ಕಲಿಮ ಶಹದ (ಸಾಕ್ಷ್ಯ)

 

‘ಶಹಾದತ್’ ಇದು ಅರಬೀ ಭಾಷೆಯ ಶಬ್ದವಾಗಿದೆ. ಇದರ ಅರ್ಥ ‘ಸಾಕ್ಷ್ಯವಹಿಸುವುದು’ ಎಂದಾಗಿದೆ,  ಅಂದರೆ ಅಲ್ಲಾಹ್’ನು ಒಬ್ಬನೇ ಮುಹಮ್ಮದ್(ಸ)ರು ಅವನ ಪೈಗಂಬರರು ಎಂದು. ಈ ಕಲಿಮಾ ಇಸ್ಲಾಮ್ ಧರ್ಮದ ಅಡಿಪಾಯವಾಗಿದೆ. ಇಸ್ಲಾಮಿನ ಎಲ್ಲಾ ನಂಬಿಕೆಗಳನ್ನು, ಕಾರ್ಯಗಳನ್ನು, ಅಧಿನಿಯಮಗಳ ಸ್ಥಾಪನೆಯು ಇದೇ ಕಲಿಮಾದ ಮೇಲಿಡಲಾಗುತ್ತದೆ.

 ಕಲಮಾ ಶಹದದ ಎರಡು ಭಾಗಗಳಿವೆ;

1ಅಲ್ಲಾಹ್’ನು ಒಬ್ಬನೇ ಎಂಬುದನ್ನು ತಿಳಿಯುವುದು ( ಇದನ್ನು ಕಲಿಮಾ ಎ ತೌಹೀದ್ ಎಂದು ಕರೆಯುವರು )

2ಮುಹಮ್ಮದ್(ಸ)ರನ್ನು ಪೈಗಂಬರರಾಗಿ ಒಪ್ಪುವುದು (ಇದನ್ನು ಕಲಿಮಾ ಎ ರಿಸಾಲ ಎನ್ನುವರು)


ಪರಿವಿಡಿ


ಶಹದದ ಪದಗಳು


   ಕಲಿಮ ಶಹದ ಇಸ್ಲಾಮಿನ ಮೊದಲ ಆಧಾರ ಸ್ಥಂಭವಾಗಿದೆ (ಸಹಿ ಬುಖಾರಿ 8) ಕಲಿಮ ಶಹದದ 2ಭಾಗಗಳಿವೆ ಅವುಗಳನ್ನು ಶಹಾದತೈನ್ ಎಂದು ಕರೆಯುತ್ತಾರೆ, ಅಂದರೆ ಸಾಕ್ಷ್ಯಗಳು.

  ಮೊದಲನೇ ಸಾಕ್ಷ್ಯ:  “ ಅಶ್’ಹದು ಅಲ್’ಲಾ ಇಲಾಹ” (ಅಲ್ಲಾಹ್’ನಲ್ಲದೆ ಇತರ ಯಾರ ಆರಾಧನೆಗೆ ಅರ್ಹರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ)

  ಎರಡನೇ ಸಾಕ್ಷ್ಯ: “ ವ ಅಶ್’ಹದು ಅನ್ನ ಮುಹಮ್ಮದರ್ ರಸೂಲುಲ್ಲಾಹ್” ( ಮುಹಮ್ಮದ್(ಸ) ಅಲ್ಲಾಹ್’ನ ದಾಸ ಹಾಗು ಪೈಗಂಬರರು ಎಂದು ನಾನು ಸಾಕ್ಷ್ಯವಹಿಸುತ್ತೆನೆ)


 ಸಾಕ್ಷ್ಯದ ಮೊದಲ ಭಾಗ


o             ಲಾಇಲಾಹ ಇಲ್ಲಲ್ಲಾಹ್’ದ ಸ್ಥಂಭಗಳು

o             ಲಾಇಲಾಹ ಇಲ್ಲಲ್ಲಾಹ್’ದ ಶರತ್ತುಗಳು
 

  • ಜ್ಞಾನ
  • ವಿಶ್ವಾಸ(ನಂಬಿಕೆ)
  • ಏಕಚಿತ್ತತೆ
  • ನೈಜತೆ
  • ಪ್ರೀತಿ
  • ಆಜ್ಞಾ ಪಾಲನೆ
  • ಸ್ವೀಕರಿಸುವುದು
  • ಅನ್ಯ ಆರಾಧ್ಯ ವಸ್ತುಗಳನ್ನು ಅಲ್ಲಗಳೆಯುವುದು
  • ಲಾ ಇಲಾಹ ಇಲ್ಲಲ್ಲಾಹ್’ದ ಆಧಾರ ಸ್ಥಂಭಗಳು;
ಅಲ್ಲಾಹ್’ನ ಏಕದೇವತ್ವವನ್ನು ಸ್ವೀಕರಿಸುವುದು, ಇದರಲ್ಲಿ ಎರಡು ವಿಷಯಗಳು ಸಮ್ಮಿಲಿತವಾಗಿವೆ (ಸೇರಿಕೊಂಡಿವೆ) ಸಾಕ್ಷ್ಯವಹಿಸುವುದು ಹಾಗೂ ನಿರಾಕರಿಸುವುದು ಇವೆರಡೂ ಈ ಸ್ಥಂಭದ ವಿಭಾಗಗಳಾಗಿವೆ.

 ಸ್ಥಂಭ 1ನಿರಾಕರಿಸವುದು; ‘ಲಾ ಇಲಾಹ’ (ಯಾರೂ ಆರಾಧನೆಗೆ ಅರ್ಹರಿಲ್ಲ) ಯಾರೂ ಆರಾಧನೆಗೆ ಅರ್ಹರಿಲ್ಲ ಎಂಬುದನ್ನು ನಿರಾಕರಿಸುವುದು,

 ಆರಾಧನೆ; ‘ಇಲ್ಲಲ್ಲಾಹ್’ (ಅಲ್ಲಾಹ್’ನಲ್ಲದೆ) ಅಲ್ಲಾಹ್’ನಲ್ಲದೆ ಇತರ ಯಾರೂ ಆರಾಧೆನೆಗೆ ಅರ್ಹರಿಲ್ಲ ಎಂದು ಸಾಕ್ಷ್ಯವಹಿಸಿ ಅದರಂತೆಯೇ ವಿಶ್ವಾಸವಿರಿಸುವುದು.

  ಲಾ ಇಲಾಹ ಇಲ್ಲಲ್ಲಾಹ್’ದ ಶತ್ತುಗಳು;

 ಲಾ ಇಲಾಹ ಇಲ್ಲಲ್ಲಾಹ್’ದ 8 ಶತ್ತುಗಳಿವೆ ಅದರ ಜ್ಞಾನವನ್ನು ತಿಳಿಯುವುದು ಅತೀ ಅವಶ್ಯಕವಾಗಿದೆ.

1.            ಜ್ಞಾನ ; ಲಾಭದಾಯಕ ಹಾಗೂ ಈ ಕಲಿಮಾದ ಅರ್ಥ ಮತ್ತು ಧೃಢ ಸಂಕಲ್ಪದ ಜ್ಞಾನವಿರುವುದು ಅವಶ್ಯಕ ಅಜ್ಞಾನದ ವಿರುದ್ಧವಾಗಿ ಜ್ಞಾನವಿರಬೇಕು.

2.            ವಿಶ್ವಾಸ ; ಇತಂಹಾ ವಿಶ್ವಾಸದೊಂದಿಗೆ ಜ್ಞಾನ ಪಡೆದಿರಬೇಕು ಅಜ್ಞಾನದ ಅನುಮಾನದ ಅವಸ್ಥೆಯೇ ಉಂಟಾಬಾರದು ಅಂತಹಾ ವಿಶ್ವಾಸ ಜ್ಞಾನದೊಂದಿಗಿರಬೇಕು

3.            ಚಿತ್ತತೆ ; (ಪೂರ್ಣ ಸತ್ಯತೆ) ಈ ಕಲಿಮಾದ ಮೇಲೆ ಸಂಪೂರ್ಣ ವಿಶ್ವಾಸವನ್ನು ಇಟ್ಟು ಇದರೊಂದಿಗೆ ಸಂಪೂರ್ಣ ಚಿತ್ತತೆಯನ್ನು ಹೊಂದಿರಬೇಕು.

4.            ನೈಜತೆ ; ಕಲಿಮಾ ಹೇಳುವುದರಲ್ಲಿ ನೈಜತೆ ಇರಬೇಕು, ಅದು ಸುಳ್ಳಿನ ವಿರುದ್ಧವಾಗಿ.

5.            ಪ್ರೀತಿ ; ಕಲಿಮಾ ಹಾಗೂ ಅದರ ಅರ್ಥವನ್ನು ಪ್ರೀತಿಯಿಂದ ಒಪ್ಪಿಕೊಳ್ಳಬೇಕು ಅದರಿಂದ ಸಂತೃಪ್ತನಾಗಿರಬೇಕು.

6.            ಆಜ್ಞಾಪಾಲನೆ ; ಕಲಿಮಾ ಹಾಗೂ ಇದರ ಆಜ್ಞೆಗಳನ್ನು ಪಾಲನೆ ಮಾಡಬೇಕು.

7.            ಒಪ್ಪಿಗೆ ; (ಸ್ವೀಕರಿಸುವುದು) ಈ ಕಲಿಮಾ ಯಾವೆಲ್ಲಾ ಆಜ್ಞೆಗಳನ್ನು ಮಾಡುತ್ತದೆಯೋ ಅವುಗಳನ್ನು ನಾಲಗೆ ಹಾಗೂ ಮನಸ್ಸಿನಿಂದ ಒಪ್ಪಿಕೊಳ್ಳುವುದು.

8.            ಅನ್ಯ ಆರಾಧ್ಯ ವಸ್ತುಗಳನ್ನು ನಿರಾಕರಿಸುವುದು ; ಅಲ್ಲಾಹ್’ನಲ್ಲದೆ ಇತರ ಯಾವ ಜೀವಿಯನ್ನೂ, ವಸ್ತುವನ್ನು, ಆರಾಧಿಸಲಾಗುತ್ತದೆಯೋ ಅವೆಲ್ಲವನ್ನು ತಾಗೂತ್ ಅಥವ ಅನ್ಯ ಆರಾಧ್ಯಗಳು ಎಂದು ಕೆಯುವರು, ಕಲಿಮಾದ ಶರತ್ತೆಂದರೆ ಈ ಎಲ್ಲಾ ತಾಗೂತ್’ಗಳನ್ನು(ಅನ್ಯ ಆರಾಧ್ಯರನ್ನು ನಿರಾಕರಿಸಬೇಕು. ಅಲ್ಲಾಹ್’ನಲ್ಲದೇ ಇತರ ಎಲ್ಲಾ ಮಿಥ್ಯ ಆರಾಧ್ಯರನ್ನು ಹಾಗೂ ಅವುಗಳೊಂದಿಗೆ ಪಾಲಿಸುತ್ತಿರುವ ಪಾಲನೆಗಳನ್ನು ನಿರಾಕರಿಸುವುದು.

 

ಸಾಕ್ಷ್ಯದ ಎರಡನೇ ಭಾಗ


  ‘ಮುಹಮ್ಮದುರ್ ರಸೂಲುಲ್ಲಾಹ್’ ಮುಹಮ್ಮದ್(ಸ)ರು ಅಲ್ಲಾಹ್’ನ ಕಡೆಯಿಂದ ಕಳುಹಿಸಲ್ಪಟ್ಟ ಅಂತಿಮ ಪೈಗಂಬರ್(ಸಂದೇಶವಾಹಕ)ರಾಗಿದ್ದಾರೆ, ಎಂದು ವಿಶ್ವಾಸವಿರಿಸುವುದು, ಹಾಗೂ ಆರಾಧನೆಯ ಶೈಲಿಯು ಅವರು ತೊರಿಸಿದ ಅಥವ ಮಾರ್ಗದರ್ಶಿಸಿದ ರೀತಿಯಲ್ಲೇ ಇರಬೇಕು. ಅದು ಅವರು ತೋರಿರುವುದರಿಂದ ಹೋಲಿಕೆಯಾಗುವಂತಿರಬೇಕು ಅದನ್ನೇ ಅನುಸರಿಸಬೇಕು.

  ಈ ಸಾಕ್ಷ್ಯದ ಅರ್ಥ

1.            ಮುಹಮ್ಮದ್(ಸ)ರ ಎಲ್ಲಾ ಆಜ್ಞೆಗಳನ್ನು ಪಾಲಿಸುವುದು ಅವರಂತೇಯೇ ಅನುಸರಿಸುವುದು.

2.            ಯಾವ ಮಾತಿನಿಂದ ಮುಹಮ್ಮದ್(ಸ)ರು ನಿಷೇಧಿಸಿರುವರೊ ಅದರಿಂದ ತಮ್ಮನ್ನು ತಡೆದಿರುವುದು.

3.            ಅಲ್ಲಾಹನ ಆರಾಧನೆಯನ್ನು ಮುಹಮ್ಮದ್(ಸ)ರು ತೊರಿಸಿರುವ ರೀತಿಯಲ್ಲೇ ಮಾಡುವುದು.

4.            ಮುಹಮ್ಮದ್(ಸ)ರು ನೀಡಿದ ಎಲ್ಲಾ ಸಂದೇಶಗಳನ್ನು ಸತ್ಯವೆಂದು ಸ್ವೀಕರಿಸುವುದು ಹಾಗೂ ಅನುಸರಣೆ ಮಾಡುವುದರೊಂದಿಗೆ ವಿಶ್ವಾಸವಿರಿಸುವುದು.

5.            ಮುಹಮ್ಮದ್(ಸ)ರು ಅಲ್ಲಾಹ್’ನ ದಾಸರು ಅವರು ಅಲ್ಲಾಹನ ಆರಾಧನೆ ಮಾಡುವವರು, ಅವರ ಆರಾಧನೆಯನ್ನು ಯಾರೂ ಮಾಡುವಂತಿಲ್ಲ
 


ನೋಡಿರಿಅಲ್ಲಾಹ್, ಮುಹಮ್ಮದ್(ಸ), ಇಸ್ಲಾಮಿನ ಸ್ಥಂಭಗಳು, ನಮಾಜ್, ಜಕಾತ್, ರೋಜಾ(ಉಪವಾಸ), ಹಜ್, ಇಲ್ಲಲ್ಲಾಹ್’ದ ಶರತ್ತುಗಳು, ಆರಾಧನೆ,  ಇತ್ಯಾದಿ.


ಸಂಧರ್ಭ

ಶರಹ್ ಉಸೂಲುಲ್ ಇಮಾನ್ : ಶೇಖ್ ಮುಹಮ್ಮದ್ ಬಿನ್ ಸಾಲೆಹ್ ಉತ್ತೈಮಿ.

931 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ