ಮಸ್’ಜಿದ್ ಅಲ್ ಖಿಬ್ಲತೈನ್ (مسجد ال قبلاتىن)

ಅರಬೀಯಲ್ಲಿ  ಕಿಬ್ಲಾಹ್ ಎಂದು ಕರೆಯಲ್ಪಡುವ ಈ ಮಸೀದಿಯು ಇದೇ ಹೆಸರಿನಿಂದ  ಸ್ಪಷ್ಟವಾಗಿದೆ ಕರೆಯಲ್ಪಡುತ್ತದೆ, ಮತ್ತು ಮುಸ್ಲಿಮರ ಪ್ರಾರ್ಥನೆಯ ನಿರ್ದೇಶನವು ಇದಕ್ಕೆ ಸಂಬಂಧಿಸಿದೆ.

ಪರಿವಿಡಿ

 ಸ್ಥಳ

   ಇದು ದಕ್ಷಿಣ-ಪಶ್ಚಿಮದ ಕಣಿವೆಯ ಬಳಿ ಅಲ್-ಅಖೀಕ್ ಮತ್ತು ಸ್ವಲ್ಪ ಮಟ್ಟಿಗೆ ಎತ್ತರದ ಭೂಮಿಗೆ ಹತ್ತಿರದಲ್ಲಿದೆ. ಇದು ವಾಯವ್ಯದಲ್ಲಿರುವ ಪೈಗಂಬರ್(ಸ)ರ ಮಸೀದಿಯಿಂದ ಐದು ಕಿಲೋಮೀಟರ್ ದೂರದಲ್ಲಿದೆ. ಇದು ಅನೇಕ ಬಾರಿ ನವೀಕರಣಕ್ಕೆ ಒಳಗಾಯಿತು. ಬಿನ್ ಲಾಡೆನ್ ಕಂಪೆನಿಯು ವಿಸ್ತರಣೆ ಮತ್ತು ನವೀಕರಣ ಯೋಜನೆಗಳ ಸರಣಿಯಲ್ಲಿ ಇತ್ತೀಚಿನದನ್ನು ಕೈಗೆತ್ತಿಕೊಂಡಿತು. ಈ ಮಸೀದಿಯು ಈಗ ಎರಡು ಮಹಡಿಗಳನ್ನು ಹೊಂದಿದೆ: ಮೊದಲ ಮಹಡಿಯನ್ನು ಮಸೀದಿಯ ವ್ಯವಹಾರಗಳನ್ನು ಮತ್ತು ಎರಡನೇ ಮಹಡಿಯನ್ನು ಪ್ರಾರ್ಥನೆಯನ್ನು ನಿರ್ವಹಿಸಲು ಹಂಚಲಾಗಿದೆ. ಇದು 1190ಚದರ ಮೀಟರ್. 400ಚದರ ಮೀಟರ್ ಬಾಲ್ಕನಿಯನ್ನು ಮಹಿಳೆಯರಿಗೆ ಪ್ರಾರ್ಥಿಸುವ ಪ್ರದೇಶವನ್ನು ಪರಿಗಣಿಸಿ ಮಹಿಳೆಯರಿಗೆ ಸೂಚಿಸಲಾಗಿದೆ. ಮಿಕ್ಕಿರುವುದೆಲ್ಲ ಪುರುಷರಿಗಾಗಿಯಾಗಿದೆ. ಇದರಲ್ಲಿ  ಖುರ್’ಆನ್’ನ್ನು ಕಲಿಸಲು ಒಂದು ಸ್ಥಳವಿದೆ. ಮಸೀದಿಯ ಪಕ್ಕದಲ್ಲಿ, ಆಂತರಿಕ ಅಂಗಳವನ್ನು ಮುಚ್ಚಿದ ಮರವನ್ನು ಸೇರಿಸಲಾಗಿದೆ.

ಖುರ್’ಆನ್

   ಮೊದಲಿಗೆ, ಮುಸ್ಲಿಮರು ಬತ್ ಅಲ್-ಮಕ್ದಿಸ್ (ಜೆರುಸಲೆಮ್) ನ ಕಡೆಗೆ ಮುಖತಿರುಗಿಸಿ ಪ್ರಾರ್ಥಿಸುತ್ತಿದ್ದರು, ನಂತರ, ಜೆರುಸಲೆಮ್ ಕಡೆಗಿನ ಈ ಪ್ರಾರ್ಥನಾ ಕ್ರಮವನ್ನು ದೈವೀಕ ಆಜ್ಞೆಯ ಅತೀರ್ಣದೋಂದಿಗೆ ವಜಾಮಾಡಲಾಯಿತು, ಹಾಗೂ ಆಲ್-ಮಸ್ಜಿದ್ ಅಲ್-ಹರಮ್ ಕಡೆಗೆ ಪ್ರಾರ್ಥನೆ ಮಾಡಲು ತಿಳಿಸಲಾದಾಗ ಅಲ್ಲಾಹ್’ನು ಖುರ್’ಆನನಲ್ಲಿ ಹೇಳಿದನು;  “(ದೂತರೇ) ನಿಮ್ಮ ಉಖವು ಪದೇ ಪದೇ ಬಾನಿನೆಡೆಗೆ ಹೊರಳುತ್ತಿರುವುದನ್ನು ನಾವು ನೋಡಿರುವೆವು ಮತ್ತು ಖಂಡಿ ನಾವು ನಿಮ್ಮನ್ನು ನೀವಿಚ್ಛಿಸುವ ದಿಕ್ಕಿನೆಡೆಗೆ ತಿರುಗಿಸುವೆವು. ಸರಿ ನೀವಿನ್ನು ನಿಮ್ಮ ಉಖವನ್ನು ‘ಮಸ್’ಜಿದುಲ್ಹರಮ್’ನೆಡೆಗೆ ತಿರುಗಿಸಿಕೊಳ್ಳಿರಿ. ನೀವೆಲ್ಲ ಲ್ಲಿದ್ದರೂ (ನಮಾಜ್’ನ ವೇಳೆ) ನಿಮ್ಮ ಮುಖಗಳನ್ನು ಅದರೆಡೆಗೆ ತಿರುಗಿಸಿಕೊಳ್ಳಿರಿ.ಇದು, ತಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವೆಂಬುದು ಗ್ರಂಥದವರಿಗೆ ಖಂಡಿತ ತಿಳಿದಿದೆ. ಅವರು ಎಸಗುತ್ತಿರುವ ಕೃತ್ಯಗಳ ಬಗ್ಗೆ ಅಲ್ಲಾಹ್ನು ಅಜ್ಞನಾಗಿಲ್ಲ” ಸೂರ ಅಲ್ ಬಖರಃ 2 : 144.

ಹದೀಸ್

   ಬೈತ್-ಉಲ್-ಮಖದ್ದಿಸ್’ನಿಂದ ಕಾಬಾಕ್ಕೆ ಕಿಬ್ಲಾ ಬದಲಾವಣೆ ಮುಂದಿನ ಹದೀಸ್’ನಲ್ಲಿ ನಿರೂಪಿಸಲ್ಪಟ್ಟಿದೆ. ಅನಸ್ (ರಅ) ವರದಿ ಮಾಡಿದರು: ಅಲ್ಲಾಹ್’ನ ಪೈಗಂರ್(ಸ) () ಬೈತ್-ಉಲ್-ಮಖದ್ದಿಸ್ ಕಡೆಗೆ ಪ್ರಾರ್ಥನೆ ಮಾಡಿದ್ದಾರೆ, ಇದು ಅವರೆಡೆಗೆ ಅವತರಿಸಲಾಗಿತ್ತು  "ನಾವು ಮುಖವನ್ನು ಸ್ವರ್ಗದೆಡೆಗೆ ತಿರುಗಿಸುವೆವು, ಆದ್ದರಿಂದ ನಾವು ನಿನ್ನನ್ನು ಮೆಚ್ಚಿಸುವಂತಹ ಕಿಬ್ಲಾ ಕಡೆಗೆ ತಿರುಗಿಸುವೆವು, ಆದ್ದರಿಂದ ನಿಮ್ಮ ಮುಖವನ್ನು ಪವಿತ್ರ ಮಸೀದಿಯ ಕಡೆಗೆ ತಿರುಗಿಸಿರಿ" (ಖುರ್’ಆನ್ 2.14). ಬನು ಸಲಾಮಾದ ಒಬ್ಬ ವ್ಯಕ್ತಿ ಹೋಗುತ್ತಿರುವಾಗ; (ಅವನು ಜನರನ್ನು ಕಂಡುಕೊಂಡನು) ಆ ಜನರಲ್ಲಿ ಒಬ್ಬನು ಮುಂಜಾನೆ ಪ್ರಾರ್ಥಿಸುವಾಗ ಆತನು  ಒಂದು ರಕಅತ್’ನ್ನು ಮುಗಿಸಿದ್ದನು. ಆಗ  ವ್ಯಕ್ತಿ ದೊಡ್ಡ ಧ್ವನಿಯಲ್ಲಿ ಹೇಳಿದರು: “ಆಲಿಸಿ! ಕಿಬ್ಲಾ ಬದಲಾಗಿದೆ” ಮತ್ತು ಆಗ ಅವರು ಅಲ್ಲಿಂದ (ಹೊಸ) ಕಿಬ್ಲಾ (ಕಾಬಾ) ಕಡೆಗೆ ತಿರುಗಿಕೊಂಡರು. ಸಹಿಹ್ ಮುಸ್ಲಿಂ 527 [1]

ವಿದ್ವಾಂಸರ ದೃಷ್ಟಿಕೋನಗಳು

 ಪೈಗಂಬರ್(ಸ) () ನಿಂದ ಬಂದ ಮತ್ತೊಂದು ನಿರೂಪಣೆಯಲ್ಲಿ: "ಅಲ್-ಬಖಿಯನ್ನು ಭೇಟಿ ಮಾಡಿದಾಗ ಅವರು ಹೇಳಿದ್ದರು: ನಮ್ಮ ಮುಂದೆ ಹೋದವರಿಗೆ ಮತ್ತು ನಂತರ ಬರುವವರ ಮೇಲೆ ಅಲ್ಲಾ ಕರುಣೆ ತೋರಿಸಲಿ. ಓ, ಅಲ್ಲಾಹ್ ಬಖಿ 'ಅಲ್-ಗರ್ಖದ್’ ರ ಜನರನ್ನು ಕ್ಷಮಿಸು. ಸಹಿಹ್ ಮುಸ್ಲಿಂ 974. ಅಲ್-ಮಸ್’ಜಿದ್ ಅಲ್-ನಬವಿಗೆ ಭೇಟಿ ನೀಡುವವರು ಖುಬಾ ಮಸೀದಿಗೆ ಭೇಟಿ ನೀಡಿದರೆ (ಪೈಗಂಬರ್(ಸ) ಮೊದಲ ಮಸೀದಿಯನ್ನು ಸ್ಥಾಪಿಸಿದ ಮದೀನಾ ಬಳಿ ಇರುವ ಒಂದು ಪಟ್ಟಣ) ಮತ್ತು ಅಲ್ಲಿ ಎರಡು ರಕಅತ್ಗಳನ್ನು ನಿರ್ವಹಿಸಲಿ, ಏಕೆಂದರೆ ಪೈಗಂರ್(ಸ) ()ರು ಶನಿವಾರ ಇದನ್ನು ಭೇಟಿ ಮಾಡಿ ಮತ್ತು ಎರಡು ರಕಅತ್’ಗಳನ್ನು ನಿರ್ವಹಿಸುತಿದ್ದರು, ಸಹಿಹ್ ಅಲ್ ಬುಖಾರಿ ಸಂಪುಟ 2: 1191. ಮತ್ತು  ಹೇಳಿದರು : ಒಬ್ಬ ವ್ಯಕ್ತಿಯು ಮನೆಯಿಂದ ತನ್ನನ್ನು ತಾನೇ ಶುಚಿಗೊಳಿಸಿದರೆ, ಮಸ್’ಜಿದ್ ಎ ಖುಬಾಕ್ಕೆ 'ಸಲಾಹ್ ಮಾಡಲು' ಹೋದರೆ, ಅವನು ಒಂದು ಉಮ್ರಾಃದಷ್ಟು ಪ್ರತಿಫಲವನ್ನು ಪಡೆಯುತ್ತಾನೆ. ಇವೇ ಅಲ್-ಮದೀನಾ ಅಲ್-ಮುನವ್ವಾರಾದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು. ಆದಾಗ್ಯೂ, ಏಳು ಮಸೀದಿಗಳು, ಅಲ್-ಕಿಬ್ಲತೇನ್ ಮಸೀದಿ (ಎರಡು ಕಿಬ್ಲಾಹ್’ಗಳ ಮಸೀದಿಗಳು) ಎಂದು ಭೇಟಿಮಾಡುವುದು ಅವಶ್ಯಕ ಎಂದು ಕೆಲವೊಂದು ಜನರಿಂದ ಉಲ್ಲೇಖಿಸಲ್ಪಟ್ಟಿದೆ ಈ ಸ್ಥಳಗಳ ಬಗ್ಗೆ ಇರು ಮಾಹಿತಿ ಆಧಾರರಹಿತವಾಗಿರುತ್ತದೆ ಮತ್ತು ಅದರ ಮೇಲೆ ಯಾವುದೇ ಪುರಾವೆಗಳಿಲ್ಲ. ಒಬ್ಬ  ಮೊಮಿನ್ ಇದನ್ನು ಯಾವಾಗಲೂ ನಂಬಬೇಕು ಮತ್ತು ಅನುಸರಿಸಬೇಕು, ಧರ್ಮದಲ್ಲಿ ಹೊಸದನ್ನು ಹೊಸತನವನ್ನು ತರಲಿಕ್ಕೆ ಅವಕಾಶವಿಲ್ಲ. ಅಲ್ಲಾಹ್’ನು ನಮಗೆ ಯಶಸ್ಸನ್ನು ನೀಡಲಿ! [2]

ನೋಡಿರಿ

ಮಸ್’ಜಿದ್, ಮಸ್ಜಿದ್ ಎ ಹರಮ್, ಮಸ್’ಜಿದ್ ಎ ನಬವಿ, ಮಸ್’ಜಿದ್ ಎ ಖುಬಾ, ಬಖಿ ಅಲ್ ಗರ್’ಖದ್, ಖಿಬ್ಲಹ್,

ಉಲ್ಲೇಖಗಳು

 [1] http://www.islamweb.net/emainpage/articles/161046/masjid-al-qiblatayn-the-two-qiblah-mosque

[2] http://www.alifta.com/Fatawa/FatawaChapters.aspx?languagename=en&View=Page&PageID=141&PageNo=1&BookID=10

297 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ