ಮುಹರ್ರಮ್

ಇಸ್ಲಾಮಿ ತಿಂಗಳುಗಳಲ್ಲಿ ಮುಹರ್ರಮ್ ತಿಂಗಳು ಒಂದು ಪವಿತ್ರವಾದ ತಿಂಗಳಾಗಿದೆ. ಇದು ಇಸ್ಲಾಮಿ ಕ್ಯಾಲೆಂಡರ್(ದಿನದರ್ಶಿಯ) ಮೊದಲ ತಿಂಗಳಾಗಿದೆ, ಇಸ್ಲಾಮಿ ದಿನದರ್ಶಿಯು ಚಂದ್ರಮಾನದೊಂದಿಗೆ ನಡೆಯುತ್ತದೆ. ಇದರಲ್ಲಿ 12ತಿಂಗಳುಗಳಿವೆ. ಇದು ಚಂದ್ರಮಾನ ಉದಯ ಅಸ್ತಮದ ಪ್ರಕಾರ ನಡೆಯುತ್ತದೆ. ಇಸ್ಲಾಮಿ ದಿನದರ್ಶಿಯು ಇತರ ಎಲ್ಲಾ ದಿನದರ್ಶಿಗಳಿಗಿಂತ 10ದಿನ ಕಡಿಮೆ ಇರುತ್ತದೆ ಅಥವ ಅಂತರವಿರುತ್ತದೆ. [1]

ಪರಿವಿಡಿ

ಖುರ್’ಆನ್

   “ಖಂಡಿತವಾಗಿಯೂ ಅಲ್ಲಾಹ್’ನ ಬಳಿ (ವರ್ಷದಲ್ಲಿ) ತಿಂಗಳುಗಳ ಸಂಖ್ಯೆ ಹನ್ನೇರಡು(12). ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದ ದಿನವೇ  ವಿಧಿಸಿರುವನು, ಅವುಗಳಲ್ಲಿ ನೀವು ಸ್ವತಃ ನಿಮ್ಮ ಮೇಲೆ ಅಕ್ರಮವೆಸಗಬೇಡಿ, ಮತ್ತು ಬಹುದೇವಾರಾಧಕರೆಲ್ಲ ಒಂದಾಗಿ ನಿಮ್ಮ ವಿರುದ್ಧ ಹೊರಾಡುವಂತೆ ನಿವೆಲ್ಲ ಒಂದಾಗಿ ಅವರ ವಿರುದ್ಧ ಹೊರಾಡಿರರಿ, ನಿಮಗೆ ತಿಳಿದಿರಲಿ, ಅಲ್ಲಾಹ್’ನು ಧರ್ಮನಿಷ್ಟರ ಜೊತೆಗಿದ್ದಾನೆ. (ಅತ್ತೌಬ 9 : 36)

ಇಸ್ಲಾಮಿ ದಿನದರ್ಶಿಯ ತಿಂಗಳುಗಳು

1.            ಮುಹರ್ರಮ್

2.            ಸಫರ್

3.            ರಬಿ ಉಲ್ ಅವ್ವಲ್

4.            ರಬಿ ಉಲ್ ಆಖಿರ್

5.            ಜುಮದಾ ಅಲ್ ಉಲಾ

6.            ಜುಮದಾ ಅಲ್ ಆಖರ್

7.            ರಜಬ್

8.            ಶಾಬಾನ್

9.            ರಮ್’ಜಾನ್

10.          ಶವ್ವಾಲ್

11.          ಜುಲ್ ಖಾದಾಹ್

12.          ಜುಲ್ ಹಿಜ್ಜಾ

ಹದೀಸ್

 

   ಅಬೂಬಕರ್(ರ ಅ)ರವರು ಉಲ್ಲೇಖಿಸಿರುವರು ಮುಹಮ್ಮದ್(ಸ)ರು ಹೇಳಿದರು; ಒಂದು ವರ್ಷದಲ್ಲಿ 12ತಿಂಗಳುಗಳಿರುತ್ತವೆ, ಅವುಗಳಲ್ಲಿ 4ತಿಂಗಳುಗಳು ಪವಿತ್ರವಾಗಿವೆ, 1ಜುಲ್ ಖಾದಾಹ್, 2ಜುಲ್ ಹಿಜ್ಜಾ, 3ಮುಹರ್ರಮ್, ಮೂರು ಸತತವಾಗಿ ಹಾಗೂ ರಜಬ್ ತಿಂಗಳು, ಅದು ಜುಮದಾ ಮತ್ತು ಶಾಬಾನ್ ತಿಂಗಳ ಮಧ್ಯದಲ್ಲಿ ಬರುತ್ತದೆ” (ಸಹಿಹ್ ಬುಖಾರಿ 1673ಮತ್ತು ಅಬೂದಾವೂದ್ 1947)

ಮುಹರ್ರಮ್ ತಿಂಗಳಲ್ಲಿ ಉಪವಾಸವಿಡುವುದರ ಪುಣ್ಯ

   ಅಬೂಹುರೈರಾ(ರ ಅ)ರವರು ಉಲ್ಲೇಖಿಸಿದರು, ಮುಹಮ್ಮದ್(ಸ)ರಿಗೆ ಕೇಳಲಾಯಿತು, “ಕಡ್ಡಾಯ ನಮಾಜ್’ನ ನಂತರ ಯಾವ ನಮಾಜ್’ನ ಮಹತ್ವವಿದೆ? ರಮಜಾನಿನ ಕಡ್ಡಾಯ ಉಪವಾಸಗಳ ನಂತರ ಯಾವ ಉಪವಾಸಗಳ ಮಹತ್ವವಿದೆ? ಮುಹಮ್ಮದ್(ಸ)ರು ಹೇಳಿದರು ಮಧ್ಯ ರಾತ್ರಿಯ ನಮಾಜ್ ಹಾಗೂ ರಮಜಾನ್ ಉಪವಾಸದ ನಂತರ ಅಲ್ಲಾಹ್’ನ ತಿಂಗಳಾದ ಮಹರ್ರಮ್ ತಿಂಗಳ ಉಪವಾಸ” (ಸಹಿಹ್ ಮುಸ್ಲಿಮ್ 1163, & ಅತ್ತಿರ್ಮಿಜಿ. 438)

ಮುಹರ್ರಮ್’ನ 10ನೇ ದಿನ ಉಪವಾಸವಿಡುವುದರ ಪುಣ್ಯ

   ಮುಹಮ್ಮದ್(ಸ)ರಿಗೆ ಆಶುರಾದ(10ನೇ ದಿನ) ಉಪವಾಸ ಕುರಿತು ಕೇಳಿದಾಗ ತಾವು ಹೇಳಿದರು “ ಈ ಉಪವಾಸ ಹಿಂದಿನ ಒಂದು ವರ್ಷದ ಪಾಪಗಳನ್ನು ಕ್ಷಮಿಸುತ್ತದೆ” ಎಂದರು, (ಸಹಿಹ್ ಮುಸ್ಲಿಮ್ 1162) (ಪುಸ್ತಕ 6ಹದೀಸ್ 2603) [ಅದೇ ಹದೀಸ್ ಮುಹಮ್ಮದ್(ಸ)ರು ‘ಅರಫಾ’ (ಜುಲ್ಹಿಜ್ಜಾದ 9ನೇ ದಿನ)ದ ಉಪವಾಸದ ಕುರಿತು ಕೇಳಲಾದಾಗ ಹೇಳಿದರು; ಈ ಉಪವಾಸವು ಮುಂದಿನ ಹಾಗೂ ಹಿಂದಿನ 2ವರ್ಷದ ಪಾಪಗಳನ್ನು ಕ್ಷಮಿಸಿ ಕೊಡುತ್ತದೆ ಎಂದರು]

ಆಶುರಾ ಅಥವ ಮುಹರ್ರಮ್ 10ನೇ ದಿನದ ಇತಿಹಾಸ

   ಇಬ್ನೆ ಅಬ್ಬಾಸ್(ರ ಅ) ರವರು ಹೇಳಿದರು, “ಮುಹಮ್ಮದ್(ಸ)ರು ಮದೀನಾ ಪಟ್ಟಣಕ್ಕೆ ಬಂದಾಗ ಅವರು ಕಂಡಿದ್ದು, ಯಹೂದಿಯರು ಆಶುರಾದಿನ ಉಪವಾಸವಿಟ್ಟಿದ್ದರು. ಆಗ ಅವರು ಇದೇನೆಂದು ಕೇಳಿದರು? ಜನರು ಉತ್ತರಿಸಿದರು “ಇದೊಂದು ಒಳ್ಳೆಯ ದಿನ  ಈ ದಿನದಂದು ಅಲ್ಲಾಹ್’ನು ಇಸ್ರಯಿಲ್ ಜನರನ್ನು ಶತ್ರುಗಳಿಂದ ರಕ್ಷಿಸಿದ್ದನು, ಆದ್ದರಿಂದ ಪೈಗಂಬರ್ ಮೂಸಾ(ಅ ಸ)ರವರು ಈ ದಿನ ಉಪವಾಸವಿಟ್ಟರು” ಎಂದಾಗ ಮುಹಮ್ಮದ್(ಸ)ರು ಹೇಳಿದರು; “ಮೂಸಾ(ಅ ಸ)ರವರ ಮೇಲೆ ನಮ್ಮ ಅಧಿಕಾರ ಹೆಚ್ಚಿದೆ” ಎಂದರು, ಹಾಗಾಗಿ ಮುಹಮ್ಮದ್(ಸ)  ಆ ದಿನ ಉಪವಾಸವಿಟ್ಟರು ಹಾಗೂ ಜನರಿಗೂ ಉಪವಾಸವಿಡುವ ಆಜ್ಞೆ ನೀಡಿದರು. (ಬುಖಾರಿ : 1865)

ಮುಹರ್ರಮ್’ನ 10ನೇ ದಿನ ಉಪವಾಸವಿಡುವುದು

   ಆಯಿಶಾ(ರ ಅ)ರವರು ಉಲ್ಲೇಖಿಸಿದರು; ಮುಹಮ್ಮದ್(ಸ)ರು ಆಶುರಾದದಿನ ಉಪವಾಸವಿರುವಂತೆ ಆದೇಶಿಸಿದರು. ರಮಜಾನ್ ತಿಂಗಳ ಉಪವಾಸಗಳು ಕಡ್ಡಾಯವಾದಾಗ ಆಶುರಾ ದಿನದ ಉಪವಾಸ ಐಚ್ಛಿಕವಾಯಿತು, (ಇಷ್ಟವಿದ್ದರೆ ಇರಬಹುದು ಇಲ್ಲದಿದ್ದಲ್ಲಿ ಬಿಡಬಹುದು) (ಸಹಿಹ್ ಬುಖಾರಿ 2001)

  ಅಬ್ದುಲ್ಲಾಹ್ ಬಿನ್ ಅಬ್ಬಾಸ್ (ರ ಅ)ರು ಉಲ್ಲೇಖಿಸಿದರು, ಮುಹಮ್ಮದ್(ಸ)ರು ಆಶುರಾದ ದಿನ ಉಪವಾಸವಿಟ್ಟರು ಹಾಗೂ ಇತರರಿಗೂ ಉಪವಾಸವಿರುವಂತೆ ತಿಳಿಸಿದಾಗ, ಸಹಚರರು ಹೇಳಿದರು, ಯಹೂದಿ ಹಾಗೂ ಕ್ರಿಶ್ಚಿಯನ್ನರು ಈ ದಿನಕ್ಕೆ ಮಹತ್ವ ಕೊಡುವರು ಎಂದಾಗ, ಮುಹಮ್ಮದ್(ಸ)ರು ಹೇಳಿದರು, ಬರುವ ಮುಂದಿನ ವಷ೵ಅಲ್ಲಾಹ್’ನು ಬಯಸಿದರೆ 9ನೇ ಮುಹರ್ರಮ್ ಸಹ ಪವಾಸವಿಡುವೆವು ಎಂದರು. ಮುಂದೆ ಇಬ್ನೆ ಅಬ್ಬಾಸ್(ರ ಅ) ಹೇಳಿದರು ಮುಂದಿನ ವರ್ಷದ ಆ ದಿನದ ಮುಂಚಿತವಾಗಿಯೇ ಮುಹಮ್ಮದ್(ಸ)ರ ಮರಣವಾಯಿತು” (ಸಹಿಹ್ ಮುಸ್ಲಿಮ್ 1916)

  ಸಾಲಿಮರ ಪಿತ (ತಂದೆ) ಅಬ್ದುಲ್ಲಾಬಿನ್ ಉಮರ್ (ರ ಅ)ಹೇಳಿದರು; ಮುಹಮ್ಮದ್(ಸ)ರು ಹೇಳಿರುವರು “ಯಾರು ಬೇಕಾದರು ಆಶುರಾದ ಉಪವಾಸವಿರಬಹುದು” (ಸಹಿಹ್ ಬುಖಾರಿ 2000) [3]

ಮಹತ್ವ

  ಈ ತಿಂಗಳು ಪವಿತ್ರವಾಗಲು 2ಕಾರಣಗಳಿವೆ.

 1ಈ ತಿಂಗಳಲ್ಲಿ ಯುದ್ಧವನ್ನು ನಿಷೇಧಿಸಿರುವುದರಿಂದ, ಆದರೆ ಶತ್ರಗಳು ಯುದ್ಧ ಮಾಡಲು ಬಂದಾಗ ಅವರೊಂದಿಗೆ ಯುದ್ಧ ಮಾಡಬಹುದಾಗಿದೆ.

 2ಈ ತಿಂಗಳಲ್ಲಿ ನಿಷೇಧಿತ ಕಾರ್ಯಗಳನ್ನು ಮಾಡುವುದರಿಂದ ಪಾಪವೂ ದುಪ್ಪಟ್ಟಾಗುತ್ತದೆ. “ ಆ ತಿಂಗಳಲ್ಲಿ ನೀವು ಸ್ವತಃ ನಿಮ್ಮ ಮೇಲೆ ಅಕ್ರಮವೆಸಗಬೇಡಿರಿ” (ತೌಬಾ 9 : 36)

ಆಧಾರ

 [1] http://snahle.tripod.com/higri.htm (english)

[2] http://www.islamweb.net/emainpage/index.php?page=articles&id=155869 (english)

[3] http://www.sunnah.com/ (english)

[4] http://islamqa.info/en/75394 (english)

830 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ