ಅಲ್ಲಾಹ್’ನ ಹಕ್ಕುಬಾದ್ಯತೆಗಳು


ಅಲ್ಲಾಹ್’ನು ತನ್ನ ಸೃಷ್ಟಿಗಳ ಮೇಲೆ ಅಧಿಪತ್ಯವನ್ನು ಹೊಂದಿದ್ದಾನೆ ಅಥವ ಸೃಷ್ಟಿಗಳ ಮೇಲಿನ ಎಲ್ಲಾರೀತಿಯಾದ  ಹಕ್ಕು ಕೇವಲ ಅಲ್ಲಾಹ್’ನಿಗೆ ಮಾತ್ರವೇ ಆಗಿದೆ. ಅವನು ಏಕೈಕ ಸೃಷ್ಟಿಕರ್ತನು, ಮತ್ತು ವಿಶ್ವವನ್ನು ಮುನ್ನಡೆಸುತ್ತಿರುವವನು ಅವನೊಬ್ಬನೇ, ಅವನು ಯಾವುದರಿಂದಲೂ ಪ್ರಾರಂಭ ಆದಂತಹವನಲ್ಲ. ಅವನೇ ಮಾನವ ಕುಲವನ್ನು ತಾಯಂದಿರ ಗರ್ಭದಲ್ಲಿ ಹಸುಳೆಯಾಗಿದ್ದಾಗ, ಮಗುವಾಗಿದ್ದಾಗ, ದೊಡ್ಡವರಾದಾಗ, ರಕ್ಷಿಸಿದಂತಹವನು. ಅವನು ಎಲ್ಲಾ ಮಾನವರನ್ನು ಸೃಷ್ಟಿಸಿ ಜೀವನಾಂಶಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಆಹಾರ ಸಾಮಗ್ರಿಗಳನ್ನು ಒದಗಿಸಿದಂತಹವನು ಒಬ್ಬನೇ.

 

ಪರಿವಿಡಿ

 

ಖುರ್’ಆನ್

ಅಲ್ಲಾಹ್ ಹೇಳಿದನು ಅದರ ಅನುವಾದವೇನೆಂದರೆ ; “ಮತ್ತು ನಿಮಗೇನೂ ತಿಳಿಯದಿದ್ದಾಗ ಅಲ್ಲಾಹ್’ನು ನಿಮ್ಮನ್ನು ತಾಯಂದಿರ ಉದರಗಳಿಂದ ಹೊರ ತಂದನು, ಮತ್ತು ನೀವು ಕೃತಜ್ಞರಾಗಬೇಕೆಂದು ನಿಮಗೆ ಕೇಳುವ ಸಾಮರ್ಥ್ಯವನ್ನು, ನೋಡುವ ಸಾಮರ್ಥ್ಯವನ್ನು, ಹೃದಯಗಳನ್ನು ರಚಿಸಿಕೊಟ್ಟನು.” ಖುರ್’ಆನ್ ಅಧ್ಯಾಯ ಅನ್ನಹ್ಲ್ ; 16 : 78 .

 

“ಅಲ್ಲಾಹ್’ನು ನಿಷೇಧಿಸಿದ ಜೀವನೋಪಾಯವನ್ನು ಯಾರೇ ಆಗಲಿ ಬಳಸಿದರೆ ಅವರು ತಕ್ಷಣವೇ ನಾಶವಾಗಿದ್ದಾರೆ, ಅಲ್ಲಾಹ್’ನ ಅನುಗ್ರಹವು ಮಾನವಕುಲ ಹಾಗು ಯಾವೆಲ್ಲ ವಸ್ತುಗಳಲ್ಲಿ ಇಟ್ಟಿದ್ದಾನೆಯೋ ಅದೆಲ್ಲವೂ ಅದರ ಜೊತೆಯಲ್ಲಿಯೇ ಇರಲಿದೆ.

 

ಹದೀಸ್

ಅಲ್ಲಾಹ್’ನ ಮೇಲಿನ ನಂಬಿಕೆಗಳನ್ನು ತಿರಸ್ಕರಿಸುವುದು ಮಹಾಪಾಪವಾಗಿದೆ. ಅಥವ ಅವನು ಮಹಾಪಾಪಗಳನ್ನೇ ಬಯಸಿದ್ದನು ‘ಅವನು ಹೇಳಿದನು’  “ಅಲ್ಲಾಹ್’ನೊಂದಿಗೆ ಸಹಭಾಗಿತ್ವವಾಗೀಸಿದುದಕ್ಕಾಗಿ” ಸಹಿಹ್ ಅಲ್ ಬುಖಾರಿ 8 : 8. ಹಾಗಾಗಿ ಮಾನವರಿಗೆ ಅಲ್ಲಾಹ್’ನ ಮೇಲಿರುವ ಹಕ್ಕುಬಾಧ್ಯತೆ ಏನೆಂದರೆ, ‘ಅವನೊಂದಿಗೆ ಯಾರನ್ನೂ ಸಹಭಾಗಿತ್ವವನ್ನಾಗಿರಿಸದಿರುವುದು.

 

ಅಲ್ಲಾಹ್’ನಿಂದ ಜೀವನಾವಷ್ಯಕಗಳು

ಅಲ್ಲಾಹ್’ನ ನಿಯಂತ್ರಣವು ಅವನ ಅಧೀನದಲ್ಲಿರುವ ಎಲ್ಲದರಮೆಲಿರುವುದು ಸರಿ, ಅವನ ಔದಾರ್ಯಗಳು ಎಣಿಸಲಾರದಷ್ಟಿವೆ. ಮಾನವರ ಜೀವನದಲ್ಲಿ ಅವನ ಪಾತ್ರವೆನಾದರೂ ಇಲ್ಲದಿದ್ದರೆ ಏನೊಂದೂ ಸರಿಯಾಗಿ ನಿರ್ವಹಿಸಲು ಆಗುತ್ತಿರಲಿಲ್ಲ. ಅಲ್ಲಾಹ್’ ಖಂಡಿತವಾಗಿ ತನ್ನ ಅಧೀನದಲ್ಲಿರುವ ಜೀವನೋಪಾಯಗಳಿಂದ ಏನನ್ನೂ ಬಯಸುವುದಿಲ್ಲ, ಅವನು ಹೇಳುವನು’  “ ನಾವು ನಿಮ್ಮೊಡನೆ ಆಹಾರವನ್ನೆನೂ ಬೇಡುವುದಿಲ್ಲ, ನಿಜವಾಗಿ ನಾವೇ ನಿಮಗೆ ಆಹಾರವನ್ನು ನೀಡುತ್ತೇವೆ, ಅಂತಿಮ ಸಾಫಲ್ಯವೂ ಧರ್ಮ ನಿಷ್ಟೆಗೆ ಸಲ್ಲುವುದು. ಖುರ್’ಆನ್ ; ಅಧ್ಯಾಯ , ತಾಹಾ : 20 : 132.

 

ಸೃಷ್ಟಿಯ ಉದ್ದೇಶ

ಅಲ್ಲಾಹ್’ನು ತನ್ನ ಗುಲಾಮ ಅಥವಾ ದಾಸರಿಂದ ಕೇವಲ ಒಂದನ್ನು ಮಾತ್ರ ಬಯಸುತ್ತಾನೆ.  “ ನಾನು ಜಿನ್’ಗಳನ್ನೂ ಹಾಗೂ ಮಾನವರನ್ನು ನನ್ನ ಆರಾಧನೆಗೆಂದೇ ಸೃಷ್ಟಿಸಿರುವೆನು’’ . ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ನಾನು ಅಪೇಕ್ಷಿಸುವುದಿಲ್ಲ, ಖಂಡಿತವಾಗಿಯೂ ಅಲ್ಲಾಹ್’ನೇ ಎಲ್ಲಾ ಅನ್ನದಾತನೂ ಭಾರೀ ಶಕ್ತಿಶಾಲಿಯೂ ಪರಮ ಸಮರ್ಥನೂ ಆಗಿದ್ದಾನೆ” . ಖುರ್’ಆನ್ ;ಅಧ್ಯಾಯ  ಅಝಾರಿಯಾತ್; 51 : 56-58.

   ಅಲ್ಲಾಹ್’ನು ಮಾನವ ಕುಲದಿಂದ ಬಯಸುವುದೇನೆಂದರೆ, ಅವನು ಕೇವಲ ಅವನನ್ನೇ ಆರಾಧಿಸಲಿ, ಅವನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿತ್ವವಾಗಿರಿಸಿ ಆಪಾದಿಸದಿರಲಿ. ಮುಖ್ಯವಾಗಿ ಆತನ ಗುಲಾಮವಾಗಿರುವುದರಲ್ಲಿ ಅವನು ತನ್ನನ್ನು ಮಾತ್ರವೇ ಶರಣಾಗಲಿ ಎಂಬುದು ಉದ್ದೇಶವಾಗಿದೆ. ಅವನ ಇತರೆ ಸೃಷ್ಟಿಗಳೆಲ್ಲವೂ ಅವನೀಗ ಮಾತ್ರ ಶರಣಾದಂತೆ ಹಾಗೂ ಅವನ ಅಧೀನದಲ್ಲಿರುವಂತೆಯೇ ಅವನ ನಿಷ್ಪಕ್ಷಪಾತವಾದ ಆರಾಧನೆಗೆ ಕೇವಲ ಒಬ್ಬನು ಮಾತ್ರವೇ ಅಸ್ತಿತ್ವದಲ್ಲಿದ್ದಾನೆ. ಅವನು ಪ್ರತಿಯೊಂದನ್ನೂ ತನ್ನ ಹಿಡಿತದಲ್ಲಿಟ್ಟುಕೊಂದಿದ್ದಾನೆ .

 

ಸರ್ವಕೃತಜ್ಞತೆಗಳು ಅಲ್ಲಾಹ್’ನಿಗಾಗಿಯೇ 

 ಅಲ್ಲಾಹ್’ನು ಒಬ್ಬನೇ ಕೃತಜ್ಞತೆಗೆ ಅರ್ಹನಾಗಿದ್ದಾನೆ, ಅವನೇ ಏಕೈಕನು, ಆರಾಧನೆಗೆ ಯೋಗ್ಯವಾಗಿರುವವನು ಅವನೊಬ್ಬನೇ. ಅಲ್ಲಾಹ್’ನು ಹೇಳಿದನು ಅದರ ಅನುವಾದವೇನೆಂದರೆ, “ ನಿಮ್ಮ ಬಳಿ ಇರುವ ಅನುಗ್ರಹಗಲೆಲ್ಲವೂ ಅಲ್ಲಾಹ್’ನ ಕಡೆಯಿಂದಲೇ ಬಂದಿದೆ, ಮತ್ತು ನಿಮಗೆ ಸಂಕಟವೆನಾದರು ತಟ್ಟಿದಾಗ ನೀವು ಅವನಲ್ಲೇ ಮೊರೆ ಇಡುತ್ತೀರಿ.” ಖುರ್’ಆನ್ :ಅಧ್ಯಾಯ  ಅನ್ನಹ್ಲ್ : 16 : 53.

 

ಪ್ರಾಮಾಣಿಕ ಶ್ರಮ

ಅಲ್ಲಾಹ್’ನು ತನ್ನ ದಾಸರಿಂದ ಏನ್ನನ್ನು ಬಯಸುತ್ತಾನೆಂದರೆ, ಸರಳತೆಯಿಂದ ಶ್ರಮಿಸುವುದು. ಅವನು ತನ್ನ ಆರಾಧನಾ ಕರ್ಮಗಳಲ್ಲಿ ಕpಣತೆಯನ್ನು ಬಯಸುವುದಿಲ್ಲ, ಮತ್ತು ಹೇಳಿದನು; “ಅಲ್ಲಾಹ್’ನ ಮಾರ್ಗದಲ್ಲಿ ಹೊರಾಡಬೇಕಾದರೀತಿಯಲ್ಲಿ ಹೋರಾಡಿರಿ. ಅವನು ತನ್ನ ಕಾರ್ಯಕ್ಕಾಗಿ ನಿಮ್ಮನ್ನು ಆರಿಸಿಕೊಂಡಿರುತ್ತಾನೆ ಮತ್ತು ಧರ್ಮದಲ್ಲಿ  ನಿಮಗೇನೂ  ಸಂಕೀರ್ಣತೆಯನ್ನಿರಿಸಿಲ್ಲ. ನಿಮ್ಮ ಪಿತಾಮಹರಾದ ಇಬ್ರಾಹೀಮರ ಸಮುದಾಯದಲ್ಲಿ ಸ್ಥಿರವಾಗಿರಿ. ಅಲ್ಲಾಹ್’ನು ಮೊದಲು ನಿಮ್ಮ ಹೆಸರನ್ನು ಮುಸ್ಲಿಮ್ ಎಂದಿಟ್ಟಿದ್ದನು ಮತ್ತು ಇದರಲ್ಲೂ ( ಖುರ್’ಆನಿನಲ್ಲೂ ನಿಮಗೆ ಇದೇ ಹೆಸರಿದೆ.) ಇದು ಸಂದೇಶವಾಹಕರು ನಿಮ್ಮ ಬಗ್ಗೆ ಸಾಕ್ಷಿಗಳಾಗಲಿಕ್ಕಾಗಿ ಮತ್ತು ನೀವು ಜನರ ಬಗ್ಗೆ ಸಾಕ್ಷಿಗಳಾಗಲಿಕ್ಕಾಗಿ (ಆಗಿರುತ್ತದೆ). ಆದುದರಿಂದ ನಮಾಜ್’ನ್ನು ಸಂಸ್ಥಾಪಿಸಿರಿ, ಜಕಾತ್ ಕೊಡಿರಿ ಮತ್ತು ಅಲ್ಲಾಹ್’ನೊಂದಿಗೆ ಸಂಬಂಧ ಸ್ಥಾಪಿಸಿಕೊಂಡಿರಿ, ಅವನೇ ನಿಮ್ಮ ರಕ್ಷಕ ಮಿತ್ರ, ಅತ್ಯಂತ ಶ್ರೇಷ್ಟ ರಕ್ಷಕ ಮಿತ್ರನವನು ಮತ್ತು ಅತ್ಯುತ್ತಮ ಸಹಾಯಕನವನು. ಖುರ್’ಆನ್. ಅಧ್ಯಾಯ ಅಲ್ ಹಜ್ : 22 : 78.

 

ಪ್ರಾಮಾಣಿಕತೆ ಮತ್ತು ನಿರಾಳ ಆರಾಧನೆ

ಅಲ್ಲಾಹ್’ನು ನಮ್ಮಿಂದ ಇಸ್ಲಾಮಿನ ಕಾನೂನಿನ ಪ್ರಕಾರ ಪ್ರಾಮಾಣಿಕ ನಿರಾಳ ಆರಾಧನೆಯನ್ನು ಬಯಸುತ್ತಾನೆ. ಒಂದು ದಿನಕ್ಕೆ ಐದು ಹೊತ್ತಿನ ಪ್ರಾರ್ಥನೆಯು (ನಮಾಜ್) ಅವನಿಂದ ಕ್ಷಮಾಶೀಲತೆಯನ್ನು ತರುವುದಕ್ಕಾಗಿ ಹಾಗೂ ಹೃದಯದ ಶುದ್ಧತೆಗಾಗಿ  ಇಟ್ಟಿದ್ದಾನೆ. ಮುಸ್ಲಿಮರು ಉತ್ತಮ ಮಾರ್ಗದಲ್ಲಿ ಅವನನ್ನು ಆರಾಧಿಸುವ ಪ್ರಯತ್ನವನ್ನು ಖಂಡಿತ ಮಾಡಬೇಕಾಗಿದೆ.  “ನಿಮಗೆ ಸಾಧ್ಯವಿದ್ದಷ್ಟು ಅಲ್ಲಾಹ್’ನಿಗೆ ಅಂಜಿರಿ” ಖುರ್’ಆನ್ : ಅಧ್ಯಾಯ ಅತ್ತಬುಗಾನ್ : 64 : 16. ಮುಹಮ್ಮದ್ (ಸ)ಪೈಗಂಬರ್ ಹೇಳಿದರು : “ಆರಾಧನಾ ಸಂದರ್ಭದಲ್ಲಿ ಸಾಧ್ಯವಿದ್ದಷ್ಟು ನಿಂತು ಆರಾಧಿಸಿರಿ, ಸಾಧ್ಯವಿರದಿದ್ದರೆ ಕುಳಿತು ಆರಾಧಿಸಿರಿ, ನಿಮಗೆ ಅದೂ ಸಾಧ್ಯವಾಗದಿದ್ದರೆ ಸಾಧ್ಯವಿದ್ದೆಡೆ ಒರಲಿ ಆರಾಧಿಸಿರಿ”. (ಸಹಿಹ್ ಬುಖಾರಿ ಭಾಗ 2 : 218.)

 

ಅಲ್ಲಾಹ್’ನು ತನ್ನ ದಾಸರಿಂದ ಸಂಪತ್ತಿನ ಒಂದು ಚಿಕ್ಕ ಭಾಗವನ್ನು ಅವಶ್ಯಕೆಯಿರುವ ಬಡವರಿಗಾಗಿ ಕೊಡಲೆಂದು ಬಯಸುತ್ತಾನೆ. ಹಣವಿಲ್ಲದೆ ಬಂದಂತಹವರಿಗೆ, ಸಾಲತೀರಿಸಲಾಗದವರಿಗೆ, ಹಾಗೂ ಯಾರು ಜಕಾತ್ ಹಣವನ್ನು ತೆಗೆದುಕೊಳ್ಳಲು ಅರ್ಹರಿದ್ದಾರೋ ಅವರಿಗೆ ಕೊಡಬೇಕಾಗಿದೆ. ಜಕಾತ್ ಶ್ರೀಮಂತರಿಗೆ ತೊಂದರೆಗೊಳಪಡಿಸುವುದೇಇಲ್ಲ. ಬಡವರಿಂದ ಅಸಾಧಾರಣ ಲಾಭ ಕೊಡಿಸುವುದಂತೂ ಸರಿ. ಹಾಗೆಯೇ ಅಲ್ಲಾಹ್’ನು ಉಪವಾಸವನ್ನು ಚಂದ್ರಮಾನದ ರಮಜಾನ್ ತಿಂಗಳಲ್ಲಿ ಬಯಸುತ್ತಾನೆ. ಅಲ್ಲಾಹ್’ನು ಹೇಳಿದನು : “ ನಿಮ್ಮಲ್ಲಿ ಈ ತಿಂಗಳನ್ನು ಕಂಡವನು ಉಪವಾಸ ಆಚರಿಸಬೇಕು. ( ಈ ತಿಂಗಳಿನಲ್ಲಿ) ರೋಗಿಯಾಗಿದ್ದವನು ಅಥವಾ ಪ್ರಯಾಣದಲ್ಲಿದ್ದವನು, ಇತರ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಬೇಕು” ಖುರ್’ಆನ್ : ಅಧ್ಯಾಯ 2:185.

 

ಹಜ್ನಿರ್ವಹಿಸುವುದು

ಹಜ್ ನಿರ್ವಹಿಸುವುದು ಕೂಡಾ ಜೀವನದಲ್ಲೊಂದು ಬಾರಿ ಸಾಮರ್ಥ್ಯವಿರುವಂತಹಾ ಮುಸ್ಲಿಮರ ಮೇಲೆ ಕಡ್ಡಾಯವಾಗಿದೆ. ಅದು ಸಾಮರ್ಥ್ಯವಿರುವವರಿಗೆ ಮಾತ್ರ. ಸಾಮಾನ್ಯವಾಗಿ ಸಾಮರ್ಥ್ಯವು ಅಲ್ಲಾಹ್’ನ ಆಜ್ಞೆಯಿಂದ ಮಾತ್ರ ಸಾಧ್ಯ. ಅದು ಅವನು ನಮಗೆ ನಿಶಿದ್ಧಗೊಳಿಸಿರುವುದರಿಂದ ದೂರ ಉಳಿದರೆ ಮಾತ್ರ ಸಾಧ್ಯವಿದೆ.  

 

ಈ ಮೇಲಿನ ಕಾರ್ಯಗಳನ್ನು ಅನುಸರಿಸಿದರೆ ಮಾತ್ರ ನಾವು ಅಲ್ಲಾಹ್’ನ ದಾಸರಾಗಲು ಸಾಧ್ಯ. ಇವುಗಳು ಅನುಸರಣೆಗೆ ಕಷ್ಟಕರವೇನಲ್ಲ, ನಮಗೆ ಬೇಡಿಕೆಗಳ ಪ್ರತಿಫಲ ಸಿಗುವುದು ಅಪಾರ, ಪ್ರತಿಫಲವೆಂದರೆ: “(ಅಂದು) ನರಕದಿಂದ ರಕ್ಷಿತನಾದವನು ಮತ್ತು ಸ್ವರ್ಗವನ್ನು ಪ್ರವೇಶಿಸಿದವನು ವಿಜಯಿಯಾದನು,ಇಹಲೋಕದ ಜೀವನವಂತೂ ಕೇವಲ ಒಂದು ಮೋಸದ ವ್ಯವಹಾರವೇ ಹೊರತು ಬೇರೇನೂ ಅಲ್ಲ. ಖುರ್’ಆನ್ :ಅಧ್ಯಾಯ  ಅಲ್ ಇಮ್ರಾನ್ : 3:185.

 

ಆಧಾರಅಥವ  ಅರಕ

ಪುಸ್ತಕ ; ಅಲ್ಲಾಹ್’ನ ಹಕ್ಕುಗಳು. ಲೇಖಕ : ಶೇಕ್ ಮುಹಮ್ಮದ್ ಇಬ್ನೆ ಸಹಿಹ್ ಅಲ್ ಉತ್ತೈಮೀನ್.

ಕನ್ನಡಕ್ಕೆ ; ಮುಹಮ್ಮದ್ ಉಮರ್ ಬಿನ್ ಮುಹಮ್ಮದ್ ಷರೀಫ್.

http://en.islamway.com/artiiele/8761?ref=w-new

ಅಧ್ಯಾಯ

940 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ