ಇಜ್’ತೆಬ

   ಇಜ್’ತೆಬ ಅರಬಿ ಭಾಷಾ ಪದವಾಗಿದೆ, ಇದರ ಅರ್ಥ ಎಹ್ರಾಮ್’ನ ಮೇಲ್ಭಾಗದ ಬಟ್ಟೆಯನ್ನು  ಬಲ ಭುಜದ ಕೆಳ ಕುಳಿಯಿಂದ ಹಾಯಿಸಿ, ಎಡಭುಜದ ಮೇಲೆ ಹಾಕಿಕೊಳ್ಳುವುದು, ಬಲಭುಜವನ್ನು ನಗ್ನವಾಗಿ ಬಿಡುವುದು. ಇಜ್’ತೆಬ ತವಾಫ್ ಎ ಖುದೂಮ್’ನಲ್ಲಿನ ಸುನ್ನತ್ ಆಗಿದೆ (ಮಕ್ಕಾ ತಲುಪಿದಾಗಿನ ತವಾಫ್) ಆದ್ದರಿಂದ ಯಾರು ಇಜ್’ತಿಬ ಇಲ್ಲದೆ ತವಾಫ್ ಮಾಡುತ್ತಾರೆ ',,,,,,,,,,,,,,,,,,,,,,,,,, 

ಪರಿವಿಡಿ

  ಇಸ್ಲಾಮಿಕ್ ಅರ್ಥ

 ಇಜ್’ತಿಬಾ ಎಹ್ರಾಮ್ ಸ್ಥಿತಿಯಲ್ಲಿರುವ ಒಬ್ಬ ವ್ಯಕ್ತಿಗಾಗಿ ಆಗಿದೆ (ಹಜ್ಜ್ ಅಥವ ಉಮ್ರಾಃ ಇವೆರಡರಲ್ಲಿ ಒಂದಕ್ಕೆ) ತನ್ನ ಮೇಲಿನ ಉಡುಪನ್ನು ಬಲಭಾಗದ ತನ್ನ ತೋಳಿನ ಕೆಳಗಿರುವಂತೆ ಹಾಯಿಸಿ ಮತ್ತು ಅವನ ಎಡಭಾಗದ ಭುಜದ ಮೇಲೆ ಹಾಕಿ, ಹೀಗೆ ಅವನ ಬಲ ಭುಜವನ್ನು ನಗ್ನವಾಗಿ ತೋರಿಸುವಂತಿರಬೇಕು. ತವಾಫ್ ನಿರ್ವಹಿಸುವ ಯಾತ್ರಾರ್ಥಿಗಾಗಿ ಇಜ್’ತಿಬ 'ಅಪೇಕ್ಷಣೀಯವಾಗಿದೆ (ಕಾಬಾದ ಸುತ್ತ ಸುತ್ತುವಿಕೆಯ ಸಂದರ್ಭದಲ್ಲಿ) ಅವರು ಮೊದಲು ಮಕ್ಕಾಗೆ ಆಗಮಿಸಿದಾಗ, ಉಮ್ರಾಃ ನಿರ್ವಹಿಸಲು ಮೀಕಾತ್’ನಿಂದ ಬರುವ ವ್ಯಕ್ತಿಗೆ ಸಂಬಂಧಿಸಿದಂತೆ (ಎಹ್ರಾಮ್ ಹೊಂದಲು ಅವರು ನಿರ್ಬಂಧಿಸಿದ ಸ್ಥಳ) ಹಾಗೆ ಮಾಡಬೇಕೊ ಅಥವ ಮಾಡಬಾರದು ಎಂಬುದಕ್ಕೆ ಅವರು ಆಯ್ಕೆ ಮಾಡುತ್ತಾರೆ, ಆದರೆ ಸುನ್ನಾದಿಂದ ಅನುಸರಿಸಬೇಕಾದರೆ ಅವನು ಅದನ್ನು ಮಾಡುವುದು ಒಳ್ಳೆಯದು. [2]

   ತವಾಫ್ ಎ ಖುದೂಮ್ ಸಂಧರ್ಭದಲ್ಲಿ ಇಜ್’ತಿಬ

  ಇದು ತವಾಫ್ ಅಲ್-ಖುದುಮ್’ನಲ್ಲಿ ಬಳಸಲಾಗುವ ಎಹ್ರಾಮ್ ವಿಧಾನವಾಗಿದೆ. ಗಂಡು ಯಾತ್ರಿಗಳು ತನ್ನ ಎಹ್ರಾಮ್’ನ ಮೇಲ್ಭಾಗದ ಒಂದು ತುದಿಯನ್ನು ತಮ್ಮ ಎಡ ಭುಜದ ಮೇಲಿಂದ ಹಾಯಿಸಿ ಹಿಂಭಾಗದಿಂದ ಮುಂಭಾಗದಲ್ಲಿ ತರಬೇಕು. ಇನ್ನೊಂದು ತುದಿ ಅವನ ಹಿಂಭಾಗದಲ್ಲಿ ಹೋಗುತ್ತದೆ, ಅವನ ಬಲ ಭುಜದ ಕೆಳಗಿನಿಂದ, ಮುಂಭಾಗಕ್ಕೆ ಸುತ್ತುವರೆಸಬೇಕು, ಮತ್ತು ಅಂತಿಮವಾಗಿ ಅವನ ಎಡ ಭುಜದ ಮೇಲೆ ಧರಿಸಬೇಕು. ಇಜ್’ತಿಬವನ್ನು ಇತರ ಯಾವುದೇ ರೀತಿಯ ತವಾಫ್’ನಲ್ಲಿ ಗಮನಿಸುವುದಿಲ್ಲ ಆದರೆ ಈ ತವಾಫ್’ಗಳಲ್ಲಿ ಅದು ಅನುಮತಿಸಲ್ಪಡುತ್ತದೆ. ಅಲ್ಲದೆ, ಯಾತ್ರಾರ್ಥಿಗಳು ಸುನ್ನತ್ತಿನೊಂದಿಗೆ ತವಾಫ್ ಅಲ್-ಖುದುಮ್’ನ ನಂತರ ಅಥವ ಇತರ ತವಾಫ್’ನ ಸಂದರ್ಭದಲ್ಲಿ ಪ್ರಾರ್ಥನೆ ಮಾಡುವಾಗ ಅಥವ ಪೇಚಿಗೆ ಸಿಲುಕಿದಾಗ, ಅವನು ತನ್ನ ಭುಜಗಳನ್ನು ಹೊದಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಜವಾಗಿ ತವಾಫ್ ಅಲ್-ಖುದುಮ್ ಅನ್ನು ನಿರ್ವಹಿಸುವಾಗ ಮಾತ್ರವೇ ಇಜ್’ತಿಬ ಅಭ್ಯಾಸ ಮಾಡಬೇಕು. ಹೆಣ್ಣು ಯಾತ್ರಿಗಳು ಯಾವುದೇ ಎಹ್ರಾಮ್ ಅನ್ನು ಧರಿಸುವುದಿಲ್ಲ, ಇದರಿಂದ ಅವರಿಗೆ ಇಜ್’ತಿಬದ ಪ್ರಶ್ನೆ ಉದ್ಭವಿಸುವುದಿಲ್ಲ. [3]

  ಹದೀಸ್

 ತನ್ನ ತಂದೆಯಿಂದ ಇಬ್ನೆ ಅಬು ಯಲ ವರದಿಮಾಡುವರು; ಪೈಗಂಬರ್ (ಸ)ರು ಕಾಬಾವನ್ನು ಸುತ್ತುವರೆಯುತ್ತಿರುವಾಗ ಇಜ್’ತಿಬವನ್ನು ಗಮನಿಸುತ್ತಿದ್ದರು, ಅವರು ತಮ್ಮ ಮೇಲೆ ಹಸಿರು ನಿಲುವಂಗಿಯನ್ನು ಹೊಂದಿದ್ದರು, ಅಬುದಾವುದ್ 1883ಇಬ್ನೆ ಮಾಜಾ 2954.

 ನೀವು ತವಾಫ್’ನ್ನು ಆರಂಭಿಸುವ ಮೊದಲು ಕಡ್ಡಾಯವಾಗಿ ಬಲಭುಜವನ್ನು ಎಹ್ರಾಮ್ ಬಟ್ಟೆಯನ್ನು ಸುತ್ತುತ್ತಾ ಮುಚ್ಚಬಾರದು, ಅದು ಬಲ ಭುಜದ ಕೆಳಗಿನಿಂದ (ಬಲ ಭುಜದ ಕೆಳಗಿಳಿಯೊಂದಿಗೆ) ಎಡ ಭುಜದ ಮೆಲ್ಭಾಗಕ್ಕೆ ಹಾಯಿಸಬೇಕು. (ಇದನ್ನು ಹಾಲತ್-ಎ-ಇಜ್’ತೆಬ ಎಂದು ಹೆಸರಾಗಿದೆ) ಸುನನ್ ಅಬಿ ದಾವೂದ್ - 1884 [4]

  ನೋಡಿರಿ

  ಉಮ್ರಾಃ, ಹಜ್ಜ್, ಮೀಖಾತ್, ಇಹ್ರಾಮ್;

  ಉಲ್ಲೇಖಗಳು

[1] http://main.islamweb.net/emainpage/articles/114432/greybox/ver2/ver2/engblue/index.php?page=showfatwa&Option=FatwaId&Id=162917

[2] http://www.islamweb.net/emainpage/index.php?page=showfatwa&Option=FatwaId&Id=91154

[3] http://www.onislam.net/content/english/hajj/services/05.shtml

[4] http://www.sunnah.com/abudawud/11

291 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ