ಇಸ್ಲಾಮಿನಲ್ಲಿ ಮದುವೆ

   ಇಸ್ಲಾಮ್ ಧರ್ಮವು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಯುವ ಮುಸ್ಲಿಮರಿಗೆ ಪ್ರೋತ್ಸಾಹಿಸುತ್ತದೆ. ಪೈಗಂಬರ್ ಮುಹಮ್ಮದ್(ಸ)ರು ಹೇಳಿದರು; ಓ ಯುವ ಜನರೇ, ನಿಮ್ಮಲ್ಲಿ ಯಾರಾದರೂ ಸಂಭೊಗದ ಸಾಮರ್ಥ್ಯವನ್ನು ಇಡುವವನಾದರೆ, ಅವನು ಮದುವೆಯಾಗಲಿ. ಇದು ಕಣ್ಣುಗಳನ್ನು ನಿಗ್ರಹಿಸಲು ಮತ್ತು ಗುಪ್ತಾಂಗಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಅವನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅವನು ಉಪವಾಸ ಮಾಡಲಿ, ಏಕೆಂದರೆ ಅದು ಲೈಂಗಿಕ ಬಯಕೆಯನ್ನು ನಿಯಂತ್ರಿಸುವ ಒಂದು ವಿಧಾನವಾಗಿದೆ. 'ಸಹಿಹ್ ಅಲ್ ಬುಖಾರಿ ಸಂಪುಟ 7 : 4 ಅಥವ 5065(NE) ಸಹಿಹ್ ಅಲ್ ಮುಸ್ಲಿಮ್ 3233, [1]


 

ಪರವಿಡಿ

ಸಾಮಾನ್ಯ ವ್ಯಾಖ್ಯಾನ

ಒಬ್ಬ ಪತಿ ಅಥವ ಪತ್ನಿಯರು ಲೈಂಗಿಕತೆಯ ಪೂರೈಕೆಗಾಗಿ ಒನ್ನರನ್ನೊಬ್ಬರು ಎದುರಿಗೆ ಸೇರುವ ಸ್ಥಿತಿ ಬರಬೇಕಾದರೆ ಕಾನೂನಿನಿಂದ ಗುರುತಿಸಲ್ಪಟ್ಟ ಒಮ್ಮತದ ಮತ್ತು ಒಪ್ಪಂದದ ಸಂಬಂಧದಲ್ಲಿ ಮಾತ್ರ ಸಾಧ್ಯ. [2]

ಅರೇಬಿಕ್ ಭಾಷಾಶಾಸ್ತ್ರ

 ನಿಕಾಃ ಎನ್ನುವುದು ಮದುವೆಗಾಗಿ ಬಳಸುವ ಅರೇಬಿಕ್ ಪದವಾಗಿದೆ. ಇದರರ್ಥ "ಒಪ್ಪಂದ" ("ಅರೇಬಿಕ್ ಭಾಷೆಯಲ್ಲಿ ಅಕ್ದ್).

ಇಸ್ಲಾಮಿಕ್ ಅರ್ಥ

ಖುರ್’ಆನ್ ಮದುವೆಯನ್ನು ನಿರ್ದಿಷ್ಟವಾಗಿ "ಮೀಸಾಖನ್ ಘಲೀದಹ್" ಎಂದು ಸೂಚಿಸುತ್ತದೆ, ಇದರರ್ಥ "ಬಲವಾದ ಒಡಂಬಡಿಕೆ ಎಂದು".

“ಮತ್ತು ಅವರು ನಿಮ್ಮಿಂದ ಬಲಿಷ್ಟ ವಾಗ್ದಾನವನ್ನು("ಮೀಸಾಖನ್ ಘಲೀದಹ್ ")  ಪಡೆದ ಬಳಿಕ ? (ಖುರ್’ಆನ್ 4 : 21)

ಒಬ್ಬರು ಅದೇ ವಾಗ್ದಾನವನ್ನು ಕಂಡುಕೊಳ್ಳುವಾಗ ಈ ಒಡಂಬಡಿಕೆಯ ಗಂಭೀರತೆ ಸ್ಪಷ್ಟವಾಗುತ್ತದೆ ಅಂದರೆ " ಮೀಸಾಖನ್ ಘಲೀದಹ್ " ಅಲ್ಲಾಹ್ ಮತ್ತು ಪೈಗಂಬರರ ನಡುವೆ ಮಾಡಿದ ಒಪ್ಪಂದಕ್ಕೂ ಬಳಸಲಾಗುತ್ತಿದೆ ಪೈಗಂಬರರಿಗೆ ಅವರ ಜವಾಬ್ದಾರಿಯನ್ನು ಅವರಿಗೆ ನೀಡುವ ಮೊದಲು. (ಖುರ್’ಆನ್ 33 :7)

   ಖುರ್’ಆನ್ "ಹಿಸ್ನ್" ಎಂಬ ಅರೇಬಿಕ್ ಪದವನ್ನು ಮದುವೆಗಾಗಿ "ಕೋಟೆಯನ್ನು" ಸೂಚಿಸುತ್ತದೆ. ಹಾಗು ಮದುವೆಯನ್ನು ಪವಿತ್ರತೆಯ ಕೋಟೆ ಎಂದು ಪರಿಗಣಿಸಲಾಗುತ್ತದೆ. [3]

ಹದೀಸ್

   ಅನಸ್ ಬಿನ್ ಮಾಲಿಕ್’(ರ ಅ)ರಿಂದ ನಿರೂಪಿಸಲ್ಪಟ್ಟಂತೆ ಮದುವೆಯಾಗಬೇಕಾದ ಕ್ರಮವನ್ನು ನೀಡಲಾಗಿದೆ. ಮೂರು ಪುರುಷರ ಗುಂಪೊಂದು ಪೈಗಂಬರ್(ಸ) ಪತ್ನಿಯರ ಮನೆಗಳಿಗೆ ಬಂದಿತು ಪೈಗಂಬರ್(ಸ)ರು ಹೇಗೆ ಅಲ್ಲಾಹ್’ನ ಆರಾಧನೆ ಮಾಡುತ್ತಾರೆ ಎಂದು ಕೇಳಲು, ಮತ್ತು ಯಾವಾಗ ಅವರಿಗೆ ಅದರ ಬಗ್ಗೆ ತಿಳಿಸಲಾಯಿತೊ, ಅವರು ತಮ್ಮ ಆರಾಧನೆಯನ್ನು ಸಾಕಷ್ಟಿಲ್ಲವೆಂದು ಪರಿಗಣಿಸಿದರು ಮತ್ತು ಹೇಳಿದರು, " ಪೈಗಂಬರ್(ಸ)ರವರ ಎದುರಲ್ಲಿ ನಾವೆಲ್ಲಿದ್ದೇವೆ? ಅವರ ಹಿಂದಿನ ಮತ್ತು ಭವಿಷ್ಯದ ಪಾಪಗಳು ಕ್ಷಮಿಸಲ್ಪಟ್ಟಿವೆ. " ನಂತರ ಅವರಲ್ಲಿ ಒಬ್ಬನು ಹೇಳಿದನು, "ನಾನು ನಮಾಜ್’ನ್ನು ರಾತ್ರಿಯಡೀ ನಿರಂತರ ಶಾಶ್ವತವಾಗಿ ಮಾಡುತ್ತೇನೆ." ಮತ್ತೊಬ್ಬನು ಹೇಳಿದನು, "ನಾನು ವರ್ಷದುದ್ದಕ್ಕೂ ಉಪವಾಸ ಮಾಡುತ್ತೇನೆ ಮತ್ತು ನನ್ನ ಉಪವಾಸವನ್ನು ನಿಲ್ಲಿಸುವುದೇ ಇಲ್ಲ." ಮೂರನೇಯವನು ಹೇಳಿದನು: "ನಾನು ಮಹಿಳೆಯರಿಂದ ದೂರವಿರುತ್ತೇನೆ ಮತ್ತು ಶಾಶ್ವತವಾಗಿ ಮದುವೆಯಾಗುವುದಿಲ್ಲ." ಅಲ್ಲಾಹ್’ನ ಧರ್ಮ ಪ್ರಚಾರಕ ಅವರೆದುರಿಗೆ ಬಂದರು ಮತ್ತು ಹೇಳಿದರು. ನೀವು ಅಲ್ಲಾಹ್’ನಿಂದ ಹೇಳಲ್ಪಟ್ಟ ಇಂತಿಂತಹಾ ಜನರೇ? ನಾನು ಅಲ್ಲಾಹ್’ನಿಗೆ ಹೆಚ್ಚು ವಿಧೇಯನಾಗಿರುತ್ತೇನೆ ಮತ್ತು ನಿಮಗಿಂತ ಹೆಚ್ಚು ನಾನು ಭಯಪಡುತ್ತೇನೆ, ಆದರೂ ನಾನು ಉಪವಾಸ ಮಾಡುತ್ತೇನೆ ಮತ್ತು ನನ್ನ ಉಪವಾಸವನ್ನು ನಿಲ್ಲಿಸುತ್ತೇನೆ. ನಾನು ನಿದ್ರೆಯನ್ನೂ  ಮಾಡುತ್ತೇನೆ ಮತ್ತು ನಾನು ಮಹಿಳೆಯರನ್ನು ಮದುವೆಯಾಗುತ್ತೇನೆ. ಆದ್ದರಿಂದ ನನ್ನ ಸಂಪ್ರದಾಯವನ್ನು ಧರ್ಮದಲ್ಲಿ ಅನುಸರಿಸದವನು, ಅವನು ನನ್ನಿಂದ ಅಲ್ಲ (ನನ್ನ ಅನುಯಾಯಿಯಲ್ಲ) "ಸಹಿಹ್ ಅಲ್ ಬುಖಾರಿ ಸಂಪುಟ 7: 1. [4],

ಸರಿಯಾದ ಸಂಗಾತಿಯ ಆಯ್ಕೆಗೆ

ಇವುಗಳು ಸಂಗಾತಿಯನ್ನು ಆರಿಸುವಾಗ ಅನುಸರಿಸಬೇಕಾದ ಮುಖ್ಯ ಲಕ್ಷಣಗಳಾಗಿವೆ:

ದೀನ್ (ಅಲ್ಲಾಹ್’ನಿಂದ ಸೂಚಿಸಲ್ಪಟ್ಟಂತೆ ಜೀವನ ವಿಧಾನ): ಇದು ಪೈಗಂಬರ್ ಮುಹಮ್ಮದ್ (ಸ)ರವರ ಸೂಚನೆಗಳ ಪ್ರಕಾರ ಮೊಟ್ಟ ಮೊದಲನೇಯದಾಗಿ  ನೋಡಬೇಕಾಗಿರುವ ವಿಷಯ. ಇದು ಯಾವುದೇ ಮುಸ್ಲಿಮ್’ನನ್ನು/ಳನ್ನು ಆಯ್ಕೆ ಮಾಡುವುದು ಎಂದಲ್ಲ, ಹಾಗೂ , ಸಾಮಾನ್ಯ ಮುಸ್ಲಿಮ್ ಮಾತ್ರವಲ್ಲ  ಆದರೆ ಇಸ್ಲಾಮ್ ಧರ್ಮಕ್ಕೆ ಅನಗುಣವಾಗಿ ಅವರ ದೈನಂದಿನ ಜೀವನದುದ್ದಕ್ಕೂ ಅನ್ವಯಿಸಿಕೊಂಡಿರುವವನು/ಳು.

"ಒಬ್ಬ ಮಹಿಳೆಯನ್ನು ನಾಲ್ಕು ಕಾರಣಗಳಿಗಾಗಿ ಮದುವೆಯಾಗಬಹುದು: ಅವಳ ಆಸ್ತಿಗಾಗಿ, ಅವಳ ಸ್ಥಾನಮಾನಕ್ಕಾಗಿ, ಅವಳ ಸೌಂದರ್ಯಕ್ಕಾಗಿ, ಮತ್ತು ಅವಳ ಧರ್ಮ (ಮತ್ತು ನಡವಳಿಕೆ ಅಥವ ಗುಣಲಕ್ಷಣ) ಕ್ಕಾಗಿ, ಮದುವೆಯಾಗಲು ಬಯಸುವವರಿಗೆ ಪೈಗಂಬರ್ ಮುಹಮ್ಮದ್(ರು) ಅಲ್ಲಾಹುವಿನ ಔದಾರ್ಯದ ಭರವಸೆಯನ್ನು ನೀಡಿದ್ದಾರೆ ಅದು ಪವಿತ್ರವಾದ ಮತ್ತು ಪರಿಶದ್ಧವಾದ ಜೀವನದೊಂದಿಗೆ ಬದುಕಲೆಂದು.

 ನಡವಳಿಕೆ: ಉತ್ತಮ ನಡವಳಿಕೆಯನ್ನು ಹೊಂದಿದ ಒಬ್ಬ ಮಹಿಳೆ ಅಥವ ವ್ಯಕ್ತಿಯು ಅಲ್ಲಾಹ್’ನಿಂದ ಒಂದು ಅನುಗ್ರಹವೆಂದು ಪರಿಗಣಿಸಲಾಗಿದೆ. ಪೈಗಂಬರ್ ಮುಹಮ್ಮದ್(ಸ)ರು ಹೇಳಿದರು ; 'ಒಬ್ಬ ಸತ್ಯವಿಶ್ವಾಸಿಗೆ ಅಲ್ಲಾಹ್’ನ ಭಯ ಮತ್ತು ಅವನಮೇಲೆ ನಂಬಿಕೆಯಿಡುವವನಿಗೆ ಒಬ್ಬ ಧಾರ್ಮಿಕ ಹೆಂಡತಿಗಿಂತ ಹೆಚ್ಚು ಲಾಭದಾಯಕವಾದದ್ದು ಏನೂ ಇಲ್ಲ. ಆಕೆಗೆ ಆಜ್ಞಾಪಿಸಿದಾಗ, ಅವಳು ಅವನಿಗೆ ವಿಧೇಯಳಾಗುತ್ತಾಳೆ;  ಮತ್ತು ಅವನು ಅವಳನ್ನು ನೋಡುವಾಗ, ಅವಳು ಅವನನ್ನು ಸಂತೋಷಿಸುತ್ತಾಳೆ; ಮತ್ತು ಅವನು ಅಲ್ಲಾನಿಂದ ಶಪಥ ಮಾಡುವಾಗ ಮತ್ತು ಅವಳು ಒಂದು ಕೆಲಸವನ್ನು ಮಾಡಬೇಕೆಂದು ಅಲ್ಲಾಹ್’ನವತಿಯಿಂದ ಅವಳಿಗೆ ಪ್ರತಿಜ್ಞಾಪಿಸಿದಾಗ,ಅವಳು ಮಾಡುವಳು, ಮತ್ತು ಅವನು ದೂರವಾಗಿದ್ದಾಗ, ಅವಳು ತನ್ನನ್ನು ಮತ್ತು ತನ್ನ (ಅವನ) ಆಸ್ತಿಯನ್ನು ಕಾಪಾಡುತ್ತಾಳೆ. ''ಮುಸ್ನದ್ ಅಹ್ಮದ್ ಸಂಪುಟ 2: 251; ಅಲ್-ಸಿಲ್ಸಿಲಾಹ್ ಅಲ್-ಸಹಿಹ್ 1838 ರಲ್ಲಿ ಅಲ್-ಅಲ್ಬಾನಿ ಅವರಿಂದ ಹಸನ್ ಎಂದು ಘೋಷಿಸಲಾಗಿದೆ.

 ಇದು ಉತ್ತಮ ನಡತೆ ಮತ್ತು ಅಲ್ಲಾಹ್’ನ ಭಯದ ಬಗ್ಗೆ ಪತಿಗೆ ಅನ್ವಯಿಸುತ್ತದೆ ಮಕ್ಕಳನ್ನು ಬೆಳೆಸುವುದಕ್ಕಾಗಿ ಇಬ್ಬರೂ ಪೋಷಕರು ಪ್ರಯತ್ನಿಸಬೇಕು ಕೇವಲ ಒಬ್ಬರಲ್ಲ. ಪುರುಷನು ಕುಟುಂಬದ ಮುಖ್ಯಸ್ಥನಾಗಿದ್ದರಿಂದ, ಒಬ್ಬ ಧಾರ್ಮಿಕ ಮಹಿಳೆಯನ್ನು ತನ್ನ ಮಕ್ಕಳ ತಾಯಿಯಾಗಬೇಕೆಂದು ಆರಿಸುವುದು ಅವನ ಜವಾಬ್ದಾರಿಯಾಗಿದೆ. ಅಲ್ಲಾಹ್’ನು ಹೇಳಿದನು; “ವಿಶ್ವಾಸಿಗಳೇ, ನೀವು ಸ್ವತಃ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿರಿ. ಮಾನವರು ಮತ್ತು ಕಲ್ಲುಗಳು ಅದರ ಇಂಧನಗಳಾಗಿರುವವು”. ಖುರ್’ಆನ್ ಅಧ್ಯಾಯ ಅತ್ತಹ್’ರೀಮ್ 66 : 6.

ಅಲ್ಲಾಹ್’ನು ಹೇಳುವನು : “ನೀವು ನಿಮ್ಮ ಮನೆಯವರಿಗೆ ನಮಾಜ್’ನ ಆದೇಶ ನೀಡಿರಿ ಮತ್ತು ಸ್ವತಃ ನೀವು ಅದನ್ನು ಪಾಲಿಸಿರಿ”. ಖುರ್’ಆನ್ ಅಧ್ಯಾಯ ತ್ವಾಹಾ 20 : 132. 

ಅಲ್ಲಾಹುವಿನ ಪೈಗಂಬರ್(ಸ)ರು ಮಹಾ ಪಾಪಗಳ ಬಗ್ಗೆ ಕೇಳಿದಾಗ, ಅವರು ಉತ್ತರಿಸಿದರು, “ನೀವು ಅಲ್ಲಾಹ್’ನೊಂದಿಗೆ ಸಹಭಾಗಿಗಳನ್ನಾಗಿ ಮಾಡದಿರುವುದು, ಅವನು ನಿಮ್ಮನ್ನು ಸೃಷ್ಟಿಸಿದ್ದಾನೆ, ನಿಮ್ಮ ಆಹಾರದಲ್ಲಿ ಅವರು ಪಾಲುದಾರರಾಗಿ ತಿನ್ನಬಹುದೆಂಬ ಭಯದಿಂದ ನಿಮ್ಮ ಮಗುವನ್ನು ನೀವು ಕೊಲ್ಲುವುದು, ಮತ್ತು ನೀನು ನಿನ್ನ ನೆರೆಯವರ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದು, ಎಂದು ಹೇಳಿದರು. ಸಹಿಹ್ ಅಲ್ ಬುಖಾರಿ : 4477.

ಒಬ್ಬರ ಮಕ್ಕಳನ್ನು ಕೊಲ್ಲುವ ನಿಷೇಧವು ಅವರಿಗಾಗಿ ಕರುಣೆ ಹೊಂದಲು ಅಗತ್ಯವಾದ ಪರಿಣಾಮವಾಗಿದೆ ಮತ್ತು ಅವರ ದೇಹ, ಮನಸ್ಸು ಮತ್ತು ಆತ್ಮವನ್ನು ಹಾನಿಯಾಗದಂತೆ ರಕ್ಷಿಸುತ್ತದೆ. [5]

ಪ್ರಾಮುಖ್ಯತೆ

ಇಸ್ಲಾಮ್ ಧರ್ಮ ಮದುವೆಗೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತದೆ. ಲೈಂಗಿಕ ಹಸಿವಿನ ನಿವಾರಣೆಗಾಗಿ ಮದುವೆ ಮೂಲಭೂತ ಪರಿಹಾರವಾಗಿದೆ.

1.        ಇದು ಅಲ್ಲಾಹ್’ನು ವಿಧೇಯತೆಗಾಗಿ ಆಜ್ಞಾಪಿಸಿದ್ದಾನೆ, ಅಲ್ಲಾಹನೇ ಖುರ್’ಆನಿನಲ್ಲಿ ಹೇಳುವನು: “ನೀವು ನಿಮಲ್ಲಿನ ಅವಿವಾಹಿತರಿಗೆ, ನಿಮ್ಮ ಸಜ್ಜನ ದಾಸರಿಗೆ ಮತ್ತು ನಿಮ್ಮ ದಾಸಿಯರಿಗೆ ವಿವಾಹ ಮಾಡಿಸಿರಿ. ಅವರು ಬಡವರಾಗಿದ್ದರೆ ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನರಾಗಿಸುವನು. ಅಲ್ಲಾಹನು ವಿಶಾಲನೂ ಜ್ಞಾನಿಯೂ ಆಗಿದ್ದಾನೆ. ಖುರ್’ಆನ್ ಅಧ್ಯಾಯ ಅನ್ನೂರ್ 24 : 32.

2.       ಇದನ್ನು ಪೈಗಂಬರ್ ಮುಹಮ್ಮದ್(ಸ)ರೂ ಅನುಸರಿಸುತ್ತದ್ದರು, ಅಲ್ಲಾಹ್’ನು ಖುರ್’ಆನಿನಲ್ಲಿ ಹೇಳಿದನು; “ ನಿಮಗಿಂತ ಹಿಂದೆಯೂ ನಾವು ಸಂದೇಶವಾಹಕರನ್ನು ಕಳುಹಿಸಿದ್ದೆವು ಮತ್ತು ಅವರಿಗೆ ಮಡದಿಯರನ್ನೂ ಮಕ್ಕಳನ್ನೂ ಮಾಡಿಕೊಟ್ಟಿರುವೆವು”. ಖುರ್’ಆನ್ ಅಧ್ಯಾಯ ಅರ್ರಅದ್ 13 : 38.

3.       ಇದು ಮನಸ್ಸನ್ನು ಪುನಶ್ಚೇತನಗೊಳಿಸುತ್ತದೆ, ಆತ್ಮಕ್ಕೆ ಸಂತೋಷ ಮತ್ತು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಸರ್ವಶಕ್ತನು ಹೇಳುತ್ತಾನೆ: “ಹಾಗೆಯೇ ಅವನು ನಿಮಗಾಗಿ ನಿಮ್ಮೊಳಗಿಂದಲೇ, ನೀವು ನೆಮ್ಮದಿ ಪಡೆಯಬಹುದಾದ ಜೋಡಿಗಳನ್ನು ಸೃಷ್ಟಿಸಿರುವುದು ಮತ್ತು ನಿಮ್ಮ ನಡುವೆ ಪ್ರೀತಿ ವಾತ್ಸಲ್ಯಗಳನ್ನು ಬೆಳೆಸಿರುವುದು- (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಆಲಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ”. ಖುರ್’ಆನ್ ಅಧ್ಯಾಯ ಅರ್ರೂಮ್ 30 :21.

4.       ಅದು ಶೈತಾನನ ವಿರುದ್ಧ ಹೃದಯವನ್ನು ಬಲಪಡಿಸುತ್ತದೆ, ಇದು ನೋಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆತ್ಮವನ್ನು ತೃಪ್ತಿಪಡಿಸುತ್ತದೆ. [6]

 

 

ಮದುವೆ ಸಂಗಾತಿಯನ್ನು ಆಯ್ಕೆ ಮಾಡಲು

ಮದುವೆಯಾಗಲು ಬಯಸುವವರಿಗೆ ಇಸ್ಲಾಮ್ ಧರ್ಮವು ಆಯ್ಕೆಯ ಸ್ವಾತಂತ್ರ್ಯ ನೀಡಿದೆ. ಭಾವೀ-ಸಂಗಾತಿಗಳ ಪರಸ್ಪರ ಆಯ್ಕೆಗೆ ಹೆಚ್ಚಿನ ಪರಿಗಣನೆ ನೀಡಲಾಗಿದೆ: “ ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ (ಆಯ್ಕೆಯ) ಬೇರೆ ಪತಿಯರನ್ನು  ವಿವಾಹವಾಗುವುದಕ್ಕೆ ನೀವು ತಡೆಯೊಡ್ಡಬೇಡಿ”. ಖುರ್’ಆನ್ ಅಧ್ಯಾಯ ಅಲ್ ಬಖರಃ 2 : 232.

   ಸಂಗಾತಿಯ ಆಯ್ಕೆ ಪ್ರಕ್ರಿಯೆಯು ಸ್ವ-ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯದ ನಡುವೆ ಆರೋಗ್ಯಕರ ಸಮತೋಲನದ ಒಂದು ಕಾರ್ಯವಾಗಿರಬೇಕು ಮತ್ತು ಪ್ರಭಾವದ ಪರಿಗಣನೆ ಮತ್ತು ತಂದೆತಾಯಿಯರ / ಪೋಷಕರ ಒಪ್ಪಿಗೆ ಇರಬೇಕು. ಮದುವೆಯಾಗಲು ಬಯಸುವವರ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಭಾವವನ್ನು ತಡೆಗಟ್ಟುವಂತಿಲ್ಲ, ಮತ್ತು ತಂದೆತಾಯಿಯರ / ಪೋಷಕರ ಒಪ್ಪಿಗೆ ಅಥವ ಒಪ್ಪಂದಕ್ಕೆ ವಿರೋಧ ಮಾಡಬಾರದು ಕೆಲವೊಮ್ಮೆ ತಂದೆತಾಯಿಯರ / ಪೋಷಕರು ಇಚ್ಛೆಯನ್ನು ನಿರ್ಲಕ್ಷಿಸುತ್ತಾರೆ ಮತ್ತು ಸಂಗಾತಿಗಳಾಗಿ ಎಂದು ಅನುಮತಿಸುತ್ತಾರೆ.

ಇಸ್ಲಾಂನಲ್ಲಿ ಮದುವೆಗೆ ಪೂರ್ವ-ಕರಾರುವಾಗಿ ಪ್ರೀತಿಯಲ್ಲಿ ಬೀಳಬೇಕು ಎಂದೇನಿಲ್ಲ. ಆದಾಗ್ಯೂ, ಸೂಕ್ತವಾದ ಸಂಗಾತಿಯನ್ನು ಆಯ್ಕೆ ಮಾಡುವ ಉದ್ದೇಶಕ್ಕಾಗಿ, ಭಾವೀ-ಸಂಗಾತಿಗಳನ್ನು ನೋಡಲು ಮತ್ತು / ಅಥವ ಪರಸ್ಪರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತದೆ.

ಪೈಗಂಬರ್ ಮುಹಮ್ಮದ್(ಸ)ರು ಶಿಫಾರಸು ಮಾಡಿದ್ದಾರೆ: "ನಿಮ್ಮಲ್ಲಿ ಒಬ್ಬರು ಮದುವೆಗಾಗಿ ಒಬ್ಬ ಮಹಿಳೆಯನ್ನು ಸಂದೇಶ ಕಳುಹಿಸಿದಾಗ ಮತ್ತು ಅವಳನ್ನು ಮದುವೆಯಾಗಲು ಹತ್ತಿರ ತರುವಂತಹಾ ವಸ್ತುಗಳನ್ನು ನೋಡಲು ಸಾಧ್ಯವಾದರೆ, ಅವರು ಹಾಗೆ ಮಾಡಲಿ”. ಮುಸ್’ನದ್ ಅಹಮದ್ – 14586. ಮಹ್ರಮ್ ಸಂಬಂಧಿಕರ ನೇರ ಮೇಲ್ವಿಚಾರಣೆಯಡಿಯಲ್ಲಿ ವೈವಾಹಿಕ ಉದ್ದೇಶಗಳಿಗಾಗಿ ಒಬ್ಬರನ್ನೊಬ್ಬರು ನೋಡಲು ಅವಕಾಶವಿದೆ. ಈ ನಿಬಂಧನೆಯನ್ನು ಧರ್ಮನಿಷ್ಠೆ ಮತ್ತು ನಮ್ರತೆಯಿಂದ ಕಲ್ಪಿಸಿಕೊಳ್ಳಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಪೈಗಂಬರ್ ಮುಹಮ್ಮದ್(ಸ)ರು ಆದೇಶಿಸಿದ್ದಾರೆ: " ಯಾವುದೇ ವ್ಯಕ್ತಿಗೆ ಅವನಿಗೆ ಕಾನೂನುಬದ್ಧವಲ್ಲದ ಮಹಿಳೆಯೊಂದಿಗೆ ಪರ್ದಾದಿಂದ ಇರಬೇಕಾಗಿದೆ. ಸಹಿಹ್ ಅಲ್ ಬುಖಾರಿ ಸಂಪುಟ 4 : 250, ತಿರ್ಮಿಜಿ 3118.[7]

ನಿಷೇಧಿತ ಮದುವೆಯ ಸಂಗಾತಿಗಳು

 ಷರಿಯಾಹ್ (ಇಸ್ಲಾಮಿಕ್ ಕಾನೂನು) ಅಡಿಯಲ್ಲಿ, ಪರಸ್ಪರ ಸಂಬಂಧಗಳು ಅಸ್ಥಿತ್ವದಲ್ಲಿರುವ ಪುರುಷರು ಮತ್ತು ಮಹಿಳೆಯರ ನಡುವಿನ ವಿವಾಹಗಳು ನಿಷೇಧಿಸಲಾಗಿದೆ. ಈ ನಿಷೇಧಿತ ಸಂಭಂಧಗಳು ಶಾಶ್ವತ ಸ್ವರೂಪ ಅಥವ ತಾತ್ಕಾಲಿಕವಾಗಿರುತ್ತವೆ. ಪವಿತ್ರ ಖುರ್’ಆನ್ ನಿರ್ದೇಶಿಸಿರುವ ಶಾಶ್ವತವಾಗಿ ನಿಷೇಧಿತ ಮದುವೆಯ ಸಂಭಂಧಗಳನ್ನು ಈ ಕೆಳಗಿನ ವಿವರಣೆಯಲ್ಲಿ ನೀಡಲಾಗಿದೆ. “ ನಿಮ್ಮ ತಂದೆ ವಿವಾಹವಾಗಿದ್ದ ಮಹಿಳೆಯರನ್ನು ನೀವು ವಿವಾಹವಾಗಬೇಡಿ- ಹಿಂದೆ ಗತಿಸಿದ್ದು ಇದಕ್ಕೆ ಹೊರತಾಗಿದೆ . ಖಂಡಿತವಾಗಿಯೂ ಅದು ನಾಚಿಕೆಗೇಡಿನ ಹೀನಕಾರ್ಯವಾಗಿದೆ ಮತ್ತು ತೀರಾ ದುಷ್ಟ ಮಾರ್ಗವಾಗಿದೆ. / ನಿಮ್ಮ ಮಾತೆಯರನ್ನು, ನಿಮ್ಮ ಪುತ್ರಿಯರನ್ನು, ನಿಮ್ಮ ಸಹೋದರಿಯರನ್ನು, ನಿಮ್ಮ ತಂದೆಯ ಸಹೋದರಿಯರನ್ನು, ನಿಮ್ಮ ತಾಯಿಯ ಸಹೋದರಿಯರನ್ನು, ನಿಮ್ಮ ಸಹೋದರರ ಪುತ್ರಿಯರನ್ನು, ನಿಮ್ಮ ಸಹೋದರಿಯ ಪುತ್ರಿಯರನ್ನು,  ನಿಮಗೆ ಹಾಲುಣಿಸಿದ್ದ ನಿಮ್ಮ ಮಾತೆಯರನ್ನು, ನಿಮ್ಮ ಜೊತೆ ಹಾಲುಂಡ (ಕಾರಣಕ್ಕಾಗಿ) ಸಹೋದರಿಯರಾದವರನ್ನು, ನಿಮ್ಮ ಪತ್ನಿಯರ ಮಾತೆಯರನ್ನು ಮತ್ತು ನೀವು ಸಂಭೋಗಿಸಿರುವಂತಹಾ ನಿಮ್ಮ ಪತ್ನಿಯರು ಹೆತ್ತ ಮತ್ತು ನಿಮ್ಮ ಪೋಷಣೆಯಲ್ಲಿರುವ ನಿಮ್ಮ ಮಲ ಪುತ್ರಿಯರನ್ನು (ವಿವಾಹವಾಗುವುದನ್ನು) ನಿಮ್ಮ ಪಾಲಿಗೆ ನಿಷೇಧಿಸಲಾಗಿದೆ- ನೀವು ಆ ಪತ್ನಿಯರ ಜೊತೆ ಸಂಭೋಗಿಸಿಲ್ಲವಾದರೆ(ಅವರನ್ನು ಬಿಟ್ಟು ಅವರ  ಪುತ್ರಿಯರನ್ನು ವಿವಾಹವಾಗುವುದಕ್ಕೆ) ಆಕ್ಷೇಪವಿಲ್ಲ. ಹಾಗೆಯೇ ನಿಮ್ಮ ಸ್ವಂತ ಪುತ್ರರ ಪತ್ನಿಯರಾಗಿದ್ದವರು (ನಿಮಗೆ ನಿಷಿದ್ಧರಾಗಿದ್ದಾರೆ). ಮತ್ತು ಏಕಕಾಲದಲ್ಲಿ ಇಬ್ಬರು ಸಹೋದರಿಯರನ್ನು ನೀವು ವಿವಾಹವಾಗುವುದು (ನಿಷಿದ್ಧವಾಗಿದೆ) – ಈ ಹಿಂದೆ ನಡೆದು ಹೋಗಿರುವುದರ ಹೊರತು. ಖಂಡಿತವಾಗಿಯೂ ಅಲ್ಲಾಹ್’ನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ. / ಮಹಿಳೆಯರ ಪೈಕಿ ಇನ್ನೊಬ್ಬರ ವಿವಾಹ ಬಂಧನದಲ್ಲಿರುವವರು ನಿಮಗೆ ನಿಷಿದ್ಧರಾಗಿದ್ದಾರೆ – (ಯುದ್ಧದಲ್ಲಿ) ದಾಸಿಯರಾಗಿ ನಿಮ್ಮ ವಷಕ್ಕೆ ಬಂದಿರುವವರ ಹೊರತು. ಇದು ನಿಮ್ಮ ಪಾಲಿಗೆ ಅಲ್ಲಾಹ್’ನ ಆದೇಶವಾಗಿದೆ. ಅವರ ಹೊರತು ಇತರ ಸ್ತ್ರೀಯರು ನಿಮ್ಮ ಪಾಲಿಗೆ ಸಮ್ಮತರಾಗಿರುವರು – ಆದರೆ ನೀವು ನಿಮ್ಮ ಸಂಪತ್ತನ್ನು ವ್ಯಯಿಸಿ (ನಿಯಮಾನುಸಾರ ಮಹ್ರ್ ಕೊಟ್ಟು) ಅವರನ್ನು ವಿವಾಹವಾಗಬೇಕು. ಸ್ವೇಚ್ಛಾಚಾರ ನಡೆಸಬಾರದು. ನಿಮ್ಮ ಪೈಕಿ, ಅವರಲ್ಲಿನ ಯಾರನ್ನಾದರೂ ಅನುಭವಿಸಿರುವವರು, ಅವರ ನಿರ್ದಿಷ್ಟ ಹಕ್ಕನ್ನು (ಮಹ್ರ್ ಅನ್ನು) ಅವರಿಗೆ ಪಾವತಿಸಬೇಕು. ಇನ್ನು ನೀವು ಅದನ್ನು ನಿಗದಿಪಡಿಸಿಕೊಂಡ ಬಳಿಕ (ಪಾವತಿಯ ಸಮಯದ ಕುರಿತು) ಪರಸ್ಪರ ಒಪ್ಪಿಕೊಂಡರೆ ತಪ್ಪಿಲ್ಲ. ಖಂಡಿತವಾಗಿಯೂ ಅಲ್ಲಾಹ್’ನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.  ಖುರ್’ಆನ್ ಅಧ್ಯಾಯ ಅನ್ನಿಸಾ 4 : 22-24.

 ಮೇಲಿರುವ ಸೂಕ್ತಿಗಳಿಂದ, ಮುಸ್ಲಿಮನು ಈ ಕೆಳಗಿನವರನ್ನು ಮದುವೆಯಾಗಲೇಬಾರದು ಎಂಬುದು ಸ್ಪಷ್ಟವಾಗುತ್ತದೆ:

1.        ತನ್ನ ತಾಯಿ

2.       ತನ್ನ ಮಲತಾಯಿ (ಈ ಅಭ್ಯಾಸ ನೈಜೀರಿಯಾದಲ್ಲಿ ಯೊರುಬಾ ಭೂಮಿಯಲ್ಲಿ ಮುಂದುವರಿಯುತ್ತದೆ, ಕೆಲವು ಸಂದರ್ಭಗಳಲ್ಲಿ ಹಿರಿಯ ಮಗ ತನ್ನ ತಂದೆಯ ಕಿರಿಯ ಹೆಂಡತಿಯನ್ನು ಪಡೆದುಕೊಂಡಿದ್ದಾನೆ)

3.       ಅವನ ಅಜ್ಜಿ (ತಂದೆಯ ಮತ್ತು ತಾಯಿಯ ತಾಯಂದಿರು ಮತ್ತು ಎಲ್ಲಾ ಮುಂಚಿನ ತಾಯಂದಿರನ್ನೂ ಒಳಗೊಂಡಂತೆ ದೊಡ್ಡ ಅಜ್ಜಿಯರು)

4.       ಅವನ ಮಗಳು (ಮೊಮ್ಮಕ್ಕಳು ಮತ್ತು ಅವರನ್ನೂ ಅದೇ ಸಂತತಿಯಲ್ಲಿ ಮೀರಿ)

5.       ಅವನ ಸಹೋದರಿ (ಸಂಪೂರ್ಣ, ಸಂಪ್ರದಾಯ ಅಥವ ಗರ್ಭಾಶಯದ)

6.       ಅವನ ತಂದೆಯ ಸಹೋದರಿಯರು (ತಂದೆಯ ಅಜ್ಜ ಸಹೋದರಿಯರು ಸೇರಿದಂತೆ)

7.        ಅವನ ತಾಯಿಯ ಸಹೋದರಿಯರು (ತಾಯಿಯ ಅಜ್ಜಿಯ ಸಹೋದರಿಯರು ಸೇರಿದಂತೆ)

8.       ಅವನ ಸಹೋದರ ಪುತ್ರಿಯರು

9.       ಅವನ ಸಾಕು(ಮಲ) ತಾಯಿ

10.      ಅವನ ಸಾಕು(ಮಲ) ತಾಯಿಯ ಸಹೋದರಿ

11.       ಅವನ ಸಹೋದರಿಯ ಮಗಳು

12.       ಅವನ ಸಾಕು(ಮಲ) ಸಹೋದರಿ

13.       ಅವನ ಪತ್ನಿ ತಾಯಿ

14.      ಅವನ ಮಲ-ಮಗಳು (ಅಂದರೆ ಮದುವೆಯನ್ನು ಪೂರ್ಣಗೊಳಿಸಿದಲ್ಲಿ ಅವನು ಮದುವೆಯಾದ ಮಹಿಳೆಯ ಮಾಜಿ ಗಂಡನ ಮಗಳು. ಹಾಗಿದ್ದರೂ, ಅಂತಹ ಮದುವೆಯು ನೆರವೇರಿಸದಿದ್ದರೆ, ನಿಷೇಧವಿಲ್ಲ)

15.       ಅವನ ನೈಜವಾದ ಮಗನ ಹೆಂಡತಿ.

ಸಾಂಕ್ರಾಮಿಕತೆ, ಆಕರ್ಷಣೆ ಮತ್ತು ಉಸ್ತುವಾರಿ ಆಧಾರದ ಮೇಲೆ ಈ ನಿಷೇಧಗಳ ಹಿಂದೆ ಒಂದು ಶ್ರೇಷ್ಠ ಬುದ್ಧಿವಂತಿಕೆಯಿದೆ. ಮದುವೆಗಳನ್ನು ವಿರೋಧಿಸಿದಾಗ ಜನರು ತಮ್ಮ ಮನಸ್ಸಿನಲ್ಲಿ ಈ ನಿಷೇಧಗಳನ್ನು ಇಟ್ಟುಕೊಳ್ಳದಿದ್ದರೆ ಯಾವುದೇ ಸಾಮಾಜಿಕ ಒಗ್ಗೂಡಿಸುವಿಕೆ ಅಸ್ತಿತ್ವದಲ್ಲಿಲ್ಲ.

ತಾತ್ಕಾಲಿಕ ನಿಷೇಧಗಳು ಪಕ್ಷಗಳು ಇರಿಸಲ್ಪಟ್ಟ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಉಂಟಾಗುತ್ತವೆ. ಪರಿಸ್ಥಿತಿಗಳು ಬದಲಾಗಿದರೆ, ನಿಷೇಧವೂ ಸಹ ಕಣ್ಮರೆಯಾಗುತ್ತದೆ. ಅವು ಹೀಗಿವೆ:

1.        ಒಂದೇ ಸಮಯದಲ್ಲಿ ಒಬ್ಬ ಇಬ್ಬರು ಸಹೋದರಿಯರನ್ನು ಪತ್ನಿಯರೆಂದು ಹೊಂದಿರಬಾರದು ಮತ್ತು ಅದೇ ಸಮಯದಲ್ಲಿ ಒಂದು ಹೆಣ್ಣು ಮತ್ತು ಇನ್ನೊಬ್ಬಾಕೆಯನ್ನು ಮದುವೆಯಾಗಬಹುದು.

2.       ಒಬ್ಬ ವ್ಯಕ್ತಿಯು ಈಗಾಗಲೇ ಮದುವೆಯಾದ ಮಹಿಳೆಯನ್ನು ಮದುವೆಯಾಗಬಾರದು. ಆದಾಗ್ಯೂ, ಮದುವೆಯನ್ನು ಅವಳ ಹಿಂದಿನ ಗಂಡನ ಮರಣದ ಮೂಲಕ ಆದರೆ ತಕ್ಷಣವೇ ಈ ಅಡಚಣೆಯನ್ನು ತೆಗೆದುಹಾಕಲಾಗುತ್ತದೆ, ಅಥವಾ ವಿಚ್ಛೇದನದ ನಂತರ 'ಇದ್ದತ್ (ಹಿಮ್ಮೆಟ್ಟುವಿಕೆ ಅಥವ ಕಾಯುವ ಅವಧಿಯ) ಅವಧಿ ಮುಗಿದ ನಂತರ.

3.       ಒಬ್ಬ ಪುರುಷನಿಗೆ ಒಂದೇ ಸಮಯದಲ್ಲಿ ನಾಲ್ಕು ಹೆಂಡತಿಯರಿಗಿಂತ ಹೆಚ್ಚು ಹೆಂಡತಿಯರು ಇರಬಾರದು. ಪತ್ನಿಯರಲ್ಲಿ ಒಬ್ಬರು ತೀರಿಕೊಂಡಾಗ ಅಥವ ವಿಚ್ಛೇದನಗೊಂಡಾಗ ಈ ಅಡೆತಡೆಯು ಸಹಜವಾಗಿ ತೆಗೆದುಹಾಕಲ್ಪಡುತ್ತದೆ.

4.       ಒಬ್ಬ ಮನುಷ್ಯ ಅವಳ 'ಇದ್ದತ್’ನ ಸಮಯದಲ್ಲಿ ಮಹಿಳೆಯನ್ನು ಮದುವೆಯಾಗಬಾರದು. [8] [9]

ಮದುವೆ ಉದ್ದೇಶ

ಖುರ್’ಆನಿನ್ನಲ್ಲಿ "ಜವೌಜ್" ಪದವನ್ನು ಜೋಡಿ ಅಥವ ಸಂಗಾತಿಯನ್ನು ಅರ್ಥೈಸಲು  ಬಳಸಲಾಗಿದೆ. ಸಾಮಾನ್ಯವಾಗಿ ಇದು ಮದುವೆಯ ಬಳಕೆಯನ್ನು ಸೂಚಿಸುತ್ತದೆ. ಮದುವೆಯ ಸಾಮಾನ್ಯ ಉದ್ದೇಶವೆಂದರೆ ಅದು ಲೈಂಗಿಕತೆಯು ಪರಸ್ಪರ ಸಂತಸವನ್ನು ಪರಸ್ಪರ ಪ್ರೀತಿಯನ್ನು ಒದಗಿಸುತ್ತದೆ, ಮಕ್ಕಳನ್ನು ಪಡೆದು ಶಾಂತಿಯಿಂದ ಬದುಕಬೇಕು ಮತ್ತು ಶಾಂತಿಯು ಅಲ್ಲಾಹ್’ನ ಆಜ್ಞಾಪಾಲನೆಯಲ್ಲಿದೆ.

   ಮದುವೆ ಮೂಲಕ, ಒಬ್ಬ ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವು ಕಾನೂನುಬದ್ಧವಾಗಿ ಪರಿಣಮಿಸುತ್ತದೆ. ಇದು ಮನರಂಜನೆಗಾಗಿ ಮತ್ತು ಸಂತಾನೋತ್ಪತ್ತಿಗಾಗಿ ಕಾನೂನುಬದ್ಧವಾದ ಹೊರದಾರಿಗಳನ್ನು ಒದಗಿಸುತ್ತದೆ. ಲೈಂಗಿಕತೆ ನೈಸರ್ಗಿಕ ಮತ್ತು ಒಳ್ಳೆಯದು ಎಂದು ಇಸ್ಲಾಮ್ ಪರಿಗಣಿಸುತ್ತದೆ, ಆದರೆ ಮದುವೆಯ ಪಾಲುದಾರರಿಗೆ ಅದರ ಪರಿಣಾಮಗಳ ಜವಾಬ್ದಾರಿಯನ್ನು ಮೊದಲು ಖಚಿತಪಡಿಸಿಕೊಳ್ಳಲು ನಿರ್ಬಂಧಿಸುತ್ತದೆ.

   ಮದುವೆ ಆಧ್ಯಾತ್ಮಿಕ, ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಸಹಭಾಗಿತ್ವವನ್ನು ಒದಗಿಸುತ್ತದೆ. ಈ ಒಡನಾಟವು ಪ್ರೀತಿ, ದಯೆ, ಸಹಾನುಭೂತಿ, ಪರಸ್ಪರ ವಿಶ್ವಾಸ, ಸಾಂತ್ವನ ಮತ್ತು ಸಹಾಯವನ್ನು (ಸಖಿನಾ) ಹುಟ್ಟುಹಾಕುತ್ತದೆ. ಇದು ಒಂದು ಕುಟುಂಬವನ್ನು ಬೆಳೆಸಲು ಆಧ್ಯಾತ್ಮಿಕ ಮತ್ತು ಕಾನೂನುಬದ್ಧ ಅಡಿಪಾಯವನ್ನು ಇಡುತ್ತದೆ. ವೈವಾಹಿಕ ಒಕ್ಕೂಟದಿಂದ ಹುಟ್ಟಿದ ಮಕ್ಕಳು ನ್ಯಾಯಸಮ್ಮತವಾಗುವರು ಮತ್ತು ಪರಂಪರೆಗಳ ಪರಸ್ಪರ ಹಕ್ಕುಗಳನ್ನು ಸ್ಥಾಪಿಸುತ್ತಾರೆ. [10]

ಪ್ರಾಮಾಣಿಕ ಪತ್ನಿಗಾಗಿ ಮತ್ತು ಸಂತತಿಗಾಗಿ ದುವಾ

 “ನಮ್ಮೊಡೆಯಾ! ನಮ್ಮ ಮಡದಿಯರು ಮತ್ತು ನಮ್ಮ ಮಕ್ಕಳ ಮೂಲಕ ನಮ್ಮ ಕಣ್ಣುಗಳಿಗೆ ನೆಮ್ಮದಿಯನ್ನು (ಮನಸ್ಸಿಗೆ ಶಾಂತಿಯನ್ನು) ಒದಗಿಸು ಮತ್ತು ನಮ್ಮನ್ನು ಧರ್ಮ ನಿಷ್ಠರ ನೇತಾರರಾಗಿಸು, ಎಂದು ಅವರು ಪ್ರಾರ್ಥಿಸುತ್ತಾರೆ”. ಖುರ್’ಆನ್ ಅಧ್ಯಾಯ ಅಲ್ ಫುರ್’ಖಾನ್ 25 : 74 [11]

ಉಲ್ಲೇಖಗಳು

[1]http://www.qiran.com/marriage/encouragement_of_marriage_and_having_children.asp

[2]http://www.merriam-webster.com/dictionary/marriage

[3]http://islamic-world.net/sister/purpose_and_obligation.htm

[4]http://www.sunnah.com/bukhari

[5]http://www.qiran.com/marriage/encouragement_of_marriage_and_having_children.asp

[6]http://www.qiran.com/marriage/marriage_purpose_and_obligation.asp

[7]http://www.qiran.com/marriage/selecting_a_marriage_partner.asp

[8]http://muttaqun.com/marriage.html

[9]http://www.islamswomen.com/marriage/intro_to_marriage.php

[10] http://islamic-world.net/sister/purpose_and_obligation.htm

[11] http://quran.com/25/74

1370 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ