ಅನ್ಸಾರರು (ಸಹಾಯಕರು)

    ಸಹಾಬಿಗಳಲ್ಲಿ ಅಥವ ಸಹಚರರಲ್ಲಿ ಎರಡು ರೀತಿಯ ಗುಂಪುಗಳಿದ್ದಾರೆ, ಮುಹಾಜಿರ್ ಅಥವ ವಲಸೆ ಬಂದವರು  ಮತ್ತು ಅನ್ಸಾರರು ಅಥವ ಸಹಾಯಕರು. ಅನ್ಸಾರ್ ಎಂದರೆ ಸಹಾಯ ಮಾಡುವವರು, ಸಹಕರಿಸಿದವರು ಎಂದರ್ಥ. ಇವರು ಇಸ್ಲಾಮಿಗಾಗಿ ಅಲ್ಲಾಹ್’ನ ಕಡೆಯಿಂದ ನೀಡಲ್ಪಟ್ಟ ಬಹುಮಾನವಾಗಿದ್ದಾರೆ. ಇವರ ತ್ಯಾಗ ಮತ್ತು ವಿಶ್ವಾಸ ಅಬ್ಧುತವಾಗಿತ್ತು. ಮುಸಾಬ್ ಇಬ್ನೆ ಉಮರ್(ರ ಅ)ರವರು ಅವರ ಮುಂದೆ ಅಲ್ಲಾಹ್’ನ ದಿವ್ಯ ವಾಣಿಯನ್ನು ಪಠಿಸಿದಾಗ ತಕ್ಷಣ ಅವರು ಇಸ್ಲಾಮ್’ನ್ನು ಸ್ವೀಕರಿಸಿದರು ಹಾಗೂ ಅಲ್ಲಾಹ್’ನ ಪೈಗಂಬರರಾದ ಮುಹಮ್ಮದ್(ಸ)ರನ್ನು ತಮ್ಮ ಮದೀನ ನಗರದಲ್ಲಿ ಬರಲು ಆಮಂತ್ರಣ ನೀಡಿದರು.

     ಅನ್ಸಾರ್(ಸಹಾಯಕರಿಗೆ)ರಿಗೆ ತಮ್ಮ ಕೊಟ್ಟ ಭಾಷೆ(ಮಾತನ್ನು)ಯನ್ನು ನಿಭಾಯಿಸುವುದು ಗೊತ್ತಿತ್ತು, ಅವರು ತ್ಯಾಗದ ಒಂದು ಹೊಸ ಉದಾಹರಣೆಯನ್ನು ಸ್ಥಾಪಿಸದರು, ಅವರು ತಮ್ಮ ವಲಸೆ ಬಂದ (ಮಕ್ಕಾದಿಂದ ಪ್ರಯಾಣ ಮಾಡಿದ) ತಮ್ಮ ಸಹೋದರರಿಗೆ ತುಂಬು ಹೃದಯದಿಂದ ಸ್ವಾಗತಿಸಿದರು, ಹಾಗೂ ಅವರಿಗೆ ತಮ್ಮ ಸಂಪತ್ತಿನಲ್ಲೂ ಸಮಾನವಾಗಿ ಪಾಲ್ಗೊಳಿಸಿದರು, ಅವರು ನಿಜವಾದ ನಾಯಕರಾಗಿದ್ದರು. ಏಕೆಂದರೆ ಅವರು ಮುಹಮ್ಮದ್(ಸ)ರಿಗೆ ಎಲ್ಲಾರಿತಿಯಿಂದಲೂ ಒಪ್ಪಿಕೊಂಡು ಹಣ ಹಾಗೂ ಪ್ರಾಣಗಳಿಂದಲೂ ಅವರಿಗೆ ಸಹಾಯ ನೀಡಿದರು. ಸಹಾಯಕರು ಮದೀನಾವಾಸಿಗಳಾಗಿದ್ದರು. ಅವರು ಮುಹಮ್ಮದ್(ಸ)ರಿಗೆ ಧನ ಸಹಾಯ ಹಾಗೂ ನಿಷ್ಟೆಯ ಆಣೆ ಮಾಡಿದ್ದರು. [1]

ಪರಿವಿಡಿ

ಖುರ್’ಆನ್

   “ಮುಹಾಜಿರ್ ಮತ್ತು ಅನ್ಸಾರ್’ಗಳ ಪೈಕಿ (ಸತ್ಯ ಸ್ವೀಕಾರದಲ್ಲಿ) ಇತರರೆಲ್ಲರಿಗಿಂತ ಮೊದಲಿಗರಾದವರು ಮತ್ತು ಅತ್ತುತ್ತಮ ರೀತಿಯಲ್ಲಿ ಅವರನ್ನು ಅನುಸರಿಸಿದವರು ಅವರಿಂದ ಅಲ್ಲಾಹ್’ನು ಸಂತುಷ್ಟನಾದನು ಮತ್ತು ಅವರು ಅಲ್ಲಾಹ್’ನಿಂದ ಸಂತುಷ್ಟರಾದರು ಅವನು ಅವರಿಗಾಗಿ ತಳಭಾಗದಲ್ಲಿ ನದಿಗಳು ಹರಿಯುತ್ತಿರುವಂತಹಾ ಸ್ವರ್ಗ ತೋಟಗಳನ್ನು ಸಿದ್ದಗೊಳಿಸಿಟ್ಟಿರುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ವಿಜಯವಾಗಿದೆ” (ಅತ್ತೌಬ 9 :100) [2]

  “ ಈ ಸತ್ಯವನ್ನು ನಂಬಿದಂತೆ ಅವರೂ ನಂಬಿದರೆ ಅವು ಸನ್ಮಾರ್ಗದಲ್ಲಿರುವರು” (ಅಲ್ ಬಕರಃ 2 : 137) [3]

ಹದೀಸ್

  ಗೈಲಾನ್ ಬಿನ್ ಜಾಬಿರ್ (ರ ಅ)ರವರು ಹೇಳಿದರು; ನಾನು ಅನಸ್(ರ ಅ)ರಿಗೆ ಕೇಳಿದೆ “ನನಗೆ ಅನ್ಸಾರರ ಹೆಸರಿನ ಕುರಿತು ತಿಳಿಸಿರಿ, ನೀವು ಸ್ವತಃ ಈ ಹೆಸರನ್ನು ಇಟ್ಟುಕೊಂಡಿರೊ ಅಥವ ಅಲ್ಲಾಹನು ಈ ಹೆಸರನ್ನಿಟ್ಟನೋ?” ಆಗ ಅವರು ಹೇಳಿದರು “ಅಲ್ಲಾಹ್’ನು ನಮಗೆ ಈ ಹೆಸರಿನಿಂದ ಕರೆದನು” ಎಂದರು ನಾವು ಬಸರಾದಲ್ಲಿ ಅನಸ್(ರ ಅ)ರವರ ಹತ್ತಿರ ಹೋಗುತಿದ್ದೆವು, ಅವರು ನಮಗೆ ಅನ್ಸಾರರ ವಿಶಿಷ್ಟತೆಗೆಳ ಹಾಗೂ ಕಾರ್ಯಗಳ ಕುರಿತು ತಿಳಿಸುತ್ತಿದ್ದರು ಅವರು ನನಗೆ ಹಾಗು ಜಾತಿಯಿಂದ ಹೊರದಬ್ಬಲ್ಪಟ್ಟ ವ್ಯಕ್ತಿಯನ್ನು ಮಾತನಾಡಿಸುತ್ತಾ ಹೇಳುತ್ತಿದ್ದರು, “ನಿಮ್ಮ ಜಾತಿಯು ಆ ಸಮಯದಲ್ಲಿ ಆ ಕಾರ್ಯ ಮಾಡಿತು” (ಸಹಿಹ್ ಬುಖಾರಿ ; 3776)

 ಅಲ್ ಬರಾ (ರ ಅ) ಹೇಳಿದರು : “ನಾನು ಮುಹಮ್ಮದ್(ಸ)ರನ್ನು ಹೀಗೆ ಹೇಳುತ್ತಿರುವಂತೆ ಕೇಳಿದೆನು; ‘ಸತ್ಯವಿಶ್ವಾಸಿಯ ಹೊರತು ಅನ್ಸಾರರನ್ನು ಯಾರೂ ಪ್ರೇಮಿಸಲಾರರು, ಕಪಟ ವಿಶ್ವಾಸಿಯ ಹೊರತು ಅವರನ್ನು ಯಾರೂ ದ್ವೇಷಿಸಲಾರರು’ ಹಾಗಾಗಿ ಯಾರು ಇವರಿಗೆ ಪ್ರೀತಿಸುವರೊ ಅಲ್ಲಾಹ್’ನು ಇವರಿಗೆ ಪ್ರೀತಿಸುವನು, ಯಾರು ಇವರನ್ನು ದ್ವೇಷಿಸುವರೊ ಅಲ್ಲಾಹ್’ನು ಅವರಿಗೆ ದ್ವೇಷಿಸುವನು” (ಸಹಿಹ್ ಬುಖಾರಿ 3738, ಸಹಿಹ್ ಮುಸ್ಲಿಮ್ 75)

  ಅನಸ್ ಬಿನ್ ಮಾಲಿಕ್(ರ ಅ)ರು ಹೇಳಿದರು; ಮುಹಮ್ಮದ್(ಸ)ರು ಹೇಳಿದರು, “ಅನ್ಸಾರರನ್ನು ಪ್ರೀತಿಸುವುದು ವಿಶ್ವಾಸದ ಗುರುತಾಗಿದೆ, ಮತ್ತು ಅವರನ್ನು ದ್ವೇಷಿಸುವುದು ಕಾಪಟ್ಯವಾಗಿದೆ” (ಸಹಿಹ್ ಬುಖಾರಿ : 3784) [4]

ಅನ್ಸಾರ್(ಸಹಾಯಕರ)ರ ತ್ಯಾಗ

   “ಹಾಗೆಯೇ (ಈ ಸಂಪತ್ತು) ಅವರಿಗಿಂತ (ವಲಸಿಗರಿಗಿಂತ) ಮುನ್ನ ವಲಸೆಯ ಸ್ಥಾನ(ಮದಿನ)ದಲ್ಲಿ ನೆಲೆಸಿದ್ದ ಹಾಗೂ ವಿಶ್ವಾಸಿಗಳಾಗಿದ್ದವರಿಗೆ (ಅನ್ಸಾರ್’ಗಳಿಗೆ) ಸೇರಿದೆ. ಅವರು ತಮ್ಮ ಬಳಿಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ, ಅವರಿಗೆ ಏನನ್ನೂ ನೀಡಲಾಯಿತೋ ಆ ಕುರಿತು ಅವರು ತಮ್ಮ ಮನದಲ್ಲಿ ಆಸೆ ಪಡುವುದಿಲ್ಲ ಮತ್ತು ಸ್ವತಃ ತಾವು ಕಷ್ಟದಲ್ಲಿದ್ದರೂ ಅವರಿಗೆ (ವಲಸಿಗರಿಗೆ) ಪ್ರಾಶಸ್ತ್ಯ ನೀಡುತ್ತಾರೆ, ಮನಸ್ಸಿನ ಸಣ್ಣತನದಿಂದ ರಕ್ಷಿಸಲ್ಪಟ್ಟವರೇ ವಿಜಯಿಗಳು, ( ಅಲ್ ಹಶ್ರ್ 59 : 9) [5]

   ವಲಸಿಗರು ಮದೀನಾ ತಲುಪಿದಾಗ ಮುಹಮ್ಮದ್(ಸ)ರು ಅಬ್ದುರ್ರಹ್’ಮಾನ್ (ರ ಅ) ಮತ್ತು ಸಾದ್ ಬಿನ್ ಅರ್’ರಬಿ(ರ ಅ) ರವರ ಮಧ್ಯದಲ್ಲಿ ಸಹೋದರತೆಯನ್ನು ಸ್ಥಾಪಿಸಿದರು, ಸಾದ್(ರ ಅ)ರವರು ಅಬ್ದುರ್ರಹ್’ಮಾನ್ (ರ ಅ)ರಿಗೆ ಹೇಳಿದರು; “ ನಾನು ಎಲ್ಲಾ ಅನ್ಸಾರರಿಂದ ಧನಿಕನಾಗಿದ್ದೇನೆ ಹಾಗಾಗಿ ನಾನು ನನ್ನ ಸಂಪತ್ತನ್ನು ಪರಸ್ಪರ ಇಬ್ಬರಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ, ನನ್ನ ಹತ್ತಿರ ಇಬ್ಬರು ಪತ್ನಿಯರಿದ್ದಾರೆ, ಅವರಲ್ಲಿ ನೀವು ಯಾರಿಗೆ ಇಚ್ಚಿಸುವಿರೋ ನಾನು ಅವಳಿಗೆ ತಲಾಖ್ ನೀಡುತ್ತೇನೆ, ನೀವು ತಲಾಖಿನ ವೇಳೆ ಮುಗಿದನಂತರ ಅವಳೊಂದಿಗೆ ವಿವಾಹ ಮಾಡಿಕೊಳ್ಳಲೆಂದು” ಎಂದರು. ಆಗ ಅಬ್ದುರ್ರಹ್’ಮಾನ್ (ರ ಅ)ರು ಹೇಳಿದರು “ಅಲ್ಲಾಹ್’ನು ನಿಮ್ಮ ಪರಿವಾರ ಹಾಗೂ ಸಂಪತ್ತಿನಲ್ಲಿ ಇನ್ನೂ ಹೆಚ್ಚಿನ ಸಂಮೃದ್ಧಿಯನ್ನು ನೀಡಲಿ” ಎಂದರು (ಸಹಿಹ್ ಬುಖಾರಿ : 3780) [6]

ಮುಹಾಜಿರ್(ವಲಸೆ ಬಂದವರು) ಹಾಗೂ ಅನ್ಸಾರರು ಪರಸ್ಪರ ಸಹಾಯಕರಾಗಿದ್ದರು

  ಸಹಚರರ ಎರಡು ಬಗೆಯಲ್ಲಿ ಮೊದಲನೇದಾಗಿ ಮುಹಾಜಿರರು;ವಲಸೆ ಬಂದವರೆಂದರೆ ತಮ್ಮ ಮನೆಮಠ ಎಲ್ಲವನ್ನೂ ಬಿಟ್ಟು ಮುಹಮ್ಮದ್(ಸ)ರೊಂದಿಗೆ ಪ್ರಯಾಣ ಮಾಡಿದವರು. ಅದು ಅಲ್ಲಾಹ್’ನ ಧರ್ಮ ಸ್ಥಾಪಿತವಾಗಲೆಂದು, ಅಲ್ಲಾಹ್’ನ ದಾರಿಯಲ್ಲಿ ತಮ್ಮ ಧನ ಹಾಗೂ ಪ್ರಾಣವನ್ನು ತ್ಯಾಗ ಮಾಡಿದರು,

  ಎರಡನೇಯದಾಗಿ ಅನ್ಸಾರರಾಗಿದ್ದಾರೆ; ಇವರು ಇಸ್ಲಾಮ್ ಸ್ವೀಕರಿಸಿದ ಮದೀನಾವಾಸಿಗಳು ಇವರು ತಮ್ಮ ವಲಸಿಗ ಸಹೋದರರಿಗೆ ತಮ್ಮ ಮನೆಗಳಲ್ಲಿ ಆಶ್ರಯ ನೀಡಿದರು ಮತ್ತು ತಮ್ಮ ಸಂಪತ್ತಿನಿಂದ ಅವರಿಗೆ ಸಹಕರಿಸಿದರು. ಇವರು ವಲಸಿಗರೊಂದಿಗೆ ಸೇರಿ ಹಲವು ಯದ್ಧಗಳನ್ನು ಮಾಡಿದರು, ಮತ್ತು ಮುಹಮ್ಮದ್(ಸ)ರೊಂದಿಗೆ ತಮ್ಮ ಸಮರ್ಥನೆಯನ್ನು ನೀಡಿದರು. ವಲಸಿಗರು ಹಾಗೂ ಸಹಾಯಕರು ಪರಸ್ಪರ ಸಮರ್ಥಕರಾಗಿದ್ದರು. ಅಲ್ಲಾಹ್’ನು ತನ್ನ ಪವಿತ್ರ ಖುರ್’ಆನಿನಲ್ಲಿ ವಲಸಿಗರು ಹಾಗೂ ಸಹಾಯಕರ ಕುರಿತು ಹಲವಾರು ಕಡೆ ಪ್ರಶಂಸಿರುವನು. ಉದಾಹರಣೆಗೆ; “ ಅಲ್ಲಾಹ್’ನು ದೇವದೂತರೆಡೆಗೆ ಹಾಗು ತುಂಬಾ ಕಠಿಣ ಕಾಲದಲ್ಲಿ ಅವರನ್ನು ಅನುಸರಿಸಿದ ‘ಮುಹಾಜಿರ್’ ಮತ್ತು ‘ಅನ್ಸಾರ್’ಗಳೆಡೆಗೆ ಒಲವು ತೋರಿದನು. ಆ ಬಳಿಕ ಅವನು ಅವರೆಡೆಗೆ ಒಲವು ತೋರಿದನು. ಅವನು ಅವರ ಪಾಲಿಗೆ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವನು” (ಅತ್ತೌಬ 9 : 117)

ಆಧಾರ

 [1] http://www.islamweb.net/emainpage/index.php?page=articles&id=168373 (english)

[2] http://quran.com/9/100 (english)

[3] http://quran.com/2/137 (english)

[4] http://www.sunnah.com/bukhari/63#1 (english)

[5] http://www.islamweb.net/emainpage/index.php?page=articles&id=168373 (english)

[6] http://www.sunnah.com/bukhari/63#1 (english)

[7] http://www.qtafsir.com/index.php?option=com_content&task=view&id=1377&Itemid=63 (english)

890 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ