ಮಸ್’ಜಿದ್ ಎ ಹರಮ್ (مسجدي حرم)

   ಪೈಗಂಬರ್ ಮುಹಮ್ಮದ್(ಸ)ರ ಮೊದಲುಮಸ್’ಜಿದ್ ಅಥವ ಮಸೀದಿ ಮುಸ್ಲಿಮರು ಅಲ್ಲಾಹ್سبحانه و تعالىನನ್ನು ಆರಾಧಿಸಲು ಉಪಯೋಗಿಸುವ ಕಟ್ಟಡವಾಗಿದೆ. ಇಸ್ಲಾಮಿಕ್ ಇತಿಹಾಸದುದ್ದಕ್ಕೂ, ಈ ಪ್ರಮುಖ ಕಟ್ಟಡದ ಸುತ್ತಲೂ ರೂಪುಗೊಂಡ ಸಮುದಾಯ ಮತ್ತು ಕೇಂದ್ರಗಳನ್ನು ಪರಿವರ್ತಿಸಬಲ್ಲ ಕೇಂದ್ರವಾಗಿದೆ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಮಸೀದಿಗಳು ಪ್ರತಿಯೊಂದು ರಸ್ತೆ ಮೂಲೆಯಲ್ಲಿ ಕಂಡುಬರುತ್ತವೆ, ಮುಸ್ಲಿಮರು ಐದು ಹೊತ್ತಿನ ದೈನಂದಿನ ಪ್ರಾರ್ಥನೆಗಳಿಗೆ ಹಾಜರಾಗಲು ಇದು ಒಂದು ಸರಳ ವಿಧಾನದ ವಿಷಯವಾಗಿದೆ.

  ಅಲ್-ಮಸ್ಜಿದ್ ಅಲ್-ಹರಮ್ ಪ್ರಪಂಚದ ಇತರ ಮಸೀದಿಗಳಿಗಿಂತ ಶ್ರೇಷ್ಠವಾಗಿದೆ. ಅಲ್ ಮಸ್ಜಿದ್ ಅಲ್-ಹರಮ್ (ಮಕ್ಕಾದಲ್ಲಿನ ಪವಿತ್ರ ಮಸೀದಿ), ನಂತರ ಅಲ್-ಮಸ್ಜಿದ್ ಅಲ್-ನಬವಿ (ಮದೀನಾದಲ್ಲಿ ಪೈಗಂಬರ್(ಸ) ರ ಮಸೀದಿ), ನಂತರ ಅಲ್-ಮಸ್ಜಿದ್ ಅಲ್-ಆಕ್ಸಾ (ಬೈತ್ ಉಲ್ ಮಖದ್ದಿಸ್, ಪ್ಯಾಲೆಸ್ಟೈನ್) .

  ಈ ಮೂರು ಮಸೀದಿಗಳು ಮೂರು ಆರಾಧನಾ ಉದ್ದೇಶಕ್ಕಾಗಿ ಪ್ರಯಾಣಿಸಲು ಸೂಚಿಸಲ್ಪಟ್ಟಿರುವ ಮಸ್’ಜಿದ್’ಗಳು. ಪೈಗಂಬರ್ ಮುಹಮ್ಮದ್ (ಸ) ಹೇಳಿದರು : " ಈ ಮೂರು ಮಸೀದಿಗಳನ್ನು ಹೊರತುಪಡಿಸಿ ಯಾವುದೇ ಮಸೀದಿಗೆ ಪ್ರಯಾಣಿಸಬೇಡ ಅಥವ ನಿರ್ದಿಷ್ಟವಾಗಿ ಪ್ರಯಾಣ ಮಾಡಬೇಡ: ಅಲ್-ಮಸ್ಜಿದ್ ಅಲ್-ಹರಮ್, ಮಸ್’ಜಿದ್ ಅಲ್-ಅಕ್ಸಾ, ಮತ್ತು ಈ ನನ್ನ ಮಸ್’ಜಿದ್." ಸಹಿಹ್ ಅಲ್ ಬುಖಾರಿ, Vol.2: 1189, Vol. 3: 1996ಮತ್ತು ಸಹಿಹ್ ಮುಸ್ಲಿಂ 1397 [1]. 

ಪರಿವಿಡಿ

ಇತಿಹಾಸ

  ಅಲ್-ಮಸ್ಜಿದ್ ಅಲ್-ಹರಮ್ (ಪವಿತ್ರ ಮಸೀದಿ) ಸಮುದ್ರ ಮಟ್ಟಕ್ಕಿಂತ 330ಮೀಟರ್ ಎತ್ತರದ ಅರೇಬಿಯನ್ ಪರ್ಯಾಯ ದ್ವೀಪದ ನಗರವಾದ ಮಕ್ಕಾದಲ್ಲಿದೆ. ಈ ಮಸೀದಿಯ ಇತಿಹಾಸ ಇಬ್ರಾಹೀಮ್ (ಅ ಸ)(ಅಬ್ರಹಾಂ) ಮತ್ತು ಅವರ ಮಗ ಇಸ್ಮಾಯಿಲ್ (ಅ ಸ)ರ ಜಿವಿತ ಸಮಯದಲ್ಲಿ ಸ್ಥಾಪನೆಯಾಯಿತು, ಅವರಿಬ್ಬರ ಮೇಲೆ ಅಲ್ಲಾಹ್’ನ ಶಾಂತಿ ಇರುತ್ತದೆ. ಇಸ್ಲಾಂ ಧರ್ಮದ ಪೈಗಂಬರ್ ಮುಹಮ್ಮದ್(ಸ) ಹುಟ್ಟಿದ್ದು, ದೈವವಾಣಿ ಅವತೀರ್ಣವಾಗಲು ಪ್ರಾರಂಭವಾದ ಸ್ಥಳ ಮತ್ತು ಇಸ್ಲಾಂ ಧರ್ಮದ ಬೆಳಕು ಹರಡಿರುವ ಸ್ಥಳ ಮಕ್ಕಾ ಆಗಿದೆ. ಅಲ್-ಮಸ್ಜಿದ್ ಅಲ್-ಹರಾಮ್ ಸೌದಿ ಅರೇಬಿಯಾದ ಮಕ್ಕಾ ನಗರದಲ್ಲಿದೆ.

ಅದರ ನಿರ್ಮಾಣ

 ಅಲ್ಲಾಹ್’ನು ಖುರ್’ಆನಿನಲ್ಲಿ ಹೇಳಿದನು: “ ಇಬ್ರಾಹೀಮರು ಹಾಗೂ ಇಸ್ಮಾಯೀಲರು ಆ ಭವನದ (ಮಕ್ಕಾದಲ್ಲಿರುವ ಕಾಬಾ ಭವನದ) ತಳಹದಿಯನ್ನು ಎತ್ತರಿಸುತ್ತಾ (ಪ್ರಾರ್ಥಿಸಿದ್ದರು) (ಅಲ್ ಬಖರಃ 2 : 127)

   ವಹಬ್ ಇಬ್ನೆ ಮುನ್’ಬಿಹ್ (ರ ಅ)ರವರು ಹೇಳಿದರು; ಇದು ಇಬ್ರಾಹೀಮ್’ರವರಿಂದ ಕಟ್ಟಲಾಗಿತ್ತು, ನಂತರ [ಪುನರ್ನಿರ್ಮಾಣ]ಅಮಾಲೇಕ್ಯರು, ನಂತರ ಜುರ್’ಹಮ್ರು, ನಂತರ ಕುಸ್ಸ್ಯಿ ಇಬ್ನ್ ಕಿಲಾಬ್ ಅವರಿಂದ. ಖುರೈಶ್ ಅವರ ಪುನರ್ನಿರ್ಮಾಣವು ಬಹಳ ಪ್ರಸಿದ್ಧವಾಗಿದೆ ... ಖುರೈಶ್ ಅವರ ಭುಜಗಳ ಮೇಲೆ ಹೊತ್ತುಕೊಂಡು ಕಣಿವೆಯ ಕಲ್ಲುಗಳಿಂದ ಅದನ್ನು ಮರುನಿರ್ಮಿಸಲು ಆರಂಭಿಸಿದರು ಮತ್ತು ಅವರು 20ಮೊಳ ಎತ್ತರವನ್ನು ನಿರ್ಮಿಸಿದರು ... ಕಾಬಾ ಮತ್ತು ಪುನರ್ನಿರ್ಮಾಣದ ಆರಂಭದ ನಡುವೆ ಬಹಿರಂಗವಾಗಲು ಐದು ವರ್ಷವಿತ್ತು, ಮತ್ತು ಪುನರ್ನಿರ್ಮಾಣ ಮತ್ತು ಹಿಜ್ರಾಹ್ ನಡುವೆ ಹದಿನೈದು ವರ್ಷಗಳು ಇದ್ದವು. ಇದನ್ನು 'ಅಬ್ದ್ ಅಲ್-ರಜ್ಜಾಖ್ ಅವರು ಮುಆಮ್ಮಾರ್’ನರಿಂದ, ಅವರು ಅಬ್ದ್-ಅಲ್ಲಾಹ್ ಇಬ್ನ್ ಉಥ್ಥಮಾನ್ರಿಂದ, ಅವರು ಅಬುಲ್-ತುಫಾಯಲ್’ರಿಂದ' 'ಮತ್ತು ಮುಆಮ್ಮಾರ್’ರಿಂದ, ಅಲ್-ಜುಹೈರ್ಯಿಂದ ವರದಿ ಮಾಡಿದ್ದಾರೆ: ಅವರು ಅದನ್ನು ನಿರ್ಮಿಸುತ್ತಿರವಾಗ ಅವರು ಅಲ್-ರುಕ್ನ್ ತಲುಪಿದಾಗ, ಯಾವ ಬುಡಕಟ್ಟು ಜನಾಂಗವೂ ಅದನ್ನು ಮೇಲಕ್ಕೆತ್ತಬಾರದು ಎಂದು ಖುರೇಶ್ ವಾದಿಸಿದರು. ಆಗ ಅವರು, "ನಮ್ಮ ನಡುವಿನ ತೀರ್ಮಾನಕ್ಕೆ ಬರುವ ಈ ಮಾರ್ಗದಿಂದ ಬಂದ ಮೊದಲ ವ್ಯಕ್ತಿಯನ್ನು ನಾವು ಕೇಳೋಣ" ಎಂದು ಅವರು ಹೇಳಿದರು. ಅವರು ಅದನ್ನು ಒಪ್ಪಿಕೊಂಡರು, ಆಗ ಮಚ್ಚೆಯುಳ್ಳ ಕವಚ ಧರಿಸಿ ಯುವಕ ಅಲ್ಲಿಗೆ ಬಂದಾಗ ಅವರು ಅವರ ಬಳಿಗೆ ಬಂದರು. ಅವರು ತಮ್ಮ ನಡುವೆ ತೀರ್ಪು ನೀಡಲು ಕೇಳಿಕೊಂಡರು, ಮತ್ತು ಅವರು ಬಟ್ಟೆ ತುಂಡಿನ ಮೇಲೆ ಅಲ್-ರುಕ್ನನ್ನು ಇರಿಸಲು ತಿಳಿಸಿದರು, ನಂತರ ಅವರು ಬಟ್ಟೆಯ ಅಂಚನ್ನು ಹಿಡಿಯಲು ಪ್ರತಿ ಬುಡಕಟ್ಟಿನ ಮುಖ್ಯಸ್ಥರಿಗೆ ತಿಳಿಸಿದರು, ನಂತರ ಅವರು ಏರಿಸಿದರು ಮತ್ತು ಅಲ್-ರುಕ್ನನ್ನು ಎತ್ತಿದರು ರುಕ್ನ್ನು   ಅದರ ಸ್ಥಳದಲ್ಲಿ ಇಟ್ಟರು. "ತಾರೀಖ್ ಮಕ್ಕಾಹ್ ಅಲ್-ಅಝ್ರಾಖಿ, 1 / 161-164.

   ಅಂದು ಕಾಬಾದ ಸುತ್ತ ಬೇಲಿ ಅಥವಾ ಗೋಡೆ ಇರಲಿಲ್ಲ. ಯಾಕುತ್ ಅಲ್-ಹಮಾವಿಯವರು ಮುಜ್ಆಮ್ ಅಲ್-ಬುಲ್ದಾನ್ (5/146) ನಲ್ಲಿ ಹೀಗೆ ಹೇಳಿದರು: "ಕಾಬಾದ ಸುತ್ತಲೂ ಗೋಡೆ ಕಟ್ಟಲು ಮೊದಲನೆಯದಾಗಿ 'ಉಮರ್ ಇಬ್ನ್ ಅಲ್-ಖತ್ತಾಬ್ (ರ ಅ) ತಿಳಿಸಿದರು  ಪೈಗಂರ್(ಸ) ಅಥವ ಅಬು ಬಕ್ರ್(ರ ಅ)ರ ಸಮಯದಲ್ಲಿ ಯಾವುದೇ ಗೋಡೆಯಿಲ್ಲ. [ಗೋಡೆಯು ನಿರ್ಮಿಸಲ್ಪಟ್ಟಿತು] ಏಕೆಂದರೆ ಜನರು ತಮ್ಮ ಮನೆಗಳನ್ನು ಕಾಬಾಕ್ಕೆ ಹತ್ತಿರವಾಗಿ ಕಟ್ಟುತ್ತಿದ್ದರು ಮತ್ತು ಅದರ ಸುತ್ತಲಿನ ಜಾಗವನ್ನು ಜನರಿಗೆ ಅನುಕೂಲವಾಗದಂತೆ ತುಂಬಾ ಚಿಕ್ಕದಾಗಿ ಮಾಡುತ್ತಿದ್ದರು. ಉಮರ್ ಅವರು ಹೇಳಿದರು: 'ಕಾಬಾವು ಅಲ್ಲಾಹನ ಮನೆಯಾಗಿದ್ದು, ಒಂದು ಮನೆಗೆ ಅಂಗಳ ಬೇಕು. ನೀವು ಅದರ ಜಾಗವನ್ನು ಆವರಿಸಿಕೊಂಡಿದ್ದೀರಿ, ಅದು ನಿಮ್ಮ ಮೇಲೆ ಆಕ್ರಮಣ ಮಾಡಿಲ್ಲ’ ಎಂದು. 'ಆದ್ದರಿಂದ ಅವರು ಆ ಮನೆಗಳನ್ನು ಖರೀದಿಸಿ, ಅವುಗಳನ್ನು ಕೆಡವಿದರು ಮತ್ತು ಕಾಬಾ ಸುತ್ತಲಿನ ಸ್ಥಳಕ್ಕೆ ಜಾಗವನ್ನು ಸೇರಿಸಿದರು. ಅವರು ಕಾಬಾದ ಸಮೀಪದ ಜನರ ಮನೆಗಳನ್ನು ನಾಶ ಮಾಡಲು ನಿರಾಕರಿಸಿದರು, ಮತ್ತು ಉಮರ್’ರು ಬರುವ ತನಕ ಹಣವನ್ನು ಪಕ್ಕಕ್ಕೆ ಇಟ್ಟುಕೊಂಡರು ಮತ್ತು ನಂತರ ಅದನ್ನು ತೆಗೆದುಕೊಂಡರು. ನಂತರ ಅವರು ಮಸೀದಿಯ ಸುತ್ತಲೂ ಗೋಡೆ ಕಟ್ಟಿದರು, ಮನುಷ್ಯನ ಎತ್ತರಕ್ಕಿಂತ ಕಡಿಮೆ ಎತ್ತರದ ದೀಪಗಳನ್ನು ಅದರ ಮೇಲೆ ಇರಿಸಲಾಯಿತು. ಉಥ್ಥಮಾನ್ರು ಖಲೀಫಾ ಆಗಿದ್ದಾಗ, ಹೆಚ್ಚಿನ ಮನೆಗಳನ್ನು ಖರೀದಿಸಿದರು ... 'ಉಥ್ಥಮಾನ್ ಅದರ ಸುತ್ತಲೂ ಮೊಗಸಾಲೆಗಳನ್ನು ನಿರ್ಮಿಸುವ ಮೊದಲ ವ್ಯಕ್ತಿ ... ಇಬ್ನ್ ಅಲ್-ಝುಬ್ಯೆರ್ ಅಧಿಕಾರದಲ್ಲಿದ್ದಾಗ, ಅವರು ಅಮೃತಶಿಲೆ ಸ್ತಂಭಗಳನ್ನು, ಹೆಚ್ಚುವರಿ ಬಾಗಿಲು ಮತ್ತು ಇತರ ಸುಧಾರಣೆಗಳನ್ನು ಸೇರಿಸುವ ಮೂಲಕ ಅದರ ಗಾತ್ರವನ್ನು ಹೆಚ್ಚಿಸಲಿಲ್ಲವಾದರೂ, ಅದರ ಗೋಚರತೆಯನ್ನು ಸುಧಾರಿಸಿದರು. 'ಅಬ್ದ್ ಅಲ್-ಮಲಿಕ್ ಇಬ್ನ್ ಮರ್ವಾನ್ ಖಲೀಫಾ ಆಗಿದ್ದಾಗ, ಅವರು ಮಸೀದಿಯ ಗೋಡೆಗೆ ಸೇರಿಸಿದರು, ಮತ್ತು ಈಜಿಪ್ಟ್’ನಿಂದ ಸ್ಥಂಭಗಳನ್ನು ಖರೀದಿಸಿ ಸಮುದ್ರ ಮಾರ್ಗದಿಂದ ಜಿದ್ದಾಕ್ಕೆ ತಂದರು, ನಂತರ ಇವುಗಳನ್ನು ಜಿದ್ದಾದಿಂದ ಚಕ್ರಗಳಲ್ಲಿ ಮಕ್ಕಾಗೆ ಕರೆದೊಯ್ಯಲಾಯಿತು. ಅಲ್-ಹಜ್ಜಾಜ್ ಇಬ್ನ್ ಯೂಸುಫ್ ಕಾಬಾವನ್ನು ಗ್ರಂಥಾಲಯಗಳಿಂದ (ಅಲ್-ಕಿಸ್ವಾ)ಅಲಂಕರಿಸಿದರು. ಮತ್ತು ಅಲ್-ವಲೀದ್ ಇಬ್ನ್ ಅಬ್ದ್ ಅಲ್-ಮಲಿಕ್ ಖಲೀಫಾ ಆಗಿದ್ದಾಗ, ಅವರು ಕಿಸ್ವಾಹ್’ವನ್ನು ಶೃಂಗರಿಸಿದರು ಮತ್ತು ಒಳಚರಂಡಿ ಉಬ್ಬು ಮತ್ತು ಛಾವಣಿಗೆ ಸುಧಾರಣೆಗಾಗಿ ಹಣವನ್ನು ಖರ್ಚುಮಾಡಿದರು ... ಅಲ್-ಮನ್ಸೂರ್ ಮತ್ತು ಅವನ ಮಗ ಅಲ್-ಮಹ್ದಿ ಖಲೀಫಾ ಆಗಿದ್ದಾಗ, ಮಸೀದಿಗೆ ಹೆಚ್ಚಿನ ಅಲಂಕರಣಗಳನ್ನು ಸೇರಿಸಿದರು ಮತ್ತು ಅದರ ನೋಟವನ್ನು ಸುಧಾರಿಸಿದರು".

               ಪೈಗಂಬರ್ ಮುಹಮ್ಮದ್(ಸ)ರ ಮೊದಲು

 ಪೈಗಂಬರ್ ಮುಹಮ್ಮದ್(ಸ)ರ ಮೊದಲು ಈಜಿಪ್ಟ್’ನ ಅಬ್ರಾಹಾಹ್’ರಿಂದ ಅಕ್ರಮಣಕ್ಕೋಳಪಡುವ ಅವರ ವಶವಾಗಿಸಿಕೊಳ್ಳುವ ಮುಖ್ಯ ಗುರಿಯಾಗಿತ್ತು, ಅಲ್-ಖುಲೇಸ್ ಅನ್ನು ಕಟ್ಟಿದ ಅವರು, ಅರಬ್ಬರು ತಮ್ಮ ತೀರ್ಥಯಾತ್ರೆ ಮಾಡಲು ಕಾಬಾವನ್ನು ಚರ್ಚ್ಆಗಿ ಪರಿವರ್ತಿಸುವ ಬಯಕೆ ಅವರದಾಗಿತ್ತು. ಹಾಗಾಗಿ ಅವನ ಆನೆಗಳೊಂದಿಗೆ ಸೈನ್ಯವನ್ನು ಕಳುಹಿಸಿದನು, ಮತ್ತು ಅವು ಮಕ್ಕಾ ತಲುಪಿದಾಗ, ಅಲ್ಲಾಹ್’ನು ಅವರ ವಿರುಧ್ಧ ಪಕ್ಷಿಗಳ ಹೀಂಡನ್ನು ಕಳುಹಿಸಿದನು, ಪ್ರತಿ ಪಕ್ಷಿಯು ಗಜ್ಜರಿ ಅಥವ ಮಸೂರಗಳಂತಹ ಮೂರು ಕಲ್ಲುಗಳನ್ನು, ಹೊತ್ತು ತಂದಿದ್ದವು ಪ್ರತಿ ಹಕ್ಕಿಯ ಕೊಕ್ಕಿನಲ್ಲಿ ಒಂದು ಮತ್ತು ಅದರ ಉಗುರುಗಳಲ್ಲಿ ಎರಡು ಇದ್ದವು. ಹಕ್ಕಿಗಳು ಕಲ್ಲಿನಿಂದ ಹೊಡೆದ ಪ್ರತಿಯೊಬ್ಬ ಮನುಷ್ಯನು ಕೊಲ್ಲಲ್ಪಟ್ಟನು, ಅಲ್ಲಾಹ್’ನ ಆಜ್ಞೆಯಿಂದ ಸೈನ್ಯವು ನಾಶವಾಯಿತು.

   ಅಲ್ಲಾಹ್’ನು ಈ ಘಟನೆಯನ್ನು ತನ್ನ ಗ್ರಂಥದಲ್ಲಿ ಪ್ರಾಸ್ತಾಪಿಸಿದ್ದಾನೆ. ಅಲ್ಲಿ ಅವನು ಹೇಳುತ್ತಾನೆ (ಅರ್ಥದ ವ್ಯಾಖ್ಯಾನ): “ ನೀವು ಕಂಡಿಲ್ಲವೇ, ನಿಮ್ಮೊಡೆಯನು ಆನೆಯವರಿಗೆ ಏನು ಮಾಡಿದನೆಂದು? ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ? ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳಹಿಸಿದನು. ಅವು ಅವರ ಮೇಲೆ ‘ಸಿಜ್ಜೀಲ್’ ಕಲ್ಲುಗಳನ್ನು ಎಸೆಯುತಿದ್ದವು. ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು (ಇದರಲ್ಲಿ ಕಾಳುಗಳು ಜಾನುವಾರುಗಳಿಂದ ತಿನ್ನಲ್ಪಟ್ಟವು). " (ಖುರ್’ಆನ್ ಅಲ್ ಫೀಲ್ 105 : 1-5)

  (ನೋಡಿರಿ ಅಲ್-ಸೀರಾ ಅಲ್-ನಬವಿಯಹ್ ಇಬ್ನ್ ಹಿಶಾಮ್, 1 / 44-58). [2]

 

             ಪ್ರಸ್ತುತ ಪರಿಸ್ಥಿತಿ

ಮಾತಫ್’ನ (ಕಾಬಾದ ಸುತ್ತ ಸುತ್ತುವರೆದಿರುವ ಜಾಗ), ವಿಶಾಲ ವಿಸ್ತರಣೆ ಯೋಜನೆ ಪ್ರಸ್ತುತ ನಡೆಯುತ್ತಿದೆ. ಮೂರು ವರ್ಷಗಳ ನಂತರ, ಹೊಸ ಮತಫ್ ಪೂರ್ಣಗೊಂಡಾಗ, ಒಂದು ಗಂಟೆಯಲ್ಲಿ 130,000ಯಾತ್ರಿಗಳಿಗೆ ಅವಕಾಶ ಕಲ್ಪಿಸುತ್ತದೆ, ಆದರೆ ಪ್ರಸ್ತುತ ಮತಫ್ ಸಾಮರ್ಥ್ಯವು 52,000ಯಾತ್ರಿಕರನ್ನು ನಿಭಾಯಿಸುತ್ತದೆ.

             ಪ್ರಸ್ತುತ ಇಮಾಮ್

 ಆದರ್ಶವಾದ ಮಸೀದಿಯ ಇಮಾಮ್ ಮತ್ತು ಖತಿಬ್ ಪವಿತ್ರ ಮಸೀದಿಗಳ ವ್ಯವಹಾರಗಳ ಅಧ್ಯಕ್ಷರಾಗಿದ್ದ ಶೇಖ್ ಅಬ್ದುಲ್ ರಹಮಾನ್ ಅಲ್-ಸೂದೈಸ್’ರವರ ಇತ್ತೀಚಿನ ಹೇಳಿಕೆ ಪ್ರಕಾರ, ಮುಂದೆ ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳು ಸ್ಥಳಾವಕಾಶದ ಕೊರತೆಯ ಕಾರಣದಿಂದಾಗಿ ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ. ವಿಸ್ತರಣೆ ಕೆಲಸ ಪ್ರಗತಿಯಲ್ಲಿದೆ, ಅವರು ಮಸೀದಿಯ ನೆಲವನ್ನು ದಾಟದೆ ಹೊರಗಿನ ಚೌಕಗಳಿಂದ ಮತಫ್’ಗೆ ನೇರ ಪ್ರವೇಶವನ್ನು ಹೊಂದಬಹುದು ಈಗ ಅವನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ. [3]

  ಭೂಮಿಯ ಮೇಲಿನ ಮೊದಲ ಮಸ್’ಜಿದ್

   ಇದು ಖುರ್’ಆನಿನಲ್ಲಿ ಅಲ್ಲಾಹ್ ಹೇಳುವಂತೆ, ಭೂಮಿಯ ಮೇಲಿನ ಜನರಿಗೆ ನಿರ್ಮಿಸಲ್ಪಟ್ಟ ಮೊದಲ ಮಸೀದಿಯಾಗಿದೆ, ಅಲ್ಲಾಹ್’ನು ಹೇಳುವನು : ಮಾನವರಿಗಾಗಿ (ಸಾಮೂಹಿಕ ಆರಾಧನೆಗೆಂದು) ನಿಗದಿಯಾದ ಪ್ರಥಮ ಭವನವು, ಸಮೃದ್ಧಿ ತುಂಬಿದ ಮಕ್ಕಾ ನಗರದಲ್ಲಿದೆ ಮತ್ತು ಅದು ಲೊಕಕ್ಕೆಲ್ಲಾ ಮಾರ್ಗದರ್ಶಿಯಾಗಿದೆ. (ಮನುಷ್ಯರಿಗೂ ಹಾಗೂ ಜಿನ್’ಗಳಿಗೂ)  ಆಲಿ ಇಮ್ರಾನ್ : 3 : 96)

   ಅಬು ದರ್ರ್ (ರ ಅ)ರವರಿಂದ ವರದಿಯಾಗಿದೆ ; "ಭೂಮಿಯ ಮೇಲಿನ ಜನರಿಗಾಗಿ ನಿರ್ಮಿಸಲ್ಪಟ್ಟ ಮೊದಲ ಮಸ್’ಜಿದ್ ಯಾವುದೆಂದು ನಾನು ಅಲ್ಲಾಹುವಿನ ಪೈಗಂಬರರಿಗೆ ಕೇಳಿದೆನು. ಅವರು ಹೇಳಿದರು, 'ಅಲ್-ಮಸ್’ಜಿದ್ ಅಲ್-ಹರಾಮ್.' ನಾನು ಕೇಳಿದೆ, 'ಹಾಗಾದರೆ ನಂತರ ಯಾವುದು?' ಅವರು ಹೇಳಿದರು, 'ಅಲ್-ಮಸೀದಿ ಅಲ್-ಅಕ್ಸಾ [ಜೆರುಸ್ಲೇಮ್’ನಲ್ಲಿರುವ ಮಸೀದಿ].' ಮತ್ತೆ ನಾನು ಕೇಳಿದೆ ಇವುಗಳ ನಡುವಿನ ಅಂತರವೆಷ್ಟು? ಅವರು ಹೇಳಿದರು, 'ನಲವತ್ತು ವರ್ಷಗಳು.' "ಸಹಿಹ್ ಅಲ್-ಬುಖಾರಿ ಸಂಪುಟ 4: 3366, ಸಹಿಹ್ ಮುಸ್ಲಿಂ 520ಮತ್ತು ಸುನನ್ ಇಬ್ನ್ ಮಜಾ 753.

   ಧಾರ್ಮಿಕ ಪ್ರಾಮುಖ್ಯತೆ

 ಕಿಬ್ಲಾಹ್ ಅಥವ ಸಲಾಹ್  ದಿಕ್ಕು.

   ಕಾಬಾ - ಪ್ರಪಂಚದಾದ್ಯಂತ ಇರುವ ಎಲ್ಲ ಮುಸ್ಲಿಮರ ಪ್ರಾರ್ಥನೆಯ ನಿರ್ದೇಶನಾಲಯ - ಇದು ಅಲ್-ಮಸ್ಜಿದ್ ಅಲ್-ಹರಮ್ ಮಧ್ಯದಲ್ಲಿ ಸ್ಥೂಲವಾಗಿ ನೆಲೆಗೊಂಡಿದೆ. ಇದು ಒಂದು ಘನ ಆಕಾರದಲ್ಲಿ ಹೆಚ್ಚು ಕಡಿಮೆ 15ಮೀಟರ್ ಎತ್ತರದ ಕಲ್ಲಿನ ರಚನೆಯಾಗಿದೆ. ಇದು ಅಲ್ಲಾಹ್ನ ಆಜ್ಞೆಯ ಮೇರೆಗೆ ಇಬ್ರಾಹಿಮ್(ಅ ಸ)ರಿಂದ ಕಟ್ಟಲ್ಪಟ್ಟಿದೆ. ಅಲ್ಲಾಹ್ ಹೇಳುತ್ತಾನೆ (ಅರ್ಥ ವ್ಯಾಖ್ಯಾನ): “ ಮತ್ತು ನಾವು ಆ ಭವನ (ಕಾಬಾ)ವನ್ನು ಇಬ್ರಾಹೀಮರ ನೆಲಲಯಾಗಿಸಿದಾಗ (ಅವರಿಗೆ ಹೀಗೆಂದು ಆದೇಶಿಸಿದ್ದೆವು) ; ನೀವು ಏನನ್ನೂ ನನ್ನ ಜೊತೆ ಪಾಲುಗೊಳಿಸಬಾರದು ಮತ್ತು ಪ್ರದಕ್ಷಿಣೆ ಮಾಡುವವರಿಗಾಗಿ, (ಪ್ರಾರ್ಥನೆಗೆಂದು) ನಿಲ್ಲುವವರಿಗಾಗಿ, ಬಾಗುವವರಿಗಾಗಿ ಮತ್ತು ಸಾಷ್ಟ್ರಾಂಗ ಎರಗುವವರಿಗಾಗಿ ನನ್ನ ಭವನವನ್ನು ಶುಚಿಯಾಗಿಡಿರಿ. (ಅಲ್ ಹಜ್ಜ್ : 22 : 26)

  ಹಜ್ಜ್ ಯಾತ್ರೆ

  ಮುಸ್ಲಿಮರು ಪ್ರಮುಖ ಯಾತ್ರಾಸ್ಥಳವನ್ನು ಅಥವ ಹಜ್ಜ್ ಎಂದು ಕರೆಯಲ್ಪಡುವ ಯಾತ್ರೆಯನ್ನು ಗೊತ್ತುಪಡಿಸಿದ ದುಲ್-ಹಿಜ್ಜಾ ತಿಂಗಳಲ್ಲಿ ಮಕ್ಕಾಗೆ ನಿರ್ದಿಷ್ಟವಾದ ಪ್ರಯಾಣವನ್ನು ಮಾಡುತ್ತಾರೆ. ಹಜ್ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ ಮತ್ತು ಪ್ರತಿ ಮುಸ್ಲಿಂರ ಮೇಲೆ ತಮ್ಮ ಜೀವನದಲ್ಲಿ ಒಮ್ಮೆ ಅದನ್ನು ಮಾಡಲು ಸಾಧ್ಯವಾಗುವ ಧಾರ್ಮಿಕ ಕರ್ತವ್ಯವಾಗಿದೆ.

  ಅಲ್ಲಾಹ್ ಹೇಳಿದನು: ವಾಸ್ತವವಾಗಿ, ಮಾನವಕುಲಕ್ಕಾಗಿ ಸ್ಥಾಪಿಸಲಾದ ಮೊಟ್ಟಮೊದಲ ಆರಾಧನಾಲಯ(ಮನೆ) ಮಕ್ಕಾದಲ್ಲಿ ಆಗಿತ್ತು - ಲೋಕಗಳಿಗೆ ಒಂದು ಆಶೀರ್ವಾದ ಮತ್ತು ಮಾರ್ಗದರ್ಶನ. ಅದರಲ್ಲಿ ಇಬ್ರಾಹೀಮರು ನಿಂತಿರುವ ಸ್ಥಳವು ಸ್ಪಷ್ಟವಾದ ಚಿಹ್ನೆಗಳು. ಮತ್ತು ಅದನ್ನು ಪ್ರವೇಶಿಸುವವನು ಸುರಕ್ಷಿತನಾಗಿರುತ್ತಾನೆ. “ ಮತ್ತು ಹಜ್ಜ್ ಅಲ್ಲಾಹ್ನ’ನನ್ನು ಪಡೆಯಲು ಅವನ ಮನೆಗೆ ಹೋಗಿ ಮಾಡುವ ಕರ್ತವ್ಯವಾಗಿದೆ, ವೆಚ್ಚಗಳನ್ನು ನಿಭಾಯಿಸುವವರು (ಒಬ್ಬರ ಸಂವಹನ, ನಿಬಂಧನೆ ಮತ್ತು ನಿವಾಸಗಳಿಗಾಗಿ); ಖರ್ಚು ಮಾಡುವವರು ಮತ್ತು ಯಾರು ನಿರಾಕರಿಸುತ್ತಾರೋ ಅವರೆಲ್ಲರೂ [ ಉದಾ: ಯಾರು ಹಜ್ಜ್ನ್ನು ತಿರಸ್ಕರಿಸುತ್ತಾರೆ, ಅವನು ಅಲ್ಲಾಹ್’ನಲ್ಲಿ ನಂಬಿಕೆಯಿಲ್ಲದವನು] - ನಂತರ ವಾಸ್ತವವಾಗಿ, ಅಲ್ಲಾಹ್ನು ಲೋಕದ ಅಗತ್ಯತೆಗಳಿಂದ ಮುಕ್ತನಾಗಿರುತ್ತಾನೆ. ಅಲಿ ಇಮ್ರಾನ್ : 3 : 96, 97.

 “ ಮತ್ತು ನೀವು ಜನರಿಗೆ ‘ಹಜ್ಜ್’ನ ಕರೆ ನೀಡಿರಿ, ಅವರು ನಡೆಯುತ್ತಲೂ, ದೂರದ ದಾರಿಗಳನ್ನು ಕ್ರಮಿಸಿ ಬರುವ ಕ್ಷೀಣ ಒಂಟೆಗಳನ್ನೇರಿಯೂ ನಿಮ್ಮ ಬಳಿಗೆ ಬರುವರು” ಅಲ್ ಹಜ್ಜ್ : 22 : 27.

  ಕಾಬಾ ಮತ್ತು ಸುತ್ತಮುತ್ತಲಿನ ಧಾರ್ಮಿಕ ರಚನೆಗಳು

               ಮಕಾಮ್ ಎ ಇಬ್ರಾಹೀಮ್

ಮಸೀದಿಯಲ್ಲಿ ಇತರ ಧಾರ್ಮಿಕ ಸ್ಮಾರಕಗಳೂ ಸಹ ಇವೆ, ಉದಾಹರಣೆಗೆ ಮಕಾಮ್ ಎ ಇಬ್ರಾಹೀಮ್ (ಇಬ್ರಾಹೀಮ್ ನಿಲ್ದಾಣ), ಕಾಬಾವನ್ನು ನಿರ್ಮಿಸುತ್ತಿದ್ದಾಗ ಇಬ್ರಹೀಮ್ (ಅವರ ಮೇಲೆ ಶಾಂತಿ)ರು ಇಡುತ್ತಿದ್ದ ಬಂಡೆ.

             ಜಮ್ ಜಮ್ ಬಾವಿ

  ಜಮ್ ಜಮ್ ಬಾವಿ ಕೂಡಾ ಇದೆ, ಅಲ್ಲಾಹ್’ನಿಂದ ನೀಡಲ್ಪಟ್ಟ ನೀರು ಇದು ಹಜಿರಾ ಹಾಗೂ ಮತ್ತು ಅವರ ಬಾಲಕ ಇಸ್ಮಾಯಿಲ್ (ಅವರ ಮೇಲೆ ಶಾಂತಿಇರಲಿ)ರರು ಬಾಯಾರಿಕೆ ಸಿಕ್ಕಿದ ನೀರಿನ ಚಿಲುಮೆಯಾಗಿದೆ.

             ಕಪ್ಪು ಕಲ್ಲು

ಕಪ್ಪು ಕ್ಲಲ್ಲು ಮತ್ತು ಅಲ್-ರುಕ್ ಅಲ್-ಯಮನಿ, ಸ್ವರ್ಗದ ಎರಡು ಅಮೂಲ್ಯ ಕಲ್ಲುಗಳು.

  ಅಲ್ ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದರು: 'ಅಬ್ದುಲ್ಲಾ  ಇಬ್ನ್ ಅಮ್ರ್ ಅವರು ಹೇಳಿದರು: "ರುಕ್ನ್ ಮತ್ತು ಮಾಕಾಮ್ ಇವೆರಡೂ ಸ್ವರ್ಗದ ಅಮೂಲ್ಯವಾದ ಕಲ್ಲುಗಳು ಎಂದು ಪೈಗಂಬರ್ ಮುಹಮ್ಮದ್(ಸ) ಹೇಳುತ್ತಿರುವುದನ್ನು ನಾನು ಕೇಳಿದ್ದೇನೆ. ಅವುಗಳ ಬೆಳಕು ಅಲ್ಲಾಹ್ನಿಂದ ಆವರಿಸಲ್ಪಟ್ಟಿದೆ. ಅವುಗಳು ತಮ್ಮ ಬೆಳಕನ್ನು ನಂದಿಸದೆ ಹೋದರೆ, ಅವು ಪೂರ್ವ ಮತ್ತು ಪಶ್ಚಿಮದ ನಡುವಿನ ಎಲ್ಲವನ್ನೂ ಬೆಳಗಿಸುತ್ತಿದ್ದವು. "ಸುನನ್ ಅಲ್-ತಿರ್ಮಿದಿ, 878.

             ಸಫಾ ಮತ್ತು ಮರ್ವಾ

 ಮಸೀದಿಯ ಸಮೀಪ ಅಲ್-ಸಫಾ ಮತ್ತು ಅಲ್-ಮರ್ವಾ ಎಂಬ ಎರಡು ಬೆಟ್ಟಗಳಿವೆ. ಮಸೀದಿಯ ವಿಶಿಷ್ಟ ಲಕ್ಷಣವೆಂದರೆ ಇದು ಹಜ್ಜ್ಯಾತ್ರಾರ್ಥಿಗಳು ಯಾತ್ರೆಗೆ ಬರುವ ವಿಶ್ವದ ಏಕೈಕ ಮಸೀದಿಯಾಗಿದೆ. ಅಲ್ಲಹ್’ನು ಖುರ್’ಆನಿನಲ್ಲಿ ಹೇಳಿದನು : “ ಖಂಡಿತ, ‘ಸಫಾ’ ಮತ್ತು ‘ಮರ್ವಾ’ಗಳು ಅಲ್ಲಾಹ್’ನ ಸಂಕೇತಗಲ ಸಾಲಿಗೆ ಸೇರಿವೆ. ಅಲ್ಲಾಹ್’ನ ಭನದ ‘ಹಜ್ಜ್’ (ಕಡ್ಡಾಯ ಯಾತ್ರೆ) ಅಥವ ಉಮ್ರಾಃ (ಐಚ್ಛಿಕ ಯಾತ್ರೆ) ನಡೆಸುವನು ಅವೆರಡರ ನಡುವೆ ನಡೆಯುವುದರಲ್ಲಿ ತಪ್ಪಿಲ್ಲ. ಸ್ವಇಚ್ಛೆಯಿಂದ ಒಳಿತನ್ನು ಮಾಡ ಹೊರಟವನು (ತಿಳಿದಿರಲಿ); ಅಲ್ಲಾಹ್’ನು (ಒಳಿತಿನ) ಪ್ರಶಂಸಕನೂ ಜ್ಞಾನಿಯೂ ಆಗಿದ್ದಾನೆ”. ಅಲ್ ಬಖರಃ 2 : 158.

 

   ವಿಶಿಷ್ಟ ಲಕ್ಷಣ ಅಥವ ಮಸೀದಿ ಅಲ್ ಹರಮ್’ನ ಸದ್ಗುಣ

  ಅತ್ಯಂತ ಪವಿತ್ರ ಮಸೀದಿ ಇರುವ ನಗರ ಮಕ್ಕಾ ಆಗಿದೆ. ಮಸೀದಿಗಳಲ್ಲಿನ ಪ್ರಾರ್ಥನೆಗಳು ಅಲ್ ಹರಮ್’ಗಿಂತ ಇತರ ಮಸೀದಿಗಳಲ್ಲಿನ ಪ್ರಾರ್ಥನೆಗಳಿಗಿಂತ 100,000ಪಟ್ಟು ಹೆಚ್ಚಾಗಿದೆ. ಇದು ಜಾಬಿರ್(ರ ಅ)ರವರಿಂದ ವರದಿಯಾಗಿದೆ, ಪೈಗಂಬರ್ ಮುಹಮ್ಮದ್ (ಸ) ಹೇಳಿದರು; : "ನನ್ನ ಮಸೀದಿಯಲ್ಲಿ ಮಾಡುವ ಒಂದು ಪ್ರಾರ್ಥನೆಯು ಪವಿತ್ರ ಮಸೀದಿ ಹೊರತುಪಡಿಸಿ ಬೇರೆಲ್ಲಿಯೂ ಒಂದು ಸಾವಿರ ಪ್ರಾರ್ಥನೆಗಳಿಗಿಂತಲೂ ಉತ್ತಮವಾಗಿದೆ, ಮತ್ತು ಪವಿತ್ರ ಮಸೀದಿಯಲ್ಲಿನ ಒಂದು ಪ್ರಾರ್ಥನೆ ಬೇರೆಡೆಗೆ ನೂರು ಸಾವಿರ ಪ್ರಾರ್ಥನೆಗಳಿಗಿಂತ ಉತ್ತಮವಾಗಿದೆ." ಮುಸ್’ನದ್ ಅಹ್ಮದ್ ಮತ್ತು ಸುನನ್ ಇಬ್ನ್ ಮಜಾ ಪುಸ್ತಕ 5, ಹದಿಸ್ 1471 (ಸಂಪುಟ 2, ಪುಸ್ತಕ 5, ಹದಿಸ್ 1406) ಈ ಹದೀಸ್ನ್ನು ಅಲ್-ಮುಂದ್ಹಿರಿ ಮತ್ತು ಅಲ್-ಬಸೈರಿಯವರಿಂದ ಸಹೀಹ್ ಎಂದು ವರ್ಗೀಕರಿಸಲಾಗಿದೆ. ಅಲ್-ಅಲ್ಬಾನಿ ಹೇಳಿದರು: ಪರಿಸ್ಥಿತಿಗಳ ಪ್ರಕಾರ ಇದರ ಇಸ್ನದ್ ಇಬ್ಬರು ಶೇಖ್’ಗಳಾದ [ಅಲ್-ಬುಖಾರಿ ಮತ್ತು ಮುಸ್ಲಿಂ]ರವರಿಂದ ಸರಿಯಾಗಿದೆ. ಇರ್ವಾ ಅಲ್ ಘಲೀಲ್ (4/146).

 “ಮತ್ತು ನಾವು ಆ ಭವನವನ್ನು (ಕಾಬಾ) ಜನರಿಗಾಗಿ , ಪರಸ್ಪರ ಒಟ್ಟು ಸೇರುವ ಹಾಗೂ ಸುರಕ್ಷಿತ ಸ್ಥಳವಾಗಿ ಮಾಡಿದೆವು. ಇಬ್ರಾಹೀಮರು ನೀಂತ ಸ್ಥಾನವನ್ನು ನೀವು ನಮಾಜ್’ನ ಸ್ಥಳವಾಗಿ ಬಳಸಿರಿ (ಎಂದು ನಾವು ಆದೇಶಿಸಿದ್ದೆವು). ಮತ್ತು ತವಾಫ್ (ಪ್ರದಕ್ಷಿಣೆ) ಮಾಡುವವರು, ‘ಇತಿಕಾಫ್” ಮಾಡುವವರು, ಬಾಗುವವರು ಹಾಗು ಸಾಷ್ಟ್ರಾಂಗವೆರಗುವವರಿಗಾಗಿ ನನ್ನ ಭವನವನ್ನು ನಿರ್ಮಲವಾಗಿಡಬೇಕೆಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಯೀಲರಿಗೆ ಅದೇಶ ನೀಡಿದ್ದೆವು” ಅಲ್ ಬಕರಃ : 2 : 125 [4]

  ತ್ವರಿತ ಸಂಗತಿಗಳು

 1. ಅಲ್ಲಾಹ್’ನ ಆರಾಧನೆಗಾಗಿ ನಿರ್ಮಿಸಿದ್ದ ಮೊಟ್ಟ ಮೊದಲನೇಯ ಮನೆಯ ನಗರ ಮಕ್ಕಾ ಆಗಿದೆ.

 2. ಅತ್ಯಂತ ಪವಿತ್ರ ಮಸ್’ಜಿದ್ ಇರುವ ನಗರ ಮಕ್ಕಾ. ಅಲ್ ಹರಮ್ ಮಸೀದಿಯಲ್ಲಿನ ಪ್ರಾರ್ಥನೆಗಳು ಇತರ ಮಸೀದಿಗಳಲ್ಲಿನ ಪ್ರಾರ್ಥನೆಗಳಿಗಿಂತ 100,000ಪಟ್ಟು ಹೆಚ್ಚಾಗಿದೆ.

3. ಅಲ್ಲಾಹ್’ನಿಂದ ಮಕ್ಕಾ ನಗರವನ್ನು ಪವಿತ್ರ ಸ್ಥಳವೆಂದು ಘೋಷಿಸಲಾಯಿತು.

4. ಪೈಗಂಬರ್ ಅಬ್ರಹಾಂ (ಇಬ್ರಾಹೀಮ್) ಮತ್ತು ಪೈಗಂಬರ್ ಇಷ್ಮಾಯೆಲ್ (ಇಸ್ಮಾಯಿಲ್) ಸೇರಿದಂತೆ ಅನೇಕ ದೂತರು ಮತ್ತು ಅಲ್ಲಾಹ್’ನ ಪೈಗಂಬರರು ಈ ನಗರಕ್ಕೆ ಭೇಟಿ ನೀಡಿದರು.

5. ಈ ನಗರವು ಪೈಗಂಬರ್ ಇಬ್ರಾಹೀಮರ ಪತ್ನಿ ಹಾಜ್ರಾಃ (ಹಗರ್) ವಾಸಿಸುತ್ತಿದ್ದ ಮತ್ತು ಅವಳ ಮಗ ಪೈಗಂಬರ್ ಇಷ್ಮಾಯೆಲ್ (ಇಸ್ಮಾಯಿಲ್)ರವರು ಬೆಳೆದ ನಗರ. ಪೈಗಂಬರ್ ಇಸ್ಮಾಯಿಲ್ ಮಕ್ಕಾದಲ್ಲಿ ತನ್ನ ಜೀವನದ ಬಹುಪಾಲು ಕಳೆದರು.

6. ಪೈಗಂಬರ್ ಮುಹಮ್ಮದ್(ಸ) ಮಕ್ಕಾದಿಂದ ಮದೀನಾಗೆ ವಲಸೆ ಹೋಗುತ್ತಿದ್ದಾಗ, ಅವರು ಮಕ್ಕಾ ಕಡೆಗೆ ತಮ್ಮ ಮುಖವನ್ನು ತಿರುಗಿಸಿ, "ಮಕ್ಕಾಹ್ ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ ಎಂಬುದು ನನಗೆ ಗೊತ್ತು ಆದರೆ ನಿನ್ನ ಜನರು ನನಗೆ ಬಿಟ್ಟು ಹೋಗಬೇಕೆಂದು ಒತ್ತಾಯಿಸುತ್ತಿದ್ದಾರೆ ".

7. ಇದು ಪೈಗಂಬರ್ ಇಬ್ರಾಹೀಮ್ ಮತ್ತು ಇಸ್ಮಾಯಿಲ್ (ಅವರ ಮೇಲೆ ಶಾಂತಿಯಿರಲಿ) ಅಲ್ಲಾಹ್’ನಿಗೆ ದುಆ ಮಾಡಿದ ನಗರ.

8. ಈ ನಗರದಲ್ಲಿ ಅಲ್ಲಾಹ್’ನ ಪೈಗಂಬರರಾದ ಇಬ್ರಾಹೀಮ್ ಮತ್ತು ಇಸ್ಮಾಯೀಲರನ್ನು ಅಲ್ಲಾಹನ ಮನೆಯಾದ ಕಾಬಾವನ್ನು ನಿರ್ಮಿಸಲು ಆದೇಶಿಸಿದನು ಮತ್ತು ಇಡೀ ಮಾನವಕುಲವನ್ನು ಹಜ್ಜ್’ಗೆ ಬರಲು ಹಾಗೂ ಬೈತ್ ಅಲ್ ಅತೀಖ್’ನ್ನು ಸೇರಲು ಆಹ್ವಾನಿಸಿದನು. ಅಂದಿನಿಂದ ಲೆಕ್ಕವಿಲ್ಲದಷ್ಟು ಅಥವ ಅಸಂಖ್ಯಾತ ಮಾನವರು ಈ ಆಶೀರ್ವದಿಸಿರುವ ನಗರವನ್ನು ಭೇಟಿ ಮಾಡಿದರು ಮತ್ತು ಅವರವರ ಹಜ್ಜ್ಯಾತ್ರೆ ನಡೆಸಿದರು.

9. ನಮ್ಮ ಪೈಗಂಬರ್ ಮುಹಮ್ಮದ್(ಸ) ಹುಟ್ಟಿದ ಮತ್ತು ಬೆಳೆದ ನಗರವಿದು. ಅಲ್ಲಾಹ್ ಅವರಿಗೆ ಇಡೀ ಮಾನವಕುಲದ ಕೊನೆಯ ಸಂದೇಶವಾಹಕ ಮತ್ತು ಪೈಗಂಬರರಾಗಿ ಮಾಡಿದೆ ಎಂದು ಮೊದಲ ಬಾರಿಗೆ ಘೋಷಿಸಿದ ನಗರ.

10. ಪೈಗಂಬರ್ ಮುಹಮ್ಮದ್ (ಸ)ಅವರು ಮಕ್ಕಾದಲ್ಲಿ ತಮ್ಮ ಜೀವನದ ಬಹುಪಾಲು ಕಳೆದರು.

11. ಈ ನಗರ ನಿಜವಾಗಿಯೂ ಇಸ್ಲಾಂ ಧರ್ಮ ಹರಡಿದ ಸ್ಥಳವಾಗಿದೆ.

12. ಇದು ಜಮ್ ಜಮ್ ಹರಿಯುವ ನಗರ ಮತ್ತು ಇದನ್ನು ಕುಡಿಯುವವರಿಗೆ ಆಹಾರಪೊಷಣೆಯನ್ನು ಒದಗಿಸುತ್ತದೆ.

13. ಪೈಗಂಬರ್ ಮುಹಮ್ಮದ್(ಸ)ರ, ಅಲ್ ಅಸ್ರಾ ವಲ್ ಮೆಹ್’ರಾಜ್’ನ ಸ್ವರ್ಗದ ಕಡೆಗೆ ಅದ್ಭುತವಾದ ಪ್ರಯಾಣವು ಈ ನಗರದಲ್ಲಿ ಪ್ರಾರಂಭವಾಯಿತು ಮತ್ತು ಕೊನೆಗೊಂಡಿತು.

14. ಮಕ್ಕಾದ ಪವಿತ್ರ ಸ್ಥಳದಲ್ಲಿ, ಅಲ್ಲಾಹ್’ನ ಹಲವು ಚಿಹ್ನೆಗಳು ಇವೆ ಮಿನಾ, ಮುಜ್’ದಲಿಫಹ್, ಅರಫಾತ್, ತೋರ್ ಗುಹೆ, ಜನ್ನತುಲ್ ಮುಅ'ಲ್ಲಾದ ಸ್ಮಶಾನ, ಸಫಾ ಮತ್ತು ಮಾರ್ವಾ ಬೆಟ್ಟಗಳು, ಪೈಗಂಬರ್ ಮುಹಮ್ಮದ್(ಸ)ರು ಜನಿಸಿದ ಮನೆ,  ಮುಂತಾದವು.

15. ಪ್ರತಿ ಮುಸ್ಲಿಮರು ಹೋಗಲು ಬಯಸುವ ಮತ್ತು ಪ್ರತಿವರ್ಷ ಲಕ್ಷಾಂತರ ಮಂದಿ ಭೇಟಿ ನೀಡುವ ನಗರ ಇದು. [5]

 ನೋಡಿರಿ

ಮಸ್’ಜಿದ್, ಮಸ್’ಜಿದ್ ಎ ನಬವಿ, ಮಸ್’ಜಿದ್ ಎ ಅಕ್ಸಾ, ಮಕ್ಕಾ, ಮದೀನಾ, ಅಲ್ಲಾಹ್, ಅಲ್ಲಾಹ್’ನ ಸಂದೇಶವಾಹಕರು, ಮಸ್’ಜಿದ್ ಎ ಖುಬಾ, 

 ಉಲ್ಲೇಖಗಳು

[1] http://www.islamreligion.com/articles/2748/

[2] [4] http://islamqa.info/en/3748

[3] http://www.arabnews.com/saudi-arabia/mataf-expansion-double-current-capacity

[5] http://www.islamicsupremecouncil.com/etiquettes.htm

410 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ