ಅಲ್ಲಾಹ್’ನು ಯಾರು

    ನಾವು ಅಲ್ಲಾಹ್’ನ ಕುರಿತು ಕೇವಲ ಅಲ್ಲಾಹ್’ನಿಂದಲೇ ತಿಳಿಯಬಹುದಾಗಿದೆ . ಮತ್ತು ಇದು ಎರಡು ಮಾರ್ಗಳಿಂದ  ಸಾಧ್ಯವಾಗಿದೆ .

   ಮೊದಲನೆಯದಾಗಿ : ಅಲ್ಲಾಹ್’ನು ಖುರ್’ಆನಿನ ಸೂಕ್ತಿಗಳಲ್ಲಿ ತೆರೆದಿಟ್ಟ ರಹಸ್ಯಗಳ ಮೂಲಕ, ಹಾಗೂ ಪೈಗಂಬರರು ಅಲ್ಲಾಹ್’ನ ಕುರಿತು ತಮ್ಮ ನುಡಿಗಳಲ್ಲಿ ತಿಳಿಸಿರುವುದರ ಮೂಲಕ.

   ಎರಡನೇಯದಾಗಿ: ಅಲ್ಲಾಹ್’ನು ಸೃಷ್ಟಿಸಿರುವ ಪ್ರಾಣಿಗಳು ಮತ್ತು ನಾವು ಕಾಣುತ್ತಿರುವ ಸಂಪೂರ್ಣ ಜಗತ್ತಿನಿಂದ. ಈ ಎರಡು ಮಾರ್ಗಗಳಿಂದ ನಮಗೆ ಅಲ್ಲಾಹ್’ನ ಮಹಾನತೆ, ಅವನ ಏಕತೆ, ರುಬೂಬಿಯ, ಉಲೂಹಿಯ, ಮತ್ತು ಅವನ ನಾಮಗುಣ ವಿಶೇಷತೆಗಳಲ್ಲಿ ಏಕೈಕನೆಂಬುದು ತಿಳಿಯುತ್ತದೆ. ಖುರ್’ಆನಿನಲ್ಲಿ ಇಂತಹಾ ಅನೇಕ ಅದ್ಭುತಗಳು ತುಂಬಿವೆ ಇನ್ನು ಬ್ರಹ್ಮಾಂಡದ ಕುರಿತು ಹೇಳುವುದಾದರೆ ಇದು ಜಗತ್ತಿನವರಿಗೆ ತೆರೆದಿಟ್ಟ ಗ್ರಂಥವಾಗಿದೆ. ಸಕಲ ಮಾನವಕುಲವು ಯಾವುದೇ ಭಾಷೆಯಲ್ಲಿ ಇದನ್ನು ಓದಬಹುದಾಗಿದೆ, ಹಾಗೂ ತನ್ನ ಸಾಮರ್ಥ್ಯಅನುಸಾರ ಓದುವುದರ ಜೊತೆಗೆ ಇತರರಿಗೂ ತಿಲಿಸಿಕೊಡಬಹುದಾಗಿದೆ. [1]

ಪರಿವಿಡಿ

ಅಲ್ಲಾಹ್ ಪದದ ಮೂಲ

    ಅಲ್ಲಾಹ್  ಎಂಬುದು ಮೂಲತಃ ಅರಬೀ ಭಾಷಾ ಪದ. ಇಸ್ಲಾಮಿನ ಪೂರ್ವದಿಂದಲೂ ಅರಬ್ ಜನಾಂಗದಲ್ಲಿ ಪ್ರಯೋಗದಲ್ಲಿತ್ತು. ಅಲ್ಲಾಹ್ ಪದವನ್ನು ಸರ್ವ ಸೃಷ್ಟಿಕರ್ತ, ಸರ್ವ ಶಕ್ತಿವಂತ ಎಂಬ ಪದಗಳ ಬದಲಾಗಿ ಬಳಸಲಾಗುತ್ತಿತ್ತು. ಅವನ ಸರಿಸಮನಾರೂ ಇಲ್ಲ. ಇಸ್ಲಾಮಿನ ಅನಾವರಣದ ಪೂರ್ವದಲ್ಲಿ ಅರೇಬಿಯಾ ಜನರು ಇದರ ಮೇಲೆ ನಂಬಿಕೆಯಿರಿಸುತ್ತಿದ್ದರು, ಆದರೆ ಅವರು ಅಲ್ಲಾಹ್’ನೊಂದಿಗೆ ಅನ್ಯ ದೇವರುಗಳನ್ನೂ ಪೂಜಿಸುತ್ತಿದ್ದರು,ಹಾಗೂ ಕೆಲವರು ಅವರವರ ಆರಾಧನೆಯಲ್ಲಿ ಅವರ ಮೂರ್ತಿಗಳನ್ನು ತಯಾರಿಸಿಕೊಂಡು ಪೂಜಿಸುತಿದ್ದರು.

ಅಲ್ಲಾಹ್’ನ ಅಸ್ತಿತ್ವ ಹಾಗೂ ಅವನ ವಿಶೇಷತೆಗಳು

   (ಆಸ್ತಿಕ ಹಾಗೂ ನಾಸ್ತಿಕರಲ್ಲದೆ) ಎಲ್ಲಾ ವರ್ಗದ ಜನರೂ ಒಮ್ಮತವಾಗಿರುವುದು ಸಾಧ್ಯವಾಗಿದ್ದು ಅದು ಅಲ್ಲಾಹ್’ನ ಅಸ್ತಿತ್ವ ಹಾಗೂ ಗುಣವಿಶೇಷತೆಗೆಳ ಸತ್ಯದ ಕಡೆಗೆ ತಲುಪುವುದಕ್ಕಾಗಿ ಒಂದೇ ಮಾರ್ಗವಿದೆ, ಆ ಶುದ್ಧ ವೈಜ್ಞಾನಿಕ ತಾರ್ಕಿಕ ಮಾರ್ಗವಾಗಿದೆ. ಏಕೆಂದೆರೆ ಪ್ರತಿ ಕೆಲಸದ ಹಿಂದೆ ಯಾರಾದರೊಬ್ಬರ ಕೈವಾಡವಿದೆ ಅಥವ ಮಾಡುವವನಿರುತ್ತಾನೆ ಎಂಬುದನ್ನು ಪ್ರತಿಯೊಬ್ಬರೂ ಸಮ್ಮತಿಸುವರು (ಒಪ್ಪುವರು) ಪ್ರತಿಯೊಂದು ವಸ್ತುವಿಗೂ ಯಾರಾದರೊಬ್ಬರು ಕಾರಣಕರ್ತರಾಗಿರುತ್ತಾರೆ ಆ ವಸ್ತುವು ಇವರಿಂದ ಹೊರತಾಗಿರುವುದಿಲ್ಲ, ಯಾವುದೇ ವಸ್ತುವು ಸರಿಯಾದ ಕಾರಣವಿಲ್ಲದೇ ಹಾಗೆಯೇ ಉತ್ಪತ್ತಿಯಾಗುವುದಿಲ್ಲ, ಅದಕ್ಕೆ ಯಾವುದಾದರೊಂದು ಕಾರಣ ಅವಶ್ಯಕವಾಗಿರುತ್ತದೆ. ಇದಕ್ಕಾಗಿ ಅಸಂಖ್ಯಾತ ಉದಾಹರಣೆಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ, ಇಡೀ ಬ್ರಹ್ಮಾಂಡ ಮತ್ತು ಇದರಲ್ಲಿರುವ ಜೀವಿತ ಹಾಗೂ ನಿರ್ಜೀವ ವಸ್ತುಗಳು ಮೊದಲು ಇರಲಿಲ್ಲ ಈಗ ಸಂಸ್ಥಾಪಿಸಲ್ಪಟ್ಟಿವೆ. ಯಾರೋ ಒಬ್ಬನು ಈ ಬ್ರಹ್ಮಾಂಡವನ್ನು ಸೃಷ್ಟಿಸಿರುವವನು ಅಸ್ಥಿತ್ವದಲ್ಲಿದ್ದಾನೆ ಎಂಬ ಮಾತನ್ನು ತರ್ಕಶಾಸ್ತ್ರ ಮತ್ತು ವಿಜ್ಞಾನಗಳು ಪುಷ್ಟೀಕರಿಸುತ್ತಾರೆ. ಅವನ ಹೆಸರು ಅಲ್ಲಾಹ್’ನೇ ಆಗಿರಲಿ, ಸೃಷ್ಟಿಕರ್ತನಾಗಿರಲಿ, ನಿರ್ಮಿಸಿರುವವನೇ ಆಗಿರಲಿ, ಇದರಿಂದ ಅವನ ಮೇಲೆ ಯಾವುದೇರೀತಿಯ ಪ್ರಭಾವ ಬೀರುವುದಿಲ್ಲ, ಹಾಗಾಗಿ ಇಡೀ ಬ್ರಹ್ಮಾಂಡದಲ್ಲಿರುವ ಎಲ್ಲಾ ವಸ್ತುಗಳೇ ಇದಕ್ಕೆ ಶುದ್ಧ ಸಾಕ್ಷ್ಯವಾಗಿವೆ.

   ಈ ರಚನಾತ್ಮಕ ಗುಣಗಳ ಪರಿಚಯ ಹಾಗೂ ಅದರ ಕೆಲಸ ಕಾರ್ಯಗಳ ಆವಿಷ್ಕಾರಗಳ ಅಧ್ಯಯನವು ಅವುಗಳ ಕುರಿತ ಚಿಂತನೆ ಮತ್ತು ವಿಚಾರಶಕ್ತಿಯ ಮಾಧ್ಯಮದ ಮೂಲಕ ದೊರೆಯುತ್ತದೆ, ಉದಾಹರಣೆಗೆ ಒಂದು ಪುಸ್ತಕವನ್ನೇ ತೆಗೆದುಕೊಳ್ಳಿ, ಅದು ಲೇಖಕರ ಜ್ಞಾನ, ಅನುಭವ, ಅವರ ಭಾಷಾಶೈಲಿ, ಅವರ ಚಿಂತನೆ, ಅವರ ಕಾರ್ಯದಕ್ಷತೆ ಹಾಗೂ ವಿಶ್ಲೇಷಿಸುವ ಕ್ಷಮತೆಯ ಕುರಿತು ತಿಳಿಸುತ್ತವೆ. ಅದೇರೀತಿಯಾಗಿ ಪ್ರತಿಯೊಂದು ವಸ್ತುಗಳೂ ತಮ್ಮ ತಮ್ಮ ಸೃಷ್ಟಿಕರ್ತನ ವಿಶೇಷತೆಗಳ ಕುರಿತು ವ್ಯಾಪಕವಾದ ವಿವರಣೆಯನ್ನು ನೀಡುತ್ತವೆ. ಸಮುದ್ರ ಮತ್ತು ಪ್ರಕೃತಿಯ ಸುಂದರತೆ, ಜೀವಕೋಶಗಳ ಸೂಕ್ಷ್ಮತೆ ಹಾಗೂ ಅವುಗಳ ವಿಶೇಷತೆಗಳು, ಬ್ರಹ್ಮಾಂಡದ ಸಮತೋಲನೆ, ಅದು ಚಲಿಸುವ ವಿಧಾನ, ಈ ಸತ್ಯಗಳ ಕುರಿತು ಮಾನವ ವಿಜ್ಞಾನವು ತಂದಿರುವ ಎಲ್ಲಾ ವಿಚಾರಗಳು ಸೃಷ್ಟಿಕರ್ತನ ಮಹಾನತೆಯ ಹಾಗೂ ನಿರ್ಮಾತೃವಿನ ಜ್ಞಾನ ಮತ್ತು ಬುದ್ಧಿಶಕ್ತಿಯ ಸಂಕೇತವನ್ನು ನೀಡುತ್ತವೆ.

   ಜನರು ಸಂಸಾರವನ್ನು ಮಾಡಿಕೊಂಡಿರುವ ಕಾರಣದಿಂದ ಒಪ್ಪುವರೋ ಇಲ್ಲವೋ, ಜೀವನದಲ್ಲಿ ಬರುವ ಕಷ್ಟ ಹಾಗೂ ದುಖಃಗಳ ಹಿಂದಿರುವ ಕಾರಣಗಳ ಕುರಿತು ಒಪ್ಪುವರೋ ಇಲ್ಲವೋ, ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ, ಆದರೆ ನೈಜ ವೈಜ್ಞಾನಿಕ ತರ್ಕಶಾಸ್ತ್ರದ ಮೂಲಕ ತಿಳಿದಿರುವುದೆನೆಂದರೆ,ಒಂದು ಅಸ್ತಿತ್ವವಿದೆ ಅದು ಅವನ ಸೃಷ್ಟಿಯ, ಮಹಾನತೆಯ, ಪ್ರಜ್ಞಾವಂತ ಸುಜ್ಞಾನಿ ಹಾಗೂ ಬುದ್ಧಿಮಾನ್ಯನಿದ್ದಾನೆ, ಅವನನ್ನೇ ಮುಸಲ್ಮಾನರು ‘ಅಲ್ಲಾಹ್’ಎಂದು ಕರೆಯುವರು.

ಅಲ್ಲಾಹ್’ನ ಕ್ಷಮತೆ ಹಾಗೂ ಅವನ ಮಹಾನತೆಯ ಸಾಕ್ಷ್ಯ

   ಸರ್ವಶಕ್ತನಾದ ಅಲ್ಲಾಹ್’ನು ನಾಸ್ತಿಕೆಯಿಂದ ಆರಧನೆಯೆಡೆಗೆ ತನ್ನ ದಾಸರನ್ನು ಸೃಷ್ಟಿಸಿದನು, ಹಾಗೂ ಅವರೆಲ್ಲರಿಗೂ ಸಕಲ ಸೌಖ್ಯಗಳಿಂದ ಸನ್ಮಾನಿಸಿದನು, ಅವರಲ್ಲಿನ ವಿಪರೀತ ಕಷ್ಟ ಪರಿಸ್ಥಿತಿಗಳನ್ನು ಸುಲಭವಾಗಿ ನಿವಾರಿಸಿದನು, ಶುದ್ಧ ಮನಸ್ಸಿನಿಂದ ಸದಾ ನಮ್ಮನ್ನು ಪ್ರೀತಿಸುವನು, ಹಾಗೂ ಯಾರು ಅವನನ್ನು ಅನುಸರಿಸುವನೋ ಅವನಿಗೆ ಸಹಕರಿಸುವನು, ಹಾಗೂ ಕೃಪೆತೋರುವನು, ಮತ್ತು ಆತ್ಮಗಳಿಗೆ ತಮ್ಮ ಪಾಲಕನನ್ನು ಅರಿಯಲು ಅವಶ್ಯವಿರುವ ಆಹಾರ ಪಾನೀಯವಲ್ಲದೆ ಉಸಿರಾಟವೂ ಲಭ್ಯವಿದೆ. ಅವನನ್ನು ತೊರೆದರೆ ಪ್ರಪಂಚದಲ್ಲಿಯೂ ಸಂತೋಷ ಸಿಗಲಾರದು, ಅಂತಿಮ ದಿನದಂದೂ ಸುಖ ದೊರೆಯಲಾರದು, ಆದರೆ ಅವನ ಪರಿಚಯ, ಪ್ರೀತಿ ಮತ್ತು ಆರಾಧನೆಯಿಂದ ಮಾತ್ರ ಅದು ಸಾಧ್ಯವಾಗಿದೆ. ಅವನನ್ನು ಯಾರು ಅಧಿಕ ಬಲ್ಲವರಾಗಿರುತ್ತಾರೋ ಅವರೇ ಆತನ ಮೇಲೆ ಅಧಿಕ ವಿಶ್ವಾಸವಿಡುತ್ತಾರೆ ಹಾಗೂ ಆರಾಧಿಸುತ್ತಾರೆ. ಮಾನಸಿಕ ಆರಾಧನೆಯು ದೈಹಿಕ ಆರಾಧನೆಗಿಂತ ಅಧಿಕ ಮಹತ್ವಪೂರ್ಣವಾಗಿದೆ ಎಂಬುದು ನೆನಪಿರಲಿ, ಏಕೆಂದರೆ ಮಾನಸಿಕ ಆರಾಧನೆಯು ಬಹು ಕಾಲದವರೆಗೆ ಇರುವಂತಹದ್ದು ಹಾಗು ಅಧಿಕ ಉತ್ತಮದಾಯಕವೂ ಆಗಿದೆ. ಮಾನಸಿಕವಾದ ಆರಾಧನೆಯು ಪ್ರತಿ ಸಮಯದಲ್ಲಿಯೂ ಅವಶ್ಯಕವಾಗಿದೆ, ವಾಸ್ತವದಲ್ಲಿ ಶಾರೀರಿಕ ಆರಾಧನೆಯು ಹೃದಯವನ್ನು ಶುದ್ಧಿಗೊಳಿಸಲು ಅನಿವಾರ್ಯವಾಗಿದೆ, ಎಕೆಂದರೆ ಅಲ್ಲಾಹ್’ನ ಆರಾಧನೆ ಮತ್ತು ಮನಸ್ಸಿನ ಆರಾಧನೆಯೂ ಶುದ್ಧವಾಗಿರಲೆಂದೇ ಆಗಿದೆ.

   ‘ಇಬ್ನೆ-ಅಲ್-ಕಯ್ಯೀಮ್’ (ಅಲ್ಲಾಹ್’ನು ಅವರ ಮೇಲೆ ದಯೆತೋರಲಿ)ರವರು ಈ ವಿಷಯದ ಕುರಿತು ಹೇಳುವರು, “ಅಲ್ಲಾಹ್ ತನ್ನ ದಾಸನಿಗೆ ಅವನ ಸ್ಥಾನಕ್ಕೆ ತಕ್ಕಂತೆ ಇರಿಸುವನು, ಅದು ದಾಸನು ತನ್ನ ಸ್ವಸ್ಥಾನವನ್ನು ಕಾಪಾಡಿಕೊಂಡಂತೆ, ದಾಸನು ತನ್ನ ಪರಿಪಾಲಕನನ್ನು ಗುರುತಿಸಿಕೊಂಡರೆ ಮಾತ್ರ ತನ್ನ ಮನಸ್ಸಿಗೆ ಶಾಂತಿ ಲಭಿಸುತ್ತದೆ, ಮತ್ತು ಆತ್ಮಕ್ಕೆ ನಿರಾಳತೆ ದೊರೆಯುತ್ತದೆ. ಯಾರು ಅಲ್ಲಾಹ್’ನ ಕುರಿತು ಅವನ ಗುಣವಿಶೇಷತೆಗಳ ಕುರಿತು ಹೆಚ್ಚು ಬಲ್ಲವನೋ ಅವನ ವಿಶ್ವಾಸವೂ ಅಧಿಕ ಹಾಗೂ ಬಲಗೊಳ್ಳುತ್ತದೆ. ಇಂತಹಾ ವ್ಯಕ್ತಿಯು ಅವನಿಂದ ಹೆಚ್ಚು ಭಯಪಡುವವನಾಗಿರುತ್ತಾನೆ.

   ಯಾರು ಅಲ್ಲಾಹ್’ನನ್ನು ಸರ್ವ ಸಂಪೂರ್ಣ ರೂಪದಿಂದ ಅವನ ಆರಾಧನೆಯನ್ನು ಅವನ ಎಲ್ಲಾ ಪವಿತ್ರ ನಾಮಗಳ ಮತ್ತು ಗುಣವಿಶೇಷತೆಗಳ ಕುರಿತು ಗಮನಹರಿಸುವವನೇ ಶ್ರದ್ಧೆಯಿಂದ ಆರಾಧಿಸಲು ಸಾಧ್ಯ, ಅಲ್ಲಾಹ್’ನ ಬಹಳಷ್ಟು ಸುಂದರ ನಾಮಗಳಿವೆ, ಅವನ ಎಲ್ಲಾ ನಾಮಗಳಿಂದ ಪ್ರಶಂಸೆಯ ಮೇಲೆ ಪ್ರಶಂಸೆ, ಸ್ತುತಿಗಳ ಮೇಲೆ ಸ್ತುತಿ ವರ್ಷಿಸುತ್ತದೆ, ಮತ್ತು ಮಹೋನ್ನತೆ ಝಳಪಿಸುತ್ತದೆ, ಇದೇರೀತಿಯಾಗಿ ಅವನ ಗುಣಗಳು ಉತ್ತಮ ಮತ್ತು ಹಿರಿಮೆ ಹಾಗೂ ಸಂಪೂರ್ಣವಾಗಿವೆ.

   ಮುಹಮ್ಮದ್(ಸ) ಪೈಗಂಬರ್ (ಅವರ ಮೇಲೆ ಅಲ್ಲಾಹ್’ನ ಶಾಂತಿ ಅವತರಿಸಲಿ) ನಮಾಜ್’ನಲ್ಲಿ ರುಕೂಗಾಗಿ ಬಾಗುವಾಗ ಈ ಶಬ್ದಗಳನ್ನು ಉಚ್ಚರಿಸುತ್ತಿದ್ದರು, سبحان ذي الجبروت والملَكوت والكبرياء والعَظَمة" (ಪಾವಿತ್ರ್ಯತೆಯಿದೆ ಶಕ್ತಿಶಾಲಿ, ಮಹೋನ್ನತ, ರಾಜ್ಯಪಾಲಕ, ಹಾಗೂ ತನ್ನತನವನ್ನು ಕಾಯ್ದುಕೊಳ್ಳುವವನಿಗೆ)

   ಹೌದು, ಪ್ರತಿ ಗುಣದಲ್ಲೂ ಅವನೇ ಸಂಪೂರ್ಣನಾಗಿದ್ದಾನೆ, ಮಹಮ್ಮದ್(ಸ) ಪೈಗಂಬರ್’ರವರ ಮೇಲೆ ಅಲ್ಲಾನ ಕೃಪೆ ಮತ್ತು ಶಾಂತಿಯಿರಲಿ, ಎಂದು ತಾವೇ ಹೇಳಿಕೊಳ್ಳುತ್ತಿದ್ದರು. “لا أُحصِي ثناءً عليك، أنت كما أثنيتَ على نفسك”  ( ನಾನು ಯಾವ ಯಾವ ರೀತಿಯಿಂದಲೂ ಪ್ರಶಂಸೆ ಮಾಡಲಾರೆ, ಅದು ನೀನು ತಾನೇ ಪ್ರಶಂಶಿಸಿಕೊಂಡಿರುವ ರೂಪದಲ್ಲಿ) ( ಇದು ಮುಸ್ಲಿಮ್ ಗ್ರಂಥದಲ್ಲಿ ಉಲ್ಲೇಖವಿದೆ)

   ಆಕಾಶ ಮತ್ತು ಭೂಮಿಯ ಎಲ್ಲಾ ಪ್ರಾಣಿಗಳು ಸರ್ವಶಕ್ತಿವಂತನ ಗುಣಗಾನ ಮಾಡುತ್ತವೆ, ಮತ್ತು ಅವನನ್ನು ದೋಷ ಮುಕ್ತನನ್ನಾಗಿಸುತ್ತಿವೆ ಸರ್ವಶಕ್ತಿವಂತನು ತಾನೇ ಹೇಳಿಕೊಂಡಿರುವಂತೆ 

سَبَّحَ لِلَّهِ مَا فِي السَّمَاوَاتِ وَمَا فِي الْأَرْضِ"

 

(ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹ್’ನ ಪಾವಿತ್ರ್ಯವನ್ನು ಜಪಿಸುತ್ತಿವೆ)  (ಖುರ್’ಆನ್ ಅಧ್ಯಾಯ ಆಲ್’ಹಶ್ರ್ : 1.)

ಮತ್ತು ಎಲ್ಲರೂ ಆತನಿಗಾಗಿ ಸಾಷ್ಟ್ರಾಂಗವೆರಗುತ್ತಾರೆ, ಅಲ್ಲಾಹ್’ನು ಪವಿತ್ರ ಖುರ್’ಆನಿನಲ್ಲಿ ಹೇಳಿದನು,

وَلَهُ أَسْلَمَ مَنْ فِي السَّمَاوَاتِ وَالْأَرْضِ طَوْعًا وَكَرْهًا

(ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ತಮ್ಮಿಚ್ಚೆಯಿಂದಲೂ ಅನಿವಾರ್ಯವಾಗಿಯೂ ಅವನಿಗೆ (ಅಲ್ಲಾಹ್’ನಿಗೆ) ಶರಣಾಗಿಬಿಟ್ಟಿರುವಾಗ ) (ಖುರ್’ಆನ್ ಅಧ್ಯಾಯ ಅಲ್’ಇಮ್ರಾನ್ : 83)

 ಸೃಷ್ಟಿಸುವ ಹಾಗೂ ಆದೇಶಗಳನ್ನು ಚಲಾಯಿಸುವ ಅಧಿಕಾರ ಕೇವಲ ಸರ್ವಶಕ್ತಿವಂತ ಅಲ್ಲಾಹ್’ನಿಗಿದೆ, ಏನೇ ಸೃಷ್ಟಿಸಿದರು ಅತ್ಯಂತ ನಿಪುಣತೆಯಿಂದ ಸೃಷ್ಟಿಸಿದ್ದಾನೆ, ಏನೇ ಹುಟ್ಟಿಸಿದರು ಮನೋಹರವಾಗಿ ಹುಟ್ಟಿಸಿದ್ದಾನೆ, ಮತ್ತು ಎಲ್ಲಾ ರಚನೆಗಳು ಸೂಕ್ತ ಪ್ರಮಾಣದೊಂದಿಗೆ ಹುಟ್ಟಿಸಿದ್ದಾನೆ, ತಿಳಿದಿರಲಿ, ಅಲ್ಲಾಹ್’ನು ಭೂಮಿ ಆಕಾಶಗಳನ್ನು ಐವತ್ತು ಸಾವಿರ ವರ್ಷಗಳಲ್ಲಿ ಮಾಡಿರುತ್ತಾನೆ, (ಸ್ಪಷ್ಟವಾಗಿರಲಿ ಅಲ್ಲಾಹ್’ನು ‘ಆಗು’ ಎಂದು ಹೇಳಿದರೆ ಆಗಿಬಿಡುತ್ತಿತ್ತು, ಆದರೆ ವಾಸ್ತವದಲ್ಲಿ ಅಲ್ಲಾಹ್’ನು ಜನರಿಗೆ ಯಾವುದೇ ಕೆಲಸ ಕಾರ್ಯ ಮಾಡುವಾಗ ಅದನ್ನು ಆರಾಮವಾಗಿ ಸರಿಯಾಗಿ ಮಾಡಬೇಕೆಂದು ಬೇಗ ಬೇಗ ಮಾಡಬಾರದೆಂದು ಹೀಗೆ ಮಾಡಿದ್ದಾನೆ) ಮತ್ತು ಅದು ಅಲ್ಲಾಹ್’ನ ಶಾಸನವಿದೆ. ಅವನೊಂದಿಗೆ ಯಾರಿಗೂ ಸೇರ್ಪಡೆಯಿಲ್ಲ, ಅವನ ನಿರ್ಣಯವನ್ನು ತಡೆಯಲು ಹಾಗೂ ತಳ್ಳಿಹಾಕಲು ಯಾರಿಂದಲೂ ಸಾಧ್ಯವಿಲ್ಲ, ಅವನ ತೀರ್ಪನ್ನು ಯಾರು ಪ್ರಶ್ನಿಸುವಂತಿಲ್ಲ, ಅವನು ಸದಾ ಜೀವಂತ ಹಾಗೂ ಅಮರನಾಗಿದ್ದಾನೆ, ಸರ್ವ ಸೃಷ್ಟಿಗಳೂ ಅವನ ಕೈಯಲ್ಲಿ ಅವನ ಅಧೀನದಲ್ಲಿವೆ, ಅವನೇ ಮರಣ ಕೊಡುವವನು ಅವನೇ ಜೀವನೀಡುವವನು, ಅವನೇ ದುಖಃ ಹಾಗೂ ಸಂತೋಷ ನೀಡುವವನು, ಅವನೇ ಬಡವ ಹಾಗೂ ಸಿರಿವಂತನಾಗಿಸುವವನು, ಅವನು ತನ್ನಿಚ್ಛೆಯಂತೆ ಗರ್ಭದಲ್ಲಿ  ರೂಪನೀಡುವವನು, ಈ ವಿಷಯದ ಕುರಿತು ಅಲ್ಲಾಹ್’ನು ಹೇಳುವನು

)مَا مِنْ دَابَّةٍ إِلَّا هُوَ آخِذٌ بِنَاصِيَتِهَا](هود: 56[

 

 “ ಚಲಿಸುವ ಪ್ರತಿಯೊಂದು ಜೀವಿಯ ಜುಟ್ಟು ಅವನ ಹಿಡಿತದಲ್ಲೇ ಇದೆ” (ಖುರ್’ಆನ್ ಅಧ್ಯಾಯ ಹೂದ್  : 56) ಅವನು ತನ್ನಿಚ್ಛೆಯಂತೆ ನಡೆಸುವನು, ಮತ್ತು ಜನರ ಮನಗಳು ಅವನ ಕೈಬೆರಳುಗಳಲ್ಲಿದೆ. ತನ್ನಿಚ್ಛೆಯಂತೆ ಕುಣಿಸುವನು,  ಜನರ ವಿಧಿ ಬರಹ ಅವನ ಕೈಯಲ್ಲಿದೆ, ಅವನು ತನ್ನಿಚ್ಛೆಯಂತೆ ಬದಲಾಯಿಸುವನು, ಪ್ರತಿಯೊಂದು ವಸ್ತುವಿನ ಓಟವು ಅವನು ಬರೆದಿರುವ ಭಾಗ್ಯ ಹಾಗೂ ವಿಧಿಯಲ್ಲಿಯೇ ಬಂಧಿತವಾಗಿದೆ, ಅವನಿಂದ ಯಾರೂ ಅವನ ಶಾಸನವನ್ನು ಕಸಿಯಲಾರರು, ಅವನನ್ನು ಯಾರೂ ಸೋಲಿಸಲಾರರು.

    ಪೂರ್ಣ ರಾಷ್ಟ್ರವೊಂದು ಒಬ್ಬನಿಗೆ ನಷ್ಟವನ್ನುಂಟು ಮಾಡಬಯಸಿದರೆ ಅಲ್ಲಾಹ್’ನು ಈ ನಷ್ಟವನ್ನು ಬರೆಯದಿದ್ದರೆ ಯಾರೂ ಸಹ ನಷ್ಟವನ್ನು ನೀಡಲಾರರು. ಹಾಗೂ ಎಲ್ಲರೂ ಆತನನ್ನು ಲಾಭನೀಡಲು ಮುಂದಾದರೆ ಅದು ಅಲ್ಲಾಹ್’ನ ಇಚ್ಛೆಯಲ್ಲಿರದಿದ್ದರೆ ಯಾರೂ ಆತನಿಗೆ ಲಾಭ ನೀಡಲಾರರು.

   ದುರ್ಘಟನೆಯೊಂದು ಜರುಗುವುದಿದ್ದರೆ ಯಾರೂ ಅದನ್ನು ತಡೆಯಲಾರರು, ಕಷ್ಟನೀಗುವುದಾದರೆ ಅವನ ಹೊರತು ಕಷ್ಟನೀಗುವವರು ಯಾರು ಇಲ್ಲ, ಅವನು ತನಗಿಚ್ಚಿಸಿದ್ದನ್ನು ತಯಾರಿಸುವನು ಮತ್ತು ಮಾಡುವನು, ಅವನು ತನ್ನ ಕಾರ್ಯಗಳಿಗಾಗಿ ಯಾರಿಗೂ ಉತ್ತರ ನೀಡಬೇಕಾಗಿಲ್ಲ, ಸಕಲ ಜನತೆಯು ಅವನಿಗೆ ಉತ್ತರ ಕೊಡಬೇಕಾಗಿದೆ, ಅವನು ಸ್ವತಃನಾಗಿದ್ದು ತನ್ನ ಸೃಷ್ಟಿಗೆ ಒಗ್ಗಿಕೊಂಡಿಲ್ಲ, ಅವನು ಎಲ್ಲರ ಮೇಲೂ ತನ್ನ ಆದೇಶಗಳನ್ನು ಚಲಾಯಿಸುವನು, ಎಲ್ಲಾ ರೀತಿಯ ಕಾಣದ ಕೇಳದ ಗೊಂಚಲುಗಳು ಅವನಲ್ಲಿಯೇ ಇವೆ, ಅದನ್ನು ಯಾರೂ ಅರಿಯಲಾರರು, ಅಲ್ಲದೆ ಅದರ ಜ್ಞಾನವು ದೇವದೂತರಿಂದಲೂ ಮರೆಯಾಗಿದೆ, ಅದಕ್ಕಾಗಿ ದೇವದೂತರೂ ಸಹ ನಾಳೆ ಯಾರು ಹೊಡೆಯುವವನು, ಬ್ರಹ್ಮಾಂಡದಲ್ಲಿ ನಾಳೆ ಏನು ಜರುಗಲಿದೆ ಎಂಬುದನ್ನು ಅರೆಯದವರಾಗಿದ್ದಾರೆ.          

   ಅವನು ತನ್ನ ದಾಸರ ಹಾಗೂ ರಾಜರ ಎಲ್ಲ ಕಾರ್ಯಗಳನ್ನು ಮಾಡುವವನಾಗಿದ್ದಾನೆ, ಅವನೇ ಆದೇಶವನ್ನು ನೀಡುತ್ತಾನೆ, ಆಜ್ಞೆಯನ್ನು ಸಹ ನಡೆಸುವವನೂ ಅವನೇ, ಅವನೇ ಕೊಡುವವನೂ, ತಡೆಯುವವನೂ, ಅವನೇ ಮೇಲು ಕೀಳಿರಿಸುವವನು, ಪ್ರತಿ ಸಮಯ ಘಳಿಗೆಯಲ್ಲೂ ಅವನ ಆದೇಶಗಳು ಆಗುತ್ತಿರುತ್ತವೆ ಅವನಿಚ್ಛೆಯಂತೆ ಶಾಸನ ನಡೆಯುತ್ತದೆ, ಅವನು ಬಯಸಿದ್ದು ಆಗುತ್ತದೆ, ಬಯಸದಿದ್ದರೆ ಆಗುವುದಿಲ್ಲ. ಅಲ್ಲಾಹ್’ನು ಈ ವಿಷಯದ ಕುರಿತು ಅಲ್ಲಾಹ್’ನು ಹೇಳುವನು,

يسْأَلُهُ مَنْ فِي السَّمَاوَاتِ وَالْأَرْضِ كُلَّ يَوْمٍ هُوَ فِي شَأْنٍ [الرحمن: 29[

 

“ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನೊಡನೆಯೇ ಬೇಡುತ್ತಾರೆ, ಅವನು ನಿತ್ಯವೂ ಸಕ್ರಿಯನಾಗಿರುತ್ತಾನೆ” (ಖುರ್’ಆನ್ ಅಧ್ಯಾಯ ಅರ್ರಹ್ಮಾನ್ :29) 

   ಅವನೊಂದಿಗೆ ಇದು ಸೇರ್ಪಡೆಯಾಗಿರುವುದೆನೆಂದರೆ ಯಾರಿಗಾದರೂ ಸಂಕಟದಿಂದ ಪಾರುಮಾದಬೇಕಾದರೆ ಮುರಿದ ಮನಸ್ಸುಗಳಿಗೆ ಸಹಾಯ ಮಾಡುವುದು, ಬಡವನಿಗೆ ಸಿರಿವಂತನಾಗಿಸುವುದು, ಪ್ರಾರ್ಥನೆಗಳನ್ನು ಸ್ವೀಕರಿಸುವುದು ಅವನ ಹಿರಿಮೆಯಾಗಿದೆ. ಅಲ್ಲಾಹ್’ನು ಹೇಳುವನು :

)وَمَا كُنَّا عَنِ الْخَلْقِ غَافِلِينَ) [المؤمنون: 17[

 

 “ ಸೃಷ್ಟಿಗಳ ಕುರಿತು ನಾವೆಂದೂ ಅಜಾಗರೂಕರಾಗಿಲ್ಲ” (ಖುರ್’ಆನ್ ಅಧ್ಯಾಯ ಮೊಮಿನೂನ್ : 17)

     ಅವನ ಜ್ಞಾನವು ಎಲ್ಲರನ್ನು ತನ್ನ ಒಡಲಿನಲ್ಲಿ ಆವರಿಸಿಕೊಂಡಿದೆ, ಅವನು ಆಗಿರುವುದನ್ನೂ ಬಲ್ಲನು, ಆಗಬೇಕಾಗಿರುವುದನ್ನೂ ಬಲ್ಲನು, ಅವನ ಅನುಮತಿಯಿಲ್ಲದೇ ಯಾವ ಎಲೆಯೂ ಅಲುಗಾಡಲಾರದು, ಅವನಿಂದ ಯಾವ ರಹಸ್ಯವೂ ಮರೆಯಾಗಿಲ್ಲ, ಅವನಲ್ಲಿ ಗುಪ್ತವಾಗಿರುವ ಅಥವ ತೆರೆದಿರುವ ಎರಡೂ ವಿಷಯಗಳು ಸರಿಸಮವಾಗಿವೆ. ಅಲ್ಲಾಹ್’ನು ಹೇಳುವನು:

)سَوَاءٌ مِنْكُمْ مَنْ أَسَرَّ الْقَوْلَ وَمَنْ جَهَرَ بِهِ وَمَنْ هُوَ مُسْتَخْفٍ بِاللَّيْلِ وَسَارِبٌ بِالنَّهَارِ) [الرعد: 10]

“ನಿಮ್ಮಲ್ಲಿ ಗುಟ್ಟಾಗಿ ಮಾತನಾಡುವವನಿರಲಿ, ಜೋರಾಗಿ ಮಾತನಾಡುವವನಿರಲಿ,ಇರುಳಿನಲ್ಲಿ ಅಡಗಿಕೊಂಡವನಿರಲಿ, ಹಗಲಿನಲ್ಲಿ ನಡೆದಾಡುತ್ತಿರುವವನಿರಲಿ, (ಅಲ್ಲಾಹ್’ನ ಮಟ್ಟಿಗೆ) ಅವರೆಲ್ಲರೂ ಸಮಾನರು”. (ಖುರ್’ಆನ್ ಅಧ್ಯಾಯ ಅರ್ರಆದ್ : 10)

   ಅವನು ಎಲ್ಲರ ಸದ್ದು ಗದ್ದಲಗಳನ್ನು ಆಲಿಸುವನು,  ಆಯಿಷಾ(ರ ಅ)ರವರು ಹೇಳುವರು, “ ಅವನ ಆಲಿಸುವಿಕೆಯು ಎಲ್ಲಾ ಶಬ್ದಗಳನ್ನು ಕೇಳಿಕೊಳ್ಳುತ್ತದೆ”, ಮುಂದೆ ಹೇಳುವರು, “ ವಾಚಾಳಿ ಮಹಿಳೆಯೊಬ್ಬಳು ಮುಹಮ್ಮದ್(ಸ)ರವರ ಬಳಿಬಂದು ಅವರೊಂದಿಗೆ ಮಾತನಾಡುತ್ತಿರುವಾಗ ನಾನು ಮನೆಯ ಮೂಲೆಯೊಂದರಲ್ಲಿದ್ದೆ, ಅವಳು ಮಾತನಾಡುವುದನ್ನು ನನಗೆ ಕೇಳಲಾಗುತ್ತಿರಲಿಲ್ಲ, ಅಲ್ಲಾಹ್’ನು ಇದರ ಕರಿತು ಒಂದು ಸೂಕ್ತಿಯನ್ನು ಅವತರಿಸಿದನು, ಅಲ್ಲಾಹ್’ನು ಹೇಳುವನು;

)قَدْ سَمِعَ اللَّهُ قَوْلَ الَّتِي تُجَادِلُكَ فِي زَوْجِهَا(

   (“ದೂತರೇ) ತನ್ನ ಪತಿಯ ವಿಷಯದಲ್ಲಿ ನಿಮ್ಮೊಡನೆ ವಾದಿಸಿದ ಮತ್ತು ಅಲ್ಲಾಹ್’ನ ಬಳಿ ದೂರು ಸಲ್ಲಿಸಿದ ಮಹಿಳೆಯ ಮಾತನ್ನು ಅಲ್ಲಾಹ್’ನು ಆಲಿಸಿದನು’ (ಖುರ್’ಆನ್ ಅಧ್ಯಾಯ ಮುಜಾದಿಲ : 1)

   ಜನರ ಕಾರ್ಯಗಳನ್ನು ಕಗ್ಗತ್ತಲ ರಾತ್ರಿಯೂ ಅವನಿಂದ ಮುಚ್ಚಿಡಲಾರದು; ಅಲ್ಲಾಹ್’ನು ಹೇಳುವನು :

)الَّذِي يَرَاكَ حِينَ تَقُومُ ,وَتَقَلُّبَكَ فِي السَّاجِدِينَ(الشعراء: 218، 219

“ಅವನು ನಿಮ್ಮನ್ನು ಕಾಣುತ್ತಿದ್ದಾನೆ, ನೀವು ನಿಂತಿರುವಾಗ ಮತ್ತು ಸಾಷ್ಟ್ರಾಂಗವೆರಗುವವರ (ನಮಾಜ್ ಸಲ್ಲಿಸುವವರ ಜೊತೆಗೆ ನೀವು ತಿರುಗಾಡುತ್ತಿರುವಾಗ (ಅವನು ನಿಮ್ಮನ್ನು ಕಾಣುತಿರುತ್ತಾನೆ)” (ಖುರ್’ಆನ್ ಅಧ್ಯಾಯ ಆಶ್’ಶ್ಶುರ : 218. 219)  ಅವನಂತೂ ಕಗ್ಗತ್ತಲ ರಾತ್ರಿಯಲ್ಲಿ ಕಪ್ಪು ಇರುವೆಯನ್ನೂ ಸಹ ನೋಡುವವನಾಗಿದ್ದಾನೆ.

   ಅವನ ಖಜಾನೆಗಳು ಭೂಮಿ ಆಕಾಶಗಳೆರಡರಲ್ಲೂ ತುಂಬಿಕೊಂಡಿವೆ. ಅವನ ಎರಡೂ ಕೈಗಳು ಉದಾರತೆಗಾಗಿ ತೆರೆಯಲ್ಪಟ್ಟಿವೆ. ಅವನು ಹಗಲು ರಾತ್ರಿಯಲ್ಲದೆ ಎಂದೆಂದಿಗೂ ಉದಾರಿಯಾಗಿದ್ದಾನೆ, ತನ್ನಿಚ್ಛೆಯಂತೆ ಖರ್ಚು ಮಾಡುವವನು ಮಹಾ ಉದಾರಿ ಹಾಗೂ ದಾನಿಯಾಗಿದ್ದಾನೆ. ಬೇಡುವುದರಿಂದಲ್ಲದೇ ಬೇಡುವ ಮೊದಲೇ ನಿಡುವವನಾಗಿದ್ದಾನೆ. ಪ್ರತಿ ರಾತ್ರಿಯಲ್ಲೂ ರಾತ್ರಿಯ ಮೂರನೇ ಭಾಗ ಬಂದಾಗ ಆತನು ಮೊದಲನೇ ಆಕಾಶದಲ್ಲಿ ತನ್ನ ದಯೆಯ ಪ್ರಕಾಶವನ್ನು ಬೀರುತ್ತಾ ಹೇಳುವನು, “ಯಾರಾದರು ಬೇಡುವವನಿದ್ದಾನೆಯೇ, ನಾನು ನಾನು ನೀಡುವೆನು, ಆಗ ಯಾರಾದರು ಬೇಡದಿದ್ದರೆ ಅವರ ಮೇಲೆ ಕ್ರೋಧಿತನಾಗುವನು.

   ಅವನು ತನ್ನ ಬಾಗಿಲನ್ನು ಸರ್ವರಿಗಾಗಿ ತೆರೆದಿಟ್ಟಿದ್ದಾನೆ, ಅವನು ಸಮುದ್ರಗಳನ್ನು ಮಾನವನ ಹಿಡಿತಕ್ಕೆ ಕೊಟ್ಟನು, ನದಿಗಳನ್ನು ಹರಿಸಿದನು, ಎಲ್ಲರಿಗೂ ಆಹಾರದ ವ್ಯವಸ್ಥೆಯನ್ನು ಆಯೋಜಿಸಿದನು. ಹಾಗೂ ಸರ್ವ ಪ್ರಾಣಿಗಳಿಗೂ ಅವರ ಅನ್ನ ಪಾನಿಯವನ್ನು ತಲುಪಿಸಿದನು, ಇರುವೆಗೆ ಭೂಮಿಯೊಳಗೆ ಆಹಾರ ನೀಡಿದನು, ಪಕ್ಷಿಗಳಿಗೆ ಗಾಳಿಯಲ್ಲಿ ಆಹಾರ ನೀಡಿದನು, ಮೀನಿಗೆ ನೀರಿನಲ್ಲಿ ಆಹಾರ ನೀಡಿದನು. ಅಲ್ಲಾಹ್’ನು ಹೇಳಿದನು :

)وَمَا مِنْ دَابَّةٍ فِي الْأَرْضِ إِلَّا عَلَى اللَّهِ رِزْقُهَا(هود: 6

“ ಭೂಮಿಯಲ್ಲಿನ ಪ್ರತಿಯೊಂದು ಜೀವಿಯ ಹೊಣೆಯು ಅಲ್ಲಾಹ್’ನ ಮೇಲಿದೆ” (ಖುರ್’ಆನ್ ಅಧ್ಯಾಯ ಹೂದ್ : 6 )

    ಅವನು ನೀಡುವ ಆಹಾರ ಎಲ್ಲರಿಗೂ ಸಾಕಾಗುತ್ತದೆ, ಅವನು ಭ್ರೂಣಕ್ಕೆ ತಾಯಿಯ ಗರ್ಭದಲ್ಲಿ ಆಹಾರ ನೀಡಿದನು, ಅವನು ಅತ್ಯಂತ ಉದಾರಿಯಾಗಿದ್ದಾನೆ, ಉದಾರತೆ ಹಾಗೂ ದಾನಶೀಲತೆಯನ್ನು ಇಚ್ಛಿಸುವವನಾಗಿದ್ದಾನೆ, ಅವನಿಂದ ಬೇಡಿದರೆ ಅವನು ಕೊಟ್ಟೇಬಿಡುವನು, ಆತನನ್ನು ಬಿಟ್ಟು ಇತರರೊಂದಿಗೆ ಬೇಡಿದರೆ ಕ್ರೋಧಿತನಾಗುವನು, ಇಲ್ಲಿ ಯಾವೆಲ್ಲಾ ಒಳಿತುಗಳಿವೆಯೋ ಎಲ್ಲವೂ ಅವನಿಂದಲೆಯೇ ಆಗಿವೆ, ಪವಿತ್ರ ಖುರ್’ಆನ್ ತಿಳಿಸಿದಂತೆ :  

)وَمَا بِكُمْ مِنْ نِعْمَةٍ فَمِنَ اللَّهِ( النحل: 53

“ನಿಮ್ಮ ಬಳಿ ಇರುವ ಅನುಗ್ರಹಗಳೆಲ್ಲವೂ ಅಲ್ಲಾಹ್’ನ ಕಡೆಯಿಂದಲೇ ಬಂದಿವೆ” (ಖುರ್’ಆನ್ ಅಧ್ಯಾಯ ಅನ್ನಹಲ್ : 53)

   ಅವನಲ್ಲಿ ಆಹಾರದ ಕೊರತೆಯುಂಟಾಗುವುದಿಲ್ಲ  ಮುಹಮ್ಮದ್(ಸ) ಪೈಗಂಬರ್ ಹೇಳಿದರು. “ ನೀವೇನು ನೋಡುವುದಿಲ್ಲವೇ ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿಸಿ ಖರ್ಚು ಮಾಡುತ್ತಿರುವುದನ್ನು. ಆದರೆ ಇಂದಿಗೂ ಅವನಲ್ಲಿರುವುದರಲ್ಲಿ ಕೊಂಚವೂ ಕಡಿಮೆಯಾಗಿಲ್ಲ”. (ಇದು ಮುಸ್ಲಿಮ್ ಗ್ರಂಥದಲ್ಲಿ ಉಲ್ಲೇಖವಿದೆ)

   ಅಲ್ಲಾಹ್’ನು ಸತ್ಕಾರ್ಯಗಳಿಗೆ ಅತ್ಯಧಿಕ ಪಟ್ಟು ಬಹುಮಾನಗಳನ್ನಿಟ್ಟಿದ್ದಾನೆ, ಯಾರಾದನೊಬ್ಬ ಒಂದು ಸತ್ಕಾರ್ಯವನ್ನು ಮಾಡಿದರೆ ಅವನಿಗೆ ಅದರ ಹತ್ತು ಪಟ್ಟು ಬಹುಮಾನವನ್ನು ಮರಳಿ ನೀಡುವುದಲ್ಲದೇ, ಏಳು ನೂರರವರೆಗೂ ಅದರ ಮಿತಿ ತಲುಪುತ್ತದೆ, ವ್ಯಕ್ತಿಯು ತನ್ನ ಪವಿತ್ರವಾದ ಸಧೃಡ ಮನಸ್ಸಿನ ಮೂಲಕ ಹೆಚ್ಚುವರಿಯಾಗಿ ಪಡೆಯಬಹುದು, ಅವನು ನೀಡಿದ ಒಂದು ಚಿಕ್ಕ ಸಮಯವನ್ನೂ ಸಹ ಹೆಚ್ಚಿಸುವನು, ಉದಾಹರಣೆಗೆ: ‘ಶಬೆ ಕದ್ರ್’ ಎಂಬ ಒಂದು ರಾತ್ರಿಯು ಸಾವಿರ ತಿಂಗಳುಗಳಿಗಿಂತಲೂ ಉತ್ತಮ (ಶಬೆ ಕದ್ರ್ ಎಂಬ ರಾತ್ರಿಯು ರಮಜಾನ್ ತಿಂಗಳ ಕೊನೇಯ ಹತ್ತು ರಾತ್ರಿಗಳಲ್ಲಿ ಒಂದು ಮಾತ್ರವಾಗಿದೆ, ಇದರಲ್ಲಿ ಆರಧನೆಗೈಯುವುದು ಹಾಗೂ ಸತ್ಕಾರ್ಯಗಳನ್ನುಮಾಡವುದು ಸಾವಿರ ತಿಂಗಳುಗಳವರೆಗೆ ಆರಾಧನೆ ಮಾಡುವುದರ ಸಮವಾಗಿದೆ.) ಪ್ರತಿ ತಿಂಗಳಲ್ಲಿ 3ದಿನ ಉಪವಾಸ ಆಚರಿಸುವುದು ಒಂದು ಯುಗದ ಸರಿಸಮ ದಿನಗಳವರೆಗೆ ಉಪವಾಸ ಆಚರಿಸುವಷ್ಟು ಸಮಾಗಿದೆ, ವ್ಯಕ್ತಿಯೋರ್ವನು ಕೇವಲ ಅಲ್ಲಾಹ್’ನನ್ನು ಸಂತೃಪ್ತಿಪಡಿಸಲು ಹಣವನ್ನು ಖರ್ಚು ಮಾಡಿದರೆ, ಅಲ್ಲಾಹ್’ನು ಅದರ ಬದಲಾಗಿ ಎಷ್ಟೋ ಪಟ್ಟು ಅವನಿಗೆ ಹಿಂದಿರುಗಿಸುವನು

   ಅವನ ಉದಾರತೆ ಹೇಗಿದೆಯೆಂದರೆ ನಮ್ಮ ಕಲ್ಪನೆಗಿಂತಲೂ ಹೆಚ್ಚಾಗಿ ನೀಡುವನು, ಸ್ವರ್ಗವಾಸಿಗಳಿಗೆ ಅವನು ಇಂತಿಂತಹಾ ಬಹುಮಾನಗಳನ್ನು ಇಟ್ಟಿದ್ದಾನೆಂದರೆ, ಅವುಗಳನ್ನು ಇದುವರೆಗೂ ಯಾವ ಕಣ್ಣುಗಳೂ ನೋಡಿಲ್ಲ, ಯಾವ ಕಿವಿಗಳೂ ಕೇಳಲಿಲ್ಲ, ಅಲ್ಲದೆ ಯಾವ ಮನುಷ್ಯನ ಕಲ್ಪನೆಯಲ್ಲೂ ಬಂದಿಲ್ಲ.  ವ್ಯಕ್ತಿಯೋರ್ವನು ಕೇವಲ ಅಲ್ಲಾಹ್’ನಿಗಾಗಿ ಯಾವುದಾದರೊಂದು ವಸ್ತುವನ್ನು ತ್ಯಜಿಸಿದರೆ ಅವನು ಅದಕ್ಕಿಂತ ಉತ್ತಮವಾದುದನ್ನು ಆತನಿಗೆ ನೀಡುವನು.

  ಅಲ್ಲಾಹ್’ನಿಗಾ ಯಾರ ಅವಶ್ಯಕತೆಯೂ ಇಲ್ಲ, ಆದರೆ ಸಕಲ ವಸ್ತುಗಳಿಗೂ ಅವನ ಅವಶ್ಯಕತೆಯಿದೆ ಅಲ್ಲಾಹ್’ನು ಹೇಳುವನು :

)يَا أَيُّهَا النَّاسُ أَنْتُمُ الْفُقَرَاءُ إِلَى اللَّهِ وَاللَّهُ هُوَ الْغَنِيُّ الْحَمِيدُ( فاطر: 15

“ ಮಾನವರೇ ನೀವು ಅಲ್ಲಾಹ್’ನ ನೆರವನ್ನು ಅವಲಂಬಿಸಿರುವಿರಿ, ಆದರೆ ಅಲ್ಲಾಹ್’ನು ಎಲ್ಲಾ ಅವಲಂಬನೆಗಳಿಂದ ಮುಕ್ತನಾಗಿದ್ದಾನೆ, ಮತ್ತು ಹೊಗಳಿಕೆಗೆ ಅರ್ಹನಾಗಿದ್ದಾನೆ. (ಖುರ್’ಆನ್ ಅಧ್ಯಾಯ ಫಾತಿರ್ : 15)

   ಜನರು ಅವನಿಗೆ ಲಾಭ ದೊರಕಿಸಬಯಸಿದರೂ ದೊರಕಿಸಲಾರರು, ಅಂತೆಯೇ ನಷ್ಟ ಮಾಡಬಯಸುವವರು ನಷ್ಟ ಮಾಡಲಾರರು, ಅವನು ಅತಿಯಾದ ಹಿರಿಮೆಯುಳ್ಳವನು ಹಾಗು ಮಹಾನನನು, ಅವನ ರಾಜ್ಯಾಧಿಕಾರ ಸರ್ವರಮೇಲೂ ಇದೆ, ಭೂಮಿ ಮತ್ತು ಆಕಾಶಗಲೆಲ್ಲವೂ ಅವನ ಆಡಳಿತದ ಕುರ್ಚಿಯಡಿಯಲ್ಲಿವೆ, ಅಲ್ಲದೇ ಏಳು ಆಕಾಶಗಳೂ ಅವನ ಆಡಳಿತದಲ್ಲಿವೆ.

ಅಲ್ಲಾಹ್’ನನ್ನು  ಹುಡುಕುವಿಕೆಯ ದಾರಿ

   ಅಲ್ಲಾಹ್’ನನ್ನು ಹುಡುಕಲು ಹಲವಾರು ಬೇರೆ ಬೇರೆ ದಾರಿಗಳಿವೆ, ನಾವಿಲ್ಲಿ ನಡೆಯುವ ದಾರಿಯೇ ಅವನ ಹುಡುಕಾಟದ ಅಭಿಯಾನ ಹಾಗೂ ಈ ದಾರಿಯಲ್ಲಿ ಓರ್ವ ಮಹಾನ್ ವ್ಯಕ್ತಿ ನಡೆದ್ದಿದ್ದರು. ಈ ಪ್ರಪಂಚದ ಸೃಷ್ಟಿಯ ಹಿಂದೆ ಒಬ್ಬ ನಿರ್ಮಾತೃ, ಸೃಷ್ಟಿಕರ್ತ ಅವಶ್ಯವಾಗಿದ್ದಾನೆ ಎಂಬುದರ ಅರಿವಾಗಿತ್ತು. ಅವನೇ ಆರಾಧನೆಗೆ ಅರ್ಹನಾಗಿದ್ದಾನೆ, ಆ ಮಹಾಪುರುಷನೇ ಇಬ್ರಾಹೀಂ ಅಲೈಹಿಸ್ಸಲಾಂ ಆಗಿದ್ದರು. (ಅಲ್ಲಾಹ್’ನು ಅವರ ಮೇಲೆ ಶಾಂತಿಯನ್ನು ಅವತರಿಸಲಿ) ಸ್ವತಃ ಅವರೂ ಒಬ್ಬ (ಸಂದೇಶವಾಹಕ) ಪೈಗಂಬರ್ ಆಗಿದ್ದರು ಹಾಗೂ ಪೈಗಂಬರರ ತಂದೆಯೂ ತಾತರೂ ಆಗಿದ್ದರು.

  ಇಬ್ರಾಹೀಂ (ಅ ಸ)ರು ಈ ರಚನೆಗಳ ಕುರಿತು ವಿಚಾರ ಚಿಂತನೆಗಳನ್ನು ಮಾಡುತ್ತಾ ಹೊರಟರು, ಅವರು ಅಲ್ಲಾಹ್’ನನ್ನು ಗುರುತಿಸಬಯಸಿದರು, ಏಕೆಂದರೆ ಅವರು ಆತನ ರಚನಾತ್ಮಕತೆ ಹಾಗು ಕ್ಷಮತೆಯನ್ನು ತಮ್ಮ ಮುಂದೆ ಕಾಣುತ್ತಿದ್ದರು, ಅವರು ಅಲ್ಲಾಹ್’ನನ್ನು ಹುಡುಕುವ ದಾರಿಯನ್ನು ಹಿಡಿದು ಯಾತ್ರೆ ಆರಂಭಿಸಿದರು. ಅವರ ವಿವರವನ್ನು (ಕಥೆಯನ್ನು) ಪವಿತ್ರ ಖುರ್’ಆನಿನಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.

" وَكَذَلِكَ نُرِي إِبْرَاهِيمَ مَلَكُوتَ السَّمَاوَاتِ وَالأَرْضِ وَلِيَكُونَ مِنَ الْمُوقِنِينَ (75) فَلَمَّا جَنَّ عَلَيْهِ اللَّيْلُ رَأَى كَوْكَبًا قَالَ هَذَا رَبِّي فَلَمَّا أَفَلَ قَالَ لا أُحِبُّ الآفِلِينَ(76) فَلَمَّا رَأَى الْقَمَرَ بَازِغًا قَالَ هَذَا رَبِّي فَلَمَّا أَفَلَ قَالَ لَئِن لَّمْ يَهْدِنِي رَبِّي لأكُونَنَّ مِنَ الْقَوْمِ الضَّالِّينَ(77) فَلَمَّا رَأَى الشَّمْسَ بَازِغَةً قَالَ هَذَا رَبِّي هَذَا أَكْبَرُ فَلَمَّا أَفَلَتْ قَالَ يَا قَوْمِ إِنِّي بَرِيءٌ مِّمَّا تُشْرِكُونَ(78) إِنِّي وَجَّهْتُ وَجْهِيَ لِلَّذِي فَطَرَ السَّمَاوَاتِ وَالأَرْضَ حَنِيفًا وَمَا أَنَاْ مِنَ الْمُشْرِكِينَ(79) وَحَاجَّهُ قَوْمُهُ قَالَ أَتُحَاجُّونِّي فِي اللَّهِ وَقَدْ هَدَانِ وَلاَ أَخَافُ مَا تُشْرِكُونَ بِهِ إِلاَّ أَن يَشَاء رَبِّي شَيْئًا وَسِعَ رَبِّي كُلَّ شَيْءٍ عِلْمًا أَفَلاَ تَتَذَكَّرُونَ (80) " ( سورة الأنعام : 75-80(

“ ಈ ರೀತಿ ನಾವು ಇಬ್ರಾಹೀಮರು ಅಚಲ ನಂಬಿಕೆ ಉಳ್ಳವರಾಗಲೆಂದು ಅವರಿಗೆ ಆಕಾಶಗಳ ಹಾಗೂ ಭೂಮಿಯ ಆಳ್ವಿಕೆಯನ್ನು ತೂರಿಸಿಕೊಟ್ಟೆವು,(75) (ಒಂದು ಹಂತದಲ್ಲಿ) ಅವರ ಮೇಲೆ ಇರುಳು ಕವಿದಾಗ ಅವರು ನಕ್ಷತ್ರವನ್ನು ಕಂಡರು. “ಇದುವೇ ನನ್ನ ದೇವರು” ಎಂದರು. ಅದು ಮರೆಯಾದಾಗ “ನಾನು ಮರೆಯಾಗಿ ಬಿಡುವವರನ್ನು ಮೆಚ್ಚುವುದಿಲ್ಲ” ಎಂದರು.(76) ತರುವಾಯ ಅವರು ಬೆಳಗಿದ ಚಂದ್ರನನ್ನು ಕಂಡು, “ಇದುವೇ ನನ್ನ ದೇವರು” ಎಂದರು. ಅದು ಕಣ್ಮರೆಯಾದಾಗ “ ನನ್ನ ದೇವರೇ ನನಗೆ ಸರಿದಾರಿಯನ್ನು ತೋರದಿದ್ದರೆ ನಾನು ದಾರಿಗೆಟ್ಟ ಸಮುದಾಯವನ್ನು ಸೇರುವುದು ಖಚಿತ” ಎಂದರು.(77) ಮುಂದೆ ಅವರು ಉರಿಯುವ ಸೂರ್ಯನನ್ನು ಕಂಡಾಗ “ಇದುವೇ ನನ್ನ ದೇವರು. ಇದು ಇತರೆಲ್ಲರಿಗಿಂತ ದೊಡ್ಡದಾಗಿದೆ” ಎಂದರು, ಕೊನೆಗೆ ಆದೂ ಕಣ್ಮರೆಯಾದಾಗ ಅವರು ಹೇಳಿದರು, “ ಓ ನನ್ನ ಜನಾಂಗದವರೇ, ನೀವು ದೇವರ ಜೊತೆಗೆ ಪಾಲುಗೊಳಿಸುತ್ತಿರುವ ಎಲ್ಲವುಗಳಿಂದಲೂ ನಾನು ಮುಕ್ತನು”.(78) “ ನಾನು ಏಕಾಗ್ರ ಚಿತ್ತನಾಗಿ ನನ್ನ ಮುಖವನ್ನು, ಆಕಾಶಗಳ ಹಾಗೂ ಭೂಮಿಯ ಸೃಷ್ಟಿಕರ್ತನೆಡೆಗೆ ತಿರುಗಿಸಿಕೊಂಡೆನು ಖಂಡಿತವಾಗಿಯೂ ನಾನು (ದೇವರಿಗೆ) ಪಾಲುದಾರರನ್ನು ನೇಮಿಸುವವನಲ್ಲ”.(79) ಅವರ ಜನಾಂಗವು ಅವರ ಜೋತೆ ಜಗಳಾಡಿತು. ಅವರು (ಇಬ್ರಾಹೀಮರು) ಹೇಳಿದರು; “ನೀವೇನು ಅಲ್ಲಾಹ್’ನ ವಿಷಯದಲ್ಲಿ ನನ್ನೊಡನೆ ಜಗಳಾಡುತ್ತಿರುವಿರಾ ? ಅವನೇ ನನಗೆ ಸನ್ಮಾರ್ಗವನ್ನು ತೋರಿರುವನು. ನೀವು ಅವನ ಜೊತೆ ಪಾಲುಗೊಳಿಸುವ ಯಾವುದಕ್ಕೂ ನಾನು ಅಂಜುವುದಿಲ್ಲ, ಸ್ವತಃ ನನ್ನ ಒಡೆಯನೇ ಏನನ್ನಾದರೂ ಮಾಡಲು ಇಚ್ಛಿಸದೆ (ಏನೂ ಆಗುವುದಿಲ್ಲ). ನನ್ನೊಡೆಯನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ನೀವೇನು ಚಿಂತಿಸುವುದಿಲ್ಲವೇ ?(80) (ಖುರ್’ಆನ್ ಅಧ್ಯಾಯ ಅನ್ ಆಮ್ : 75-80)

   ಇಬ್ರಾಹೀಮ್ (ಅ ಸ)ರಿಗೆ ಎಲ್ಲರಿಗೂ ಸೃಷ್ಟಿಸಿರುವ ಒಂದು ಶಕ್ತಿಯಿದೆ ಎಂಬ ಅರಿವು ಉಂಟಾದಾಗ, ಅದು ಭೂಮಿ ಆಕಾಶಗಳನ್ನು ಸೃಷ್ಟಿಸಿದೆ ಎಂಬ ಅರಿವಾದಾಗ, ತಮ್ಮಲ್ಲಿ ತಮಗೆಯೇ ಅರಿವಾದದ್ದು, ಈ ಜನರು ಪೂಜಿಸುತ್ತಿರುವ ದೇವತೆಗಳಿಂದ ಯಾವುದೇ ರೀತಿಯ ಲಾಭ ನಷ್ಟಗಳುಂಟಾಗದು, ಹಾಗೂ ಈ ದೇವ ದೇವತೆಯರು ಖಂಡಿತವಾಗಿಯೂ ಏನನ್ನೂ ಸೃಷ್ಟಿಸಲಾರರು. ಇವುಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾರರು ಎಂಬದನ್ನು ಸಾಬೀತುಪಡಿಸಿದರು.

   ಇಬ್ರಾಹೀಮ್ (ಅ ಸ)ರು ತಮ್ಮ ಪರಿಪಾಲಕನನ್ನು ಹುಡುಕುವ ದಾರಿಯ ಅಭಿಯಾನದಲ್ಲಿ ಹೊರಟರು. ಮೊದಲು ಆಕಾಶವನ್ನು ನೋಡಿದರು ಅದರಲ್ಲೊಂದು ನಕ್ಷತ್ರವನ್ನು ಕಂಡರು ಹಾಗೂ ಇದು ನನ್ನ ಪರಿಪಾಲಕನಾಗಿರಬಹುದೇ? ಎಂದು ಯೋಚಿಸಿದರು. ಆದರೆ ನಕ್ಷತ್ರವು ಎಷ್ಟೇ ಹೊಳೆದರು ಅದಕ್ಕೆ ಮರೆಯಾಗಲೆಬೇಕಾಗಿದೆ, ರಾತ್ರಿ ಕತ್ತಲಾವರಿಸಿದುದು ಸಂದು ನಕ್ಷತ್ರವು ಮರೆಯಾದಾಗ ಇಬ್ರಾಹೀಮರು ಚಕಿತರಾದರು, ಮತ್ತು ನಕ್ಷತ್ರವೊಂದು ದೀರ್ಘ ರಾತ್ರಿಯಲ್ಲಿ ಮರೆಯಾದರೆ ಅದು ನಮ್ಮ ಸೃಷ್ಟಿಕರ್ತನಾಗಿರಲು ಹೇಗೆ ಸಾಧ್ಯವೆಂದು ಹೇಳಿದರು. ಇಬ್ರಾಹೀಮ(ಅ ಸ)ರು ತಮ್ಮ ಅಭಿಯಾನವನ್ನು ಮುಂದುವರೆಸಿದರು, ನಂತರ ಆಕಾಶದಲ್ಲಿ ಚಂದ್ರನನ್ನು ಕಂಡು, ಇದು ನಾನು ಹುಡುಕುತ್ತಿರುವ ಸೃಷ್ಟಿಕರ್ತನಾಗಿರಬಹುದೇ? ಎಂದು ಯೋಚಿಸಿದರು. ಆದರೆ ಚಂದ್ರ ಬೆಳಗಾಗುತ್ತಿದ್ದಂತೆ ಕಣ್ಮುಂದೆಯೇ ಮರೆಯಾದ.

   ಅಲ್ಲಾಹ್’ನ ಪೈಗಂಬರರಾದ ಇಬ್ರಾಹೀಮ್(ಅ ಸ)ರವರು ಸೂರ್ಯನನ್ನು ಕಂಡಾಗ ಹೇಳಿದರು; ಇವನು ನನ್ನ ಪರಿಪಾಲಕನಾಗಿರಬಹುದೇ? ಏಕೆಂದರೆ ಇದು ಅವುಗಳಿಗಿಂತಲೂ ದೊಡ್ಡದಾಗಿದೆ. ಆದರೆ ದಿನದ ಅಂತ್ಯದಲ್ಲಿ ಸೂರ್ಯನೂ ಸಹ ಮುಳುವಾದಾಗ ಇವನೂ ಸಹ ನಮ್ಮ ಪರಿಪಾಲಕನಲ್ಲವೆಂಬುದು ಧೃಡಪಟ್ಟಿತು. ಆಗ ಅಲ್ಲಾಹ್’ನು ಅವರ ಮೇಲೆ ಕೃಪೆ ತೋರಿ ಸತ್ಯ ವಿಶ್ವಾಸದಿಂದ ಸಮ್ಮತಿಸಿದನು, ಮತ್ತು ಅಲ್ಲಾಹ್’ನು ಅವರಿಗೆ ತನ್ನ ವಾಣಿಯನ್ನು ಅವತರಿಸಿದನು, ಜನರಲ್ಲಿ ಇದನ್ನು ಘೋಷಿಸುವ ಆದೇಶವನ್ನು ನೀಡಿ, ಅಲ್ಲಾಹ್’ನು ಇಬ್ರಾಹೀಮ(ಅ ಸ)ರನ್ನು ಜನರ ಮಾರ್ಗದರ್ಶನ ಮಾಡಲಿಕ್ಕಾಗಿ ಆರಿಸಿಕೊಂಡು ತನ್ನ ಪೈಗಂಬರರನ್ನಾಗಿ ಮಾಡಿಕೊಂಡನು.

   ಹೌದು ಅವನು ಇಬ್ರಾಹೀಮ(ಅ ಸ)ರು ಗುರುತಿಸಿರುವವನು ಅಲ್ಲಾಹ್’ನೇ ಆಗಿದ್ದಾನೆ. ಸೂರ್ಯ, ಚಂದ್ರ,     ನಕ್ಷತ್ರವಲ್ಲದೆ, ಅವರು ವೈಯಕ್ತಿಕವಾಗಿ ಪೂಜಿಸುತ್ತಿದ್ದ ಮೂರ್ತಿಗಳು ದೇವನಲ್ಲವೇ ಅಲ್ಲ. ಭೂಮಿ ಆಕಾಶಗಳನ್ನು ಸೃಷ್ಟಿಸಿರುವವನು ಅಲ್ಲಾಹ್’ನೇ ಆಗಿದ್ದಾನೆ.

   ನೆನಪಿರಲಿ ಅಲ್ಲಾಹ್’ನ ಹುಡುಕಾಟದ ದಾರಿಯಲ್ಲಿನ ಯಾತ್ರೆಯು ಇದು ಮೊದಲನೆಯದಲ್ಲದೆ, ಇಂತಹಾ ಯಾತ್ರೆಗಳು ಆಗಿತ್ತಲೇ ಇರುತ್ತಿದ್ದವು,  ಇಬ್ರಾಹೀಮ್(ಅ ಸ)ರ ಮರಣದ ಸಾವಿರಾರು ವರ್ಷಗಳ ನಂತರವೂ  ನಡೆದಿದೆ, ಬನ್ನಿ ಆ ಯಾತ್ರೆಯ ವಿಷಯದ ಕುರಿತು ಮಾತನಾಡೋಣ.

 ಅಲ್ಲಾಹ್’ನ ಸೃಷ್ಟಿಗಳೇ ಅವನ ಕುರಿತು ತಿಳಿಸುತ್ತವೆ

   ಅಲ್ಲಾಹ್’ನ ಅಸ್ತಿತ್ವದ ಕುರಿತು ಅತ್ಯಧಿಕವಾಗಿ ಪರಿಚಯಿಸುವುದು, ಅವನು ಸುಂದರವಾಗಿ ಸೃಷ್ಟಿಸಿರುವ ಆತನ ರಚನೆಗಳೇ ಆಗಿವೆ. ಆ ರಚನೆಗಳನ್ನು ಆತನೇ ಸೃಷ್ಟಿಸಿರುವನು, ಅವುಗಳ  ಕೃಪಾರ್ಥಗಳೇ ಅವನ ಪರಿಚಯ ನೀಡುತ್ತವೆ. ಅದು ತನ್ನ ದಾಸರಿಗಾಗಿ ಆಗಿದ್ದು, ಅವರು ನಾಸ್ತಿಕರೇ ಆಗಿರಲಿ ಆತನ ಭಕ್ತರೇ ಆಗಿರಲಿ.

   ಪವಿತ್ರ ಖುರ್’ಆನ್ ಅಲ್ಲಾಹ್’ನ ಚಮತ್ಕಾರಗಳ ಹಾಗೂ ಕ್ಷಮತೆಯ ಅತಿದೊಡ್ಡ ಪುರಾವಯಾಗಿದೆ, ಅಲ್ಲಾಹ್’ನು ಇದರಲ್ಲಿ ಮುಂದಿನ ಹಾಗೂ ಹಿಂದಿನ ಎಲ್ಲಾ ರೀತಿಯ ಸಮಾಚರಗಳನ್ನಿಟ್ಟಿರುವನು. ಇದರಲ್ಲಿ ಮನುಷ್ಯನು ಹಿಂದೆಂದೂ ಕೇಳರಿಯದ ನೋಡಿರದ ವಿಷಯಗಳನ್ನು ವಿವರಿಸಿದನು, ಅದರ ಕುರಿತು ಈ ಹಿಂದೆ ತಿಳಿಯದೇ ಇರದ ವಿಷಯಗಳಾಗಿವೆ, ನಾವು ಇಲ್ಲಿ ಪವಿತ್ರ ಖುರ್’ಆನಿನಲ್ಲಿ ಉಲ್ಲೇಖವಿರುವ ಕೆಲವು ಚಮತ್ಕಾರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ, ಇದರಿಂದ ಅಲ್ಲಾಹ್’ನ ಅಸ್ತಿತ್ವ ಹಾಗೂ ಅವನ ಜ್ಞಾನವು ಸಕಲ ವಸ್ತುಗಳಿಗಿಂತ ಪೂರ್ವದಲ್ಲಿಯೇ ಇತ್ತೆಂದು ತಿಳಿಯುತ್ತದೆ.

§  ವಿಜ್ಞಾನಿಗಳುಲೋಹದ ಧಾತುಗಳ ಘಟಕಗಳನ್ನು ತಿಳಿದುಕೊಳ್ಳಲು ಬಹಳಷ್ಟು ಶ್ರಮವಹಿಸಿದರು, ಏಕೆಂದರೆ ಅವರು ಅದರ ಶಕ್ತಿಯ ಗುಂಪುಗಳನ್ನು ಜೋಡಿಸಲು ಬಯಸುತ್ತಿದ್ದರು, ಅದು ನಮ್ಮ  ಸೌರ ಮಂದಲದಲ್ಲಿ ಲಭ್ಯವಿರುವ ಶಕ್ತಿಗಿಂತ ನಾಲ್ಕು (4) ಪಟ್ಟು ಹೆಚ್ಚಾಗಿದೆ. ಈ ಮಾತು ಬಹಳಷ್ಟು ವಿಜ್ಞಾನಿಗಳಿಗೆ ಆಶ್ಚರ್ಯ ಜನಕವಾಗಿತ್ತು, ಆದರೆ ಈ ನೈಜತೆ ಇಸ್ಲಾಮಿನ ವಿದ್ವಾಂಸರಿಗೆ ಯಾವುದೇ ರೀತಿಯ ಆಶ್ಚರ್ಯಕರ ಮಾತಾಗಿರಲಿಲ್ಲ, ಏಕೆಂದರೆ ಅವರು ಅಲ್ಲಾಹ್’ನ ಶಬ್ದಗಳನ್ನು (ವಾಣಿಯನ್ನು) ಓದುತ್ತಿದ್ದರು ಹಾಗೂ ಅರಿಯುತ್ತಿದ್ದರು.

ಅಲ್ಲಾಹ್’ನು ಲೋಹದ ಕುರಿತು ತಿಳಿಸುವನು;

" وَأَنزَلْنَا الْحَدِيدَ فِيهِ بَأْسٌ شَدِيدٌ وَمَنَافِعُ لِلنَّاسِ وَلِيَعْلَمَ اللَّهُ مَن يَنصُرُهُ وَرُسُلَهُ بِالْغَيْبِ إِنَّ اللَّهَ قَوِيٌّ عَزِيزٌ " (سورة الحديد : 25)

“ ಹಾಗೆಯೇ ನಾವು ಉಕ್ಕನ್ನು ಇಳಿಸಿದೆವು, ಅದರಲ್ಲಿ ಭಾರೀ ಶಕ್ತಿಯಿದೆ, ಮತ್ತು ಜನರಿಗೆ ಹಲವು ಪ್ರಯೋಜನಗಳಿವೆ, ಮತ್ತು ಯಾರು ಕಣ್ಣಾರೆ ಕಾಣದೆ ತನಗೆ ಮತ್ತು ತನ್ನ ದೂತರಿಗೆ ನೆರವಾಗುವರೆಂಬುದನ್ನು ಅಲ್ಲಾಹ್’ನು ಅರಿಯ ಬಯಸುತ್ತಾನೆ, ಅಲ್ಲಾಹ್’ನಂತೂ ಭಾರೀ ಶಕ್ತಿಶಾಲಿಯೂ ಪ್ರಬಲನೂ ಆಗಿದ್ದಾನೆ. (ಖುರ್’ಆನ್ ಅಧ್ಯಾಯ ಅಲ್ ಹದೀದ್ : 25)

   ಅಲ್ಲಾಹ್’ನು ಉಕ್ಕಿನ ಕುರಿತು “ಇಳಿಸಿದೆವು’ ಎಂಬ ಪದವನ್ನು ಬಳಸಿರುವುದು ಮುಸ್ಲಿಮ್ ವಿದ್ವಾಂಸರಿಗೆ ತಕ್ಷಣ ತಿಳಿಯಿತು, ಉಕ್ಕು ಘಟಕದ ಪದಾರ್ಥವಲ್ಲವೆಂಬುದು ಇದರಿಂದಲೇ ತಿಳಿಯುತ್ತದೆ. ಅಲ್ಲದೆ ಅದು ಆಕಾಶದಿಂದ ಕೆಳಗೆ ಇಳಿಸಲ್ಪಟ್ಟಿದೆ, ಆಧುನಿಕ ಯುಗದ ವಿಜ್ಞಾನಿಗಳೂ ಸಹ (ಲೋಹ) ಉಕ್ಕಿನ ಘಟಕವು ಭೂಮಿಯ ಘಟಕವಲ್ಲವೆಂಬುದನ್ನು ತಿಳಿದು ಒಪ್ಪಿಕೊಂಡಿದ್ದಾರೆ ಹಾಗೂ ಪುಷ್ಟೀಕರಿಸಿದ್ದಾರೆ.

   ನಡೆಯಿರಿ ಈಗ ನಾವು ಸ್ವಲ್ಪ ಸಮುದ್ರದ ಅಂತರಾಳದಲ್ಲಿ ಮುಳುಗೊಣವೇ,,,,, ಏಕಂದರೆ ಸಾಗರಗಳ ಭೂವೈಜ್ಞಾನಿಕ ವಿಷಯಗಳನ್ನು ಪ್ರವೀಣರು ಪತ್ತೆಹಚ್ಚಿರುವುದೆನೆಂದರೆ, ಸಾಗರಗಳ ಭೂವೈಜ್ಞಾನಿಕ ವಿಷಯಗಳು ಅಲ್ಲಾಹ್’ನು ಪವಿತ್ರ ಖುರ್’ಆನಿನಲ್ಲಿ ಉಲ್ಲೇಖಿಸಿರುವಂತೆಯೇ ಸ್ಪಷ್ಟವಾಗಿವೆ ಎಂದಿದ್ದಾರೆ. ಅಲ್ಲಾಹ್’ನು ಹೇಳಿದನು;

" أَوْ كَظُلُمَاتٍ فِي بَحْرٍ لُّجِّيٍّ يَغْشَاهُ مَوْجٌ مِّن فَوْقِهِ مَوْجٌ مِّن فَوْقِهِ سَحَابٌ ظُلُمَاتٌ بَعْضُهَا فَوْقَ بَعْضٍ إِذَا أَخْرَجَ يَدَهُ لَمْ يَكَدْ يَرَاهَا وَمَن لَّمْ يَجْعَلِ اللَّهُ لَهُ نُورًا فَمَا لَهُ مِن نُّورٍ " (سورة النور : 40)

“ಅಥವ ಅವರ (ಕರ್ಮಗಳ) ಸ್ಥಿತಿಯು, ಕಡಲಿನ ಆಳದಲ್ಲಿರುವ ಕತ್ತಲೆಯಂತಿದೆ. ಅದನ್ನು ಮುಚ್ಚಿಡಲು ಅದರ ಮೇಲೆ ಒಂದು ಅಲೆ ಮತ್ತು ಆ ಅಲೆಯ ಮೇಲೆ ಮತ್ತೊಂದು ಅಲೆ ಇರುತ್ತದೆ ಮತ್ತು ಅದರ ಮೇಲೆ ಮೋಡ ಕವಿದಿರುತ್ತದೆ. ಕತ್ತಲ ಮೇಲೆ ಕತ್ತಲು, ಎಷ್ಟೆಂದರೆ, ಅಲ್ಲಿ ಯಾರಾದರು ತನ್ನ ಕೈಯನ್ನು ಹೊರಚಾಚಿದರೆ ಅದನ್ನು ಕಾಣಲೂ ಅವನೀಗ ಸಾಧ್ಯವಾಗದು. ಯಾರಿಗೆ ಅಲ್ಲಾಹ್’ನು ಪ್ರಕಾಶವನ್ನು ನೀಡಲಿಲ್ಲವೋ ಅವನಿಗೆ ಪ್ರಕಾಶವೇ ಇಲ್ಲ. (ಖುರ್’ಆನ್ ಅಧ್ಯಾಯ ಅನ್ನೂರ್ : 40)              

   ಈ ವಿಸ್ಮಯದ ಕುರಿತು ಇದ್ದಕ್ಕಿದ್ದಂತೆ ಹಾಗೆಯೇ ಏನೊಂದೂ ನಡೆದಿಲ್ಲ ಅಲ್ಲದೆ ಬಹಳಷ್ಟು ಸಮುದ್ರದ ಕೃತಕ ಬಂದರುಗಳ ಸ್ಥಾಪನೆಯೂ ಆದವು. ಉಪಗ್ರಹಗಳ ಮೂಲಕ ಮಾಹಿತಿ ಹಾಗು ದೃಶ್ಯಗಳನ್ನು ಸೆರೆಹಿಡಿಯಲಾಯಿತು, ನಂತರ ಈ ವಿಷಯಗಳ ತಾತ್ಪರ್ಯ ದೊರೆಯಿತು, ಈ ವಿಷಯದ ವರದಿಗಾರರು ‘ಪ್ರೊಫೆಸರ್ ರಶ್ರೆಯೇಡರ್’ (Professor Rashryder)  ಆಗಿದ್ದಾರೆ. ಇವರು ಪಶ್ಚಿಮ ಜರ್ಮನಿಯಲ್ಲಿ ಸಮುದ್ರ ವಿಜ್ಞಾನಿಗಳಲ್ಲಿ ಒಬ್ಬ ಹಿರಿಯ ವಿಜ್ಞಾನಿಯಾಗಿದ್ದರು. ಇವರು ಈ ಸೂಕ್ತಿಯನ್ನು ಕೇಳಿ ಹೇಳಿದರು, “ ಇದು ಯಾವುದೇ ಒಬ್ಬ ಮನುಷ್ಯನ ವಾಣಿಯಾಗಿರಲು ಸಾಧ್ಯವಿಲ್ಲ”. ಮತ್ತೊಬ್ಬ ಸಾಗರ ಭೂವಿಜ್ಞಾನ ವಿಷಯಗಳ ವಿಜ್ಞಾನಿ ‘ಪ್ರೊಫೆಸರ್ ಡೋರ್ಜರೋ’ (Professor Dorjaro)  ರವರು ಈ ಸೂಕ್ತಿಯ ವಿಷಯದ ಕುರಿತು ವೈಜ್ಞಾನಿಕ ದೃಷ್ಟಿಕೋನದಲ್ಲಿ ವ್ಯಖ್ಯಾಯಿನಿಸುವುದೇನೆಂದರೆ,     “ ಗತಕಾಲದಲ್ಲಿ ಮನುಷ್ಯನು ಯಂತ್ರೋಪಕರಣಗಳನ್ನು ಬಳಸದೆಯೇ 20ಮೀಟರ್’ಗಿಂತ ಹೆಚ್ಚು ನೀರಿನಲ್ಲಿ ಮುಳುಗಲು ಸಾಧ್ಯವಿರಲಿಲ್ಲ, ಆದರೆ ಇಂದು ಆಧುನಿಕ ಯುಗದಲ್ಲಿ ನಾವು ಯಂತ್ರೋಪಕರಣಗಳನ್ನು ಬಳಸಿ ಅವುಗಳ ಸಹಾಯದಿಂದ ಸಮುದ್ರದಲ್ಲಿ 200ಮೀಟರ್ ಆಳದಲ್ಲಿ ಮುಳುಗಿದಾಗ, ಆ 200ಮೀಟರ್ ಆಳದಲ್ಲಿ ನಮಗೆ ಕಂಡದ್ದು ತುಂಬಾ ಕಗ್ಗತ್ತಲಿರುವುದು”.

   ಖುರ್’ಆನಿನ ಸೂಕ್ತಿಯಲ್ಲಿ ‘ಬಹರೀನ ಲುಜ್ಜೀ’ (ಒಂದು ಆಳವಾದ ಸಮುದ್ರದಲ್ಲಿ) ಎಂಬ ಶಬ್ದ ಬಂದಿದೆ. ಆಳವಾದ ಸಮುದ್ರಗಳ ಶೋಧನೆಯಲ್ಲಿ ಸೆರೆಹಿಡಿದ ಸಂಗ್ರಹಿಸಿದ ದೃಷ್ಯಗಳನ್ನು ತೆಗೆದುಕೊಂಡಾಗ ಅವುಗಳಲ್ಲಿ ಈ ಸೂಕ್ತಿಯ ಅರ್ಥ ನೈಜತೆ ಸ್ವಚ್ಛಂದವಾಗಿ ಪ್ರಾಮಾಣಿಕವಾಗಿ ದೊರೆಯುತ್ತದೆ.

)ظُلُمَاتٌ بَعْضُهَا فَوْقَ بَعْضٍ(

 

(ಒಂದರಮೇಲೊಂದು ಕತ್ತಲುಗಳಿವೆ) ಸಪ್ತವರ್ಣಗಳಲ್ಲಿ(ಕಾಮನಬಿಲ್ಲಿನಲ್ಲಿ) ಏಳು ರೀತಿಯ  ಬೇರೆಬೇರೆ  ಬಣ್ಣಗಳು ಇರುವುದು ಎಲ್ಲರೂ ಚೆನ್ನಾಗಿ ಬಲ್ಲರು. ಕೆಂಪು, ಹಳದಿ, ನೀಲಿ, ಹಾಸಿರು, ಕಂದು, ಮುಂತಾದವು. ನಾವು ಸಮುದ್ರದಲ್ಲಿ ಮುಳುಗಿ ನೋಡಿದರೆ ಈ ಎಲ್ಲ ಬಣ್ಣಗಳು ಒಂದರ ನಂತರ ಒಂದು ಮಾಯವಾಗುತ್ತಾ ಹೋಗುವುವು.  ಈ ಬಣ್ಣಗಳು ಮಾಯಾವಾಗುವುದರಿಂದ ಕತ್ತಲಾವರಿಸಿಕೊಳ್ಳುತ್ತದೆ. ಮೊದಲು ಕೆಂಪು ಮಾಯವಾಗುತ್ತದೆ, ನಂತರ ಕಂದು, ನಂತರ ಹಳದಿ, ಕೊನೆಯಲ್ಲಿ ನೀಲಿ ಬಣ್ಣ ಮಾಯವಾಗುತ್ತದೆ, ಅಂದರೆ 200ಮೀಟರ್ ಆಳದಲ್ಲಿ ಈ ನೀಲಿ ಬಣ್ಣ ಮಾಯವಾಗುತ್ತದೆ. ಈ ಎಲ್ಲಾ ಬಣ್ಣಗಳು ಮಾಯವಾದ ನಂತರ ಆಳದಲ್ಲಿ ಕೇವಲ ಕಗ್ಗತ್ತಲು ಮಾತ್ರ ಉಳಿಯುತ್ತದೆ, ಅಲ್ಲಾಹ್’ನು ಹೇಳಿದನು;

)مَوْجٌ مِّن فَوْقِهِ مَوْجٌ(

(ಅಲೆಗಳ ಮೇಲೆ ಅಲೆಗಳು ಆವರಿಸುತ್ತಿವೆ) ವೈಜ್ಞಾನಿಕತೆಯ ರೂಪದಲ್ಲಿ ಸಮುದ್ರದ ಆಳದ ಭಾಗ ಹಾಗೂ ಮೇಲ್ಭಾಗದ ಮಧ್ಯದಲ್ಲಿ ಇಂದು ವಿಭಾಜಕ ರೀಖೆಯಿದೆ ಎಂಬ ಮಾತು ಸ್ಪಷ್ಟವಾಗಿದ್ದು ಅದು ವೈಜ್ಞಾನಿಕವಾಗಿ ಸಿದ್ಧಿಯಾಗಿದೆ. ಆದರೆ ನಾವು ಅದನ್ನು ಕಣ್ಣಾರೆ ಕಾಣಲು ಸಾಧ್ಯವಿಲ್ಲ. ಸಮುದ್ರದ ಮೇಲ್ಭಾಗದಲ್ಲಿ ಅಲೆಗಳಿವೆ, ಅವುಗಳನ್ನು ನಾವು ನೋಡಬಹುದಾಗಿದೆ, ಹಾಗಾಗಿ ನಮಗೆ ಅಲೆಗಳ ಮೇಲೆ ಅಲೆಗಳಿವೆ ಎಂಬಂತೆ ಭಾಸವಾಗುತ್ತದೆ. ನೆನಪಿರಲಿ ಇದೊಂದು ವಿಸ್ಮಯವಾಗಿದೆ. ಅದರ ವೈಜ್ಞಾನಿಕರೀತಿಯಲ್ಲಿ ಸ್ಪಷ್ಟವಾಗಿದೆ ಹಾಗಾಗಿ ‘ಪ್ರೊಫೆಸರ್ ಡೋರ್ಜರೋ’ (Professor Dorjaro) ರವರು, ಈ ಸೂಕ್ತಿಯ ಕುರಿತು ಇದು ಯಾವೊಬ್ಬ ಮನುಷ್ಯನ ಜ್ಞಾನದ ಕುರಿತಾದ ಫಲವೆಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

   ಮಾನ್ಯರೇ, ಅಲ್ಲಾಹ್’ನ ಕುರಿತು ಇದುವರೆಗೂ ನಿಮಗೆ ಪರಿಚಯ ತಿಳಿಯದೆ ಇದ್ದರೆ ಈಗ ಅವನನ್ನು ಅರಿತು ಪರಿಚಯಿಸಿಕೊಳ್ಳಿರಿ.

  •  ಅವನ ಚಮತ್ಕಾರ ಹಾಗೂ ಅವನ ರಚನೆಗಳ ಕುರಿತು ಯೋಚಿಸಿರಿ, ಆಕಾಶವನ್ನು ನೊಡಿರಿ ಅದನ್ನು ಬೀಳದಂತೆ ತಡೆಹಿಡಿದಿಟ್ಟಿರುವನು ಯಾರು?
  • ನಿಮ್ಮ ಪಾದದಡಿಯಲ್ಲಿ ಭೂಮಿಯನ್ನು ಸಮದಟ್ಟಾಗಿಸಿದರುವವನು ಯಾರು?
  • ಈ ಸಂಪೂರ್ಣ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವವನು ಯಾರು ? ಎಂಬ ಮಾತಿನೆಡೆಗೆ ಗಮನ ಹರಿಸಿರಿ.
  • ಹೌದು ಅವನು ಅಲ್ಲಾಹ್’ನೇ ಆಗಿದ್ದಾನೆ, ಅವನು ಇದೆಲ್ಲವನ್ನು ನಿಯಂತ್ರಿಸುವವನು ಅವನೇ ಅಮರನಾಗಿದ್ದಾನೆ.

ನೀವು ಇದನ್ನು ತಿಳಿಯಬಯಸುವುದಾದರೆ ಕೇವಲ ಬಾಗಿಲು ತಟ್ಟಿ

   ಮನುಷ್ಯನು ತನ್ನ ಸುತ್ತ ಮುತ್ತಲಿನ ವಸ್ತುಗಳ ಪ್ರಾಕೃತಿಕ ಹಾಗೂ ಪ್ರಾಕೃತಿಕವಲ್ಲದ ಘಟನೆಗಳ ಕುರಿತು ತಿಳಿದುಕೊಳ್ಳಲು ಅನೇಕರೀತಿಯ ಮಾಧ್ಯಮಗಳು ಹಾಗು ವಿಧಾನಗಳಿವೆ, ಮತ್ತು ಇದನ್ನು ಗುರುತಿಸುವ ವಿಧಾನವೂ ಕೂಡ ವಸ್ತುಗಳನ್ನಾಧರಿಸಿ ಬೇರೆ ಬೇರೆ ರೀತಿಯಲ್ಲಿವೆ.

   ಉದಾಹರಣೆಗೆ; ನೀವು ಒಬ್ಬ ವ್ಯಕ್ತಿಯನ್ನು ಅರಿಯಬೇಕೆನಿಸಿದಾಗ, ನೀವು ಅವನಿಗೆ ಹತ್ತಿರವಾಗುತ್ತೀರಿ, ಅವನೊಂದಿಗೆ ಗೆಳೆತನ ಸಾಧಿಸುವಿರಿ, ಅವನನ್ನು ಪ್ರಶಂಶಿಸುವಿರಿ, ಆದರಿಸುವಿರಿ, ಅಲ್ಲದೆ ಬೇರೆಬೇರೆ ಭಾಷೆಯ ಜನರ ಸರ್ವನಾಮವನ್ನು ಬಳಸುವಿರಿ, ಗುರುತಿಲ್ಲದ ವ್ಯಕ್ತಿಯನ್ನು ಪರಿಚಯಿಸುವ ಕಾರ್ಯದಂತೆ ಅಂದರೆ ‘ಸೌಜನ್ಯಪೂರ್ವಕ ಆದರದ’ ಮಾತುಗಳು, ಕೆಲವೊಮ್ಮೆ ನಿಮ್ಮ ಗೆಳೆಯರು ನಿಮ್ಮ ಸ್ವಪರಿಚಯವನ್ನು ಇತರರಿಗೆ ತಿಳಿಸುವುದು, ಹಾಗೂ ಹೇಳುವರು ತಾವು ಅವರಲ್ಲವೆ (ಅವರುತಾನೆ?) ಓಹೋ ಹೌದೌದು ಮುಂತಾದವು. ಇನ್ನು ಹಲವಾರು ಜನರ ಪರಿಚಯವನ್ನು ನಾವು ಪತ್ರಿಕೆಗಳ ಮೂಲಕ ದೂರದರ್ಶನದ ಪರದೆಯ ಮೂಲಕ ತಿಳಿದುಕೊಳ್ಳುವೆವು. ಕೆಲವು ವ್ಯಕ್ತಿಗಳ ಪರಿಚಯವನ್ನು ನಾವು ಕಥೆ ಕಾದಂಬರಿಗಳ ಮೂಲಕ ತಿಳಿದುಕೊಳ್ಳುವೆವು, ಅವು ಲೇಖಕರ ಮೂಲಕ ನಮಗೆ ಲಭ್ಯವಾಗುತ್ತವೆ. ಅವು ಕೆಲವೊಮ್ಮೆ ನೈಜತೆಗೆ ಹತ್ತಿರವಾಗಿರುತ್ತವೆ, ಕೆಲವೊಮ್ಮೆ ದೂರ. ಯಾವುದೇ ಒಬ್ಬ ವ್ಯಕ್ತಿಯನ್ನು ಅರಿಯಲು ಬಹಳಷ್ಟು ವಿಧಾನಳಿವೆ, ಅದರಲ್ಲಿ ಉತ್ತಮವಾದುದೆಂದರೆ, ಸ್ವತಃ ಅವನಿಂದಲೇ ತಿಳಿದುಕೊಳ್ಳುವುದು, ನಾವು ಅಲ್ಲಾಹ್’ನ ಕುರಿತು ತಿಳಿದುಕೊಳ್ಳಲು ಇದೇ ವಿಧಾನವನ್ನು ಬಳಸುವೆವು.

ಈಗ ಪ್ರಶ್ನೆ ಅಲ್ಲಾಹ್’ನು ಯಾರು ಎಂಬುದಾಗಿದೆ?

ಈ ಪ್ರಶ್ನೆಗೆ ಉತ್ತರವನ್ನು ಸ್ವತಃ ಅಲ್ಲಾಹ್’ನೇ  ನೀಡುವನು. ಅವನು ಹೇಳುವನು;

" اللّهُ لاَ إِلَـهَ إِلاَّ هُوَ الْحَيُّ الْقَيُّومُ لاَ تَأْخُذُهُ سِنَةٌ وَلاَ نَوْمٌ لَّهُ مَا فِي السَّمَاوَاتِ وَمَا فِي الأَرْضِ مَن ذَا الَّذِي يَشْفَعُ عِنْدَهُ إِلاَّ بِإِذْنِهِ يَعْلَمُ مَا بَيْنَ أَيْدِيهِمْ وَمَا خَلْفَهُمْ وَلاَ يُحِيطُونَ بِشَيْءٍ مِّنْ عِلْمِهِ إِلاَّ بِمَا شَاء وَسِعَ كُرْسِيُّهُ السَّمَاوَاتِ وَالأَرْضَ وَلاَ يَؤُودُهُ حِفْظُهُمَا وَهُوَ الْعَلِيُّ الْعَظِيمُ " ( البقرة : 255(

  “ಅಲ್ಲಾಹ್ – ಅವನ ಹೊರತು ಆರಾಧನೆಗೆ ಅರ್ಹರು ಬೇರಾರೂ ಇಲ್ಲ. ಅವನು ಸದಾ ಜೀವಂತನು, ಎಲ್ಲರ ನಿಯಂತ್ರಕನು, ತೂಕಡಿಕೆಯಾಗಲಿ ನಿದ್ದೆಯಾಗಲಿ ಅವನನ್ನು ಬಾಧಿಸುವುದಿಲ್ಲ. ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲವೂ ಅವನದೇ. ಅವನ ಮುಂದೆ, ಅವನ ಅಪ್ಪಣೆಯಿಲ್ಲದೆ ಶಿಫಾರಸ್ಸು ಮಾಡಬಲ್ಲವರು ಯಾರು? ಅವರ (ಜನರ) ಮುಂದಿರುವ ಮತ್ತು ಅವರ ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಅವನ ಜ್ಞಾನದ ಯಾವ ಅಂಶವನ್ನೂ ಗ್ರಹಿಸಲು ಅವರಿಗೆ ಸಾಧ್ಯವಿಲ್ಲ-ಅವನೇ ಇಚ್ಚಿಸುವಷ್ಟರ ಹೊರತು, ಅವನ ಅಧಿಕಾರ ಪೀಠವು ಆಕಾಶಗಳನ್ನು ಮತ್ತು ಭೂಮಿಯನ್ನು ಆವರಿಸಿದೆ. ಅವುಗಳ ಸಂರಕ್ಷಣೆಯ ಕೆಲಸವು ಅವನನ್ನು ದಣಿಸುವುದಿಲ್ಲ. ಮತ್ತು ಅವನು ಅತ್ತ್ಯುನ್ನತನೂ, ಮಹಾನನೂ ಆಗಿದ್ದಾನೆ. (ಖುರ್’ಆನ್ ಅಧ್ಯಾಯ ಅಲ್ ಬಖರಃ : 255) 

   ಸರ್ವಶಕ್ತನಾದ ಅಲ್ಲಾಹ್’ನು ಸ್ವತಃ ತನ್ನ ಕುರಿತು ಪರಿಚಯ ನೀಡುತ್ತಿದ್ದಾನೆ, ಆರಾಧನೆಗೆ ಅರ್ಹನಾಗಿರುವವನು ಅವನೇ ಎಕೈಕನಾಗಿದ್ದಾನೆ, ಅವನಲ್ಲದೆ ಯಾರೂ ಆರಾಧನೆಗೆ ಅರ್ಹರಿಲ್ಲ. ಸರ್ವರಿಗೂ ಅವನೊಬ್ಬನೇ ಪೂಜೆಗರ್ಹನಾಗಿದ್ದಾನೆ. ಅದೇ ನೈಜ ಸತ್ಯವಾಗಿದೆ. ಎಲ್ಲರಿಗೂ ಸಹಿಸುವ ಖಚಿತವಾಗಿ ಇರಿಸುವವನು ಅವನೆ. ಅಂದರೆ, ಅವನು ಸ್ವಯಂ ಜಿವಿತನಾಗಿದ್ದಾನೆ, ಅಮರನಾಗಿದ್ದಾನೆ, ಅವನಿಗೆಂದೂ ಸಾವು ಸಂಭವಿಸಲಾರದು, ಇಡೀ ಸಂಸಾರಕ್ಕೆ ಅವನ ಅವಶ್ಯಕತೆಯಿದೆ, ಅವನಿಂದ ಯಾರೂ ಮುಕ್ತರಾಗಿರಲು ಸಾಧ್ಯವಿಲ್ಲ, ಅವನ ಆದೇಶದ ಹೊರತು ಯಾರಿಗೂ ಯಾವುದೇ ಶಕ್ತಿಯಿಲ್ಲ. ಅಲ್ಲಾಹ್’ನು ಹೇಳುವನು ; “ ಅವನಿಗೆ ನಿದ್ರೆಯಾಗಲಿ ತೂಕಡಿಕೆಯಾಗಲಿ ಭಾಧಿಸುವುದಿಲ್ಲ”. ಅರ್ಥ; ಅವನಲ್ಲಿ ಯಾವುದೇ ರೀತಿಯ ಕುಂದು ಕೊರತೆಗಳು ಉಂಟಾಗಲು ಸಾಧ್ಯವಿಲ್ಲ. ತನ್ನ ರಚನೆಗಳಿಂದ ಕ್ಷಣ ಮಾತ್ರಕ್ಕೂ ಹೊರತಾಗಿಲ್ಲ, ತಿಳಿದಿಲ್ಲವೆಂದಿಲ್ಲ. ಅವನು ಪ್ರತಿಯೊಂದು ಆತ್ಮವನ್ನೂ ಸಹಿಸುತ್ತಿದ್ದಾನೆ, ಅದರ ಕಾರ್ಯವನ್ನು ನೋಡುತ್ತಿದ್ದಾನೆ, ಯಾವುದೇ ರಹಸ್ಯವು ಅವನಿಂದ ಮರೆಯಾಗಿಲ್ಲ, ಯಾವ ವಸ್ತುವೂ ಅವನಿಂದ ಕಾಣೆಯಾಗಲಾರದು, ಅವನು ತೂಕಡಿಕೆಯು ನಿದ್ದೆಯೂ ಬಾಧಿಸದಿರುವಷ್ಟು ನಿಪುಣನಾಗಿದ್ದಾನೆ. ನಿದ್ರೆ ದೂರದ ಮಾತು ಅವನಿಗೆ ತೂಕಡಿಕೆಯೂ ಬಾರದು.

   ಅಲ್ಲಾಹ್’ನು ಹೇಳುವನು; “ಭೂಮಿ ಆಕಾಶಗಳಲ್ಲಿರುವ ಎಲ್ಲವೂ ಅವನದ್ದೇ ಆಗಿವೆ” ಇದರಲ್ಲಿ ನಾವೆಲ್ಲರೂ ಅವನ ಅಧೀನದಲ್ಲಿದ್ದೇವೆ, ಆತನ ವಶದಲ್ಲಿದ್ದೇವೆ, ಹಾಗೂ ನಿಯಂತ್ರಣದಲ್ಲಿ ಇದ್ದೇವೆ ಎಂದು ತಿಳಿಸಿಕೊಡುತ್ತಿದ್ದಾನೆ.

   ಅಲ್ಲಾಹ್’ನು ಹೇಳಿದನು; “ಅವನ ಅನುಮತಿಯಿಲ್ಲದೇ ಶಿಫಾರಸ್ಸು ಮಾಡುವವರಾರು?” ಇದರಿಂದಲೇ ಅಲ್ಲಾಹ್’ನ ಮಹಾನತೆ, ಹಿರಿಮೆ, ಹಾಗೂ ಮಹಿಮೆ ತಿಳಿಯುತ್ತದೆ, ಏಕೆಂದರೆ, ಸರ್ವಶಕ್ತನಾದ ಅಲ್ಲಾಹ್’ನ ಅನುಮತಿಯ ಹೊರತು ಯಾರೂ ಶಿಫಾರಸ್ಸು ಮಾಡಲಾರರು.

   ಅಲ್ಲಾಹ್’ನು ಹೇಳಿದನು; ಅವನ ಮುಂದಿರುವ ಹಾಗೂ ಹಿಂದಿರುವುದೆಲ್ಲವನ್ನು ಆತನು ಬಲ್ಲನು ಅವನ ಜ್ಞಾನವು ಸರ್ವ ವಸ್ತುಗಳಲ್ಲಿಯೂ ಆವರಿಸಿಕೊಂಡಿದೆ ಎಂಬುದು ಇದರಿಂದಲೇ ಸ್ಪಷ್ಟವಾಗಿ ತಿಳಿಯುತ್ತದೆ. ಸರ್ವರಿಂದಲೂ ಅತೀತನಾಗಿದ್ದು ವರ್ತಮಾನ ಹಾಗೂ ಭವಿಷ್ಯತ್ ಕಾಲವನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.

   ಅಲ್ಲಾಹ್’ನು ಹೇಳಿದನು; ಅವನು ತನ್ನ ಜ್ಞಾನದಲ್ಲಿರುವ ಯಾವುದೇ ವಸ್ತುವಿನ ಮೇಲೆರಗಲಾರ, ಅವನು ಬಯಸಿದುದರ ಹೊರತು, “ಅಲ್ಲಾಹ್’ನ ಜ್ಞಾನದಲ್ಲಿರುವವಿಷಯ ಯಾರಿಗೂ ಯಾವ ರೀತಿಯಿಂದಲೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂಬುದೇ ಇದರ ಅರ್ಥ, ಅವನೆಷ್ಟು ತಿಳಿಸಿಕೊಡುವನೋ ಅಷ್ಟರ ಹೊರತು.

   ಅಲ್ಲಾಹ್’ನು ಹೇಳಿದನು; “ಅವನ ದಿವ್ಯ ಪೀಠವು ಭೂಮಿ ಮತ್ತು ಆಕಾಶಗಳನ್ನು ಆವರಿಸಿದೆ”. ಅಂದರೆ ಅವನ ಆಡಳಿತ ರಾಜ್ಯ ಪೀಠವು ಎಲ್ಲರನ್ನೂ ಆವರಿಸಿಕೊಂಡಿದೆ. ಮತ್ತು ಅಲ್ಲಾಹ್’ನು ಹೇಳಿದನು; “ ಮತ್ತು ಅವರೆಲ್ಲರ ಸುರಕ್ಷೆಯು ಆತನಿಗೆ ಕಿಂಚಿತ್ತೂ ಭಾರವಾಗುವುದಿಲ್ಲ”

   ಭೂಮಿ ಆಕಾಶಗಳು ಹಾಗೂ ಅವುಗಳ ಮಧ್ಯಯಿರುವ ಎಲ್ಲವುಗಳ ಸುರಕ್ಷೆಯು ಅವನಿಗೆ ಭಾರವೇನಲ್ಲ, ಅದು ಆತನಿಗೆ ತುಂಬಾ ಸುಲಭವಾಗಿದೆ. ಅವನು ಪ್ರತಿಯೊಂದನ್ನು ನೋಡಿಕೊಳ್ಳುವವನಾಗಿದ್ದಾನೆ. ಅವನು ಎಲ್ಲಾ ವಸ್ತುಗಳ ಪರಿವೀಕ್ಷಕನು, ಅವನಿಂದ ಯಾವ ವಸ್ತುವೂ ಮರೆಯಾಗಲಾರದು ಲೋಪವಾಗಲಾರದು. ಎಲ್ಲಾ ವಸ್ತುಗಳು ಅವನೆದುರಿಗೆ ನೀಚ ಹಾಗೂ ಚಿಕ್ಕದಾಗಿವೆ, ಎಲ್ಲರಿಗೂ ಅವನ ಅವಶ್ಯಕತೆಯಿದೆ. ಅವನಿಗೆ ಯಾರ ಅವಶ್ಯಕತೆಯೂ ಇಲ್ಲ, ಅವನು ಸ್ವಇಚ್ಚೆಯುಳ್ಳವನು ಏನನ್ನು ಬೇಕಾದರೂ ಮಾಡಬಲ್ಲವನು, ಅದಕ್ಕಾಗಿ ಯಾರ ಮುಂದೆಯೂ ಉತ್ತರಿಸ ಬೇಕಾಗಿಲ್ಲ, ಸಕಲ ವಸ್ತುಗಳ ಮೇಲೆ ಅವನ ಆಡಳಿತವಿದೆ. ಎಲ್ಲರ ಲೆಕ್ಕವಿಡುವವನು, ಎಲ್ಲ ವಸ್ತುಗಳ ಪರಿವೀಕ್ಷಕನು, ಅವನು ಹಿರಿಮೆಯುಳ್ಳವನು, ಮಹಾನನು, ಅವನಲ್ಲದೇ ಯಾರೂ ಪರಿಪಾಲಕನಿಲ್ಲ. ಅಲ್ಲಾಹ್’ನು ಹೇಳಿದನು; “ಅವನು ಮಹೋನ್ನತನಾಗಿದ್ದಾನೆ” ಅರ್ಥ; ಅವನು ಎಲ್ಲರಿಗಿಂತಲೂ ಮೆಲಿರುವವನು, ಹಿರಿದಾದವನು”.

   ನನ್ನ ಆತ್ಮೀಯರೇ,,,, ಸರ್ವಶಕ್ತನಾದ ಅಲ್ಲಾಹ್’ನ ಕುರಿತು ತಿಳಿಯಬಯಸಿದರೆ, ಇದೇ ನಾನು ನಿಮ್ಮ ಮುಂದಿಟ್ಟಿರುವ ಮೂಲ ಪರಿಚಯ ಪತ್ರವಾಗಿದೆ, ನಾವು ನಿಮ್ಮ ಮುಂದೆ ತರ್ಕ ಪ್ರಮಾಣದ ಪುರಾವೆ ನೀಡುವ ಪ್ರಯತ್ನ ಮಾಡಿಲ್ಲ, ಅಲ್ಲದೆ ನಾವು ಯಾವುದೇ ರೀತಿಯ ಕವಿತೆಯಾಗಲಿ ಪ್ರಶಂಸೆಯಾಗಲಿ ಬರೆದಿಲ್ಲ, ನನ್ನವತಿಯಿಂದ ಯಾವುದೇ ಮಾತನ್ನು ಹೇಳಲಿಲ್ಲ ವಾಸ್ತವವಾಗಿ ಇದು ಅಲ್ಲಾಹ್’ನ ಕಡೆಯಿಂದ ಕೊಡಲ್ಪಟ್ಟ ಒಂದು ಪರಿಚಯವಾಗಿತ್ತು. ಅಲ್ಲಾಹ್’ನ ಅಸಿತ್ವ ಎಷ್ಟು ಮಹೋನ್ನತ ಹಾಗೂ ಧನ್ಯವಾಗಿದೆ. ‘ಆಯತಲ್ ಕುರ್ಸಿ’ ಎಂಬ ಹೆಸರಿನಿಂದ ಹೆಸರುವಾಸಿಯಾದ ಸೂಕ್ತಿಯು ಎಷ್ಟು ಶುಭಕರವಾಗಿದೆ. ವಾಸ್ತವದಲ್ಲಿ ಈ ಸೂಕ್ತಿಯು ಪವಿತ್ರ ಖುರ್’ಆನಿನಲ್ಲಿ ಅತ್ಯಂತ ದೊಡ್ಡದಾದ ಹಾಗೂ ಹಿರಿಮೆಯುಳ್ಳ ಸೂಕ್ತಿಯಾಗಿದೆ. ಇದನ್ನು ಗಮನವಿಟ್ಟು ಓದಿರಿ ಹಾಗೂ ಕೇಳಿರಿ, ಇದರಲ್ಲಿ ಅಲ್ಲಾಹ್’ನು ಯಾವ ರೀತಿಯಿಂದ ತನ್ನ ವಿಷಯದ ಕುರಿತು ಪರಿಚಯ ನೀಡಿರುವನು, ಇದನ್ನು ಓದಿ ಅವನ ಕುರಿತು ನಿಖರವಾಗಿ ತಿಳಿಯುವ ಪ್ರಯತ್ನ ಮಾಡಿರಿ, ಮತ್ತು ನಿಮಗೆ ಏನಾದರೂ ಅರ್ಥವಾಗದಿದ್ದರೆ ಇದೇ ವಿಷಯದ ಕುರಿತು ಮುಂದಿನ ಲೇಖನವನ್ನು ಓದಿರಿ.

ಮುಂದೆ ನೋಡಿರಿ

 ಅಲ್ಲಾಹ್, ಪೈಗಂಬರ್, ಅಲ್ಲಾಹ್’ನ ಅಧಿಕಾರಗಳು, ಅಲ್ಲಾಹುವಿನಲ್ಲಿ ವಿಶ್ವಾಸ, ಮುಂತಾದವು.    

ಪುರಾವೆಗಳು

•             http://knowingallah.com/hi/articles/%E0%A4%85%E0%A4%B2-%E0%A4%B2-%E0%A4%B9-%E0%A4%95-%E0%A4%A8-%E0%A4%B9/

•             http://knowingallah.com/hi/articles/%E0%A4%AA%E0%A4%B0%E0%A4%AE-%E0%A4%B6-%E0%A4%B5%E0%A4%B0-%E0%A4%95-%E0%A4%95-%E0%A4%B7%E0%A4%AE%E0%A4%A4-%E0%A4%94%E0%A4%B0-%E0%A4%89%E0%A4%A8%E0%A4%95-%E0%A4%AE%E0%A4%B9-%E0%A4%A8%E0%A4%A4-%E0%A4%95-%E0%A4%B8%E0%A4%AC-%E0%A4%A4/

•             http://knowingallah.com/hi/articles/%E0%A4%85%E0%A4%B2-%E0%A4%B2-%E0%A4%B9-%E0%A4%95-%E0%A4%96-%E0%A4%9C-%E0%A4%95-%E0%A4%AF-%E0%A4%A4-%E0%A4%B0/

•             http://knowingallah.com/hi/articles/%E0%A4%89%E0%A4%B8%E0%A4%95-%E0%A4%B0%E0%A4%9A%E0%A4%A8-%E0%A4%8F-%E0%A4%89%E0%A4%B8%E0%A4%95-%E0%A4%AA%E0%A4%A4-%E0%A4%A6-%E0%A4%A4-%E0%A4%B9/

•             http://knowingallah.com/hi/articles/%E0%A4%AF%E0%A4%A6-%E0%A4%86%E0%A4%AA-%E0%A4%89%E0%A4%B8-%E0%A4%AA%E0%A4%B9%E0%A4%9A-%E0%A4%A8%E0%A4%A8-%E0%A4%9A-%E0%A4%B9%E0%A4%A4-%E0%A4%B9-%E0%A4%A4-%E0%A4%A6%E0%A4%B0%E0%A4%B5-%E0%A5%9B-%E0%A4%AA%E0%A4%B0-%E0%A4%A6i/

1660 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ