ಉಪವಾಸದ ಕೆಲವು ಆಚರಣೆಗಳು (ಅವುಗಳ ಅನುಸರಣೆಯು ಐಚ್ಚಿಕವಾಗಿದೆ)

 
  ರಮಜಾನ್ ತಿಂಗಳ ಉಪವಾಸವು ಇಸ್ಲಾಮಿನ ಮೂಲ ಆಧಾರ ಸ್ಥಂಭಗಳಲ್ಲಿ ಒಂದಾಗಿದೆ, ಸೌಮ್ (صوم ) ಎಂಬುದರ ಅರ್ಥವೇ ಉಪವಾಸ. ಉಪವಾಸವನ್ನು  ಅರಬೀ ಭಾಷೆಯಲ್ಲಿ ಸೌಮ್ (صوم  ) ಎನ್ನುತ್ತಾರೆ. ಸೌಮ್ ಪದದ ಬಹುವಚನ ಸಿಯಾಮ್ (صيام ) ಆಗಿದೆ. ಸೌಮ್ ಎಂದರೆ ಒಂದೇ ದಿನದ ಉಪವಾಸ, ಸಿಯಾಮ್ (صيام  ) ಎಂದರೆ ಎರಡಕ್ಕಿಂತ ಹೆಚ್ಚು ಹಾಗೂ ಬಹುದಿನಗಳ ಉಪವಾಸಗಳು ಎಂದಾಗಿದೆ. ಸಿಯಾಮ್ ಶಬ್ದವು ನಸರ(نصر  ) ಭಾಗದಿಂದ ಸಾಮ ಯಸೂಮು(صام يصوم ) ಎಂಬ ಮೂಲ ಶಬ್ದದಿಂದ ಬಂದಿದೆ. ರೊಜಾ ಶಬ್ದದ ಅರ್ಥ ಉಪವಾಸವಿರುವುದು ಅಥವ ತಡೆಯುವುದೆಂದಾಗಿದೆ, ಅಂದರೆ ಅನ್ನಪಾನೀಯ, ಅನಾವಶ್ಯಕ ಮಾತುಕತೆ, ಶಾರೀರಿಕ ಸಂಭೋಗದಿಂದ ತಮ್ಮನ್ನು ತಡೆದಿಡುವುದು. (ಅಲ್ ಖಾಮ್ಮಸುಲ್ ಮುಹೀತ್ : 1020, ಗರಿಬುಲ್ ಹದೀಸ್ : 1/325) 
   ರೊಜಾ ಅಥವ ಉಪವಾಸದ ಧಾರ್ಮಿಕ ಅರ್ಥ (ಇಸ್ಲಾಮಿನಲ್ಲಿ ಅರ್ಥ) ‘ ವಿಶೇಷವಾದ ಷರತ್ತುಗಳೊಂದಿಗೆ, ವಿಶೇಷ ದಿನಗಳಲ್ಲಿ ವಿಶೇಷ ವಸ್ತುಗಳನ್ನು ಅಂದರೆ ಅನ್ನಪಾನೀಯ, ಕೆಡುಕು, ಅಶ್ಲೀಲತೆ, ಅಧರ್ಮಿಯ ಕಾರ್ಯಗಳು ಹಗಲಿನ ಸಮಯದಲ್ಲಿ ಶಾರೀರಿಕ ಸಂಭೋಗದಿಂದ ತಮ್ಮನ್ನು ತಡೆದಿಡುವುದನ್ನು ರೊಜಾ ಅಥವ ಉಪವಾಸವೆನ್ನುವರು. ರೊಜಾ ಅಧಿಕ ಸಾಮಾನ್ಯ ಪಾರಿಭಾಷೆಗಾಗಿ ಇದೊಂದು ವ್ಯಾಪಕ ಶಬ್ದವಾಗಿದೆ. ಅಲ್ಲಾಹ್’ನನ್ನು ಯಾರು ಸಂಪ್ರೀತಿಸುವನೋ ಅವರೆಲ್ಲರಿಗೂ, ಯಾರು ಅವನೊಂದಿಗೆ ಮಾತನಡುವರೋ ಅವನಿಂದ ಸಂತುಷ್ಟರಾಗಿರುವರೋ ಬಾಹ್ಯ ಹಾಗೂ ಆಂತರಿಕ ಎರಡರಿಂದಲೂ ಸಹ. 
 
 
ಪರಿವಿಡಿ

  ಖುರ್’ಆನ್ 

 
 “ವಿಶ್ವಾಸಿಗಳೇ, ನೀವು ಧರ್ಮನಿಷ್ಟರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ದಾಯಗೊಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳಿಸಲಾಗಿದೆ,” “(ಅವು) ಕೆಲವು ನಿಗದಿತ ದಿನಗಳು. ನಿಮ್ಮ ಪೈಕಿ (ಆ ದಿನಗಳಲ್ಲಿ) ರೋಗಿಯಾಗಿರುವವನು ಅಥವ ಪ್ರಯಾಣದಲ್ಲಿರುವವನು, ಬೇರೆ ದಿನಗಳಲ್ಲಿ ಎಣಿಕೆ ಪುರ್ತಿಗೊಳಿಸಲಿ ಮತ್ತು ತುಂಬಾ ಕಷ್ಟ ಪಟ್ಟು ಅದನ್ನು ಆಚರಿಸಬಲ್ಲವರು (ಉಪವಾಸ ಆಚರಿಸದಿದ್ದರೆ ಪರಿಹಾರವಾಗಿ ಒಬ್ಬ ಬಡವನಿಗೆ ಊಟ ನೀಡಬೇಕು. ಯಾರಾದರು ತನ್ನಿಚ್ಚೆಯಿಂದ (ಇನ್ನಷ್ಟು)ದಾನ ಮಾಡಿದರೆ ಅದು ಅವನ ಪಾಲಿಗೆ ಹಿತವಾಗಿರುವುದು. ಇನ್ನು ನೀವು ತಿಳಿದವರಾಗಿದ್ದರೆ ಉಪವಾಸ ಆಚರಿಸುವುದೇ ನಿಮ್ಮ ಪಾಲಿಗೆ ಒಳ್ಳೆಯದು”. “ರಮಜಾನ್ ತಿಂಗಳಲ್ಲೇ  ಖುರ್’ಆನನ್ನು ಇಳಿಸಿಕೊಡಲಾಯಿತು. ಅದು ಮಾನವರಿಗೆಲ್ಲ ಮಾರ್ಗದರ್ಶಿಯಾಗಿದೆ. (ಅದರಲ್ಲಿ) ಸನ್ಮಾರ್ಗದ ಸ್ಪಷ್ಟ ವಿವರಗಳಿಗೆ ಮತ್ತು ಅದು (ಸತ್ಯ-ಮಿಥ್ಯಗಳನ್ನು ಪ್ರತ್ಯೇಕಿಸುವ) ಒರೆಗಲ್ಲಾಗಿದೆ. ನಿಮ್ಮಲ್ಲಿ ಈ ತಿಂಗಳನ್ನು ಕಂಡವನು ಉಪವಾಸ ಆಚರಿಸಬೇಕು. ( ಈ ತಿಂಗಳಲ್ಲಿ) ರೋಗಿಯಾಗಿದ್ದವನು ಅಥವ ಪ್ರಯಾಣದಲ್ಲಿದ್ದವನು ಇತರ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಬೇಕು. ಅಲ್ಲಾಹ್’ನು ನಿಮಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ, ಅವನು ನಿಮ್ಮನ್ನು ಇಕ್ಕಟ್ಟಿಗೆ ಗುರಿಪಡಿಸಬಯಸುವುದಿಲ್ಲ. ನೀವು (ಉಪವಾಸಗಳ) ಸಂಖ್ಯೆಯನ್ನು ಪೂರ್ತಿಗೊಳಿಸಿ, ಅಲ್ಲಾಹ್’ನು ನಮಗೆ ಒದಗಿಸಿದ ಮಾರ್ಗದರ್ಶನಕ್ಕಾಗಿ ಅವನ ಮಹಿಮೆಯನ್ನು ಕೊಂಡಾಡಬೇಕು ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸಬೇಕೆಂದು (ಇದನ್ನು ವಿಧಿಸಲಾಗಿದೆ) (ಅಲ್ ಬಖರ : 183,184,185) 
 

  ಹದೀಸ್ 

 
     ಮುಹಮ್ಮದ್(ಸ) ಹೇಳಿದರು ; ಇಸ್ಲಾಮ್ ಧರ್ಮದ ಆಧಾರ 5 ವಿಷಯಗಳ ಮೇಲಿದೆ, ಅವು * ಅಲ್ಲಾಹ್’ನಲ್ಲದೆ ಇತರ ಯಾರು ಆರಾಧನೆಗೆ ಅರ್ಹರಿಲ್ಲ, ಮುಹಮ್ಮದ್(ಸ) ಅಲ್ಲಾಹ್’ನ ಪೈಗಬರ್ ಹಾಗೂ ದಾಸರಾಗಿದ್ದಾರೆ ಎಂದು ಸಾಕ್ಷ್ಯವಹಿಸುವುದು, * ನಮಾಜ್ ನಿರ್ವಹಿಸುವುದು, * ಜಕಾತ್ ನೀಡುವುದು, * ರಮಜಾನಿನ ಉಪವಾಸ ಆಚರಿಸುವುದು, ಹಾಗೂ * ಹಜ್ ನಿರ್ವಹಿಸುವುದು,” ( ಸಹಿಹ್ ಬುಖಾರಿ : 8 . ಸಹಿಹ್ ಮುಸ್ಲಿಮ್ : 16) 
 

ಉಪವಾಸದ ಸುನ್ನತ್’ಗಳು 

 
   ಉಪವಾಸ ಒಂದು ಮಹಾನ್ ಹಾಗೂ ಪ್ರತಿಷ್ಟಿತ ಆರಾಧನೆಯಾಗಿದೆ. ಪುಣ್ಯ ಪ್ರತಿಫಲದ ಆಕಾಂಕ್ಷೆ ಇಡುವ ಉಪವಾಸಿಗನಿಗೆ ಅವನ ಪುಣ್ಯ ಪ್ರತಿಫಲ ಅಲ್ಲಾಹ್’ನಲ್ಲದೆ ಮತ್ಯಾರೂ ತಿಳಿದಿರಲಾರರು ಮುಹಮ್ಮದ್(ಸ)ರು ಹೇಳಿದರು; ಅಲ್ಲಾಹ್’ನು ಹೇಳಿದನು: “ಆದಮನ ಸಂತತಿಯ ಸತ್ಕಾರ್ಯಗಳು ಅವನಿಗಾಗಿಯೇ ಆಗಿವೆ, ರೊಜಾ(ಉಪವಾಸ)ದ ಹೊರತು. ಏಕೆಂದರೆ ಅದು ಕೇವಲ ನನಗಾಗಿಯೇ(ಅಲ್ಲಾಹ್’ನಿಗಾಗಿಯೇ) ಆಗಿದೆ ಮತ್ತು ನಾನೇ ಅದರ ಪ್ರತಿಫಲವನ್ನು ನೀಡುವೆನು” ಇದನ್ನು ಬುಖಾರಿ : 1904. ಹಾಗೂ ಮುಸ್ಲಿಮ್ : 1151 ಗ್ರಂಥಗಳು ಉಲ್ಲೇಖಿಸಿವೆ.
   ರಮಜಾನಿನ ಉಪವಾಸವು ಧಾರ್ಮಿಕ ಆಧಾರ ಸ್ಥಂಭಗಳಲ್ಲಿ ಒಂದಾಗಿದೆ. ಮುಸ್ಲಿಮರಿಗೆ ಇದು ಅನಿವಾರ್ಯ ಹಾಗೂ ಕಡ್ಡಾಯವಾಗಿದೆ. ಹಾಗಾಗಿ ಅವನು ತನ್ನ ಉಪವಾಸಗಳನ್ನು ಸುರಕ್ಷಿಸಿಕೊಳ್ಳುವನು ಎಚ್ಚರಿಕೆಯಿಂದಿರಬೇಕು, ಅದು ಫರ್ಜ್(ಕಡ್ಡಾಯ) ಆಗಿರಲಿ ನಫಿಲ್ ಆಗಿರಲಿ, ಏಕೆಂದರೆ ಅಲ್ಲಾಹ್’ನು ಅವನಿಗೆ ಸಂಪೂರ್ಣ ಪ್ರತಿಫಲವನ್ನು ನಿಡಲೆಂದೇ ಆಗಿದೆ. 
  ಉಪವಾಸದ ಹಲವಾರು ಸುನ್ನತ್’ಗಳಿವೆ  ಅವುಗಳಲ್ಲಿ ಕೆಲವನ್ನು ನಾವು ಇಲ್ಲಿ ಉಲ್ಲೇಖಿಸಿದ್ದೇವೆ. 
  ಮೊದಲನೇಯದು; ಯಾರಾದರೊಬ್ಬ ವ್ಯಕ್ತಿಯು ಉಪವಾಸಿಗನೊಂದಿಗೆ ಬೈದರೆ ಜಗಳವಾಡಿದರೆ, ಅವನ ಕೆಟ್ಟ ವರ್ತನೆಗೆ ಒಳ್ಳೆಯತನದಿಂದ ಉತ್ತರಿಸುವುದು ಹಾಗೂ ನಾನು ಉಪವಾಸದಿಂದ ಇದ್ದೇನೆ ಎಂದು ಹೇಳುವುದು ಸುನ್ನತ್ ಆಗಿದೆ. 
  ಎರಡನೆಯದು; ಉಪವಾಸವಿರುವವನಿಗೆ ಸೆಹರಿ(ಬೆಳಗಿನ ಊಟ) ತಿನ್ನುವುದು ಸುನ್ನತ್ ಆಗಿದೆ ಏಕೆಂದರೆ ಸೆಹರಿ ಊಟ ಬರ್ಕತ್(ಹುಲುಸು)ನ ಕಾರಣವಾಗಿದೆ. 
  ಮೂರನೆಯದು; ಇಫ್ತಾರ್’ನ ವೇಳೆಯಲ್ಲಿ ಬೇಗ ಇಫ್ತಾರ್ ಮಾಡುವುದು, ಸೆಹರಿ ವೇಳೆಯಲ್ಲಿ ತಡ ಮಾಡುವುದು ಸುನ್ನತ್ ಆಗಿದೆ. 
  ನಾಲ್ಕನೆಯದು; ಇಫ್ತಾರಿನ ವೇಳೆಯಲ್ಲಿ ರುತಬ್(ಹಣ್ಣಾದ ತಾಜಾ ಖರ್ಜೂರ)ನಿಂದ ತಿನ್ನಲು ಆರಂಭಿಸುವುದು ಉತ್ತಮ ಅದು ಲಭಿಸದ್ದಿದ್ದಲ್ಲಿ ಒಣ ಖರ್ಜೂರದಿಂದ, ಅದೂ ಇಲ್ಲದಿದ್ದಲ್ಲಿ ನೀರಿನಿಂದ ಇಫ್ತಾರ್ ಆರಂಭಿಸುವುದು. 
  ಐದನೆಯದು; ಉಪವಾಸಿಗನು ಇಫ್ತಾರಿನ ವೇಳೆಯಲ್ಲಿ ಈ ದುಆ ಹೇಳುವುದು ಸುನ್ನತ್ ಆಗಿದೆ. “ಜಹ ಬಜ್ಜಮಾಉ ವಬ್ಬತಲ್ಲತಿಲ್ ಉರುಕೊ ವ ಸಬ್ಬತಲ್ ಅರ್ಜೊ ಇನ್’ಶಾಅಲ್ಲಾ’ಹ್” 
" ذهب الظمأ ، وابتلت العروق ، وثبت الأجر إن شاء الله "   
‘ಬಾಯಾರಿಕೆ  ನೀಗಿತು, ನರಗಳು ಹಸಿಯಾದವು ಹಾಗೂ ಪ್ರತಿಫಲ ನಿರ್ಣಯವಾಯಿತು ಅಲ್ಲಾಹ್’ನು ಬಯಸಿದರೆ.’ 
  ಆರನೆಯದು; ಉಪವಾಸಿಗನಿಗೆ ಅತ್ಯಧಿಕ ಪ್ರಾರ್ಥನೆ ಮಾಡುವುದು ಉತ್ತಮ ಹಾಗೂ ಐಚ್ಚಿಕವಾಗಿದೆ. ಏಕೆಂದರೆ ಮುಹಮ್ಮದ್(ಸ)ರು ಹೇಳಿದರು 3 ಜನರ ಪ್ರಾರ್ಥನೆ ಸ್ವಿಕಾರವಾಗದೆ ಇರುವುದಿಲ್ಲ. * ನ್ಯಾಯ ಪ್ರಿಯ ಇಮಾಮ್(ಮುಖಂಡ) * ಉಪವಾಸಿಗ ಅವನು ಇಫ್ತಾರ್ ಮಾಡುವವರೆಗೂ * ಅನ್ಯಾಯ ಪೀಡಿತ ವ್ಯಕ್ತಿ. ಇದು ಅಹಮದ್ : 8043 ರಲ್ಲಿ ಉಲ್ಲೇಖಿಸಿದೆ ಹಾಗೂ ಮುಸ್ನದ್ ಅಹಮದ್’ನ ಅನ್ವೇಷಕರು ಅದರ ವಿಭಿನ್ನ ವಂಶವೃಕ್ಷ ಹೇಳಿಕೆಗಳ ಹಾಗೂ ಸಾಕ್ಷಿಗಳ ಆಧಾರದಲ್ಲಿ ಸರಿ ಎಂದು ಹೇಳಿದ್ದಾರೆ. 
  ಇಮಾಮ್ ನವವಿ ಹೇಳುವರು; “ಉಪವಾಸಿಗನು ತನ್ನ ಉಪವಾಸದ ಅವಸ್ಥೆಯಲ್ಲಿ ಇಹ ಪರದ ಮಹತ್ವಪೂರ್ಣ ಅಗತ್ಯತೆಗಳನ್ನು ತನಗಾಗಿ ತನ್ನವರಿಗಾಗಿ ಸರ್ವ ಮುಸ್ಲಿಮರಿಗಾಗಿ ಪ್ರಾರ್ಥಿಸುವುದು ಒಳಿತು” (ಆಲಾ ಮಜ್ಮುಅ/6/375 ದಿಂದ ಅಂತ್ಯವಾಗಿದೆ) 

ರಮಜಾನ್ ಉಪವಾಸದ ಸುನ್ನತ್’ಗಳು

 ರಮಜಾನಿನ ಉಪವಾಸಗಳಾದರೆ ಈ ಕೆಳಗಿನ ಸುನ್ನತ್’ಗಳು ಒಳಿತಾಗಿವೆ. 
ಖುರ್’ಆನ್ ಪಠಣ ಹಾಗೂ ಅಲ್ಲಾಹ್’ನ ಸ್ಮರಣೆಗಾಗಿ ಮಸ್’ಜಿದ್’ಗಳಲ್ಲಿ ಕುಳಿತಿರುವುದು. 
ರಮಜಾನಿನ ಅಂತಿಮ ಭಾಗದಲ್ಲಿ ಎತಿಕಾಫ್’ನಲ್ಲಿ ಕುಳಿತಿರುವುದು. 
ತರಾವಿಹ್ ನಮಾಜ್. 
ಅತ್ಯಧಿಕವಾಗಿ ದಾನ ಹಾಗೂ ಸತ್ಕಾರ್ಯಗಳನ್ನು ಮಾಡುವುದು.
ಖುರ್’ಆನ್ ಪಠಿಸುವುದು’
 ಬುಖಾರಿ (ಹದಿಸ್:6) ಹಾಗೂ ಮುಸ್ಲಿಮ್ (ಹದಿಸ್ : 2308)ರಲ್ಲಿ ಇಬ್ನೆ ಅಬ್ಬಾಸ್ (ರ ಅ) ವರದಿಯಾಗಿದೆ. ಅವರು ಹೇಳುವರು. “ ಪೈಗಂಬರರು ದಾನಶೀಲರಲ್ಲಿಯೇ ಅತ್ಯಂತ ದಾನಶೀಲರಾಗಿದ್ದರು, ತಾವು ರಮಜಾನಿನಲ್ಲಿ ಅಧಿಕ ದಾನ ಶೀಲರಾಗುತ್ತಿದ್ದರು.  ಜಿಬ್ರಯೀಲ್ (ಅ ಸ)ರೊಂದಿಗೆ ರಮಜಾನಿನ ಪ್ರತಿ ರಾತ್ರಿಯಲ್ಲೂ ಭೇಟಿಯಾಗುತ್ತಿದ್ದರು, ಆಗ ಜಿಬ್ರಯೀಲರು ಪೈಗಂಬರರಿಗೆ ಖುರ್’ಆನ್ ಓಡಿಸುತ್ತಿದ್ದರು, ಆಗ ತಾವು ಬೀಸುವ ಗಾಳಿಗಿಂತಲೂ ಅಧಿಕವಾಗಿ ಒಳಿತಿನ ಕಾರ್ಯಗಳಲ್ಲಿ ದಾನಶೀಲತೆಯನ್ನು ಪ್ರದರ್ಶಿಸುತ್ತಿದ್ದರು. 
  ಹಾಗಾಗಿ ನಮ್ಮ ಅಮೂಲ್ಯ  ಸಮಯವನ್ನು ಹೆಚ್ಚು ಮಾತನಾಡುವುದರಲ್ಲಿ, ಅಧಿಕವಾಗಿ ಹಾಸ್ಯ ಮಾಡುವುದರಲ್ಲಿ ಹಾಳು ಮಾಡಬಾರದು. ಅದು ನಮಗೆ ಲಾಭವೂ ಅಲ್ಲ, ಒಳ್ಳೆಯದೂ ಅಲ್ಲ, ಅಲ್ಲದೆ ಅದು ಉಪವಾಸದ ಮೇಲೆ ಪ್ರಭಾವ ಬೀರಬಹುದು, ಮತ್ತು ತನ್ನ ಮುಖ್ಯವಾದ ಚಿಂತೆ ಒಳ್ಳೆಯ ಊಟ ಪಾನೀಯಗಳೆಡೆಗೆ ಸೆಳೆಯುತ್ತದೆ. ಏಕೆಂದರೆ ಈ ಎಲ್ಲಾ ಕಾರ್ಯಗಳು ಆತನನ್ನು ಒಳ್ಳೆಯ ಕಾರ್ಯಗಳಿಂದ ಸತ್ಕರ್ಮಗಳಿಂದ ತಡೆಯುತ್ತವೆ. 
 

 ನೋಡಿರಿ 

    ನಮಾಜ್, ರೊಜಾ(ಉಪವಾಸ), ಜಕಾತ್, ಹಜ್, ತೌಹೀದ್, ತರಾವಿಹ್, ಇತ್ಯಾದಿಗಳು. 
 

 ಸಂಧರ್ಭ 

807 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ