ರಮಜಾನ್ ತಿಂಗಳನ್ನು ಹೇಗೆ ಸ್ವಾಗತಿಸುವುದು ರಮಜಾನ್ ಎಂಬ ಶ್ರೇಷ್ಟವಾದ ತಿಂಗಳು ಇಸ್ಲಾಮಿ ಕ್ಯಾಲೆಂಡರ್(ದಿನದರ್ಶಿಯ)ನ ಒಂಭತ್ತನೇ ತಿಂಗಳಾಗಿದೆ. ಪ್ರತಿ ವರ್ಷವೂ ಈ ತಿಂಗಳಿನಲ್ಲಿ ಉಪವಾಸ ಆಚರಿಸುವುದು ಮುಸ್ಲಿಮರ ಇತರೆ ಕಡ್ಡಾಯ ಕರ್ಮಗಳಂತೆಯೇ ಒಂದು ಕಡ್ಡಾಯವಾದ ಕರ್ಮವಾಗಿದೆ. ತಿಂಗಳ ಮೊದಲನೇ ದಿನದಿಂದ ಸಂಪೂರ್ಣ ಒಂದು ತಿಂಗಳವರೆಗೆ ಪ್ರತಿ ಪ್ರೌಢರು ಹಾಗೂ ಆರೋಗ್ಯವಂತರ ಮೇಲೆ ರಮಜಾನಿನ ಉಪವಾಸಗಳು ಕಡ್ಡಾಯಗೊಳಿಸಲಾಗಿದೆ. ಹದೀಸ್’ನ ಪ್ರಕಾರ ಈ ಆದರ್ಶ ತಿಂಗಳಲ್ಲಿ ಸ್ವರ್ಗದ ಬಾಗಿಲುಗಳು ತೆರೆಯಲ್ಪಡುತ್ತವೆ ಹಾಗೂ ಶೈತಾನ್ ಬಂಧಿಸಲಾಗುತ್ತಾನೆ. ಖುರ್’ಆನ್; ರಮಜಾನ್ ತಿಂಗಳಲ್ಲಿ ಜನರ ಮಾರ್ಗದರ್ಶನಕ್ಕಾಗಿ ಖುರ್’ಆನನ್ನು ಅವತರಿಸಲಾಯಿತು. ಆ ಮಾರ್ಗದರ್ಶನ ಸತ್ಯ ಮಿಥ್ಯಗಳಲ್ಲಿನ ಅಂತರಗಳ ಪ್ರಮಾಣದೊಂದಿಗೆ ಅವತರಿಸಿದೆ, ನಿಮ್ಮಲ್ಲಿ ಯಾರಾದರು ರಮಜಾನ್ ತಿಂಗಳಿನಲ್ಲಿದ್ದರೆ ಉಪವಾಸವನ್ನು ಆಚರಿಸಿರಿ, ರೋಗಿಯಾಗಿದ್ದರೆ ಅಥವ ಪ್ರಯಾಣದಲ್ಲಿದ್ದರೆ ಇತರೆ ದಿನಗಳಲ್ಲಿ ಅವುಗಳನ್ನು ಪೂರೈಸಿರಿ. ಅಲ್ಲಾಹ್’ನು ನಿಮ್ಮೊಂದಿಗೆ ಸುಗಮತೆ ಬಯಸುವನು, ಅವನು ನಿಮ್ಮೊಂದಿಗೆ ಕಠಿಣತೆ ಹಾಗೂ ಕಷ್ಟವನ್ನು ಬಯಸುವುದಿಲ್ಲ, (ಅವನು ನಿಮಗೆ ಅನುಗ್ರಹಿಸುತ್ತಿದ್ದಾನೆ) “ರಮಜಾನ್ ತಿಂಗಳಲ್ಲೇ ಖುರ್’ಆನನ್ನು ಇಳಿಸಿಕೊಡಲಾಯಿತು. ಅದು ಮಾನವರಿಗೆಲ್ಲ ಮಾರ್ಗದರ್ಶಿಯಾಗಿದೆ. (ಅದರಲ್ಲಿ) ಸನ್ಮಾರ್ಗದ ಸ್ಪಷ್ಟ ವಿವರಗಳಿಗೆ ಮತ್ತು ಅದು (ಸತ್ಯ-ಮಿಥ್ಯಗಳನ್ನು ಪ್ರತ್ಯೇಕಿಸುವ) ಒರೆಗಲ್ಲಾಗಿದೆ. ನಿಮ್ಮಲ್ಲಿ ಈ ತಿಂಗಳನ್ನು ಕಂಡವನು ಉಪವಾಸ ಆಚರಿಸಬೇಕು. ( ಈ ತಿಂಗಳಲ್ಲಿ) ರೋಗಿಯಾಗಿದ್ದವನು ಅಥವ ಪ್ರಯಾಣದಲ್ಲಿದ್ದವನು ಇತರ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಬೇಕು. ಅಲ್ಲಾಹ್’ನು ನಿಮಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ, ಅವನು ನಿಮ್ಮನ್ನು ಇಕ್ಕಟ್ಟಿಗೆ ಗುರಿಪಡಿಸಬಯಸುವುದಿಲ್ಲ. ನೀವು (ಉಪವಾಸಗಳ) ಸಂಖ್ಯೆಯನ್ನು ಪೂರ್ತಿಗೊಳಿಸಿ, ಅಲ್ಲಾಹ್’ನು ನಮಗೆ ಒದಗಿಸಿದ ಮಾರ್ಗದರ್ಶನಕ್ಕಾಗಿ ಅವನ ಮಹಿಮೆಯನ್ನು ಕೊಂಡಾಡಬೇಕು ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸಬೇಕೆಂದು (ಇದನ್ನು ವಿಧಿಸಲಾಗಿದೆ) (ಅಲ್ ಬಖರ : 185) ಹದೀಸ್ : ಮುಹಮ್ಮದ್(ಸ) ಹೇಳಿದರು ; ಇಸ್ಲಾಮ್ ಧರ್ಮದ ಆಧಾರ 5 ವಿಷಯಗಳ ಮೇಲಿದೆ, ಅವು * ಅಲ್ಲಾಹ್’ನಲ್ಲದೆ ಇತರ ಯಾರು ಆರಾಧನೆಗೆ ಅರ್ಹರಿಲ್ಲ, ಮುಹಮ್ಮದ್(ಸ) ಅಲ್ಲಾಹ್’ನ ಪೈಗಬರ್ ಹಾಗೂ ದಾಸರಾಗಿದ್ದಾರೆ ಎಂದು ಸಾಕ್ಷ್ಯವಹಿಸುವುದು, * ನಮಾಜ್ ನಿರ್ವಹಿಸುವುದು, * ಜಕಾತ್ ನೀಡುವುದು, * ರಮಜಾನಿನ ಉಪವಾ ಸ ಆಚರಿಸುವುದು, ಹಾಗೂ * ಹಜ್ ನಿರ್ವಹಿಸುವುದು,” ( ಸಹಿಹ್ ಬುಖಾರಿ : 8 . ಸಹಿಹ್ ಮುಸ್ಲಿಮ್ : 16) ರಮಜಾನ್ ತಿಂಗಳು ಎಲ್ಲಕ್ಕಿಂತ ಶ್ರೇಷ್ಟ ತಿಂಗಳಾಗಿದೆ: ರಮಜಾನ್ ತಿಂಗಳು ಎಲ್ಲಕ್ಕಿಂತ ಶ್ರೇಷ್ಟ ತಿಂಗಳಾಗಿದೆ ಏಕೆಂದರೆ ಅಲ್ಲಾಹ್’ನು ವಿಶೇಷವಾಗಿ ಈ ತಿಂಗಳಲ್ಲಿ ಉಪವಾಸವನ್ನು ಕಡ್ಡಾಯ ಹಾಗೂ ಅನಿವಾರ್ಯಗೊಳಿಸಿದ್ದಾನೆ, ಮತ್ತು ಇಸ್ಲಾಮಿನ ಆಧಾರ ಸ್ಥಂಭಗಳಲ್ಲಿ 4 ನೇ ಸ್ಥಂಭವೆಂದು ಪರಿಗಣಿಸಿದ್ದಾನೆ, ಅಲ್ಲದೆ ಮುಸ್ಲಿಮರಿಗೆ ಇದರ ರಾತ್ರಿಗಳಲ್ಲಿ ಆರಾಧನೆಗಾಗಿ ನಿಲ್ಲುವುದನ್ನು ಧರ್ಮಾಚರಣೆಯಾಗಿಸಿದ್ದಾನೆ. ಅಂತೆಯೇ ಮುಹಮ್ಮದ್(ಸ)ರ ಹೇಳಿಕೆಯಿದೆ “ ಇಸ್ಲಾಮ್ 5 ವಿಷಯಗಳ ಮೇಲೆ ನೆಲೆನಿಂತಿದೆ, * ಅಲ್ಲಾಹ್’ನಲ್ಲದೆ ಇತರ ಯಾರು ಆರಾಧನೆಗೆ ಅರ್ಹರಿಲ್ಲ, ಮುಹಮ್ಮದ್(ಸ) ಅಲ್ಲಾಹ್’ನ ಪೈಗಬರ್ ಹಾಗೂ ದಾಸರಾಗಿದ್ದಾರೆ ಎಂದು ಸಾಕ್ಷ್ಯವಹಿಸುವುದು, * ನಮಾಜ್ ನಿರ್ವಹಿಸುವುದು, * ಜಕಾತ್ ನೀಡುವುದು, * ರಮಜಾನಿನ ಉಪವಾಸ ಆಚರಿಸುವುದು, ಹಾಗೂ * ಹಜ್ ನಿರ್ವಹಿಸುವುದು,” ಇದು ಸಹಿಹ್ ಮುಸ್ಲಿಮ್ ಮತ್ತು ಸಹಿಹ್ ಬುಖಾರಿ ಗ್ರಂಥಗಳಲ್ಲಿ ವರದಿಯಾಗಿದೆ. ಮುಹಮ್ಮದ್(ಸ)ರ ಹೇಳಿಕೆ(ಹದೀಸ್) : ಮುಹಮ್ಮದ್(ಸ)ರ ರಮಜಾನ್ ಕುರಿತ ಹೇಳಿಕೆಯೆಂದರೆ; “ಯಾವ ವ್ಯಕ್ತಿ ರಮಜಾನಿನ ಉಪವಾಸವನ್ನು ಶ್ರದ್ಧೆ ಮತ್ತು ಪುಣ್ಯಪ್ರಾಪ್ತಿಗಾಗಿ ಇಟ್ಟನೋ ಅವನ ಹಿಂದಿನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗುವುದು” ಇದನ್ನು ಬುಖಾರಿ ಮತ್ತು ಮುಸ್ಲಿಮ್ ಗ್ರಂಥಗಳು ವರದಿಮಾಡಿವೆ. ನಾನು ರಮಜಾನಿನ ಸ್ವಾಗತದ ವಿಚಾರದಲ್ಲಿ ಯಾವುದೇ ವಿಶಿಷ್ಟತೆ ತಿಳಿದಿಲ್ಲ ಯಾವುದರ ಹೊರತೆಂದರೆ, ಮುಸ್ಲಿಮರು ಈ ತಿಂಗಳ ಸ್ವಾಗತವನ್ನು ಹರ್ಷೊಲ್ಲಾಸದಿಂದ ಹಾಗೂ ಈ ತಿಂಗಳ ಪ್ರಾಪ್ತಿಗಾಗಿ ಅಲ್ಲದೆ ಅನುಗ್ರಹಿಸಿದುದಕ್ಕಾಗಿ ಅಲ್ಲಾಹ್’ನ ಧನ್ಯವಾದದೊಂದಿಗೆ ಮಾಡಲಿ, ಏಕೆಂದರೆ ಅಲ್ಲಾಹ್’ನು ಅವನನ್ನು ಆ ಜನಕೂಟದಲ್ಲಿರಿಸಿದನು, ಅವರು ಸತ್ಕರ್ಮಗಳನ್ನು ಮಾಡುವಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದೆ ಸಾಗುವ ಪ್ರಯತ್ನ ನಡೆಸುವರು . ಏಕೆಂದರೆ ರಮಜಾನ್ ತಿಂಗಳ ಪ್ರಾಪ್ತಿಯು ಅಲ್ಲಾಹ್’ನ ಕಡೆಯಿಂದ ಒಂದು ಮಹಾ ಅನುಗ್ರಹ ಹಾಗೂ ವರದಾನವಾಗಿದೆ, ಹೀಗಾಗಿ ಮುಹಮ್ಮದ್(ಸ)ರು ರಮಜಾನ್ ತಿಂಗಳ ಆಗಮನಕ್ಕೆ ಅದರ ಪ್ರತಿಷ್ಟೆಗಳ ಹಾಗೂ ಅಲ್ಲಾಹ್’ನು ಆ ತಿಂಗಳಲ್ಲಿ ಉಪವಾಸವಿಡುವವರ ಮತ್ತು ನಮಾಜ್ ಸಂಸ್ಥಾಪಿಸುವವರಿಗಾಗಿ ಮಹಾ ಪುಣ್ಯಗಳನ್ನು ಇಟ್ಟಿರುವನೋ ಅವುಗಳನ್ನು ಉಲ್ಲೇಖಿಸುತ್ತಾ ತಮ್ಮ ಸಹಚರರಿಗೆ ಅದರ ಶುಭ ಸೂಚನೆಗಳನ್ನು ತಿಳಿಸುತ್ತಿದ್ದರು. ಹಾಗಾಗಿ ಮುಸ್ಲಿಮರಿಗೆ ಧರ್ಮ ನಿಷ್ಟೆಯೆಂದರೆ ಅವರು ಈ ಪವಿತ್ರ ತಿಂಗಳ ಸ್ವಾಗತಕ್ಕೆ ಶುದ್ಧ ಕ್ಷಮಾಪಣೆ ಮತ್ತು ಒಳ್ಳೆಯ ಮನೋಭಾವನೆ ಹಾಗೂ ಸತ್ಯ ನಿಷ್ಟೆಯೊಂದಿಗೆ ಉಪವಾಸವಿಡುವ ಹಾಗು ನಮಾಜ್ ಸಂಸ್ಥಾಪಿಸುವ ಮನಸ್ಸಿನಿಂದ ಸಿಧ್ದರಾಗಬೇಕು. ನೋಡಿರಿ; ರಮಜಾನಿನ ಉಪವಾಸಗಳು, ನಮಾಜ್, ಜಕಾತ್, ಹಜ್, ತೌಹೀದ್(ಏಕದೇವ ವಿಶ್ವಾಸ) ತರವೀಹ್ ನಮಾಜ್ ಇತ್ಯಾದಿ. ಸಂಧರ್ಭ; ಮಜ್’ಮುಆ ಫತಾವಾ ವ ಮಕಾಲತ್ ಮುತನೌವಿಆ” ಲೇಖಕರು : ಶೇಖ್ ಅಬ್ದುಲ್ ಅಜೀಜ್ ಬಿನ್ ಬಾಜ್. |