ದೇವನಕರುಣೆ

   ಅನೇಕ ಜನರು ವಿಶೇಷವಾಗಿ ಮುಸ್ಲಿಮೇತರರು ಈ ರೀತಿಯ ಪ್ರಶ್ನೆಗಳನ್ನು ಮಂಡಿಸುತ್ತಾರೆ, ಅಲ್ಲಾಹ್ (سبحانه و تعالى) ಅತ್ಯಂತ ಕರುಣಾಮಯಿಯಾಗಿದ್ದರೆ, ಮನುಷ್ಯರಲ್ಲಿ ಬಹುಪಾಲು ಜನರು ನರಕಾಗ್ನಿಗೆ ಹೋಗುತ್ತಾರೆ ಎಂದಾದರೆ ಅವನು ಮನುಷ್ಯರನ್ನು ಏಕೆ ಸೃಷ್ಟಿಸಿದನು?ಏಕೆ ಅಲ್ಲಾಹ್’(سبحانه و تعالى) ಜನರು ನರಕದಲ್ಲಿ ಸುಡುವುದನ್ನು ನೋಡಲು ಬಯಸುತ್ತಾನೆ? ನಾವು ಈಗಾಗಲೇ ಭೂಮಿಯ ಮೇಲೆ ಇರುವುದರಿಂದ, ಈ ಪ್ರಶ್ನೆಯನ್ನು ಚರ್ಚಿಸುವಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಅದರಿಂದ ಏನೂ ಬದಲಾಗುವುದಿಲ್ಲ. ಹೇಗಾದರೂ ಆಗಲಿ , ಮನುಷ್ಯನ ಈ ಕುತೂಹಲದಿಂದಾಗಿ, ಅಲ್ಲಾಹ್ (سبحانه و تعالى) ಜಗತ್ತನ್ನು  ಏಕೆ ಸೃಷ್ಟಿಸಿದನೆಂಬುದನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

 

ಪರಿವಿಡಿ

ನಾವು ತರ್ಕ ಮತ್ತು ವಾದವನ್ನು ಬಳಸುತ್ತಿದ್ದರೆ ಜಗತ್ತೇ ಅಸ್ತಿತ್ವದಲ್ಲಿರುತ್ತಿರಲಿಲ್ಲ

  ಈ ವಾದವು ಹೀಗಿದೆ: ಮಾನವರಲ್ಲಿ ಬಹುಪಾಲು ಜನರು ನರಕಕ್ಕೆ ಹೋಗುತ್ತಿದ್ದಾರೆ ಎಂದಾದರೆ, ಅಲ್ಲಾಹ್’ನು (سبحانه و تعالى) ಮನುಷ್ಯರನ್ನು ಸೃಷ್ಟಿಸಲೇಬಾರದಾಗಿತ್ತು.

   ಯಾರಾದರೊಬ್ಬರು ಒಂದೇ ರೀತಿಯ ತರ್ಕವನ್ನು ವಿಸ್ತರಿಸಬೇಕಾದರೆ,ಅಲ್ಲಾಹ್’ನು (سبحانه و تعالى) ಈ ಪ್ರಾಣಿಗಳನ್ನು ಏಕೆ ಸೃಷ್ಟಿಸಿದ್ದಾನೆಂದು ಕೇಳಬಹುದು, ಅವನುಇದನ್ನುತಿಳಿದುಕೊಳ್ಳಬೇಕುಪ್ರಾಣಿಗಳಲ್ಲೀಯೂಒಂದು ಇನ್ನೊಂದನ್ನು ತಿನ್ನುತ್ತದೆ ಮತ್ತು ಅದಕ್ಕಾಗುವ ನೋವಿನಿಂದ ಮರಣವನ್ನು ಅನುಭವಿಸುತ್ತದೆ.

   ಉದಾಹರಣೆಗೆ: ಹುಲಿ ಮತ್ತು ಸಿಂಹದಿಂದ ಜಿಂಕೆ ಬೇಟೆಯಾಗುತ್ತದೆ, ಇಲಿಹಾವುಗಳು ಮತ್ತು ಬೆಕ್ಕುಗಳಿಂದ ಬೇಟೆಯಾಗುತ್ತದೆ, ಹುಳುಗಳು ಮತ್ತು ಮೀನುಗಳನ್ನು ಪಕ್ಷಿಗಳು ಬೇಟೆಯಾಡುತ್ತವೆ,ಬೇಕಾದ ಸಸ್ಯಗಳಿಗೆ ಹಸುಗಳು ಮತ್ತು ಆಡುಗಳು ಇತ್ಯಾದಿಗಳಿಂದ ತಿನ್ನಲ್ಪಡುತ್ತವೆ.

    ಹಾಗಾದರೆ ನಿಮ್ಮ ತರ್ಕವು ಯಾವುದೇ ಪ್ರಾಣಿಗಳಿಗೆ, ಸಸ್ಯಗಳಿಗೆ ಇತ್ಯಾದಿಗಳಿಗಾಗಬಾರದು ಎಂದು ಅರ್ಥ. ಸಂಕ್ಷಿಪ್ತವಾಗಿ,ಅಲ್ಲಾಹ್’ನು (سبحانه و تعالى) ಯಾವುದೇ ಜೀವಿಗಳನ್ನು ಸೃಷ್ಟಿಸದೇ ಇದ್ದಿದ್ದರೆ, ಪ್ರತಿಯೊಬ್ಬರೂ ಅದರ ಆಹಾರಕ್ಕಾಗಿ ಇತರರ ಮೇಲೆ ಅವಲಂಬಿತರಾಗುತ್ತಿರಲಿಲ್ಲ ಮತ್ತು ಇತರ ಜೀವಿಗಳ ಕೈಯಲ್ಲಿ ಅವರು ನೋವಿನ ಸಾವನ್ನು ಅನುಭವಿಸುತ್ತಿರಲಿಲ್ಲ.

ಯಾವುದೇ ಜೀವಿಗಳಿಲ್ಲದಿದ್ದರೆ,ವಿಶಾಲವಾದ ಜಗತ್ತನ್ನು ರಚಿಸುವ ಉದ್ದೇಶವೇನು ಎಂಬುದನ್ನು ಮೊದಲು ತಿಳಿಯಬೇಕಾಗಿದೆ ಅಲ್ಲವೇ?

  ಅಲ್ಲಾಹ್’ನು ರಕ್ತಪಿಪಾಸುಕ ಅಥವ ಹಿಂಸಕನಲ್ಲ

   ನಮ್ಮಲ್ಲಿ ಕೆಲವರು ಗ್ರಹಿಸುವಂತೆ,ಅಲ್ಲಾಹ್’ನು (سبحانه و تعالى) ರಕ್ತಪಿಪಾಸುಕನಲ್ಲ ಅಥವ ನರಕದಲ್ಲಿ ಶಿಕ್ಷೆಗೊಳಗಾದ ಜನರನ್ನು ನೋಡಲು ಇಷ್ಟಪಡುವ ಕಲ್ಲೆದೆಯವನಲ್ಲ. ಮೊದಲು ನಾವು ನರಕಕ್ಕೆ ಪ್ರವೇಶಿಸುವವರು ಯಾರು ಎಂದು ಅರ್ಥಮಾಡಿಕೊಳ್ಳಬೇಕು.

"ಅತ್ಯಂತ ದುಷ್ಟನು ಅಥವ ಭಾಗ್ಯಹೀನನು ಮಾತ್ರ ಅದರೊಳಗೆ ಪ್ರವೇಶಿಸುವನು." ಖುರ್’ಆನ್ ಸೂರಃ ಅಲ್ಲೈಲ್ 92: 15

   ಪೈಗಂಬರ್ ಮುಹಮ್ಮದ್(ಸ)ರು ಹೇಳಿದರು: ಅಬೂಹುರೈರಾ(ರ ಅ) ರವರು ಹೀಗೆಂದು ವರದಿ ಮಾಡಿರುವರು; ಅಲ್ಲಾಹ್’ನ ಧರ್ಮಪ್ರಚಾರಕರು ಹೇಳಿದರು; “"ನಿರಾಕರಿಸುವವರನ್ನು ಹೊರತುಪಡಿಸಿ ನನ್ನ ಅನುಯಾಯಿಗಳೆಲ್ಲರೂ ಸ್ವರ್ಗಕ್ಕೆ ಪ್ರವೇಶಿಸುತ್ತಾರೆ”. ಅವರು ಕೇಳಿದರು, "ಓ ಅಲ್ಲಾಹ್’ನ ಧರ್ಮಪ್ರಚಾರಕರೆ! ಯಾರು ನಿರಾಕರಿಸುತ್ತಾರೆ?" ಇವರು ಉತ್ತರಿಸಿದರು, "ನನ್ನನ್ನು ಯಾರು ಅನುಸರಿಸುವರೊ ಅವರು ಸ್ವರ್ಗ ಪ್ರವೇಶಿಸುವರು, ಮತ್ತು ನನ್ನ ಅನುಸರಣೆಯನ್ನು ಯಾರು ತಿರಸ್ಕರಿಸುತ್ತಾರೊ ಅವರು ಸ್ವರ್ಗ ಪ್ರವೇಶಿಸಲಾರರು." ಸಹಿಹ್ ಅಲ್ ಬುಖಾರಿ ಸಂಪುಟ. 9: 384.

  ಮೇಲೆ ತಿಳಿಸಿದಂತಹ ಖುರ್’ಆನಿನ ಸೂಕ್ತಿ ಮತ್ತು ಹದೀಸ್’ನಿಂದ ವ್ಯಕ್ತಿಯು ತನ್ನ ಆಯ್ಕೆಯಿಂದ ನರಕದ ಬೆಂಕಿಯನ್ನು ಪ್ರವೇಶಿಸುತ್ತಾನೆ ಎಂಬುದು ಸ್ಪಷ್ಟವಾಗಿ ತೋರಿಸುತ್ತವೆ.   ನೀವು ಖುರ್’ಆನ್’ನ್ನು ಓದಿದರೆ, ವಿಶ್ವಾಸಿಗಳು ನರಕಕ್ಕೆ ಪ್ರವೇಶಿಸಿದಾಗ ನರಕದ ಬಗ್ಗೆ ಖಿನ್ನತೆಯಿಂದ ಮಾತನಾಡುವ ಅನೇಕ ಸೂಕ್ತಿಗಳು ಇವೆ. ನರಕದ ಬೆಂಕಿಯಲ್ಲಿ ಒಬ್ಬ ನಿವಾಸಿ ಇರುವುದಿಲ್ಲ, ಯಾರಹೊರತೆಂದರೆಅವರು ಮಾಡಿರುವ ಅನ್ಯಾಯದ ಪ್ರತಿಫಲವನ್ನು ಪಡೆಯಲಿದ್ದಾರೆಯೊ ಅವರ ಹೊರತು. ಈಗ ನಾವು ಅಂತಹಾ ಕೆಲವು ಸೂಕ್ತಿಗಳನ್ನು ಕೆಳಗೆ ನೋಡೋಣ.

   ಅವರ(ಧಿಕ್ಕಾರಿಗಳ) ಮುಖಗಳನ್ನು ನರಕದ ಬೆಂಕಿಯಲ್ಲಿ ತಿರುಚಿ ಮುಗುಚಿ, ಸುಡಲಾಗುವ  ದಿನ ಅವರು, “ಅಯ್ಯೋ, ನಾವು ಅಲ್ಲಾಹ್’ನ ಹಾಗೂ ಅವನ ದೂತರ ಆಜ್ಞೆಗಳನ್ನು ಪಾಲಿಸಿದ್ದರೆ ಎಷ್ಟು ಚೆನ್ನಾಗಿತ್ತು” ಎನ್ನುವರು./ ಮತ್ತು ಅವರ ಹೇಳುವರು; ನಮ್ಮೊಡೆಯಾ, ನಾವು ನಮ್ಮ ನಾಯಕರು ಮತ್ತು ನಮ್ಮ ದೊಡ್ಡವರ ಆಜ್ಞೆಗಳನ್ನು ಪಾಲಿಸಿದೆವು ಮತ್ತು ಅವರು ನಮ್ಮನ್ನು ದಾರಿಗೆಡಿಸಿ ಬಿಟ್ಟರು”/ “ನಮ್ಮೊಡೆಯಾ ನೀನು ಅವರಿಗೆ ದುಪ್ಪಟ್ಟು ಶಿಕ್ಷೆಯನ್ನು ನೀಡು ಮತ್ತು ಅವರನ್ನು ಮಹಾಶಾಪಕ್ಕೆ ಗುರಿಪಡಿಸು”, ಖುರ್’ಆನ್ ಅಧ್ಯಾಯ ಅಲ್ ಅಹ್’ಝಾಬ್33: 66-68.

  ತಮ್ಮೊಡೆಯನನ್ನು ಧಿಕ್ಕರಿಸಿದವರಿಗೆ ನರಕದ ಶಿಕ್ಷೆ ಸಿಗಲಿದೆ ಮತ್ತು ಅದು ತುಂಬಾ ಹೀನ ನೆಲೆಯಾಗಿದೆ./ ಅವರನ್ನು ಅದರೊಳಗೆ ಹಾಕಲಾದಾಗ ಅವರು ಅದರ ಆರ್ಭಟವನ್ನು ಕೇಳುವರು ಮತ್ತು ಅದು ಕುದಿಯುತ್ತಿರುವುದು./ ಅದು ಆವೇಶದಿಂದ ಇನ್ನೇನು ಸ್ಪೋಟಗೊಳ್ಳುವುದೋ, ಎಂಬಂತಿರುವುದು, ಅವರಲ್ಲಿನ ಯಾವುದಾದರೂ ತಂಡವನ್ನು ಅದರೊಳಗೆ ಹಾಕಲಾದಾಗ ಅದರ ದ್ವಾರಪಾಲಕರು ಅವರೊಡನೆ“ಎಚ್ಚರಿಸುವವರು ನಿಮ್ಮ ಬಳಿಗೆ ಬಂದಿರಲಿಲ್ಲವೇ?” ಎಂದು ಕೇಳುವರು./ ಅವರು ಹೇಳುವರು; “ಯಾಕಿಲ್ಲ? ಎಚ್ಚರಿಸುವವರು ನಮ್ಮ ಬಳಿಗೆ ಖಂಡಿತವಾಗಿ ಬಂದಿದ್ದರು. ಆದರೆ ನಾವು ಅವರನ್ನು ತಿರಸ್ಕರಿಸಿದೆವು ಮತ್ತು ಅಲ್ಲಾಹ್’ನು ಎನನ್ನೂ ಕಳುಹಿಸಿಕೊಟ್ಟಿಲ್ಲ. ನೀವು ಮಹಾ ಮೋಸಕ್ಕೆ ಸಿಲುಕಿರುವಿರೆಂದು ಹೇಳಿದ್ದೆವು” ಎನ್ನುವರು./ ಮತ್ತು ಅವರು ಹೇಳುವರು; “ಒಂದು ವೇಳೆ ನಾವು(ದೂರ ಸಂದೇಶವನ್ನು) ಕೇಳಿದ್ದರೆ ಮತ್ತು ಅದನ್ನು ಅರ್ಥ ಮಾಡಿಕೊಂಡಿದ್ದರೆ(ಇಂದು) ನಾವು ನರಕದವರ ಸಾಲಲ್ಲಿರುತ್ತಿರಲಿಲ್ಲ./ ಹೀಗೆ ಅವರು ತಮ್ಮ ಪಾಪವನ್ನು ಒಪ್ಪಿಕೊಳ್ಳುವರು. ಆದರೆ ನರಕದವರಿಗೆ ಶಾಪವಿರಲಿ. ಖುರ್’ಆನ್ ಅಲ್ ಮುಲ್ಕ್: 67: 6-11.

   ನೀವು ಖುರ್’ಆನ್’ನ್ನು ಓದಿದರೆ, ಅನೇಕ ಸೂಕ್ತಿಗಳನ್ನು ಕಂಡುಕೊಳ್ಳುವಿರಿ, ಇದರಲ್ಲಿ ನಂಬಿಕೆಯಿಲ್ಲದವರು ತಮ್ಮ ತಪ್ಪು ಎಂದು ಒಪ್ಪಿಕೊಳ್ಳುತ್ತಾರೆ ಅಲ್ಲಿ ಅವರು ನರಕಕ್ಕೆ ಪ್ರವೇಶಿಸುತ್ತಾರೆ. ಮೇಲಿನ ಎರಡು ಸೂಕ್ತಿಗಳಲ್ಲಿ ನಾವು ವಿಶ್ವಾಸಿಗಳಾಗಿ ಅರ್ಥಮಾಡಿಕೊಳ್ಳಬಹುದು, ಏಕೆಂದರೆ ಅವರ ಸ್ವತಃ ಆಯ್ಕೆಯಿಂದಾಗಿ ನಿರಾಶ್ರಿತರು ನರಕಕ್ಕೆ ಪ್ರವೇಶಿಸಿಸುವರು.

ಅಲ್ಲಾಹ್’ನಿಂದ ಎಚ್ಚರಿಕೆ

  “(ಅಂತಿಮ ವಿಚಾರಣೆಯ) ಆ ದಿನ, ಪ್ರತಿಯೊಬ್ಬನೂ ತಾನು ಮಾಡಿರುವ ಪ್ರತಿಯೊಂದು ಸತ್ಕರ್ಮವನ್ನು ಹಾಗೂ ತಾನು ಮಾಡಿರುವ ದುಷ್ಕರ್ಮವನ್ನು ತನ್ನ ಮುಂದೆ ಕಾಣುವನು. ಆಗ ಅವನು, ತನ್ನ ಹಾಗೂ ಅವುಗಳ(ಆ ತನ್ನ ಪಾಪಗಳ) ನಡುವೆ ಭಾರೀ ಅಂತರವಿರಬೇಕಿತ್ತು ಎಂದು ಹಂಬಲಿಸುವನು. ಅಲ್ಲಾಹ್’ನು ತನ್ನ ಕುರಿತು ನಿಮ್ಮನ್ನು ಎಚ್ಚರಿಸುತ್ತಾನೆ. ಅಲ್ಲಾಹ್’ನು ತನ್ನ ದಾಸರ ಪಾಲಿಗೆ ತುಂಬಾ ವಾತ್ಸಲ್ಯಮಯಿಯಾಗಿದ್ದಾನೆ. ಖುರ್’ಆನ್ ಅಧ್ಯಾಯ ಆಲಿ ಇಮ್ರಾನ್: 3: 30.

ಈ ಮೇಲಿನ ಸೂಕ್ತಿಯಲ್ಲಿ ಅಲ್ಲಾಹ್’ನು (سبحانه و تعالى) ದುಷ್ಟದಿಂದ ದೂರ ಉಳಿಯಲು ಪ್ರತಿ ವ್ಯಕ್ತಿಗೆ ಒಂದು ಸ್ಪಷ್ಟ ಎಚ್ಚರಿಕೆಯನ್ನು ನೀಡುತ್ತದೆ.ಕೆಟ್ಟದ್ದನ್ನು ಮಾಡುವವನು ಈ ಎಚ್ಚರಿಕೆಯ ವಿರುದ್ಧ ಹೋಗುವ ಆಯ್ಕೆಮಾಡುತ್ತಾನೆ.

 ನ್ಯಾಯೋಚಿತ ಪ್ರಯೋಗ

  ಖಂಡಿತವಾಗಿಯೂ ಅಲ್ಲಾಹ್’ನು ಕಿಂಚಿತ್ತೂ ಅನ್ಯಾಯವೆಸಗುವುದಿಲ್ಲ. ಒಂದು ಸತ್ಕರ್ಮವಿದ್ದರೆ, ಅವನು ಅದನ್ನು ಹಲವು ಪಟ್ಟು ಹೆಚ್ಚಿಸಿ, ತನ್ನ ವತಿಯಿಂದ ಭಾರೀ ಭವ್ಯ ಪ್ರತಿಫಲವನ್ನು ನೀಡುತ್ತಾನೆ. ಖುರ್’ಆನ್ ಅಧ್ಯಾಯ ಅನ್ನಿಸಾ: 4 : 40.

ಮತ್ತು(ಕರ್ಮಗಳ) ದಾಖಲೆ ಗ್ರಂಥವನ್ನು ಮುಂದೆ ತರಲಾದಾಗ, ಅಪರಾಧಿಗಳು ಅದರೊಳಗೆ ಏನಿದೆಯೆಂದು ಆತಂಕದಲ್ಲಿರುವುದನ್ನು ನೀವು ಕಾಣುವಿರಿ. “ಅಯ್ಯೋ, ನಮ್ಮ ದೌರ್ಭಾಗ್ಯ! ಇದೆಂತಹಾ ಗ್ರಂಥ ಸಣ್ಣದಿರಲಿ ದೊಡ್ಡದಿರಲಿ ಯಾವ ವಿಷಯವನ್ನೂ ಇದು ದಾಖಲಿಸದೆ ಬಿಟ್ಟಿಲ್ಲ” ಎಂದು ಅವರು ಹೇಳುವರು. ತಾವು ಮಾಡಿದ್ದೆಲ್ಲವನ್ನೂ ಅವರು ತಮ್ಮ ಮುಂದೆಯೇ ಕಾಣುವರು, ನಿಮ್ಮ ಒಡೆಯನು ಯಾರ ಮೇಲೂ ಅಕ್ರಮವೆಸಗಲಾರನು. ಖುರ್’ಆನ್ ಅಧ್ಯಾಯ ಅಲ್ ಕಹಫ್: 18 : 49.

ಸನ್ಮಾರ್ಗದಲ್ಲಿ ನಡೆಯುವಾತನು ಸ್ವತಃ ತನ್ನ ಲಾಭಕ್ಕಾಗಿಯಷ್ಟೇ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಇನ್ನು ದಾರಿಗೆಟ್ಟವನ ದಾರಿಗೇಡಿತನದ ದುಷ್ಪರಿಣಾಮ ಕೂಡಾ ಅವನ ಮೇಲೆಯೇ ಇರುವುದು. (ಪುನರುತ್ಥಾನದ ದಿನ) ಹೊರೆ ಹೊರುವ ಯಾವೊಬ್ಬನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. ನಾವಂತು ದೂತರನ್ನು ಕಳಿಸುವ ತನಕ ಯಾರನ್ನೂ ಶಿಕ್ಷಿಸುವವರಲ್ಲ. ಖುರ್’ಆನ್ ಅಧ್ಯಾಯ ಬನಿ ಇಸ್ರಾಈಲ್: 17 : 15.

  ಮೇಲಿನ ಸೂಕ್ತಿಗಳ ತಿಳುವಳಿಕೆಯಂತೆ ಯಾವುದೇ ಅನ್ಯಾಯವಿಲ್ಲವೆಂಬುದು ಸ್ಪಷ್ಟವಾಗುತ್ತದೆ ಮತ್ತು ಜನರನ್ನು ಅವರು ಸ್ವತಃ ತಪ್ಪು ಮಾಡಿದ್ದಕ್ಕಾಗಿ ಮಾತ್ರ ಶಿಕ್ಷಿಸಲಾಗುತ್ತದೆ.

ಅಲ್ಲಾಹ್’ನ ಕರುಣೆ

ಅಲ್ಲಾಹ್ (سبحانه و تعالى) ಅತ್ಯಂತ ಕರುಣಾಮಯಿ.ಅವನಿಗೆ ನಾವು ನರಕದ ಬೆಂಕಿಯನ್ನು ಪ್ರವೇಶಿಸುವುದು ಇಷ್ಟವಿಲ್ಲ.ಆದ್ದರಿಂದ ಅಲ್ಲಾಹ್’ನು (سبحانه و تعالى) ನಮ್ಮ ಒಳ್ಳೆಯ ಕೃತ್ಯಗಳಿಗೆ ಪುಣ್ಯವನ್ನು ಹಲವಾರು ಪಟ್ಟು ಹೆಚ್ಚಿಸುತ್ತಾನೆ ಎಂದು ಅವನ ಕರುಣೆ ವಿವರಿಸುತ್ತದೆ ಮತ್ತು ನಮಗೆ ಲೆಕ್ಕವಿಲ್ಲದಷ್ಟು ಬಾರಿ ಕ್ಷಮಿಸುತ್ತಾನೆ.

ಖಂಡಿತವಾಗಿಯೂ ಅಲ್ಲಾಹ್’ನು ಕಿಂಚಿತ್ತೂ ಅನ್ಯಾಯವೆಸಗುವುದಿಲ್ಲ. ಒಂದು ಸತ್ಕರ್ಮವಿದ್ದರೆ, ಅವನು ಅದನ್ನು ಹಲವು ಪಟ್ಟು ಹೆಚ್ಚಿಸಿ, ತನ್ನ ವತಿಯಿಂದ ಭಾರೀ ಭವ್ಯ ಪ್ರತಿಫಲವನ್ನು ನೀಡುತ್ತಾನೆ. ಖುರ್’ಆನ್ ಅಧ್ಯಾಯ ಅನ್ನಿಸಾ: 4 : 40.

(ಅಲ್ಲಾಹ್’ನ ಬಳಿ) ಒಂದು ಸತ್ಕರ್ಮವನ್ನು ತಂದಾತನಿಗೆ ಅದರ ಹತ್ತು ಪಟ್ಟು ಪ್ರತಿಫಲ ಸಿಗಲಿದೆ. ಆದರೆ ಒಂದು ಪಾಪಕೃತ್ಯದಿಂದಿಗೆ ಬಂದಾತನಿಗೆ ಅಷ್ಟು ಮಾತ್ರ ಪ್ರತಿಫಲ ಸಿಗಲಿದೆ. ಅವರ ಮೇಲೆ ಖಂಡಿತ ಅನ್ಯಾಯವಾಗದು. ಖುರ್’ಆನ್ ಅಧ್ಯಾಯ ಅಲ್ ಅನ್’ಆಮ್: 6 : 160.

ಪೈಗಂಬರ್ ಮುಹಮ್ಮದ್(ಸ)ರು ಹೇಳಿದರು: ಇದು ಇಬ್ನ್ ಅಬ್ಬಾಸ್ (ರ ಅ)ರಿಂದ ವರದಿಯಾಗಿದ್ದು,  ಯಹೂದಿಗಳ ಅಧಿಕಾರದ ಬಗ್ಗೆ ವಿವರಿಸಲ್ಪಟ್ಟಿದೆ, ಇದು ಅಲ್ಲಾಹುವಿನ ಪೈಗಂಬರ್ () ಹಾಗೂ ಪೂಜ್ಯ ಮತ್ತು ಮಹಾ ಒಡೆಯನಿಂದ ಕಳುಹಿಸ್ಪಟ್ಟಿರುತ್ತದೆ:“ಖಂಡಿತವಾಗಿಯೂ ಅಲ್ಲಾ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ದಾಖಲಿಸಿದ್ದಾನೆ ಮತ್ತು ಒಳ್ಳೆಯದನ್ನು ಉದ್ದೇಶಿಸಿದ್ದರೂ ಅದನ್ನು ಮಾಡದಿದ್ದರೆ,ಅಲ್ಲಾಹ್’ನು ತನ್ನ ಅನುಗ್ರದಿಂದ ತನ್ನ ಪರವಾಗಿ ಸಂಪೂರ್ಣ ಒಳ್ಳೆಯದನ್ನು ದಾಖಲಿಸುತ್ತಾನೆ,ಆದರೆ ಅವರು ಅದನ್ನು ಉದ್ದೇಶಿಸಿದ್ದರೆ ಮತ್ತು ಅದನ್ನು ಮಾಡಿದರೆ, ಮಹತ್ವವುಳ್ಳಮತ್ತುಮಹಾನನಾದಅಲ್ಲಾಹ್’ನುಹತ್ತರಿಂದಏಳುನೂರುಪಟ್ಟುಪುಣ್ಯವನ್ನುದಾಖಲಿಸುವನುಮತ್ತುಅವನವಿಶ್ವಾಸಕ್ಕನುಗುಣವಾಗಿಇನ್ನೂಹೆಚ್ಚಿಸಬಹುದು.ಅವನು ಪಾಪದ ಉದ್ದೇಶವನ್ನು ಹೊಂದಿದ್ದನು, ಆದರೆ ಅದನ್ನು ಮಾಡಲಿಲ್ಲ, ಅಲ್ಲಾಹ್’ನು ಅವನ ಪರವಾಗಿ ಸಂಪೂರ್ಣ ಒಳ್ಳೆಯದನ್ನು ಬರೆಯುವನು. ಒಬ್ಬನು ಪಾಪವನ್ನು ಉದ್ದೇಶಿಸಿದರೆ ಮತ್ತು ಅದನ್ನು ಮಾಡಿದರೆ,ಅಲ್ಲಾಹ್’ನು ಅದಕ್ಕಾಗಿ ಅವನ ವಿರುದ್ಧ ಒಂದು ಒಂದು ಪಾಪವನ್ನು ಮಾತ್ರ ದಾಖಲಿಸುವನು,"ಸಹಿಹ್ಮುಸ್ಲಿಮ್, 237.

ಈಮೇಲಿನಖುರ್’ಆನಿನಸೂಕ್ತಿಗಳಮೂಲಕಹಾಗುಹದೀಸ್’ಗಳಮೂಲಕಅಲ್ಲಾಹ್’ನು (سبحانه و تعالى) ಜನರನ್ನು ಅವರ ಚಿಕ್ಕ ಒಳ್ಳೆಯ ಕಾರ್ಯಗಳಿಗೂ ಅನುಗ್ರಹಿಸಬೇಕೆಂದು ಬಯಸುತ್ತಾನೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ:

  • ಒಬ್ಬ ವ್ಯಕ್ತಿಯು ಒಂದು ಒಳ್ಳೆಯ ಕೆಲಸವನ್ನು ಮಾಡಿದರೆ, ಅದರ ಪ್ರತಿಫಲವು 10 ರಿಂದ 700 ಪಟ್ಟು ಹೆಚ್ಚಾಗುತ್ತದೆ ಮತ್ತು ಇನ್ನಷ್ಟು ಹೆಚ್ಚಾಗಬಹುದು, (ಅದರ ಉನ್ನತ ಮಿತಿಯು ಅಲ್ಲಾಹ್’ನಿಗೆ ಮಾತ್ರ ತಿಳಿದಿದೆ).
  • ಒಬ್ಬ ವ್ಯಕ್ತಿಯು ಒಂದು ಒಳ್ಳೆಯ ಕೆಲಸವನ್ನು ಮಾಡಲು ಬಯಸಿದರೆ, ಆದರೆ ಅದನ್ನು ಮಾಡದಿದ್ದರೆ, ಅವನು ಕೇವಲ 1 ಪುಣ್ಯವನ್ನು ಪಡೆಯುತ್ತಾನೆ.
  • ಒಬ್ಬ ವ್ಯಕ್ತಿಯು ಪಾಪ ಕೃತ್ಯವನ್ನು ಮಾಡಲು ಬಯಸಿದರೆ ಆದರೆ ಅದನ್ನು ಮಾಡದಿದ್ದರೆ,ಆರಂಭದಲ್ಲಿ ಪಾಪ ಮಾಡುವ ಉದ್ದೇಶವನ್ನು ಹೊಂದಿದ್ದರೂ ಮಾಡದಿದ್ದರೆ1 ಪುಣ್ಯವನ್ನು ದಾಖಲಿಸಲಾಗುತ್ತದೆ.
  • ಒಬ್ಬ ವ್ಯಕ್ತಿಯು 1 ಪಾಪ ಕೃತ್ಯವನ್ನು ಮಾಡಿದರೆ, ಪಾಪ ಕೃತ್ಯದ 1 ನ್ನು ಮಾತ್ರ ಅವನ ಪಾಲಿಗೆ ದಾಖಲಿಸಲಾಗುತ್ತದೆ.ಏಕೆ ಅಲ್ಲಾಹ್’ನು (سبحانه و تعالى) ಒಳ್ಳೆಯ ಕೆಲಸಗಳನ್ನು ಗುಣಿಸಲು ಅವನ ಮಾರ್ಗದಿಂದ ಹೊರಬರುತ್ತಿರುತ್ತಾನೆ,ನೀವು ಉತ್ತಮ ಕಾರ್ಯಗಳನ್ನು ಮಾಡದಿದ್ದಾಗಲೂ ದಾಖಲಿಸುವನು, ನೀವು ಕೆಟ್ಟ ಉದ್ದೇಶವನ್ನು ಹೊಂದಿ ಅದನ್ನು ಮಾಡದೇ ಇದ್ದಾಗ ಒಳ್ಳೆಯ ಪುಣ್ಯವನ್ನು ದಾಖಲಿಸಿಕೊಳ್ಳುವನು ಮತ್ತು ಪ್ರತಿ ದುಷ್ಟ ಕ್ರಿಯೆಗಳಿಗೆ ಕೇವಲ 1 ಪಾಪ ಕೃತ್ಯವೆಂದು ದಾಖಲಿಸಬೇಕೆ? ಅಲ್ಲಾಹ್’ನು (سبحانه و تعالى) ಅತ್ಯಂತ ಕರುಣಾಮಯಿ ಮತ್ತು ನಾವು ನರಕಕ್ಕೆ ಹೋಗುವುದನ್ನು ಬಯಸುವುದಿಲ್ಲ ಎಂಬುದಕ್ಕೆ ಈ ಮೇಲಿನ ಪುರಾವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಗಳಿಲ್ಲ.

  ಅಲ್ಲಾಹ್’ನು (سبحانه و تعالى) ಗಣಿತದ ಶಿಕ್ಷಕ ಅಥವ ವ್ಯಾಪಾರಿ ಮನುಷ್ಯನಂತೆ ಅಂದಾಜು ಮಾಡುವುದು ಹೇಗೆ ಅದು ತಪ್ಪಾದರೆ ಎಂದು ನೀವು ತಿಳಿದಿದ್ದರೆ. ಒಂದನ್ನು ನೀವು ತಿಳಿದು ಗೊತ್ತುಮಾಡಿಕೊಳ್ಳಬೇಕು ಅಲ್ಲಾಹ್’ನ ಕರುಣೆಗೆ ಮಿತಿಯೇ ಇಲ್ಲ ಎಂಬುದು ಸತ್ಯ. ಅಲ್’ಹಮ್’ದುಲಿಲ್ಲಾಹ್.

“ಅವರು ಗುರುತಿಸಬೇಕಾದ ರೀತಿಯಲ್ಲಿ ಅಲ್ಲಾಹ್’ನನ್ನು ಗುರುತಿಸಲಿಲ್ಲ, ಅಲ್ಲಾಹ್’ನು ಖಂಡಿತ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಬಲನಾಗಿದ್ದಾನೆ. ಖುರ್’ಆನ್ ಅಧ್ಯಾಯ, ಅಲ್’ಹಜ್ಜ್; 22 :74.

ಅಲ್ಲಾಹ್’ನ ಕ್ಷಮಾಶೀಲತೆ

ಇವೆಲ್ಲದರ ಹೊರತಾಗಿಯೂ, ಮಾನವರಾಗಿಯೇ ನಾವು ದುಷ್ಟ ಕಾರ್ಯಗಳನ್ನು ಮಾಡುತ್ತಿದ್ದೇವೆ.

  “ಹೇಳಿರಿ; ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ(ಅಲ್ಲಾಹ್’ನ) ದಾಸರೇ, ಅಲ್ಲಾಹ್’ನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹ್’ನು ಖಂಡಿತ ಎಲ್ಲ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ”. ಖುರ್’ಆನ್ ಅಧ್ಯಾಯ, ಅಝ್’ಝುಮರ್: 39 :53.

ಯಾರಾದರೂ ಒಂದು ಪಾಪಕೃತ್ಯವನ್ನು ಮಾಡಿ ಅಥವ ತನ್ನ ಮೇಲೆ ಅಕ್ರಮವೆಸಗಿಕೊಂಡು ಆ ಬಳಿಕ ಅಲ್ಲಾಹುವಿನಲ್ಲಿ ಕ್ಷಮೆ ಯಾಚಿಸಿದರೆ ಅವನು ಅಲ್ಲಾಹ್’ನನ್ನು ಕ್ಷಮಾಶೀಲನಾಗಿಯೂ ಕರುಣಾಮಯಿಯಾಗಿಯೂ ಕಾಣುವನು. ಖುರ್’ಆನ್ ಅಧ್ಯಾಯ, ಅನ್ನಿಸಾ: 4 : 110.

“ನಾನು ಅವರೊಡನೆ ಹೇಳಿದೆನು; ನೀವು ನಿಮ್ಮ ಒಡೆಯನ ಬಳಿ ಕ್ಷಮೆ ಕೇಳಿರಿ ಅವನು ಖಂಡಿತ ಅತೀ ಹೆಚ್ಚು ಕ್ಷಮಿಸುವವನಾಗಿದ್ದಾನೆ”. ಖುರ್’ಆನ್ ಅಧ್ಯಾಯ, 71 : 10.

ನಿಷ್ಪಕ್ಷಪಾತವಾದ ಮನಸ್ಸು ಅಲ್ಲಾಹ್’ನು (سبحانه و تعالى) ಹೇಗೆ ಅವನು ಅನಂತ ಕ್ಷಮಾಗುಣದ ಮೂಲಕ ತನ್ನ ಅನಂತ ಕ್ಷಮೆಯನ್ನು ವಿಸ್ತರಿಸುವನು ಎಂಬುದನ್ನು ತಿಳಿಯುತ್ತದೆ.

 ಈ ಎಲ್ಲದರ ನಡುವೆಯೂ, ನರಕದ ಬೆಂಕಿಯಿಂದ ವ್ಯಕ್ತಿಯು ತನ್ನನ್ನು ತಾನೇ ಉಳಿಸದಿದ್ದರೆ, ಯಾರ ತಪ್ಪು ಎಂಬುದು ನಾವು ತಿಳಿಯಬಹುದೇ? ಅದು ವ್ಯಕ್ತಿಯ ತಪ್ಪೆ ಅಥವ ದೇವರ ತಪ್ಪೆ?

ತೀರ್ಮಾನ

ನಾವು ಈ ಮೇಲಿನ ಎಲ್ಲಾ ವಿಷಯಗಳನ್ನು ಸರಿಯಾಗಿ ಓದಿದರೆ ಮಾತ್ರಹೀಗೆಂದು ನಾವು ಅರ್ಥಮಾಡಿಕೊಳ್ಳಬಹುದು:

  1. ಅಲ್ಲಾಹ್’ನು (سبحانه و تعالى) ದುಷ್ಟ ಅಥವ ಪಾಪ ಕೃತ್ಯಗಳ ಪರಿಣಾಮಗಳ ಬಗ್ಗೆ ನಮಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾನೆ.
  2. ಅಲ್ಲಾಹ್’ನು (سبحانه و تعالى) ಉತ್ತಮ ಕಾರ್ಯಗಳನ್ನು ಅಪಾರವಾಗಿ ಗುಣಿಸಿ ಮತ್ತು ಅನಂತ ಕ್ಷಮಿಸುವವನಾಗಿರುವುದರ ಮೂಲಕ ಅವನ ಅನಂತ ಕರುಣೆಯನ್ನು ನಮ್ಮ ಮೇಲೆ ವಿಸ್ತರಿಸುತ್ತಾನೆ.
  3. ವಿಚಾರಣೆಯು ಬಹಳ ನ್ಯಾಯೋಚಿತ ಮತ್ತು ಇದರಲ್ಲಿ ಯಾರಿಗೂ ಅನ್ಯಾಯವಿಲ್ಲ.
  4. ಜನರು ತಮ್ಮ ಆಯ್ಕೆಯಿಂದ ನರಕದ-ಬೆಂಕಿಯನ್ನು ಪ್ರವೇಶಿಸುತ್ತಾರೆ.
  5. ನರಕದ ಬೆಂಕಿ ಪ್ರವೇಶಿಸುವ ಜನರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಮತ್ತು ತಪ್ಪಿತಸ್ಥರೆಂದು ವಾದಿಸುತ್ತಾರೆ.

ನಾವು ಸೂಕ್ತಿಯನ್ನು ಮತ್ತೊಮ್ಮೆ ಒಂದು ಜ್ಞಾಪನೆಯಾಗಿ ಪುನಃ ನೋಡೋಣ: "ಅತ್ಯಂತ ಭಾಗ್ಯಹೀನನು (ದುಷ್ಟ) ಮಾತ್ರ  ಅದರೊಳಗೆ ಪ್ರವೇಶಿಸುವನು." ಖುರ್’ಆನ್ ಅಧ್ಯಾಯ,  ಅಲ್ಲೈಲ್ : 92: 15.

  ಇದಲ್ಲದೆ, ಒಬ್ಬನು ಏಕೆ ನಿರಾಶಾವಾದಿಯಾಗಿ ಇರಬೇಕು? ನಾವು ನರಕದ ಬೆಂಕಿಯ ಬಗ್ಗೆ ಮಾತ್ರ ಏಕೆ ಯೋಚಿಸುತ್ತೇವೆ?  ಯಾಕೆ ಸ್ವರ್ಗವನ್ನು ಮತ್ತು ಅಲ್ಲಾಹ್’ನ ಪ್ರಸನ್ನತೆಯನ್ನು ಪಡೆಯುವ ಗುರಿಯ ಕಡೆಗೆ ಪ್ರಯತ್ನಿಸಬಾರದು?ಇದು ಪ್ರಸಿದ್ಧವಾದ ಮಾತಾಗಿದೆ, ಒಬ್ಬ ವ್ಯಕ್ತಿಯು ತಾನು ಏನನ್ನು ಪಡೆಯಲು ಸಾಧಿಸಲು ಪ್ರಯತ್ನಿಸುತ್ತಾನೋ ಶ್ರಮಿಸುತ್ತಾನೆಯೋ ಅದನ್ನು ಪಡೆಯುತ್ತಾನೆ. ಆದ್ದರಿಂದ, ಅಲ್ಲಾಹ್’ನು (سبحانه و تعالى) ನಮ್ಮನ್ನು ಕ್ಷಮಿಸಲು ಸಿದ್ಧವಾಗಿದ್ದಾನೆ ಆದರೆ ನಾವು ಕ್ಷಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೇ ಅಥವ ಅಲ್ಲಾಹ್’ನೊಂದಿ ಪ್ರಾಮಾಣಿಕವಾಗಿ ಪಶ್ಚಾತಾಪ ಪಡಲು ಸಿದ್ಧರಿದ್ದೇವೆಯೇ,,,,,,,,,,,,,,,,

ನೋಡಿರಿ

ಲಾಇಲಾಹ ಇಲ್ಲಲ್ಲಾಹ್, ಇಸ್ಲಾಮಿನ ಆಧಾರ ಸ್ಥಂಭಗಳು, ನಂಬಿಕೆಯ  ಆಧಾರ ಸ್ಥಂಭಗಳು, ಜಿಬ್ರಯೀಲರ ಹದೀಸ್’ಗಳು, ಏಕದೇವ ವಿಶ್ವಾಸ.

ಉಲ್ಲೇಖಗಳು

http://dawah.invitetogod.com/questions-asked-by-non-muslims/if-allah-is-most-merciful-why-does-he-like-to-see-people-burn-in-hell

#1

509 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ