ಇಸ್ಲಾಮಿನ ಸದ್ಗುಣಗಳು

   ಇಸ್ಲಾಮಿನ ಸದ್ಗುಣಗಳನ್ನು ಲೇಖನಿಯಿಂದ ಸುತ್ತುವರೆಯುವುದು ಅಸಾಧ್ಯ, ಈ ಧರ್ಮದ ಒಳಿತುಗಳನ್ನು ಹಾಗೂ ಶ್ರೇಷ್ಟತೆಗೆಳನ್ನು ಹೊಗಳುವ ಸಾಮರ್ಥ್ಯ ಶಬ್ದಗಳಿಗಿಲ್ಲ. ಇದು ಕೇವಲ ಅಲ್ಲಾಹ್’ನ ಧರ್ಮವಾಗಿದೆ. ಯಾವ ರೀತಿ ನಮ್ಮ ದೃಷ್ಟಿಯು ಅಲ್ಲಾಹ್’ನನ್ನು  ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲವೋ ಅಂತೆಯೇ ಅಲ್ಲಾಹ್’ನ ಶರಿಯತ್(ಕಾನೂನು ನಿಯಮಗಳು)ಗಳ ಆದರ್ಶಗಳನ್ನು ಲೇಖನಿಯಿಂದ ಸೆರೆಹಿಡಿಯುವುದು ಅದಕ್ಕೆ ಅಸಾಧ್ಯವಾಗಿದೆ.

  ಇಬ್ನೆ ಖಯ್ಯೀಮ್(ರ ಅ) ಹೇಳುವರು, “ನೀವು ಈ ನೇರ ಸರಳ ಧರ್ಮ ಹಾಗೂ ಮುಹಮ್ಮದ್(ಸ)ರ ನಿಯಮಾವಳಿಗಳ ಅನುಪಮ ಹಾಗೂ ಅದ್ವಿತೀಯ ನಿಗೂಢತೆಗಳಲ್ಲಿ ಚಿಂತನೆ ನಡೆಸಿದರೆ, ಮತ್ತು ಮುಹಮ್ಮದ್(ಸ)ರ ನಿಯಮಗಳ ಒಳಿತು ಹಾಗೂ ವೈಶಿಷ್ಟ್ಯಗಳನ್ನು ನಾವು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ, ಮತ್ತು ಅದರ ಒಳಿತುಗಳ ಸಂಪೂರ್ಣ ಜ್ಞಾನವನ್ನು ಕೆವಲ ವಾಚನದಿಂದ ಹೇಳಲು ಸಾಧ್ಯವಿಲ್ಲ, ಅಲ್ಲದೆ ಬುದ್ಧಿವಂತರ ಬುದ್ಧಿಯೂ ಸಹ ಅದರ ಉತ್ತುಂಗತೆಯನ್ನು ಅಂದಾಜಿಸಲಾರದು. ಅವರಲ್ಲಿನ ಎಲ್ಲಾ ಬುದ್ಧಿವಂತರ ಬುದ್ಧಿ ಒಂದುಗೂಡಿದರೆ, ವಿದ್ವಾಂಸರು ಹಾಗೂ ಸಂಪೂರ್ಣ ಬುದ್ಧವಂತರು ವಿಚಾರ ಮಾಡುವುದೇನೆಂದರೆ. ಅವರೆಲ್ಲರು ಇಸ್ಲಾಮಿನ ವೈಶಿಷ್ಟ್ಯತೆಗಳನ್ನು ಹಾಗೂ ಒಳಿತುಗಳ ಸಂಪೂರ್ಣ ಜ್ಞಾನ ಪಡೆದು ಅದರ ಶ್ರೇಷ್ಟತೆಯ ಸಾಕ್ಷ್ಯನೀಡಿ, ಈ ಪ್ರಪಂಚವೇ ಇಸ್ಲಾಮಿ ನಿಯಮಗಳಿಗಿಂತ ಹೆಚ್ಚು ಸಂಪೂರ್ಣವಾಗಿ ಮತ್ತು ಇದಕ್ಕಿಂತ ಹೆಚ್ಚಿನ ಸ್ವಚ್ಛ ಹಾಗೂ ಮಹಾಶರಿಯತ್’ನ ಬಾಗಿಲೂ ಸಹ ತಟ್ಟಲಾಗಿಲ್ಲ ಎಂದರೆ ನೀವೇ ಊಹಿಸಿ ಇದರ ವೈಶಿಷ್ಟ್ಯತೆಗಳ ಅಂದಾಜು ಎಲ್ಲಿಯವರೆಗೆ ಹೇಗಿರಬಹುದೆಂದು. 

   ಪೈಗಂಬರರು ಯಾವುದೇ ಸಾಕ್ಷಿ ಹಾಗೂ ತರ್ಕವನ್ನು ತರದಿದ್ದರೂ, ಈ ಮೇಲಿನ ತರ್ಕ ಹಾಗೂ ಸಾಕ್ಷಿಯೇ ಅಲ್ಲಾಹ್’ನ ಕಡೆಯಿಂದ ಬಂದ ಧರ್ಮವೆಂಬುದಕ್ಕೆ ಸಾಕಾಗಿತ್ತು. ಇದು ಅಲ್ಲಾಹ್’ನಿಗೆ ಇಷ್ಟವಾದ ಧರ್ಮವಾಗಿದೆ, ಹಾಗೂ ಸೃಷ್ಟಿಯಲ್ಲಿರುವ ಸಕಲವಸ್ತುಗಳೂ ಅಲ್ಲಾಹ್’ನ ಸಾಕ್ಷಿಯನ್ನು ನೀಡುತ್ತಿವೆ.  ಸೃಷ್ಟಿಯ ಎಲ್ಲಾ ವಸ್ತುಗಳು ಅಲ್ಲಾಹ್’ನ ಸಂಪೂರ್ಣ ಜ್ಞಾನ, ಅವನ ರಹಸ್ಯತೆ, ಅತ್ಯಧಿಕ ದಯೆ ಕರುಣೆ, ಅದರ ಪರಿಣಾಮಗಳ, ಪ್ರತಿಫಲಗಳ ಮಾಹಿತಿ, ಮುಂತಾದವುಗಳ ಸಾಕ್ಷಿ ನೀಡುತ್ತವೆ.

   ಸತ್ಕಾರ್ಯ ಹಾಗೂ ಉಪಕಾರ, ಕಾಣುವ ಕಾಣದಿರುವ ಸಂಪೂರ್ಣ ಜ್ಞಾನ, ನಿಯಮಗಳ ಮಾಹಿತಿ ನೀಡಿದನು, ಮತ್ತು ಅಲ್ಲಾಹನ  ಒಳ್ಳೆಯ ಹಾಗೂ ಮಹಾವರದಾನವೆಂದರೆ, ಅವನು ತನ್ನ ಧರ್ಮವಾದ ಇಸ್ಲಾಮಿನಿಂದ ಮನುಷ್ಯನಿಗೆ ನಿದರ್ಶನಗಳನ್ನು ಮಾರ್ಗದರ್ಶನವನ್ನು ನೀಡಿದನು, ಮತ್ತು ಜನರನ್ನು ಅದರ ಯೋಗ್ಯರನ್ನಾಗಿಸಿದನು, ಅವರಿಗಾಗಿ ಇಸ್ಲಾಮ್’ನ್ನು ಇಚ್ಛಿಸಿದನು, ಇದೇಕಾರಣದಿಂದ ಅಲ್ಲಾಹ್’ನು ತನ್ನ ದಾಸರಿಗೆ ಉಪಕಾರ ಮಾಡುವುದರೊಂದಿಗೆ ದಾಸರಿಗೆ ಇಸ್ಲಾಮಿನ ನಿದರ್ಶನವನ್ನು ನೀಡಿದನು. ಅಲ್ಲಾಹ್’ನು ಹೇಳಿದನು; “ಅಲ್ಲಾಹ್’ನು ವಿಶ್ವಾಸಿಗಳ ನಡುವೆ ಅವರಲ್ಲೇ ಒಬ್ಬರನ್ನು ದೂತರಾಗಿ ನೇಮಿಸುವ ಮೂಲಕ ಉಪಕಾರ ಮಾಡಿರುವನು. ಅವರು(ದೂತರೆ) ಅವರಿಗೆ ಅವನ (ಅಲ್ಲಾಹ್’ನ) ವಚನಗಳನ್ನು ಓದಿ ಕೇಳಿಸುತ್ತಾರೆ, ಅವರನ್ನು ಸಂಸ್ಕರಿಸುತ್ತಾರೆ, ಮತ್ತು ಅವರಿಗೆ ಗ್ರಂಥ ಹಾಗೂ ಯುಕ್ತಿಯ ಜ್ಞಾನವನ್ನು ನೀಡುತ್ತಾರೆ. ಇದಕ್ಕೆ ಮುನ್ನ ಅವರು (ವಿಶ್ವಾಸಿಗಳು) ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದರು” (ಅಲ್ ಇಮ್ರಾನ್ 3 : 164)

   ಮತ್ತು ಅಲ್ಲಾಹ್’ನು ತನ್ನ ದಾಸರಿಗೆ ಪರಿಚಯವನ್ನು ನೀಡುತ್ತಾ, ತನ್ನ ಮಹಾ ವರದಾನಗಳನ್ನು ಪ್ರಾಪ್ತಿಸುತ್ತಾ ಆ ವರದಾನಗಳ ಪ್ರತಿಯಾಗಿ ಅವರ ಮೇಲೆ ಧನ್ಯವಾದಗಳನ್ನು ಪ್ರಾಸ್ತಾಪಿಸುತ್ತಾ ಹೇಳುವನು. “ಇಂದು ನಾನು ನಿಮ್ಮ ಧರ್ಮವನ್ನು ನಿಮಗಾಗಿ ಪೂರ್ಣಗೊಳಿಸಿದ್ದೇನೆ” (ಅಲ್ ಮಾಇದ 5 : 3)

  ಈ ಧರ್ಮದ ಅಂಗವಾಗಿ ಅಲ್ಲಾಹ್’ನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಇಸ್ಲಾಮ್ ಧರ್ಮದ ಕೆಲವು ವೈಶಿಷ್ಟ್ಯತೆಗಳನ್ನು ಸಂಕ್ಷಿಪ್ತವಾಗಿ ವರ್ಣಿಸುತ್ತಿದ್ದೇವೆ.

ಪರಿವಿಡಿ

   

     ಇಸ್ಲಾಮ್ ಅಲ್ಲಾಹ್’ನ ಧರ್ಮವಾಗಿದೆ

   ಇದು ಅಲ್ಲಾಹ್’ನು ತನಗಾಗಿ ಇಚ್ಛಿಸಿದ ಅದೇ ಧರ್ಮವಾಗಿದೆ. ಅಲ್ಲಾಹ್’ನು ಪೈಗಂಬರರಿಗೆ ಇದನ್ನು ನೀಡಿ ಕಳುಹಿಸಿದನು, ಮತ್ತು ತನ್ನ ಸೃಷ್ಟಿಗಳಿಗೆ ಇದರ ಮೂಲಕ ತನ್ನನ್ನು ಆರಾಧಿಸುವಂತೆ ಆದೇಶೀಸಿದನು. ಹೇಗೆ ಸೃಷ್ಟಿಕರ್ತ ಹಾಗೂ ಸೃಷ್ಟಿಗಳ ನಡುವೆ ಸಮಾನತೆ ಸಾಧಿಸಲು ಸಾಧ್ಯವಿಲ್ಲವೋ ಹಾಗೆಯೇ ಸೃಷ್ಟಿಕರ್ತನ ಧರ್ಮ ಹಾಗೂ ಜನರು ಸೃಷ್ಟಿಸಿಕೊಂಡಿರುವ ಕಾನೂನು ಹಾಗೂ ಧರ್ಮದ ಮಧ್ಯದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಅದೇ ರೀತಿ ಅಲ್ಲಾಹ್’ನ ಧರ್ಮ ಹಾಗೂ ಜನರು ನಿರ್ಮಿಸಿಕೊಂಡಿರುವ ಧರ್ಮ ಮತ್ತು ಕಾನೂನುಗಳ ಮಧ್ಯ ಸಮಾನತೆಯಾಗಲು ಸಾಧ್ಯವಿಲ್ಲ. ಯಾವರೀತಿ ಅಲ್ಲಾಹ್’ನು ಸ್ವಯಂ ಪರಿಪೂರ್ಣನೋ ಅಂದರೆ ತನ್ನ ವಿಶೇಷ ಅದ್ಭುತ ಗುಣಗಳನ್ನು ಪ್ರದರ್ಶಿಸಿದನೋ ಅದೇ ರೀತಿ ಅವನ ಧರ್ಮವೂ ಪರಿಪೂರ್ಣ ಹಾಗೂ ಅದ್ಭುತವಾಗಿದೆ.

  ಆ ಕಾನೂನು ನಿಯಮಗಳನ್ನು ಪೂರ್ಣಗೊಳಿಸುವುದರಿಂದ ಜನರಿಗೆ ಇಹ ಮತ್ತು ಪರಲೋಕಗಳೆರಡರಲ್ಲೂ ಲಾಭವಿದೆ ಅಲ್ಲದೆ ಸುಧಾರಣೆಯೂ ಆಗಲಿದೆ, ಮತ್ತು ಸೃಷ್ಟಿಕರ್ತನ ಹಕ್ಕುಗಳು ಹಾಗೂ ದಾಸರ ಅವಶ್ಯಕತೆಗಳು ಮತ್ತು ಜನರಲ್ಲಿನ ಪರಸ್ಪರ ಹಕ್ಕುಗಳು ಒಬ್ಬರನ್ನೋಬ್ಬರ ಮಾಹಿತಿ ನೀಡುವುವು.

   ವ್ಯಾಪಕತೆ

    ಈ ಧರ್ಮದ ಅತಿದೊಡ್ಡ ಮಹತ್ವಪೂರ್ಣ ಒಳಿತೆಂದರೆ. ಇದು ಪ್ರತಿಯೊಂದು ವಸ್ತುವಿನಲ್ಲಿಯೂ ಸಮ್ಮಿಲನವಾಗಿದೆ, ಅಲ್ಲಾಹ್’ನು ಹೇಳಿದನು; “ನಾವು ಗ್ರಂಥದಲ್ಲಿ ಏನನ್ನೂ ದಾಖಲಿಸದೇ ಬಿಟ್ಟಿಲ್ಲ” (ಅಧ್ಯಾಯ ಅನ್ ಆಮ್ 6 : 38) ಹೀಗಾಗಿ ಈ ಧರ್ಮದಲ್ಲಿ ಎಲ್ಲಾ ವಸ್ತುಗಳು ಸೇರಿಕೊಂಡಿದೆ, ಆ ಎಲ್ಲಾ ವಸ್ತುಗಳ ಸಂಭಂಧವು ಅಲ್ಲಾಹ್’ನೊಂದಿಗಿದೆ. ಹೇಗೆಂದರೆ ಅಲ್ಲಾಹ್’ನ ನಾಮಗಳು, ಅವನ ಗುಣವಿಶೇಷಗಳ ಹಾಗೂ ಹಕ್ಕು ಬಾಧ್ಯತೆಗಳ ಜೊತೆಗಿದೆ. ಹೀಗಾಗಿ ಪ್ರತಿಯೋಂದು ವಸ್ತವಿನ ಸಂಭಂಧ ಸೃಷ್ಟಿಗಳಿಂದ ಇದೇಯೋ ಅವೆಲ್ಲವೂ ಸೃಷ್ಟಿಕರ್ತನಿಂದ ಸಂಭಂಧಿಸಿವೆ, ಉದಾಹರಣೆಗೆ; ಕಾನೂನು ನಿಯಮಾವಳಿಗಳು, ಅಧಿಕಾರ, ಸದ್ವರ್ತನೆ, ಅವಶ್ಯಕ ವಸ್ತುಗಳು, ಇತ್ಯಾದಿ.

   ಇಸ್ಲಾಮ್ ಧರ್ಮವು ಪೈಗಂಬರರ, ನಬಿಯರ, ದೇವದೂತರ, ಮೊದಲ ಹಾಗೂ ನಂತರದ ಜನರ ಎಲ್ಲಾ ಮಾಹಿತಿಯನ್ನು ತೆರೆದಿಟ್ಟಿದೆ. ಅದೇರೀತಿಯಾಗಿ ಇದು ಆಕಾಶಗಳು, ಭೂಮಿ, ಮೋಡಗಳ, ನಕ್ಷತ್ರಗಳ, ಸಮುದ್ರಗಳ, ಮರಗಳ ಮತ್ತು ಸಂಪೂರ್ಣ ಸೃಷ್ಟಿಯ ಕುರಿತು ವರ್ಣಿಸಿದೆ. ಮನುಷ್ಯನನ್ನು ಸೃಷ್ಟಿಸಿರುವ ಕಾರಣದ ರಹಸ್ಯವನ್ನು ತಿಳಿಸಿದೆ, ಅದೇರೀತಿಯಾಗಿ ಸ್ವರ್ಗ ಮತ್ತು ಸತ್ಯವಿಶ್ವಾಸಿ ಹಾಗೂ ಸತ್ಯ ನಿಷೇಧಿಯ ಮತ್ತು ನರಕದ ಕುರಿತೂ ಸಹ ವರ್ಣಿಸಲಾಗಿದೆ.  

   ಇಸ್ಲಾಮ್ ಸೃಷ್ಟಿಕರ್ತ ಹಾಗೂ ಸೃಷ್ಟಿಗಳ ನಡುವೆ ಸಂಭಂಧವನ್ನು ಜೋಡಿಸುತ್ತದೆ

   ಪ್ರತಿ ಸಮುದಾಯದ, ಪ್ರತಿ ಹುಸಿ ಧರ್ಮದ ವಿಶೇಷತೆಯೆಂದರೆ, ಅದು ಒಬ್ಬ ಮನುಷ್ಯನನ್ನು ಅವನೆದುರಿಗೆಯೇ ಇನ್ನೊಬ್ಬನನ್ನು ಸೇರಿಸುತ್ತದೆ. ಆತನಿಗೂ ಸಾವು, ಕ್ಷೀಣತೆ, ಹಾಗೂ ರೋಗಗಳು ಬರುತ್ತವೆ. ಅಲ್ಲದೆ ಶತಮಾನಗಳ ನಂತರ ದೇಹ ಕೊಳೆತು ಮಣ್ಣಾಗಿ ಮೂಳೆಗಳಾಗಿರುತ್ತದೆ, ಆದರೆ ಇಸ್ಲಾಮಿನ ವಿಶೇಷತೆಯೆಂದರೆ ಅದು ಮನುಷ್ಯನನ್ನು ನೇರವಾಗಿ ಸೃಷ್ಟಿಕರ್ತನೊಂದಿಗೆ ಜೋಡಿಸುತ್ತದೆ. ಮಧ್ಯದಲ್ಲಿ ಯಾವುದೇ ಶಿಫಾರಸ್ಸುದಾರ ಮತ್ತು ಆದರಣಿಯ ಮನುಷ್ಯನ ಅಥವ ಯಾವುದೇ ರೀತಿಯ ಪವಿತ್ರ ಜಂತುವಿನ ಸಹಕಾರ ತೆಗೆದುಕೊಳ್ಳುವುದಿಲ್ಲ, ಕೇವಲ ಅಲ್ಲಾಹ್’ನಿಂದ ಮಾತ್ರ ಸಂಪರ್ಕವನ್ನು ಕಲ್ಪಸಿ ಕೊಡುತ್ತದೆ, ಹಾಗೂ ಸೃಷ್ಟಿಕರ್ತನ ಮತ್ತು ಸೃಷ್ಟಿಗಳ ಮಧ್ಯದಲ್ಲಿ ಸಂಭಂಧವನ್ನು ನೇರವಾಗಿ ಒಡೆಯನೊಂದಿಗೆ ಜೋಡಿಸುತ್ತದೆ, ಆಗ ದಾಸನು ಪ್ರಕಾಶವನ್ನು ಪಡೆಯುವನು, ಅಲ್ಲದೆ ಮಾರ್ಗದರ್ಶನವನ್ನು ಮಾಡುತ್ತದೆ, ಅವನಿಗೆ ಉನ್ನತೀಕರಿಸುತ್ತದೆ, ಅದರೊಂದಿಗೆ ಅದ್ಭುತ ದಾಸತ್ವ ಪ್ರಾಪ್ತವಾಗುತ್ತದೆ, ಮತ್ತು ನೀಚ ಕಾರ್ಯಗಳಿಂದ ದೂರವಿರಿಸುತ್ತದೆ, ಮನುಷ್ಯನು ಚಿತ್ತ ಮನಸ್ಸಿನಿಂದ ತನ್ನ ಸಷ್ಟಿಕರ್ತನೊಂದಿಗೆ ಸಂಭಂಧವಿರಿಸದಿದ್ದರೆ ಅವನು ಚತುಷ್ಪಾದ ಪ್ರಾಣಿಗಳಿಗಿಂತಲೂ ಕೀಳು ಹಾಗೂ ಅಪಮಾನಿತನಾಗುತ್ತಾನೆ.

  ಇದು ಸೃಷ್ಟಿಕರ್ತನ ಹಾಗೂ ಸೃಷ್ಟಿಗಳ ನಡುವೆ ಎಂತಹಾ ಸಂಭಂಧವೆಂದರೆ ಅದರಿಂದ ದಾಸನು ತನ್ನ ಒಡೆಯನ ಕಾಮನೆ ಹಾಗೂ ಇಚ್ಛೆಗಳೊಂದಿಗೆ ಪರಿಚಯ ಪಡೆಯುತ್ತಾನೆ. ಆದಕಾರಣದಿಂದ ತನ್ನ ಒಡೆಯನ ಆರಾಧನೆಯನ್ನು ಬುದ್ಧಿ ಮತ್ತತೆಯಿಂದ ಮಾಡುತ್ತಾನೆ. ಹಾಗಾಗಿ ಈ ಸಂಭಂಧದೊಂದಿಗೆ ಅವನ ಸಂತೋಷ ಮತ್ತು ಪ್ರಸನ್ನತೆಗಳ ಸ್ಥಳಗಳಿಂದಲೂ ಪರಿಚಿತನಾಗುತ್ತಾನೆ, ಹಾಗೂ ಅವುಗಳನ್ನು ಪಡೆಯುತ್ತಾನೆ ಅಲ್ಲದೆ ಅಲ್ಲಾಹನು ಮುನಿಸುವಂತಹಾ ಸ್ಥಳಗಳಿಂದ ಕಾರ್ಯಗಳಿಂದ ದೋರವಿರುತ್ತಾನೆ. ಇದು ಒಬ್ಬ ಮಹಾನ್ ಸೃಷ್ಟಿಕರ್ತ ಹಾಗೂ ಬಡದುರ್ಬಲ ಸೃಷ್ಟಿ(ದಾಸ)ಯ ಮಧ್ಯದ ಇಂತಹಾ ಸಂಭಂಧವಾಗಿದೆ, ಅದರ ಮೂಲಕ ಸೃಷ್ಟಿಗಳು  ಸಹಾಯ ಹಾಗೂ ದೈವೀಕ ಮಾರ್ಗದರ್ಶನವನ್ನು ಪಡೆಯುತ್ತಾನೆ, ಹಾಗೂ ಅವನು ಅಲ್ಲಾಹ್’ನೊಂದಿಗೆ ಪ್ರಾರ್ಥಿಸುತ್ತಾ “ನನ್ನನ್ನು ಕಪಟಿಗಳಿಂದ ಮತ್ತು ಕಾಪಟ್ಯ ಕಾರ್ಯಗಳಿಂದ ಶೈತಾನನಿಂದ ರಕ್ಷಣೆ ಕೊಡು” ಎಂದು ಬೇಡುತ್ತಾನೆ.

  ಇಸ್ಲಾಮ್ ಇಹ ಮತ್ತು ಅಂತಿಮ ದಿನಗಳೆರಡರ ಲಾಭದ ಪಕ್ಷಪಾತ ಮಾಡುತ್ತದೆ

 

  ಇಸ್ಲಾಮಿನ ಕಾನೂನು ನಿಯಮಾವಳಿಗಳು ಪ್ರಾಪಂಚಿಕ ಹಾಗೂ ಅಂತಿಮದಿನಗಳ ಲಾಭದ ಪ್ರಾಪ್ತಿಯಾಗುವ ಮತ್ತು ಉಚ್ಚ ಸದ್ಗುಣಗಳ ಹೆಜ್ಜೆಯಲ್ಲಿ ಸ್ಥಾಪಿತವಾಗಿದೆ.

   ಅಂತಿಮ ದಿನದ ಲಾಭದಕುರಿತು; ಇಸ್ಲಾಮಿ ನಿಯಮಾವಳಿಗಳು ಇದರ ಎಲ್ಲಾ ವಿಧಗಳನ್ನು ತಿಳಿಸಿವೆ, ಯಾವುದನ್ನೂ ಬಿಟ್ಟಿಲ್ಲ, ಅಲ್ಲದೆ ಅದರ ವಿವರಣೆ ವ್ಯಾಖ್ಯಾಯನ ಹಾಗೂ ಕಾರಣಗಳನ್ನು ಸಹ ತಿಳಿಸಿದೆ, ಎಕೆಂದರೆ ಯಾವ ವಸ್ತುವೂ ಅದರಲ್ಲಿ ಉಳಿಬಾರದೆಂದು, ಸತ್ಕರ್ಮಿಗಳಿಗೆ ನೀಡುವ ವರದಾನಗಳ ವಾಗ್ದಾನ ಮತ್ತು ದುಷ್ಕರ್ಮಿಗಳಿಗೆ ಸಿಗುವ ಶಿಕ್ಷೆಗಳ ಕುರಿತು ಎಚ್ಚರಿಕೆ ನೀಡಲಾಗಿದೆ.

  ಪ್ರಾಪಂಚಿಕ ಲಾಭದ ಕುರಿತು:  ಅಲ್ಲಾಹ್’ನು ಈ ಧರ್ಮದಲ್ಲಿ ಪ್ರತಿಯೊಂದು ವಸ್ತುಗಳ ಕುರಿತು ಅವುಗಳ ದರ್ಜೆ(ಹಂತ)ಗಳನ್ನು ನೀಡಿದ್ದಾನೆ, ಅವನು ಮನುಷ್ಯನ ಧರ್ಮ, ಜೀವ, ಧನ, ನರನಾಡಿಗಳು, ಆದರ ಸನ್ಮಾನ, ಹಾಗೂ ಅವನ ಬುದ್ಧಿಯನ್ನು ರಕ್ಷಿಸುತ್ತಾನೆ,

  ಉನ್ನತ ನೈತಿಕತೆಯ ಕುರಿತು : ಅಲ್ಲಾಹ್’ನು ಈ ಆದೇಶವನ್ನು ಮುಕ್ತ ಹಾಗೂ ಗೌಪ್ಯ ಎರಡೂ ರೀತಿಯಿಂದಲೂ ನೀಡಿದ್ದಾನೆ, ತುಚ್ಚ ಹಾಗೂ ನೀಚ ಕೆಲಸಗಳಿಂದ ತಡೆದಿದ್ದಾನೆ, ಮುಕ್ತ ವಿನಮ್ರ ನೈತಿಕತೆಗಳೆಂದರೆ ಸ್ವಚ್ಛತೆ, ಪವಿತ್ರತೆ, ಕೊಳಕಿನಿಂದ ದೋರವಿರುವುದು, ಸುಗಂಧ ಹಚ್ಚುವಿಕೆ, ಒಳ್ಳೆಯ ಬಟ್ಟೆ ಧರಿಸುವಿಕೆ, ಒಳ್ಳೆಯ ಮುಖಚರ್ಯೆಯೊಂದಿಗೆ ಇರುವುದನ್ನು ಹಾಗೂ ರೀತಿ ನೀತಿಯಿಂದಿರುವುದು ಔಚಿತ್ಯವಾಗಿದೆ, ಅದೇರೀತಿ ದುಷ್ಟವಸ್ತುಗಳನ್ನು ನಿಷಿದ್ಧವೆಂದು ತಿಳಿಯುವುದು, ಅತ್ಯಾಚಾರ, ಮಧ್ಯಪಾನ, ಸತ್ತಪ್ರಾಣಿಗಳನ್ನು ತಿನ್ನುವುದು, ಹಂದಿ ಮಾಂಸ ತಿನ್ನುವುದು ಮುಂತಾದವು.

   ಪ್ರಶಂಸಾಅರ್ಹ ಸದ್’ವ್ಯವಹಾರಗಳು

   ಒಳ್ಳೆಯ ಸದಾಚಾರಗಳು ಅತ್ಯಧಿಕವಾಗಿದೆ, ಅವುಗಳಲ್ಲಿ ಕೆಲವು ಮಹತ್ವ ಪೂರ್ಣವಾದವುಗಳು ಇಂತಿವೆ; ವಿನಮ್ರತೆ, ಶಿಷ್ಟಾಚಾರ ಮನುಷ್ಯರೊಂದಿಗೆ ಮತ್ತು ಒಳ್ಳೆಯವರ ಸಂಗ ಬೆಳೆಸುವುದು, ಅವರೊಂದಿಗೆ ಉಪಕಾರ ಮಾಡುವುದು, ನ್ಯಾಯ, ಆದರ, ಸತ್ಕಾರ, ನೈಜತೆ, ಸತ್ಯತೆ, ಅಲ್ಲಾಹ್’ನೊಂದಿಗೆ ಭರವಸೆ, ನಿಸ್ವಾರ್ಥತೆ, ಅಲ್ಲಾಹ್’ನ ಭಯಭಕ್ತಿ, ತಾಳ್ಮೆ, ಧೈರ್ಯ ಹಾಗೂ ಅಲ್ಲಾಹ್’ನ ವರದಾನಗಳ ಕುರಿತು ಧನ್ಯವಾದಗಳು ಮುಂತಾದವು.

    ಸರಳತೆ

  ಸರಳತೆ ಎಂಬುದು ಒಂದು ಮಹತ್ವಪೂರ್ಣದ್ದಾಗಿದೆ, ಅದ್ದರಿಂದಲೇ ಈ ಧರ್ಮ ಪ್ರತಿಷ್ಟಿತವಾಗಿದೆ, ಈ ಧರ್ಮದ ಪ್ರತಿಯೊಂದು ಧಾರ್ಮಿಕ ಚಿನ್ಹೆಗಳಲ್ಲಿ ಸರಳತೆಯನ್ನಿರಿಸಲಾಗಿದೆ, ಇದರ ಎಲ್ಲಾ ಆರಾಧನಾ ಕರ್ಮಗಳಲ್ಲಿ ಸರಳತೆಯಿದೆ.

  ಅಲ್ಲಾಹ್’ನು ಹೇಳಿದನು: ಮತ್ತು ಅವನು ಧರ್ಮದಲ್ಲಿ ನಿಮಗೆ ಯಾವುದೇ ಇಕ್ಕಟ್ಟನ್ನು (ಕಠಿಣತೆಯನ್ನು) ಇಟ್ಟಿಲ್ಲ. (ಅಲ್ ಹಜ್ಜ್ 22 : 78)

   ಈ ಸರಳತೆಯ ಅರ್ಥವೆಂದರೆ ಯಾರಾದರೊಬ್ಬ ಮನುಷ್ಯನು ಇಸ್ಲಾಮಿನಲ್ಲಿ ಪ್ರವೇಶಿಸಬಯಸಿದ್ದಾರೆ, ಅವನಿಗೆ ಯಾವುದೇ ಇನ್ನೊಬ್ಬ ಮನುಷ್ಯನ ಮಧ್ಯವರ್ತನೆ ಅಥವ ಯಾವುದೇ ವಂದನೆಗಳ ಅವಶ್ಯಕತೆಯಿರುವುದಿಲ್ಲ. ಅವನು ಸ್ವಚ್ಛವಾಗಿ ‘ಲಾ ಇಲಾಹ ಇಲ್ಲಲ್ಲಾಹ್ ವ ಮುಹಮ್ಮದುರ್ ರಸೂಲುಲ್ಲಾಹ್’ದ ಸಾಕ್ಷ್ಯವಹಿಸಲಿ, ಇವೆರಡೂ ವಾಕ್ಯಗಳನ್ನು ಅರ್ಥೈಸಿಕೊಳ್ಳಲಿ, ಅವುಗಳಲ್ಲಿ ಸಂಪೂರ್ಣ ನಂಬಿಕೆಯಿಡಲಿ ಹಾಗೂ ಅವುಗಳ ಅವಶ್ಯಕತೆಗಳ ಅನುಸಾರ ಜೀವನದಲ್ಲಿ ಅನುಸರಣೆ ಮಾಡಲಿ ಅಷ್ಟೆ.

  ಮನುಷ್ಯನು ಯಾತ್ರೆಯಲ್ಲಿರುವಾಗ, ರೋಗಿಯಾಗಿರುವಾಗ, ಅವನ ಆರಾಧನೆಯಲ್ಲಿ ಬಿಡುವನ್ನು ನೀಡಲಾಗುತ್ತದೆ, ಆಗ ಆತನಿಗೆ ಸ್ವಸ್ಥಳದಲ್ಲಿದ್ದಾಗ, ಆರೋಗ್ಯವಂತನಿದ್ದಾಗ ಮಾಡುವಷ್ಟೇ ಪುಣ್ಯವನ್ನು ಕೊಡಲಾಗುವುದು, ಅದು ಒಬ್ಬ ಮುಸ್ಲಿಮನ ಜೀವನ ಸರಳ ಸಂತುಷ್ಟ ಹಾಗೂ ನಿಶ್ಚಿಂತವಾಗಲಿಕ್ಕಾಗಿದೆ.

  ಇದಲ್ಲದೆ, ಕಾಫಿರನ(ಮುಸ್ಲಿಮೇತರನ) ಜೀವನ ಸಂಕುಚಿತ ಹಾಗೂ ಚಿಂತಿತ ಸ್ಥಿತಿಯಿಂದ ಸುತ್ತುವರೆದಿರುತ್ತದೆ, ಸತ್ಯವಿಶ್ವಾಸಿಯ ಆತ್ಮ ಸುಲಭ ರೀತಿಯಿಂದ ಪಾತ್ರೆಯೊಂದರ ನೀರಿನ ಹನಿಯಂತೆ ತೆಗೆಯಲ್ಪಡುತ್ತದೆ.

  ಅಲ್ಲಾಹ್’ನು ಹೇಳಿದನು; “ಅವರು ನಿರ್ಮಲರಾಗಿರುವ ಸ್ಥಿತಿಯಲ್ಲಿ ಅವರ ಜೀವಗಳನ್ನು ಮಲಕ್’ಗಳು ವಷಪಡಿಸಿಕೊಳ್ಳುವರು, (ಮತ್ತು) ನಿಮಗೆ ಸಲಾಮ್(ಶಾಂತಿ) ನಿಮ್ಮ ಕರ್ಮಗಳ ಪ್ರತಿಫಲವಾಗಿ ನೀವು ಸ್ವರ್ಗವನ್ನು ಪ್ರವೇಶಿಸಿರಿ ಎಂದು ಅವರು (ಮಲಕ್’ಗಳು) ಹೇಳುವರು”. (ಅನ್ನಹ್ಲ್ 16 : 32)

   ಕಾಫಿರನ ಕುರಿತೆಂದರೆ ಅವನ ಮರಣ ಸಮಯದಲ್ಲಿ ತುಂಬಾ ದುಷ್ಟ ಕೆಟ್ಟ ಹಾಗೂ ಕೊಳಕು ದೂತರು ಪ್ರಕಟವಾಗುವರು, ಅವನನ್ನು ಚಾಟಿಯಿಂದ ಹೊಡೆದು ಅವನ ಆತ್ಮವನ್ನು ತೆಗೆಯುವರು, ಅಲ್ಲಾಹ್’ನು ಹೇಳಿದನು; “ ಅಕ್ರಮಿಗಳು ಮರಣದ ಸಂಕಟದಲ್ಲಿ ಸಿಲುಕಿರುವಾಗ, ಮಲಕ್’ಗಳು ತಮ್ಮ ಕೈಗಳನ್ನು ಚಾಚಿ ಹೊರತೆಗೆಯಿರಿ ನಿಮ್ಮ ಪ್ರಾಣಗಳನ್ನು ನೀವು ಅಲ್ಲಾಹ್’ನ ಕುರಿತು ಸತ್ಯವಲ್ಲದ್ದನ್ನು ಹೇಳುತ್ತಿದ್ದುದಕ್ಕಾಗಿ ಮತ್ತು ನೀವು ಅವನ ವಚನಗಳ ವಿಷಯದಲ್ಲಿ ಅಹಂಕಾರ ತೋರುದಿದುಕ್ಕಾಗಿ ಮತ್ತು ನೀವು ಅವನ ವಚನಗಳ ವಿಷಯದಲ್ಲಿ ಅಂಕಾರ ತೋರುದುದಕ್ಕಾಗಿ ಇಂದು ನಿಮಗೆ ಭಾರೀ ಅಪಮಾನದ ಶಿಕ್ಷೆಯು ದೊರೆಯಲಿದೆ” ಎನ್ನುವರು. (ಅಲ್ ಅನ್’ಆಮ್ 6 : 93)

  “ಮಲಕ್’ಗಳು ಧಿಕ್ಕಾರಿಗಳ ಪ್ರಾಣತೆಗೆಯುವುದನ್ನು ನೀವು ನೋಡಿದ್ದರೆ (ಚೆನ್ನಾಗಿರುತ್ತಿತ್ತು) ಅವರು (ಮಲಕ್’ಗಳು) ಸವಿಯಿರಿ, ಭುಗಿಲೇಳುವ ನರಕಾಗ್ನಿಯ ಹಿಂಸೆಯನ್ನು” ಎನ್ನುತ್ತಾ ಅವರ ಮೂಖಗಳಿಗೂ ಬೆನ್ನುಗಳಿಗೂ ಹೊಡೆಯುತ್ತಿರುತ್ತಾರೆ. (ಅಲ್ ಅನ್’ಫಾಲ್ 8 : 50)

    ನ್ಯಾಯ

   ಇಸ್ಲಾಮಿನ ಶರಿಯತ್ತನ್ನು ಕಾನೂನಿನ ಸ್ಥತಿಯನ್ನು ನೀಡಿದವನು ಏಕಮಾತ್ರ ಅಲ್ಲಾಹ್’ನಾಗಿದ್ದಾನೆ, ಅವನೇ ಎಲ್ಲಾ ಸೃಷ್ಟಿಗಳ, ಕರಿಯ-ಬಿಳಿಯ, ಸ್ತ್ರೀ-ಪುರುಷರೆಲ್ಲರನ್ನು ಸೃಷ್ಟಿಸಿರುವನು, ಎಲ್ಲರೂ ಅಲ್ಲಾಹ್’ನ ಪ್ರಜ್ಞೆ, ಅವನ ನ್ಯಾಯದ ಮುಂದೆ ಸಮಾನರು, ಸ್ತ್ರೀ ಪುರುಷರೆಲ್ಲರಿಗೂ ಯಾವುದು ಔಚಿತ್ಯವೂ ಅದನ್ನೇ ಕಾನೂನಿನ ಸ್ಥಿತಿಯನ್ನಾಗಿ ಕೊಟ್ಟನು.

  ಕಾನೂನು ನಿಯಮಗಳು ಮನುಷ್ಯನ ಪಕ್ಷಪಾತ ಮಾಡುವುದು ಸ್ತ್ರೀಯರೊಂದಿಗೆ ಅಥವ ಸ್ತ್ರೀಯರನ್ನು ಶ್ರೇಷ್ಟರಾಗಿಸಿ ಪುರುಷನೊಂದಿಗೆ ಅನ್ಯಾಯ ವೆಸಗುವುದು ಅನ್ಯರಿಗೆ ಪ್ರಾಧನ್ಯತೆ ನೀಡಿರುವುದು ಕರಿಯನಿಗೆ ವಂಚಿಸುವುದು ಎಂತಹಾ ಸಮಯದಲ್ಲಾದರು ಅಸಂಭವವಾಗಿದೆ, ಅಲ್ಲಾಹ್’ನ ನಿಯಮಗಳಲ್ಲಿ ಎಲ್ಲರೂ ಸಮಾನರು. ಒಂದೇ ಒಂದು ವಿಷಯದ ಕುರಿತು ಅವರೊಂದಿಗೆ ನೆತೃತ್ವ ಸಾಬೀತಾಗಲಾರದು. ಅದು ಅಲ್ಲಾಹ್’ನ ಭಯಭಕ್ತಿಯಾಗಲಾರದು.

    ಒಳಿತುಗಳ ಆದೇಶ ನೀಡುವುದು ಕೆಡುಕಿನಿಂದ ತಡೆಯುವುದು

   ಇಸ್ಲಾಮಿನ ಕಾನೂನು ನಿಯಮಗಳು ಉನ್ನತ ವಿಶೇಷೆಗಳಲ್ಲಿದೆ, ಅದೇನೆಂದರೆ ಒಳಿತಿನ ಕಡೆಗೆ ಕರೆ ನೀಡುವಂತೆ ಕೆಡುಕಿನಿಂದ ತಡೆಯುವಂತೆ ಆದೇಶಿಸುತ್ತದೆ.

  ಸಾಮರ್ಥ್ಯವಿರುವ ಪ್ರೌಢ ಸ್ತ್ರೀ ಪುರುಷರಿಗೆ ಅವಶ್ಯವಾಗಿರುವುದೆಂದರೆ ಅವರು ಒಳಿತುಗಳ ಆದೇಶವನ್ನು ನೀಡಬೇಕು ಕೆಡುಕುಗಳಿಂದ ತಡೆಯಬೇಕು, ತಮ್ಮ ಶಕ್ತಾನುಸಾರ ತಪ್ಪು ಕಾರ್ಯಗಳಿಂದ ತಡೆದು ತಮ್ಮ ಜವಾಬ್ದಾರಿಯಿಂದ ತಮ್ಮ ಕೈಯಲ್ಲಾದಷ್ಟು ಒಳಿತಿನ ಆಜ್ಞೆ ನೀಡಬೇಕು, ಅದೂ ಸಾಧ್ಯವಾಗದಿದ್ದಲ್ಲಿ ತಮ್ಮ ನಾಲಗೆಯಿಂದ ತಡೆಯಬೇಕು, ಅದೂ ಸಾಧ್ಯವಾಗದಿದ್ದಲ್ಲಿ ತಮ್ಮ ಮನಸ್ಸಿನಲ್ಲಿ ತಪ್ಪೆಂದು ತಿಳಿಯಬೇಕು.

  ಈ ರೀತಿಯಿಂದ ಎಲ್ಲರೂ ಪರಸ್ಪರ ನಿರೀಕ್ಷಕರಾಗಿ ಜನರು ಒಳಿತಿನ ಆದೇಶವನ್ನು ನೀಡಿ ಕೆಡುಕಿನಿಂದ ತಡೆಯುವುದು ಎಲ್ಲರಿಗೂ ಸಾಧ್ಯ ಆಗ ಪ್ರಯೊಬ್ಬರೂ ಕೆಡುಕನ್ನು ಮಾಡುವವರನ್ನು ತಡೆಯುವ ಅಭ್ಯಾಸವಾಗುತ್ತದೆ, ಅದೇರೀತಿಯಾಗಿ ತಪ್ಪು ಮಾಡಿದವನು ರಾಜನೇ ಆಗಲಿ ಪ್ರಜೆಯೇ ಆಗಲಿ ತಮ್ಮ ಸಾಮರ್ಥ್ಯಾನುಸಾರ ಹಾಗೂ ಶರಿಯತ್ ಅಥವ ಕಾನೂನು ನಿಯಮಾವಳಿಗಳ ಅನುಸಾರ ತಡೆಯಬೇಕು. ಈ ಆದೇಶ ಪ್ರತಿಯೊಬ್ಬ ಮನುಷ್ಯನಿಗೂ ಶಕ್ತ್ಯಾನುಸಾರ ಅವಶ್ಯವಾಗಿದೆ, ಇಂದು ಸರ್ಕಾರಿ ರಾಜಕೀಯ ಅಧಿಕಾರಿಗಳು ತಮ್ಮ ವಿಪಕ್ಷಗಳ ಕಾವಲುಗಾರರೆಂದು ಗರ್ವ ಪಡುತ್ತಾರೆ, ಅವರು ಸರ್ಕಾರಿ ಕೆಲಸಕಾರ್ಯಗಳಿಗೂ ಕಾವಲುಗಾರರೆನ್ನುತ್ತಾರೆ.

   ನಿಷ್ಕರ್ಷಣೆ  ಅಥವ ತೀರ್ಮಾನ

  ಇವು ಇಸ್ಲಾಮಿನ ಕೆಲವು ಮಹತ್ವಪೂರ್ಣ ಒಳಿತುಗಳಾಗಿವೆ, ಇವುಗಳನ್ನು ವಿಸ್ತಾರವಾಗಿ ವರ್ಣಿಸ ಬೇಕೆಂದರೆ ನೀವು ಈ ಮಾತನ್ನು ಗಮನಿಸಬೇಕಾಗಿದೆ. ಪ್ರತಿಯೊಂದು ಧಾರ್ಮಿಕ ಚಿನ್ನ, ಪ್ರತಿ ಕಡ್ಡಾಯ ಕರ್ಮಗಳು, ಪ್ರತಿ ಆದೇಶಗಳು, ಪ್ರತಿಬಂಧಕಗಳು, ಇನ್ನೂ ಹಲವಾರುಗಳನ್ನು ತಿಳಿಸ ಬಯಸುತ್ತೇವೆ. ಅದರಲ್ಲಿ ಸಂಪೂರ್ಣ ಜ್ಞಾನ, ಕಠಿಣ ಕಾನೂನು, ಸಂಪೂರ್ಣ ಒಳಿತುಗಳು ಹಾಗೂ ಸುಂದರ ಚಮತ್ಕಾರಗಳೂ ಇವೆ ಇವುಗಳಕುರಿತು ಗಮನಿಸಿರಿ.

  ಈ ಧರ್ಮದ ಕುರಿತು ಯಾರು ಚಿಂತನ ಮಂಥನ ನಡೆಸುವರೋ ಅವರಿಗೆ ಇದು ಅಲ್ಲಾಹ್’ನ ಕಡೆಯಿಂದ ಅವತರಿಸಿದ ಧರ್ಮ, ಇದು ಯಾವುದೇ ರೀತಿಯ ಸಂದೇಹವಿಲ್ಲದ ಧರ್ಮವಾಗಿದೆ. ಇದರಲ್ಲಿ ಯಾವುದೇ ರೀತಿಯ ಅಂಧಕಾರಗಳಿಲ್ಲ ಎಂಬುದನ್ನು ಮಾರ್ಗದರ್ಶಿಸುತ್ತದೆ ಇದರಿಂದ ಒಳ್ಳೆಯ ಜ್ಞಾನ ಲಭಿಸುತ್ತದೆ.

   ಹೀಗಾಗಿ ನೀವೇನಾದರು ಅಲ್ಲಾಹ್’ನ ಕಡೆಗೆ ಗಮನ ಹರಿಸುವುದಾದರೆ, ಅವನ ನಿಯಮಗಳನ್ನು ಪಾಲಿಸುವುದಾದರೆ, ನಬಿಯರ ಹಾಗೂ ಪೈಗಂಬರರ ಅನುಸರಣೆ ಮಾಡುವುದರ ಕುರಿತು ಧೃಢ ನಿರ್ಧಾರ ಮಾಡಿರುವುದಾದರೆ, ಕ್ಷಮಾಪಣೆಗಾಗಿ  ಬಾಗಿಲುತೆರೆದಿದೆ, ಹಾಗೂ ನಿಮ್ಮ ಸೃಷ್ಟಿಕರ್ತ ಅತಿಹೆಚ್ಚು ಕ್ಷಮಿಸುವವನು ಮತ್ತು ದಯಾಮಯನಾಗಿದ್ದಾನೆ.

 ಆಧಾರ

   ಇಸ್ಲಾಮಿನ ಸಿದ್ಧಾಂತ ಹಾಗೂ ಮೂಲಾಧಾರ, (ಲೇಖಕರು: ಡಾ|| ಮುಹಮ್ಮದ್ ಬಿನ್ ಅಬ್ದುಲ್ಲಾಹ್ ಬಿನ್ ಸಾಲೆಹ್ ಅಸ್ಸುಹೈಮ್)

 ಅನುವಾದಕರು ಅತಾಉರ್’ರೆಹಮಾನ್ ಜಿಯಾಉಲ್ಲಾಹ್.

1189 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ