ನಹರ್ ದಿನ ಅಥವ ಯೌಮುನ್ನಹ್ರ್

  ಇದು ಜುಲ್-ಹಿಜ್ಜಾದ 10ನೇ ದಿನವಾದ ಈದ್ ಅಲ್-ಅದ್’ಹಾದ ದಿನವಾಗಿದೆ. ಈ ದಿನದಂದು ಜಾನುವಾರುಗಳನ್ನು ಅಥವ ಪ್ರಾಣಿಗಳನ್ನು ಬಲಿದಾನ ಮಾಡಲಾಗುತ್ತಿರುವುದರಿಂದ ಇದನ್ನು ಅಲ್ಲಾಹ್’ನಿಗೆ ಮಾತ್ರ ಆರಾಧನೆಯ ಕ್ರಿಯೆ ಎಂದು ಕರೆಯಲಾಗುತ್ತದೆ.

ಪರಿವಿಡಿ

   ಪರಿಚಯ

   ಅನ್-ನಹರ್ (ಈದ್ ಅಲ್-ಅದ್’ಹಾ ಹಬ್ಬದ ಮೊದಲ ದಿನ) ದಿನದ ನಂತರದ ಮೂರು ದಿನಗಳನ್ನು ತಷ್’ರೀಖ್ ದಿನಗಳೆಂದು ಕರೆಯಲಾಗುತ್ತದೆ. ತಷ್’ರೀಖ್’ನ ದಿನಗಳನ್ನು ಅಲ್-ಅಯ್ಯಾಮ್ ಅಲ್-ಮಾದುದಾತ್ (ಸಂಖ್ಯೆಯ ದಿನಗಳು) ಎಂದು ಕರೆಯಲಾಗುತ್ತದೆ.

   ಖುರ್’ಆನ್

ಸರ್ವಶಕ್ತನಾದ ಅಲ್ಲಾಹ್’ನು ಹೇಳಿದನು; ಮತ್ತು ನಿರ್ದಿಷ್ಟ ದಿನಗಳಲ್ಲಿ(ಬಲಿದಾನದ) ಅಲ್ಲಾಹ್’ನನ್ನು ನೆನಪಿಸಿಕೊಳ್ಳಿ. ಖುರ್’ಆನ್ ಸೂರ ಅಲ್ ಬಖರಃ 2 : 203ಅವರನ್ನು ಅಯ್ಯಾಮ್ ಎ ಮಿನಾ (ಮಿನದ ದಿನಗಳು) ಎಂದೂ ಕರೆಯುತ್ತಾರೆ, ಯಾಕೆಂದರೆ ಯಾತ್ರಾರ್ಥಿಗಳು ಈ ದಿನಗಳನ್ನು ಮಿನದಲ್ಲಿ ಕಳೆಯುತ್ತಾರೆ. [1]

    ಹಜ್ಜ್’ನ ಅತ್ಯುತ್ತಮ ದಿನ

ಅಲಿ (ರಅ)ರಿಂದ ವರದಿ ; “ ನಾನು ಅಲ್ಲಾಹ್’ನ ಪೈಗಂಬರರನ್ನು ಅಲ್ ಹಜ್ಜ್ ಅಲ್ ಅಕ್ಬರ್ ದಿನದ ಕುರಿತು ಕೇಳಿದೆ, ಮತ್ತು ಅವರು ಹೇಳಿದರು; “ಇದು ನಹರ್’ನ ದಿನ” ಎಂದು , ಜಾಮಿ ಅತ್ ತಿರ್ಮಿಜಿಯಲ್ಲಿ ಪುಸ್ತಕ 44, ಹದಿತ್ 3088.

ಇಬ್ನ್ ಉಮರ್ (ರಅ) ಹಜ್ಜ್ ಸಮಯದಲ್ಲಿ ತ್ಯಾಗದ ದಿನದಂದು ಅಲ್ಲಾಹ್’ನ ಪೈಗಂಬರ್ () ಎದ್ದು ನಿಂತು, ಹೀಗೆ ಹೇಳಿದರು: "ಇದು ಯಾವ ದಿನ?" ಅವರು ಹೇಳಿದರು, "ತ್ಯಾಗ ದಿನ." ಅವರು ಹೇಳಿದರು, "ಇದು ಹಜ್ಜ್’ನ ಮಹಾನ್ ದಿನವಾಗಿದೆ." ಸುನನ್ ಅಬಿ ದಾವೂದ್, 1945; ಸಹಿಹ್ ಅಬಿ ದಾವೂದ್’ನಲ್ಲಿ 1700ರಲ್ಲಿ ಅಲ್-ಅಲ್ಬಾನಿ ಅವರು ಸಹೀಹ್ ಎಂದು ವರ್ಗೀಕರಿಸಿದ್ದಾರೆ.

   ನೋಡಿರಿ

ಅಲ್ಲಾಹ್, ಈದ್ ಉಲ್ ಅದ್’ಹಾ, ಜುಲ್ ಹಿಜ್ಜಾ, ಹಜ್ಜ್, ಅಯ್ಯಾಮ್ ಅಲ್ ತಷ್’ರೀಖ್;

   ಉಲ್ಲೇಖಗಳು

[1] http://www.islamweb.net/ehajj/index.php?page=article&id=147902

[2] http://www.sunnah.com/search/day-of-nahr

178 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ