ಕಾಬಾ

  ಅಕ್ಷರಶಃ, ಅರೇಬಿಕ್’ನಲ್ಲಿ ಕಾಬಾ ಎಂದರೆ ಗೌರವ ಮತ್ತು ಘನತೆ ಹೊಂದಿರುವ ಉನ್ನತ ಸ್ಥಳವಾಗಿದೆ. ಕಾಬಾ ಎಂಬ ಪದವು ಒಂದು ಘನ ಅರ್ಥದ ಪದದ ಉತ್ಪತ್ತಿಯಾಗಿರಬಹುದು. ಈ ಇತರ ಹೆಸರುಗಳೆಂದರೆ:

1.            ಬೈತ್ ಉಲ್ ಅತೀಖ್ - ಅಂದರೆ, ಒಂದು ಅರ್ಥದ ಪ್ರಕಾರ, ಪೂರ್ವದ(ಮುಂಚಿನ) ಮತ್ತು ಪ್ರಾಚೀನ(ಪುರಾತನ). ಎರಡನೇ ಅರ್ಥದ ಪ್ರಕಾರ, ಇದು ಸ್ವತಂತ್ರ ಮತ್ತು ವಿಮೋಚನೆಯೆಂದು ಅರ್ಥ. ಎರಡೂ ಅರ್ಥಗಳನ್ನು ತೆಗೆದುಕೊಳ್ಳಬಹುದು.

2.            ಬೈತ್ ಉಲ್ ಹರಮ್ - ಗೌರವಾನ್ವಿತ ಮನೆ. [1]

ಪರಿವಿಡಿ

  ಸ್ಥಳ

  ಸೌದಿ ಅರೇಬಿಯಾದ ಮಕ್ಕಾದಲ್ಲಿ ಮಸ್’ಜಿದ್-ಅಲ್ ಹರಮ್’ನ ಮಧ್ಯದಲ್ಲಿ ಕಾಬಾ ಇದೆ. [2]

   ಇತಿಹಾಸ

 ಕಾಬಾವನ್ನು ಆದಮ್(ಅಸ) ಸಮಯದಲ್ಲಿ ನಿರ್ಮಿಸಲಾಯಿತು ಮತ್ತು ಅದರ ನಂತರ ಇಬ್ರಾಹಿಮ್ (ಅಬ್ರಹಾಂ) ಯುಗದಲ್ಲಿ ಪುನಃ ನಿರ್ಮಿಸಲಾಯಿತು. ಸ್ವತಃ ಇಬ್ರಾಹಿಮ್ (ಅಸ) ಮತ್ತು ಅವರ ಮಗ ಇಸ್ಮಾಯಿಲರಿಂದ(ಅಸ)

  ನಂತರ ಪೈಗಂರ್ ಮುಹಮ್ಮದ್(ಸ)ರ ಸಮಯದಲ್ಲಿ ಪೈಗಂರ್’ರು 35ವರ್ಷ ವಯಸ್ಸಿನವರಾಗಿದ್ದಾಗ ಅದನ್ನು ಪುನರ್ನಿರ್ಮಿಸಲಾಯಿತು, ಮುಚ್ಚಿದ ಮಕರಂದ, ಪುಟ: 63, 64.

   ನಾಲ್ಕು ಮೂಲೆಗಳು

•             ಹಜ್ರ್ ಎ ಅಸ್ವದ್

•             ರುಕ್ನ್ ಎ ಇರಾಖಿ

•             ರುಕ್ನ್ ಎ ಶಾಮಿ

•             ರುಕ್ನ್ ಎ ಯಮನಿ

   ಕಪ್ಪು ಕಲ್ಲು

   ಕಪ್ಪು ಕಲ್ಲು ಕಾಬಾದ ಒಂದು ಮೂಲೆಯಲ್ಲಿ ಪೈಗಂಬರ್ ಮುಹಮ್ಮದ್(ಸ)ರಿಂದ ಇರಿಸಲ್ಪಟ್ಟಿದೆ. ಮಕ್ಕಾದ ಜನರು ಕಾಬಾವನ್ನು ನಿರ್ಮಿಸುತ್ತಿರುವಾಗ ಕಪ್ಪುಕಲ್ಲನ್ನು ಎತ್ತಿಡುವ ಸಮಯದಲ್ಲಿ ಅದನ್ನಿಡಲು ಅವರು ಪರಸ್ಪರ ಸಂಘರ್ಷಿಸುತ್ತಿದ್ದರು. ಅದರಲ್ಲೊಬ್ಬ ಹಿರಿಯ ಮನುಷ್ಯನಾದ ಅಬೂ ಉಮಯ್ಯಾ ಬಿನ್ ಮುಗಿರಾಃ ಅಲ್ ಮಕ್’ಜೂಮಿ, ಎಲ್ಲರೂ ಒಪ್ಪುವಂತಹಾ ಪ್ರಸ್ತಾಪವನ್ನು ಮಾಡಿದರು. ಅವರು ಹೇಳಿದರು: "ಎಲ್ಲರಲ್ಲಿ ಮೊಟ್ಟಮೊದಲನೇಯದಾಗಿ ಈ ಪವಿತ್ರಸ್ಥಳವನ್ನು ಯಾರು ಪ್ರವೇಶಿಸುವನೊ ಅವನಿಗೆ ನಿರ್ಧರಿಸಲು ಅವಕಾಶ ಮಾಡಿಕೊಡಿ." ಮುಚ್ಚಿದ ಮಕರಂದ, ಪುಟ: 63, 64. ಯಾವಾಗ ಮೊಟ್ಟಮೊದಲು ಪೈಗಂಬರ್ ಮುಹಮ್ಮದ್(ಸ)ರು ಪವಿತ್ರ ಸ್ಥಳದ ಕಡೆಗೆ ಪ್ರವೇಶಿಸಿದಾಗ ಎಲ್ಲರೂ ಒಂದೇ ಏರುಧ್ವನಿಯಲ್ಲಿ ಹೇಳಿದರು “ಅಲ್ ಅಮೀನ್” (ನಂಬಿಗೆರ್ಹವಾದವರು) ಬಂದರು ಎಂದು, ನಾವು ಅವರ ನಿರ್ಧಾರವನ್ನು ಪಾಲಿಸುವೆವು” ಎಂದರು.  ಮುಚ್ಚಿದ ಮಕರಂದ, ಪುಟ: 63, 64.

   ಕಿಬ್ಲಾ

  ಕಿಬ್ಲಾವು ಬೈತ್-ಉಲ್-ಮಖ್’ದಿಸ್’ನಿಂದ ಸೂರ ಬಖರಃದ ಸೂಕ್ತಿ 2: 144ರ ಅವತರಿಸಿದ ನಂತರ ಕಾಬಾಕ್ಕೆ ಬದಲಾಯಿತು. “(ದೂತರೇ) ನಿಮ್ಮ ಮುಖವು ಪದೇ ಪದೇ ಬಾನಿನೆಡೆಗೆ ಹೊರಳುತ್ತಿರುವುದನ್ನು ನಾವು ನೋಡಿರುವೆವು ಮತ್ತು ಖಂಡಿತ ನಾವು ನಿಮ್ಮನ್ನು ನೀವಿಚ್ಛಿಸುವ ದಿಕ್ಕಿನೆಡೆಗೆ ತಿರುಗಿಸುವೆವು. ಸರಿ ನೀವಿನ್ನು ನಿಮ್ಮ ಮುಖವನ್ನು ‘ಮಸ್’ಜಿದುಲ್’ಹರಮ್’ನೆಡೆಗೆ ತಿರುಗಿಸಿಕೊಳ್ಳಿರಿ. ನೀವೆಲ್ಲಿದ್ದರೂ (ನಮಾಜ್’ನ ವೇಳೆ) ನಿಮ್ಮ ಮುಖಗಳನ್ನು ಅದರೆಡೆಗೆ ತಿರುಗಿಸಿಕೊಳ್ಳಿರಿ. ಇದು, ತಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವೆಂಬುದು ಗ್ರಂಥದವರಿಗೆ ಖಂಡಿತ ತಿಳಿದಿದೆ. ಅವರು ಎಸಗುತ್ತಿರುವ ಕೃತ್ಯಗಳಬಗ್ಗೆ ಅಲ್ಲಾಹ್’ನು ಅಜ್ಞಾನನಾಗಿಲ್ಲ. ಸೂರ ಅಲ್ ಬಖರಃ 2 : 144 [3]

   ಹದೀಸ್

   ಬರಾ ಬಿನ್ ಅಜಿಬ್(ರಅ)ರವರಿಂದ ವರದಿ; ಅಲ್ಲಾಹ್’ನ ಧರ್ಮ ಪ್ರಚಾರಕ ಹದಿನಾರು ಅಥವ ಹದಿನೇಳು ತಿಂಗಳು ಬೈತುಲ್ ಮಖ್ದ್ದಿಸ್ ಕಡೆಗೆ ಮುಖಮಾಡಿದರು, ಆದರೆ ಅವರು ಕಾಬಾದ(ಮಕ್ಕಾದಲ್ಲಿನ) ಕಡೆಗೆ ಮುಖಮಾಡುವುದನ್ನು ಬಯಸುತ್ತಿದ್ದರು, ಹಾಗಾಗಿ ಅಲ್ಲಾಹ್’ನು ಸೂಕ್ತಿಯನ್ನು ಅವತರಿಸಿದನು, "ನಿಶ್ಚಯವಾಗಿ ನಾವು ನಿಮ್ಮ ಮುಖವನ್ನು ಸ್ವರ್ಗದ ಕಡೆಗೆ ತಿರುಗಿಸಿದ್ದೇವೆ" ಎಂದು ಹೇಳಿದನು. (ಖುರ್’ಆನ್ ಸೂರ ಬಖರಃ 2 : 144) ಹಾಗಾಗಿ ಪೈಗಂಬರರು ಕಾಬಾದಕಡೆಗೆ ಮುಖ  ತಿರುಗಿಸಿದರು, ಮತ್ತು ಜನರಲ್ಲಿ ಮೂರ್ಖರಾದ "ಯಹೂದಿಗಳು" ಹೀಗೆಂದು ಹೇಳಿದರು, "ಅವರೇಕೆ (ನಮಾಜ್’ನಲ್ಲಿ) ತಮ್ಮ  ಹಿಂದಿನ ಕಿಬ್ಲಾದಿಂದ (ದಿಕ್ಕಿನಿಂದ)ಬೇರೆಡೆಗೆ ತಿರುಗಿಕೊಂಡರು?” ಎಂದು ಪ್ರಶ್ನಿಸುತ್ತಾರೆ. ಹೇಳಿರಿ; “ಪೂರ್ವವೂ ಪಶ್ಚಿಮವೂ ಅಲ್ಲಾಹ್’ನಿಗೇ ಸೇರಿವೆ. ಅವನು ತಾನಿಚ್ಛಿಸಿದವರಿಗೆ ಸ್ಥಿರವಾದ ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ” ಖುರ್’ಆನ್ ಸೂರ ಬಖರಃ 2 : 142. ಒಬ್ಬ ಮನುಷ್ಯ ಪೈಗಂಬರ್(ಸ) (ಅವರು  ಎದುರಿಸುತ್ತಿರುವ ಕಡೆಗೆ ಎದುರಾಗಿ) ರವರ ಜೊತೆ ಪ್ರಾರ್ಥಿಸುತ್ತಾನೆ ಮತ್ತು ಅಲ್ಲಿಂದ ಹೊರಡುವನು. ಅವನು ಕೆಲವು ಅನ್ಸಾರ್’ಗಳನ್ನು ಬೈತುಲ್ ಮುಖದ್ದಿಸ್’ನ ಕಡೆಗೆ ತಿರುಗಿ ಅಸರ್ ನಮಾಜ್ ನಿರ್ವಹಿಸುತ್ತಿರುವುದನ್ನು ಕಂಡನು, ಆಗ ಅವನು ಹೇಳಿದನು. "ನಾನು ಕಾಬಾವನ್ನು ಎದುರಿಸುತ್ತಿರುವ ಅಲ್ಲಾಹನ ದೂತರೊಂದಿಗೆ ಪ್ರಾರ್ಥಿಸಿದ್ದೇನೆಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಎಂದನು. ಹಾಗಾಗಿ ತಕ್ಷಣ ಎಲ್ಲಾ ಜನರು ತಮ್ಮ ಪ್ರಾರ್ಥನಾ ದಿಕ್ಕನ್ನು ಕಿಬ್ಲಾದಕಡೆಗೆ ತಿರುಗಿಸಿ ಕೊಂಡರು. ಸಹಿಹ್ ಅಲ್ ಬುಖಾರಿ, ಸಂಪುಟ 1 392. [4]

   ಉಲ್ಲೇಖಗಳು

[1] http://www.missionislam.com/knowledge/Kaaba.htm

[2] http://www.missionislam.com/knowledge/Kaaba.htm

[3] http://quran.com

[4] http://tsmufortruth.wordpress.com/2011/09/14/hadith-of-the-day-251/

615 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ