋಪದಿಂದ ಉಂಟಾಗುವ ಅವಧಿ ಮುಗಿಯುವವರೆಗೆ ತಡೆಯಲು ಕಾಯುವ ಅವಧಿಯು ಸಹಾಯ ಮಾಡುತ್ತದೆ ಮತ್ತು ಎರಡೂ ಪಕ್ಷಗಳು ಮರುಪರಿಶೀಲಿಸುವ ಸಮಯವನ್ನು ಹಾಗೆಯೇ ಹೆಂಡತಿ ಗರ್ಭಿಣಿಯಾಗಿದ್ದಾಳೆಯೇ ಎಂದು ನೋಡಲು ಅನುಮತಿಸುತ್ತದೆ. ಹೆಂಡತಿ ಗರ್ಭಿಣಿಯಾಗಿದ್ದರೆ,ಈ ಕಾಯುವ ಅವಧಿಯು ಅವಳ ಹೆರಿಗೆ ಸಮಯದವರೆಗೂ ಇರುತ್ತದೆ. ಈ ಹಂತದಲ್ಲಿ ಯಾವುದೇ ಸಮಯದಲ್ಲಿ, ಪತಿ ಮತ್ತು ಪತ್ನಿಯರು ಅವರ ಒಡನಾಡಿ ಸಂಬಂಧವನ್ನು ಪುನರಾರಂಭಿಸಲು ಸ್ವತಂತ್ರರಾದರೆ, ಅಥವ ಒಪ್ಪಿಕೊಂಡರೆ, ಇದರಿಂದಾಗಿ ವಿಚ್ಛೇದನ ಪ್ರಕ್ರಿಯೆಯನ್ನು ಅದು (ಸಂಭಂಧ) ಅಂತ್ಯಗೊಳಿಸುತ್ತದೆ. ಈ ಕಾಯುವ ಅವಧಿಯಲ್ಲಿ, ಪತಿ ತನ್ನ ಪತ್ನಿಯ ಬೆಂಬಲಕ್ಕಾಗಿ ಆರ್ಥಿಕವಾಗಿ ಜವಾಬ್ದಾರನಾಗಿರುತ್ತಾನೆ.

o          ಖುಲಾದ ಕರಾರುಗಳು

   ಪತ್ನಿ ಕಡೆಯಿಂದ ಪ್ರಾರಂಭಿಸಿದ ವಿಚ್ಛೇದನವನ್ನು ಖುಲ್ ಅಥವ ಖುಲಾ ' (ಗಂಡನ ತಪ್ಪು ಇಲ್ಲದಿದ್ದರೆ) ಮತ್ತು ಹೆಂಡತಿಯು ಮದುವೆ ಸಂಭಂಧವನ್ನು ಅಂತ್ಯಗೊಳಿಸಲು ತಾನು ಪಡೆದ ವಧುದಕ್ಷಿಣೆಯನ್ನು ಮರಳಿಸಬೇಕಾಗುತ್ತದೆ ಏಕೆಂದರೆ ಅವಳು 'ಒಪ್ಪಂದ-ಭಂಜಕಿ(ಒಪ್ಪಂದವನ್ನು ನಿಲ್ಲಿಸುವವಳು)'. ತಲಾಖ್’ನ ದೃಷ್ಟಾಂತ(ಉದಾಹರಣೆಯಲ್ಲಿ)ದಲ್ಲಿ ಅಲ್ಲಿ ಗಂಡನು 'ಒಪ್ಪಂದ-ಭಂಜಕ(ಒಪ್ಪಂದವನ್ನು ನಿಲ್ಲಿಸುವವನು)', ಆಗ ಅವನು ಎಲ್ಲ ರೀತಿಯಲ್ಲಿ ಅವನು ಸಂಪೂರ್ಣವಾಗಿ ದಂಡ ಪಾವತಿಸಬೇಕು ಅಥವ ಮುಂದೂಡಲಾಗಿರುವ ಅದರ ಭಾಗವನ್ನು, ಅಥವ ಈಗಾಗಲೇ ಅದನ್ನು ಪೂರ್ಣವಾಗಿ ನೀಡಿದ್ದರೆ ಪತ್ನಿ ಎಲ್ಲವನ್ನೂ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು.

   ಆ ಸಂದರ್ಭದಲ್ಲಿ ಪತಿಯ ತಪ್ಪು ಇದ್ದು ಮತ್ತು ಮಹಿಳೆ ವಿಚ್ಛೇದನ ಆಸಕ್ತಿ ಇದೆ ಎಂದಲ್ಲಿ, ಅವಳು ಕಾರಣಗಳೊಂದಿಗೆ ವಿಚ್ಛೇದನಕ್ಕೆ ನ್ಯಾಯಾಧೀಶರನ್ನು ಮನವಿ ಮಾಡಬಹುದು, ಆಗ ತನ್ನ ಪತಿ ತನ್ನ ವೈವಾಹಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸಲಿಲ್ಲವೆಂದು ಪುರಾವೆ ನೀಡುವ ಅಗತ್ಯವಿದೆ. ಮಹಿಳೆ ತನ್ನ ಮದುವೆಯ ಒಪ್ಪಂದದಲ್ಲಿ ಇಸ್ಲಾಂ ಧರ್ಮದ ಪ್ರಕಾರ  ಸ್ವೀಕರಿಸಿದ ನಿಗದಿತ ಷರತ್ತುಗಳನ್ನು ನಿರ್ದಿಷ್ಟಪಡಿಸಿದರೆ,ಯಾವುದೇರೀತಿಯಿಂದ ಗಂಡನಿಂದ ಭೇಟಿಯಾಗಲಿಲ್ಲದಿದ್ದಲ್ಲಿ ಅವಳು ಶರತ್ತಿನ ವಿಚ್ಛೇದನವನ್ನು ಪಡೆದುಕೊಳ್ಳಬಹುದು. [3],

   ಖುರ್’ಆನ್

ಅಲ್ಲಾಹ್’ನು ವಿಚ್ಛೇದನದ ಪ್ರಕ್ರಿಯೆಗಾಗಿ ಎರಡೂ ಪಕ್ಷಗಳ ಮೇಲೆ ಮಹತ್ವದ ಸಾಮಾನ್ಯ ಮಾರ್ಗದರ್ಶನಗಳನ್ನು ಒದಗಿಸುತ್ತಾನೆ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವುದರೊಂದಿಗೆ ಮತ್ತು ತಮ್ಮ ಮದುವೆಯ ಅಂತ್ಯವನ್ನು ರೂಪಿಸುವಲ್ಲಿ ದಯೆಯೊಂದಿಗೆ, ( ನೋಡಿರಿ ಖುರ್’ಆನ್ ಅಧ್ಯಾಯ ಅಲ್ ಬಖರಃ 2 : 224-242 ಮತ್ತು ಅಧ್ಯಾಯ ಅತ್ತಲಾಖ್ 65 : 1-4) ವಿಚ್ಛೇದನಕ್ಕೆ ಸಂಬಂಧಿಸಿದ ಸಾಮಾನ್ಯ ಮಾರ್ಗಸೂಚಿಗಳಿಗಾಗಿ). [4]

ಹದೀಸ್

  ಅಬ್ದುಲ್ಲಾಹ್ ಬಿನ್ ಉಮರ್ ವರದಿ ಮಾಡುವರು: ಅಲ್ಲಾಹ್’ನ ಧರ್ಮಪ್ರಚಾರಕನ ಜೀವಿತಾವಧಿಯಲ್ಲಿ ಅವರು ತನ್ನ ಪತ್ನಿ ವಿಚ್ಛೇದಿಸ ಬಯಸಿದಾಗ ಆಕೆಯು ಆಗ ಮುಟ್ಟಾಗಿದ್ದಳು. ಉಮರ್ ಬಿನ್ ಅಲ್ ಖತ್ತಾಬ್ ಅಲ್ಲಾಹ್’ನ ಧರ್ಮಪ್ರಚಾರಕರನ್ನು ಇದರ ಕುರಿತು ಕೇಳಿದಾಗ. ಅಲ್ಲಾಹ್’ನ ಧರ್ಮಪ್ರಚಾರಕರು ಹೇಳಿದರು:  "ಅವಳನ್ನು ಹಿಂಪಡೆದು ತನ್ನೊಂದಿಗೆ ಇರಿಸಬೇಕೆಂದು ಅವನನ್ನು (ನಿನ್ನ ಮಗ) ಆದೇಶಿಸಿ ಮತ್ತು ಅವಳು ಶುಚಿಯಾಗುವವರೆಗೆ ಅವಳನ್ನು ಕಾಪಾಡಿಕೊಳ್ಳಿ ತದನಂತರ ಆಕೆಯ ಮುಂದಿನ ಮುಟ್ಟಿನ ಅವಧಿಯ ತನಕ ಮತ್ತು ಮತ್ತೊಮ್ಮೆ ಶುಚಿಯಾಗುವವರೆಗೆ ನಿರೀಕ್ಷಿಸಿ, ಅದರ ನಂತರ,ಆಕೆಯು ಜೊತೆಗೆರಲು ಬಯಸಿದರೆ, ಅವರು ಹಾಗೆ ಮಾಡಬಹುದು, ಮತ್ತು ಅವಳನ್ನು ವಿಚ್ಛೇದನ ಮಾಡಲು ಇಚ್ಛಿಸಿದರೆ ಅವನು ತನ್ನೊಂದಿಗೆ ಸಂಭೋಗಿಸುವುದಕ್ಕೆ ಮುಂಚಿತವಾಗಿ ಅವಳನ್ನು ವಿಚ್ಛೇದನ ನೀಡಬಹುದು; ಮತ್ತು ಇದು ಅಲ್ಲಾಹ್’ನು ಮಹಿಳೆಯರನ್ನು ವಿಚ್ಛೇದಿಸಬೇಕಾದರೆ ನಿಗದಿಪಡಿಸಿದ ನಿಗದಿತ ಅವಧಿಯಾಗಿದೆ”. ಸಹಿಹ್ ಅಲ್ ಬುಖಾರಿ 5251 (ಸಂಪುಟ 7 ಪುಸ್ತಕ 63 ಸಂಖ್ಯೆ 178)

  "ಕಾರಣ ಕಾರಣವಿಲ್ಲದೆ ತನ್ನ ಪತಿಗೆ ವಿಚ್ಛೇದನಕ್ಕಾಗಿ (ಖುಲಾ) ಕೇಳುವ ಯಾವುದೇ ಮಹಿಳೆಗೆ ನಂತರ ಸ್ವರ್ಗದ ಪರಿಮಳವೂ ಹರಾಮ್ (ನಿಷಿದ್ಧ / ಕಾನೂನುಬಾಹಿರ) ಆಗಿದೆ (ಅಂದರೆ ಅವರು ಅದರ ವಾಸನೆಯನ್ನೂ ನೋಡುವುದಿಲ್ಲ ಅಥವ ಮೂಸುವುದಿಲ್ಲ).”  ಅಬೂದಾವೂದ್ 2226, ಅತ್ ತಿರ್ಮಿಜಿ 1187 ಮತ್ತು ಇಬ್ನೆ ಮಾಜಾ 2055 [5]

ಅಂತಿಮ ಆಯ್ಕೆಯಾಗಿ ವಿಚ್ಛೇದನ

ಇಸ್ಲಾಂನಲ್ಲಿ ವಿಚ್ಛೇದನವನ್ನು ಅನುಮತಿಸಲಾಗಿದ್ದರೂ ಸಹಾನುಭೂತಿಯ ಸಂಕೇತವಾಗಿದೆ ಮತ್ತು ಇಸ್ಲಾಮಿಕ್ ಕಾನೂನು ಪ್ರಾಯೋಗಿಕ ಸ್ವಭಾವದ ವ್ಯವಸ್ಥೆಯಾಗಿದೆ. ಕುಟುಂಬದ ಐಕ್ಯತೆಯನ್ನು ಉಳಿಸಿಕೊಳ್ಳುವುದರಿಂದ ಮಕ್ಕಳ ಸಲುವಾಗಿ ಒಂದು ಆದ್ಯತೆಯೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಸರಿಹೊಂದಿಸುವ ಮನವೊಲಿಸುವ  ಎಲ್ಲಾ ಪ್ರಯತ್ನಗಳನ್ನು ಸಾಧ್ಯವಾದಷ್ಟು ಅದರ ಬಳಕೆಯನ್ನು ಕಳೆದುಕೊಂಡು ವಿಫಲವಾದ ನಂತರ.ವಿಚ್ಛೇದನ ಯಾವಾಗಲೂ ಕೊನೆಯ ಆಯ್ಕೆಯಾಗಿದೆ,

ಉದಾಹರಣೆಗೆ; ಅಲ್ಲಾಹ್’ನು ಪುರುಷರಿಗೆ ಮದುವೆಯ ಸಂಭಂಧವನ್ನು ಉಳಿಸಿಕೊಳ್ಳಲು ಕಷ್ಟಪಡಬೆಕೆಂದು ಹೇಳುತ್ತಾನೆ, ಅವರು ತಮ್ಮ ಪತ್ನಿಯರನ್ನು ಇಷ್ಟಪಡದಿದ್ದರೂ ಸಹ: “ ಅವರ ಜೊತೆ ನೀವು ನಿಯಮಾನುಸಾರ ಬದುಕು ಸಾಗಿಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ (ನಿಮಗೆ ತಿಳಿದಿರಲಿ) ನಿಮಗೊಂದು ವಸ್ತು ಅಪ್ರಿಯವಾಗಿರಬಹುದು ಮತ್ತು ಅದರಲ್ಲೇ ಅಲ್ಲಾಹ್’ನು (ನಿಮಗೆ) ಬಹಳಷ್ಟು ಹಿತವನ್ನು ಇಟ್ಟಿರಬಹುದು. ಖುರ್’ಆನ್ ಅಧ್ಯಾಯ ನಿಸಾ 4 : 19.

 ಈ ಕೆಳಗಿನ ಸೂಕ್ತಿಯಲ್ಲಿ ಮಹಿಳೆಯರಿಗೆ ಅದೇ ವಿಷಯವನ್ನು ಹೇಳುತ್ತಾನೆ:

 ಮತ್ತು ಒಬ್ಬ ಮಹಿಳೆಗೆ ತನ್ನ ಪತಿಯ ಕಡೆಯಿಂದ ದೌರ್ಜನ್ಯದ ಅಥವ ನಿರ್ಲಕ್ಷ್ಯದ ಭಯವಿದ್ದರೆ ಅವರಿಬ್ಬರೂ ತಮ್ಮ ನಡುವೆ ಸಂಧಾನ ಮಾಡಿಕೊಳ್ಳುವುದು ತಪ್ಪಲ್ಲ. ನಿಜವಾಗಿ, ಸಂಧಾನವೇ ಉತ್ತಮ. ಮನಸ್ಸುಗಳಲ್ಲಿ ಸ್ವಾರ್ಥವಿರುವುದು ಸ್ವಾಬಾವಿಕ. ಆದರೂ ನೀವು ಸೌಜನ್ಯ ತೋರಿದರೆ ಹಾಗೂ ಧರ್ಮನಿಷ್ಠರಾಗಿದ್ದರೆ (ನಿಮಗೆ ತಿಳಿದಿರಲಿ) ಅಲ್ಲಾಹನಂತು ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ. ಖುರ್’ಆನ್ ಅಧ್ಯಾಯ ನಿಸಾ 4 : 128.

   ಮತ್ತೊಮ್ಮೆ, ಕೆಳಗಿನ ಸೂಕ್ತಿಯಲ್ಲಿ ಕುಟುಂಬಕ್ಕೆ ಉದ್ದೇಶಿಸಲಾಗಿದೆ ಅಥವ ಈ ಬಂಧವನ್ನು ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಸಮಾಜಕ್ಕೆ, ದೇವನು ಹೇಗಾದರೂ ಆಗಲಿ ಮುರಿಯಲು ಸುಲಭ ಮಾಡಲಿಲ್ಲ: ಹೇಳಿದನು; ನಿಮಗಿನ್ನು ಅವಿಬ್ಬರ (ದಂಪತಿಯರ) ನಡುವೆ ಬಿಕ್ಕಟ್ಟಿನ ಭಯವಿದ್ದರೆ ಆತನ ಕುಟುಂಬದಿಂದ ಒಬ್ಬ ಮಧ್ಯಸ್ಥನನ್ನು ಹಾಗೂ ಆಕೆಯ ಕುಟುಂಬದಿಂದಲೂ ಒಬ್ಬ ಮಧ್ಯಸ್ಥನನ್ನು ನೇಮಿಸಿರಿ. ಅವರಿಬ್ಬರೂ ಸುಧಾರಣೆಯನ್ನು ಬಯಸಿದ್ದರೆ, ಅಲ್ಲಹ್’ನು ಅವರ ನಡುವೆ ಸಾಮರಸ್ಯವನ್ನು ಬೆಳೆಸುವನು. ಅಲ್ಲಾಹ್’ನಂತು ಸರ್ವಜ್ಞನೂ ಎಲ್ಲ ವಿಷಯಗಳ ಕುರಿತು ಜಾಗೃತನೂ ಆಗಿರುವನು”. ಖುರ್’ಆನ್ ಅಧ್ಯಾಯ ನಿಸಾ 4 : 35. 

    ಆದರೆ, ಸಾಮರಸ್ಯದ ಎಲ್ಲಾ ವಿಧಾನಗಳನ್ನು ಮುಗಿಸಿದ ನಂತರ, ಗಂಡ ಮತ್ತು ಹೆಂಡತಿಯ ನಡುವಿನ ದ್ವೇಷವು ಸಹಿಷ್ಣುತೆಗಿಂತಲೂ ಹೆಚ್ಚಾದರೆ, ನಂತರ ವಿಚ್ಛೇದನ ಅನಿವಾರ್ಯವಾಗುತ್ತದೆ. ಇಲ್ಲಿ ಇಸ್ಲಾಮಿಕ್ ಕಾನೂನಿನ ಪ್ರತಿಭೆ ಬರುತ್ತದೆ, ನೈಜ ಸನ್ನಿವೇಶಗಳ ಕಡೆಗೆ ಇದು ಅವಾಸ್ತವಿಕ ವಿಧಾನಗಳಿಗಿಂತ ಪ್ರಾಯೋಗಿಕವಾಗಿರುತ್ತದೆ, ಮದುವೆಯ ಅಂತಿಮ ಉದ್ದೇಶಗಳು, ಮಾನವ ಜೀವನದ ಯಾವುದೇ ಅಂಶವೂ ಸಂತೋಷ ಮತ್ತು ಸದ್ಗುಣವನ್ನು ಸಾಧಿಸುವುದು. ಆದ್ದರಿಂದ, ಅತೃಪ್ತಿಕರವಾದ ಮದುವೆಯನ್ನು ಅಂತ್ಯಗೊಳಿಸಲು ಜನರ ಹಕ್ಕು ನಿರಾಕರಿಸಿದಾಗ, ಈ ಎರಡು ಗುರಿಗಳನ್ನು ಗಂಭೀರವಾಗಿ ಉಲ್ಲಂಘಿಸಲಾಗಿದೆ. ಇದು, ದಂಪತಿಗಳು ನೋವಿನಿಂದ ಬದುಕುವಂತೆಯೇ, ಇದು ವೈವಾಹಿಕ ದಾಂಪತ್ಯ ದ್ರೋಹಕ್ಕೆ ಕಾರಣವಾಗಬಹುದು. ಹೀಗಾಗಿ ಈ ಪ್ರಕರಣದಲ್ಲಿ ವಿಚ್ಛೇದನ - ಕುಟುಂಬ ವಿಘಟನೆಯ ದುರಂತದಿಂದ ತೊಲಗಿದರೆ - ಕಡಿಮೆ ಹಾನಿಕಾರಕವಾಗಿರುತ್ತದೆ. [6]

  ಖುಲಾ ಮತ್ತು ತಲಾಖ್ ನಡುವಿನ ವ್ಯತ್ಯಾಸ

ಖುಲಾವನ್ನು ವಿಚ್ಛೇದನ (ತಲಾಖ್) ಎಂದು ಪರಿಗಣಿಸಲಾಗುವುದಿಲ್ಲ, ಆದರೆ ಅದು ಮದುವೆಯನ್ನು ರದ್ದುಪಡಿಸುತ್ತದೆ. ಖುಲಾ ಆದ ನಂತರ ಹೊಸ ಮದುವೆಯ ಒಪ್ಪಂದದ ಹೊರತು ಆ ಪತಿಗೆ ಪತ್ನಿಯಾಗಿ ಮರಳಲು ಸಾಧ್ಯವಿಲ್ಲ.

  ರದ್ದತಿ ಮತ್ತು ವಿಚ್ಛೇದನಗಳ ನಡುವಿನ ವ್ಯತ್ಯಾಸಗಳಲ್ಲಿ ಒಂದನ್ನು ರದ್ದುಗೊಳಿಸುವುದು ಒಂದು ತಲಾಖ್ ಎಂದು ಪರಿಗಣಿಸುವುದಿಲ್ಲ, ಹಾಗಾಗಿ ಖುಲಾದ ನಂತರ ನೀವು ಆಗ ನಿಮ್ಮ ಗಂಡನಿಗೆ ಹಿಂತಿರುಗಿದರೆ, ಅವರು ಇನ್ನೂ ಮೂರು ತಲಾಖ್’ಗಳ ಆಯ್ಕೆಯನ್ನು ಹೊಂದಿರುತ್ತಾರೆ.

   ಆದರೆ ಅವನು ನಿಮಗೆ ಒಂದು ತಲಾಕ್ ನೀಡಿದ್ದರೆ ಮತ್ತು ನಿಮ್ಮ 'ಇದ್ದಾತ್ ಕೊನೆಗೊಂಡ್ಡಿದ್ದರೆ ಅವನು ನಿಮ್ಮೊಂದಿಗೆ ಹೊಸ ಮದುವೆ ಒಪ್ಪಂದ ಮಾಡಿಕೊಂಡರೆ, ಆಗ ಅವನಿಗೆ ಎರಡು ತಲಾಖ್’ಗಳು ಮಾತ್ರ ಉಳಿಯುತ್ತವೆ.

  ಬೇರ್ಪಡಿಸುವಿಕೆಯನ್ನು ಸೂಚಿಸುವ ಯಾವುದೇ ಪದ, ಹೆಂಡತಿಯ ಭಾಗದಲ್ಲಿ ಪರಿಹಾರವನ್ನು ಪಾವತಿಸುವ ಮೂಲಕ ಖುಲಾ ಎಂದಾಗಿದೆ.

ಒಂದು ಹಿಂತೆಗೆದುಕೊಳ್ಳುವ ತಲಾಕ್ ಸಂದರ್ಭದಲ್ಲಿ ಮದುವೆ ಮುಗಿದ ನಂತರ,

ಮದುವೆಯನ್ನು ಪೂರ್ಣಗೊಳಿಸಿದ ನಂತರ ಹಿಂತೆಗೆದುಕೊಳ್ಳುವ ತಲಾಖ್ ವಿಷಯದಲ್ಲಿ, ಖುಲಾ ಮತ್ತು 'ತಲಾಖ್ ಒಂದೇ ಅಲ್ಲ ಎಂಬುದನ್ನು ಸೂಚಿಸುತ್ತದೆ ಖುಲಾದಲ್ಲಿ ಕೆಲವು ಅನ್ವಯಿಸದ ನಿರ್ದಿಷ್ಟ ತೀರ್ಪುಗಳಿವೆ.

1.        ಪತಿಗೆ ಅವಳನ್ನು ಹಿಂತಿರುಗಿ ಪಡೆಯಲು ಹೆಚ್ಚು ಹಕ್ಕಿದೆ.

2.       ಪತಿ ತಲಾಖ್ ವಿಚಾರ ಮಾಡಿದಾಗ, ಇದು ಮೂರರ ಪೈಕಿ ಒಂದು ಎಂದು ಪರಿಗಣಿಸಲ್ಪಡುತ್ತದೆ, ಮತ್ತು ಮೂರನೇಯ ತಲಾಖ್ ನಂತರ ಹಿಂತಿರುಗಲು ಅವಳನ್ನು ಪಡೆಯಲು ಇಚ್ಚಿಸಿದರೆ ಅವಳು ಇನ್ನೊಬ್ಬ ವ್ಯಕ್ತಿಯನ್ನು ವಿವಾಹವಾಗಿ ವಿಚ್ಛೆದನವಾಗುವ ತನಕ ಮರು ಮದುವೆಯನ್ನು ಪೂರ್ತಿಗೊಳಿಸಿಕೊಳ್ಳುವುದಕ್ಕೆ ಅನುಮತಿಯಿಲ್ಲ.

3.       ತಲಾಕ್ ಸಂದರ್ಭದಲ್ಲಿ ಇದ್ದಾತ್ ಮೂರು ಮುಟ್ಟಿನ ಋತುಚಕ್ರಗಳನ್ನು ಹೊಂದಿದೆ. [7] [8] [9]

ವಿಚ್ಛೇದನ ಯಾವಾಗ ಅಮಾನ್ಯವಾಗಿದೆ?

ಕೆಲವು ಸಂದರ್ಭಗಳಲ್ಲಿ, ವಿಚ್ಛೇದನದ ಮಾತುಗಳನ್ನು ಅಮಾನ್ಯಗೊಳಿಸಲಾಗಿದೆ. ಗಂಡನಾಗಿದ್ದಾಗ ಈ ಪ್ರಕರಣಗಳಲ್ಲಿ:

1.        ಮದ್ಯ ಸೇವನೆ ಮಾಡಿರುವಾಗ

2.       ಬೇರೊಬ್ಬರು ಇದನ್ನು ಹೇಳುವುದಕ್ಕೆ ಬಲವಂತ ಮಾಡಿದಾಗ.

3.       ಅವರು ಏನು ಹೇಳುತ್ತಿದ್ದಾರೆಂಬುದನ್ನು ಅವರು ತಿಳಿದಿಲ್ಲದಿರುವ ಮಟ್ಟಿಗೆ ಸಂಪೂರ್ಣ ನಷ್ಟದ ಮನೋಭಾವವನ್ನು ಕಳೆದುಕೊಂಡಾಗ.

4.       ಅಸಹಜ ಸ್ಥಿತಿಯಲ್ಲಿ, ತಾತ್ಕಾಲಿಕ ಹುಚ್ಚು, ಅಪಸ್ಮಾರ ಅಥವ ಕೋಮಾದಲ್ಲಿ.

ಅಂತಹ ಸಂದರ್ಭಗಳಲ್ಲಿ, ವಿಚ್ಛೇದನವು ಶೂನ್ಯ ಮತ್ತು ನಿರರ್ಥಕವಾಗಿದೆ. [10]

ವಿವಿಧ ದೇಶಗಳಲ್ಲಿ ವಿಚ್ಛೇದನದ ಶೇಖಡಾವಾರು

1.        ಯುನೈಟೆಡ್ ಸ್ಟೇಟ್ಸ್ - 1000 ಜನರಿಗೆ 4.95%

2.       ಪೋರ್ಟೊ ರಿಕೊ - 1000 ಜನರಿಗೆ 4.47%

3.       ರಶಿಯಾ - 1000 ಜನರಿಗೆ 3.36%

4.       ಯುನೈಟೆಡ್ ಕಿಂಗ್ಡಮ್ - 1000 ಜನರಿಗೆ 3.08%

5.       ಡೆನ್ಮಾರ್ಕ್ - 1000 ಜನರಿಗೆ 2.81% [11]

ನೋಡಿರಿ

ಇಬಾದಾಃ, ಖುಲಾ, ಇಸ್ಲಾಮಿನಲ್ಲಿ ಮದುವೆ. ಪತಿ ಮತ್ತು ಪತ್ನಿಯ ಹಕ್ಕುಗಳು ಮತ್ತು ಜವಾಬ್ದಾರಿಗಳು; ಇಸ್ಲಾಮ್ ಧರ್ಮದಲ್ಲಿ ಸಂತೋಷಕರ ಸಂಬಂಧ; ಪತ್ನಿಯನ್ನು ನಡೆಸಿಕೊಳ್ಳುವ ರೀತಿ, ಆದರ್ಶ ಮುಸ್ಲಿಂ ಹೆಂಡತಿ;

 ಉಲ್ಲೇಖಗಳು

[1] http://www.oxforddictionaries.com/definition/english/divorce

[2] http://www.islamweb.net/emainpage/index.php?page=articles&id=92752

[3] http://www.islamweb.net/womane/nindex.php?page=readart&id=178665

[4] http://quran.com

[5] http://www.sunnah.com/bukhari/68/1

[6] http://www.huda.tv/articles/women-in-islam/351-laws-of-divorce-in-islam

[7] http://islamqa.info/en/126444

[8] http://islamqa.info/en/175765

[9] http://islamqa.info/en/5163

[10] http://www.huda.tv/articles/women-in-islam/351-laws-of-divorce-in-islam

[11] http://www.nationmaster.com/graph/peo_div_rat-people-divorce-rate

409 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ