ಮಸ್’ಜಿದ್ ಎ ನಿಮ್ರಾ

   ಮಸ್’ಜಿದ್ ಅಥವ ಮಸೀದಿ ಮುಸ್ಲಿಮರು ಅಲ್ಲಾಹ್’ನನ್ನು سبحانه و تعالىಆರಾಧಿಸುವ ಕಟ್ಟಡವಾಗಿದೆ. (ದೇವ). ಇಸ್ಲಾಮಿಕ್ ಇತಿಹಾಸದುದ್ದಕ್ಕೂ, ಈ ಪ್ರಮುಖ ಕಟ್ಟಡದ ಸುತ್ತಲೂ ರೂಪುಗೊಂಡ ಸಮುದಾಯ ಕೇಂದ್ರಗಳು ಮತ್ತು ನಗರಗಳು ಕೇಂದ್ರೀಕೃತವಾಗಿವೆ. [1] ಮಸ್’ಜಿದ್ ಎ ನಿಮ್ರಾ ಅರಾಫತ್’ನಲ್ಲಿದೆ, ಮಕ್ಕಾದಲ್ಲಿ. [2]

 

ಪರಿವಿಡಿ

ಸ್ಥಳ ಮತ್ತು ಪ್ರದೇಶ

  ನಿಮ್ರಾ ಮಸ್’ಜಿದ್  ಅರಾಫತ್ ನ ಪರ್ವತದ ಪಕ್ಕದಲ್ಲಿದೆ. ಮಸ್’ಜಿದ್’ನ ಭಾಗವು ವಾಸ್ತವವಾಗಿ ಅರಾಫತ್’ನ ಪರ್ವತದ ಗಡಿಯಲ್ಲಿದೆ. ನಿಮ್ರಾ ಮಸ್’ಜಿದ್’ಗೆ ಮೀನಾದಿಂದ 10ಕಿಮೀ ದೂರವಿದೆ. [3]

ಮಸ್’ಜಿದ್’ನ ಸಾಮರ್ಥ್ಯ

   ಹಜ್ಜ್ ಸಚಿವಾಲಯ ಈ ಮಸ್’ಜಿದ್’ಗಾಗಿ ಒಂದು ವಿಸ್ತರಣಾ ಯೋಜನೆಯನ್ನು ಜಾರಿಗೆ ತಂದು, ಅದರ ಪ್ರದೇಶವನ್ನು 124,000ಚದುರ ಮೀಟರ್ಗಳಷ್ಟು ಹೆಚ್ಚಿಸಿ ಎರಡು ಭಾಗಗಳನ್ನಾಗಿ ಮಾಡಿತು. ಮಸ್’ಜಿದ್’ನ ಸಾಮರ್ಥ್ಯವು 300,000ಯಾತ್ರಿಕರಿಗಿಂತಲೂ ಹೆಚ್ಚಾಗಿದೆ. ವಿಸ್ತರಣೆಯ ನಂತರ, ಮಸ್’ಜಿದ್’ನ ಭಾಗವು ಅರಫಾತ್’ನ ಗಡಿಯನ್ನು ಮೀರಿದೆ. [4]

ಹಜ್ಜ್ ಖುತ್ಬಾ

  ಪೈಗಂಬರ್ ಮುಹಮ್ಮದ್(ಸ) ಅವರು ಹಜ್ಜ್’ನ ಕೊನೆಯ ಐತಿಹಾಸಿಕ ಧರ್ಮೋಪದೇಶವನ್ನು ಇಲ್ಲಿ (ಖುತ್ಬಾಹ್) ನೀಡಿದರು. ಪ್ರತಿ ವರ್ಷ 9ನೇ ಜುಲ್’ಹಿಜ್ಜಾದಲ್ಲಿ, ಹಜ್ಜ್ ಖುತ್ಬಾ ಈ ಮಸ್’ಜಿದ್’ನಿಂದ ನೀಡಲ್ಪಡುತ್ತದೆ. ಒಂದು ವರ್ಷದಲ್ಲಿ ಈ ಮಸ್’ಜಿದ್’ನಲ್ಲಿ ಕೇವಲ ಎರಡು ಸಲಾತ್ (ಪ್ರಾರ್ಥನೆಗಳು) ಮಾತ್ರ ಮಾಡಲಾಗುತ್ತದೆ.

  ಹಜ್ಜ್ ದಿನಗಳಲ್ಲಿ (ಜುಲ್’ಹಿಜ್ಜಾದ 9ನೇ ಭಾಗ) ಇಮಾಮ್ ಯಾತ್ರಿಕರೊಂದಿಗೆ ಜಂಟಿಯಾಗಿ ಜುಹರ್ ಮತ್ತು ಅಸರ್ ಪ್ರಾರ್ಥನೆಗಳನ್ನು ಮಾಡಿಸುತ್ತಾರೆ. ಹಜ್ಜ್ ಸಮಯದಲ್ಲಿ ಪ್ರತಿ ಯಾತ್ರಿಕರು ಇಲ್ಲಿಗೆ ತಲುಪುವುದು ಬಹಳ ಕಷ್ಟ, ಆದರೆ ಇತರ ದಿನಗಳಲ್ಲಿ, ಮಸ್’ಜಿದ್’ ಖಾಲಿಯಾಗಿ ಉಳಿದಿರುತ್ತದೆ ಮತ್ತು ಸುಲಭವಾಗಿ ಕಾಣಬಹುದಾಗಿದೆ. ಇದರ ಅಂಗಳ ಪ್ರದೇಶವು ನವಾಫಿಲ್ ಪ್ರಾರ್ಥನೆಗೆ ತೆರೆದಿದೆ ಆದರೆ ಒಳಗಿನ ಸಭಾಂಗಣವನ್ನು ಮುಚ್ಚಲಾಗಿದೆ. [5]

ನೋಡಿರಿ

ಮಸ್’ಜಿದ್’  ಹರಮ್; ಮಸ್’ಜಿದ್’ ಎ ನಬವಿ; ಮಕ್ಕಃ; ಮದೀನಾ; ಮಸ್’ಜಿದ್’ ಎ ಅಕ್ಸಾ; ಮಸ್’ಜಿದ್’ ಅಲ್ ಹರಮ್’ನ  ವಿಸ್ತರಣೆ; ಅಲ್ಲಾಹ್; ಅಲ್ಲಾಹ್ನ ಪೈಗಂಬರ್;

ಉಲ್ಲೇಖಗಳು

[1] http://www.islamreligion.com/articles/2748/

[2] [5] http://www.beautifulmosque.com/masjid-e-nimra-in-arafat-saudi-arabia/

[3] http://www.mecca.net/nimra-mosque-khaif-mosque-masjid-taneem.html

[4] http://www.hajinformation.com/main/k10.htm

http://www.beautifulmosque.com/masjid-e-nimra-in-arafat-saudi-arabia/

231 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ