ಮುಹಮ್ಮದ್(ಸ) ಪೈಗಂಬರರು ಸರ್ವರಿಗೂ ಉತ್ತಮ ಆದರ್ಶವಂತರು

  ಸರ್ವ ಮಾನವ ಕುಲಕ್ಕೂ ಮುಹಮ್ಮದ್(ಸ)ರು ಉತ್ತಮ ಆದರ್ಶರಾಗಿದ್ದಾರೆ. ತಮ್ಮ ಉತ್ತಮ ಆದರ್ಶಗಳಲ್ಲಿ ತಾವು ಒಬ್ಬ ಆದರ್ಶ ತಂದೆ, ಪತಿ, ಅಜ್ಜರೂ ಸಹ ಆಗಿದ್ದರು, ಅಲ್ಲದೆ ಉತ್ತಮ ನಾಗರಿಕರು, ನ್ಯಾಯಾಧೀಶರು, ಹಾಗೂ ಧಾರ್ಮಿಕ ಗುರುವಾಗಿದ್ದರು, ತಮ್ಮ ವಿಶೇಷತೆಗಳಲ್ಲಿ ಅತ್ಯಂತ ಉತ್ತಮ ಹಾಗೂ ಹಿರಿಮೆಯುಳ್ಳದ್ದೆಂದರೆ ತಾವೇನನ್ನು ಹೇಳುತಿದ್ದರೋ ಅದನ್ನೇ ಮಾಡುತ್ತಿರು.

   ತಾವು ತಮ್ಮ ನೆರೆಹೊರೆಯವರೊಂದಿಗೆ ನ್ಯಾಯ ಪಾಲನೆ, ಪ್ರೀತಿ ಪ್ರೇಮ ಹಾಗೂ ಮರ್ಯಾದೆಯ ಪಾಠ ತಿಳಿಸಿದರು, ತಾವು ಮಾನವಕುಲಕ್ಕೆ ಕಲಿಸಿರುವ ಸಹೋದರತೆಯು ಐತಿಹಾಸಿಕ ಉದಾಹರಣೆಯಾಗಿದೆ. ಈ ಅತ್ತ್ಯುತ್ತಮ ಲಕ್ಷಣಗಳನ್ನು ಅಲ್ಲಾಹ್’ನು ಮುಹಮ್ಮದ್(ಸ)ರಿಗೆ ನೀಡಿದ್ದನು ಹಾಗೂ ತನ್ನ ಅನುಯಾಯಿಗಳನ್ನು ವಾಸ್ತವಿಕ ಧರ್ಮದೆಡೆಗೆ ಕರೆಸಿದನು.

ಪರಿವಿಡಿ

ಖುರ್’ಆನ್

(ಓ ಸತ್ಯ ವಿಶ್ವಾಸಿಗಳೇ) ನಿಮ್ಮ ಬಳಿ ನಿಮ್ಮೊಳಗಿಂದಲೇ ಒಬ್ಬ ದೆವದೂತರು ಬಂದಿದ್ದಾರೆ, ನಿಮಗೆ ಎದುರಾಗುವ ಪ್ರತಿಯೊಂದು ತೊಂದರೆಯೂ ಅವರ ಪಾಲಿಗೆ ಕಠಿಣವಾಗಿರುತ್ತದೆ. ಅವರು ನಿಮ್ಮ ಹಿತಕ್ಕಾಗಿ ಹಂಬಲಿಸುವವರಾಗಿದ್ದಾರೆ.” ( ತೌಬಾ : 9 :128)

          “ (ದೂತರೆ) ನಾವು ನಿಮ್ಮನ್ನು ಸರ್ವ ಲೋಕಗಳಿಗೆ ಅನುಗ್ರಹವಾಗಿ ಕಳುಹಿಸಿದೆವು” ( ಅಲ್ ಅಂಬಿಯಾ 21 : 107)

ಮಕ್ಕಳೊಂದಿಗೆ ದಯೆ

          ಅನಸ್(ರ ಅ)ರವರು ವರದಿ ಮಾಡಿರುವರು “ಮುಹಮ್ಮದ್(ಸ)ರ ಹತ್ತಿರ ಮಕ್ಕಳು ಹೋದರೆ ಅವರಿಗೆ ಸಲಾಂ ಹೇಳುತ್ತಿದ್ದರು”. ಆದ್ದರಿಂದ ಅನಸ್’ರವರೂ ಸಹ ಮಕ್ಕಳ ಹತ್ತಿರ ಬಂದಾಗ ಸಲಾಂ ಹೇಳುತ್ತಿದ್ದರು. (ಬುಖಾರಿ, ಮುಸ್ಲಿಮ್)

          ಇಬ್ನೆ ಅಬ್ಬಾಸ್ (ರ ಅ)ರವರು ಉಲ್ಲೇಖಿಸಿದಂತೆ, ಸುಗ್ಗಿ ಕೊಯ್ಲು ಬಂದಾಗ ಮುಹಮ್ಮದ್(ಸ) ಅದರಲ್ಲಿನ ಸ್ವಲ್ಪ ಭಾಗವನ್ನು ಕಣ್ಣು ಹಾಗೂ ತುಟಿಗಳಿಗೆ ತಾಗಿಸಿ ನಂತರ ಹೇಳುತ್ತಿದ್ದರು “ಓ ಅಲ್ಲಾಹ್  ನೀನು ಇದರ ಆರಂಭವನ್ನು ನಮಗೆ ತೋರಿಸಿದಂತೆಯೇ ಅದರ ಅಂತ್ಯವನ್ನೂ ತೋರಿಸು” ಎಂದು ಪ್ರಾರ್ಥಿಸಿ ತಮ್ಮ ಹತ್ತಿರವಿದ್ದ ಯಾವುದೇ ಮಗುವಿಗೆ ನೀಡುತ್ತಿದ್ದರು. (ತಬರಾನಿ)

          ಮುಹಮ್ಮದ್(ಸ)ರ ಹತ್ತಿರ ಯಾವುದೇ ಮಗುವನ್ನು ತಂದರೂ ಅವರು ಆ ಮಗುವನ್ನು ತಮ್ಮ ಮಡಿಲಿಗೆ ಎತ್ತಿಕೊಳ್ಳುತಿದ್ದರು. ಒಂದು ದಿನ ಒಬ್ಬ ಮಗು ತಮ್ಮ ಮೇಲೆ ಮೂತ್ರ ವಿಸರ್ಜಿಸಿತು, ಆಗ ತಾವು ನೆನೆದ ಆ ಭಾಗವನ್ನು ನೀರಿನಿಂದ ತೊಳೆದರು, ಪೂರ್ಣ ಬಟ್ಟೆಯನ್ನು ತೊಳೆಯಲಿಲ್ಲ (ಏಕೆಂದರೆ ಆ ಮಗು ಇನ್ನೂ ಹಾಲು ಕುಡಿಯುತ್ತಿತ್ತು. (ಬುಖಾರಿ )

   ಮುಹಮ್ಮದ್(ಸ)ರು ಮಕ್ಕಳನ್ನು ಸಾಲಿನಲ್ಲಿ ನಿಲ್ಲಿಸುತ್ತಿದ್ದರು ಹಾಗು ಮಕ್ಕಳಿಗೆ ಹೇಳುತ್ತಿದ್ದರು, “ ನಿಮಲ್ಲಿ ಯಾರು ನನ್ನ ಬಳಿಗೆ ತಲುಪುವಿರೋ ಅವರಿಗೆ ಇಂತಿಂತಹ ಬಹುಮಾನ ವಸ್ತುಗಳನ್ನು ನಿಮಗೆ ನೀಡುವೆನು” ಎನ್ನುತ್ತಿದ್ದರು. ಆಗ ಮಕ್ಕಳು ಅವರೆಡೆಗೆ ಓಡಿ ಬಂದು ಬೆನ್ನ ಮೇಲೆ ಎದೆಯ ಮೇಲೆ ಹಾರುತ್ತಿದ್ದರು. (ಅಹಮದ್)

  ಸ್ತ್ರಿಯರೊಂದಿಗೆ ದಯೆ

   ಒಂದು ಬಾರಿ ಮುಹಮ್ಮದ್(ಸ)ರು ಆಯಿಷಾ (ರ ಅ)ರವರ ಮನೆಯಲ್ಲಿ ತಮ್ಮ ಮುಖವನ್ನು ಮರೆಮಾಚಿಕೊಂಡು ಮಲಗುತ್ತಿದ್ದರು ಅಂದು ಹಬ್ಬದ ದಿನವಾಗಿತ್ತು ಆಗ ಕೆಲ ಸ್ತ್ರೀಯರು ಹಾಡುತ್ತಿದ್ದರು, ಆ ಸಮಯದಲ್ಲಿ ಅಬುಹುರೈರಾ(ರ ಅ) ಮನೆಗೆ ಬಂದು ಸ್ತ್ರೀಯರಿಗೆ ಸುಮ್ಮನಿರುವಂತೆ ಹೇಳಿದರು. ಆಗ ಮುಹಮ್ಮದ್(ಸ)ರು “ಅವರು ಹಾಡಲಿಬಿಡಿ ಇಂದು ಅವರ ಹಬ್ಬದ ದಿನವಾಗಿದೆ” ಎಂದರು. (ಸಹಿಹ್ ಬುಖಾರಿ : 3931) 

   ಮುಹಮ್ಮದ್(ಸ) ಹೇಳಿದರು “ನಿಮ್ಮಲ್ಲಿ ಯಾರು ಉತ್ತಮವಾಗಿ ವ್ಯವಹರಿಸುವರೋ ಅವನೇ ಒಳ್ಳೆಯ ಮುಸ್ಲಿಮನಾಗಿದ್ದಾನೆ. ಯಾರು ತಮ್ಮ ಪತ್ನಿಯೊಂದಿಗೆ ಉತ್ತಮವಾಗಿ ವ್ಯವಹರಿಸುವರೋ ಅವನು ನಿಮ್ಮಲ್ಲಿ ಎಲ್ಲರಿಗಿಂತ ಉತ್ತಮನಾಗಿದ್ದಾನೆ”. (ತಿರ್ಮಿಜಿ vol 1 ಪುಸ್ತಕ 7 ಹದೀಸ್ 1162)

   ಮುಹಮ್ಮದ್(ಸ)ರು ಹೇಳಿದರು; “ ಯಾರು ತನ್ನ ಎರಡು ಹೆಣ್ಣು ಮಕ್ಕಳನ್ನು ಉತ್ತಮ ರೀತಿಯಿಂದ ಪೋಷಿಸುವನೋ, ಅವನು ಮತ್ತು ನಾನು ಸ್ವರ್ಗದಲ್ಲಿ ಹೀಗೆ ಪ್ರವೆಶಿಸುವೆವು” ಎಂದು ತಮ್ಮ ತೋರ್ಬೆರಳು ಮತ್ತು ನಡು ಬೆರಳನ್ನು ತೋರಿಸುತ್ತಾ ಹೇಳಿದರು. (ತಿರ್ಮಿಜಿ 1914)

   ಮುಹಮ್ಮದ್(ಸ)ರು ಹೇಳಿದರು; “ ಒಬ್ಬ ಸತ್ಯವಿಶ್ವಾಸಿ(ಮುಸ್ಲಿಮ್)ಯು ಸತ್ಯ ವಿಶ್ವಾಸಿ ಸ್ತ್ರಿಯನ್ನು ದ್ವೇಷಿಸಬಾರದು, ಒಂದು ವೇಳೆ ಸ್ತ್ರೀಯ ಯಾವುದಾದರೊಂದು ಕಾರ್ಯದಿಂದ ಮುನಿಸಿಕೊಂಡರೆ ಇನ್ನೊಂದು ಕಾರ್ಯದಿಂದ ಸಂತೋಷ ಪಡುತ್ತಾನೆ” (ಸಹಿಹ್ ಮುಸ್ಲಿಮ್ ಪುಸ್ತಕ  1 ಹದಿಸ್ 275)

   ಮುಹಮ್ಮದ್(ಸ)ರು ಹೇಳಿದರು; ನಾನು ನಮಾಜ್’ನ್ನು ದೀರ್ಘಗೊಳಿಸ ಬಯಸುತ್ತೇನೆ, ಆದರೆ ಮಗು ಅಳುವ ಶಬ್ದವನ್ನು ಕೇಳಿದಾಗ ತಕ್ಷಣ ನಾನು ನಮಾಜ್’ನ್ನು ಸಂಕುಚಿತಗೊಳಿಸುತ್ತೇನೆ, ಮಗು ಅತ್ತರೆ ತಾಯಿಯ ಹೃದಯ ತಲ್ಲಣಿಸುತ್ತದೆ. (ಸಹಿಹ್ ಬುಖಾರಿ, ಸಹಿಹ್ ಮುಸ್ಲಿಮ್)

  ಅನಾಥ, ನಿರ್ಗತಿಕ, ವಿಧವೆಯರೊಂದಿಗೆ ದಯೆ

   ಮುಹಮ್ಮದ್(ಸ)ರು ವಿಧವೆ ಹಾಗು ನಿರ್ಗತಿಕ(ಬಡವ)ರೊಂದಿಗೆ ಹೋಗುವುದನ್ನು ನಿರಾಕರಿಸುತ್ತಿರಲಿಲ್ಲ, ಅಲ್ಲದೆ ಅವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು, ನಿಶ್ಯಕ್ತ ಹಾಗೂ ರೋಗ ಪೀಡಿತ ಮುಸಲ್ಮಾನರ ಯೋಗಕ್ಷೇಮ ವಿಚಾರಣೆಗಾಗಿ ಹೋಗುತ್ತಿದ್ದರು, ಹಾಗೆಯೇ ಅವರ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ಅನಾಥರೊಂದಿಗೆ ಸದ್ವರ್ತನೆಯಿಂದ ವರ್ತಿಸುತ್ತಿದ್ದರು, ಹಾಗೂ ಅವರಿಗೆ ಧನಸಹಾಯವನ್ನು ಮಾಡುತ್ತಿದ್ದರು,  ಜನರಿಗೆ ಅನಾಥರೊಂದಿಗೆ ಸದ್ವರ್ತನೆ ಮಾಡುವಂತೆ ಹಣದ ಸಹಾಯ ಮಾಡುವಂತೆ ಆದೆಶಿಸುತ್ತಿದ್ದರು, ಅಂತಿಮ ದಿನದಲ್ಲಿ ಅದರ ಪ್ರತಿಫಲವನ್ನೂ ಸಹ ತಿಳಿಸಿ ಕೊಡುತ್ತಿದ್ದರು, ಮತ್ತು ಹೇಳುತ್ತಿದ್ದರು “ ತೋರ್ಬೆರಳು ಹಾಗೂ ನಡುಬೆರಳು ಹೇಗೆ ಒಂದಕ್ಕೊಂದು ಹತ್ತಿರವಾಗಿವೆಯೋ ಹಾಗೆಯೇ ನಾನು ಮತ್ತು ಅನಾಥರ ಪೋಷಕ ಸ್ವರ್ಗದಲ್ಲಿ ಜೊತೆಗಿರುವೆವು. (ಸಹಿಹ್ ಬುಖಾರಿ)

   ಇಬ್ನೆ ಉಮರ್(ರ ಅ) ಉಲ್ಲೇಖಿಸಿದರು ಮುಹಮ್ಮದ್(ಸ) ಹೀಗೆಂದರು “ ಒಬ್ಬ ಮುಸ್ಲಿಮನು ಇನ್ನೊಬ್ಬ ಮುಸ್ಲಿಮನ ಸಹೋದರನಾಗಿದ್ದಾನೆ. ಅವರು ಪರಸ್ಪರ ನಿಂದಿಸುವುದಿಲ್ಲ, ಯಾರು ತಮ್ಮ ಸಹೋದರನ ಅವಶ್ಯಕತೆ ಪೂರೈಸುವನೋ ಅಲ್ಲಾಹ್’ನು ಅವನ ಅವಶ್ಯಕತೆ ಪೂರೈಸುವನು, ಯಾರು ತನ್ನ ಸಹೋದರನ ಚಿಂತೆ ದೊರಮಾಡುವನೋ ಅಂತಿಮ ದಿನದಂದು ಅಲ್ಲಾಹ್’ನು ಅವನ ಚಿಂತೆಯನ್ನು ದೂರ ಮಾಡುವನು. ಯಾರೇ ಆಗಲಿ ತನ್ನ ಸಹೋದರನ ಕುಂದುಗಳನ್ನು ರಹಸ್ಯವಾಗಿಡುವನೋ ಅಂತಿಮ ದಿನದಲ್ಲಿ ಅಲ್ಲಾಹ್’ನು ಅವನ ಕುಂದುಗಳನ್ನು ರಹಸ್ಯವಾಗಿಡುವನು. (ಸಹಿಹ್ ಬುಖಾರಿ ಮತ್ತು ಸಹಿಹ್ ಮುಸ್ಲಿಮ್)

ಸೇವಕರೊಂದಿಗೆ ದಯೆ

   ಅಬ್ದುಲ್ಲಾಹ್ ಬಿನ್ ಉಮರ್(ರ ಅ) ಹೇಳುವರು ; ಒಬ್ಬ ವ್ಯಕ್ತಿ ಮುಹಮ್ಮದ್(ಸ)ರ ಹತ್ತಿರ ಬಂದನು ಮತ್ತು ಕೇಳಿದನು, “ ಓ ಅಲ್ಲಾಹ್’ನ ಪೈಗಂಬರರೆ ನಾವು ಸೇವಕರನ್ನು ಎಷ್ಟು ಬಾರಿ ಕ್ಷಮಿಸಬೇಕು? ಎಂದು ಪ್ರಶ್ನಿಸಿದನು. ಆಗ ಮುಹಮ್ಮದ್(ಸ)ರು ಮೌನವಾಗಿದ್ದರು. ಆ ವ್ಯಕ್ತಿ ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಕೇಳಿದನು, ಆಗಲೂ ಮುಹಮ್ಮದ್(ಸ)ರು ಮೌನವಾಗಿದ್ದರು, ಮೂರನೆ ಬಾರಿ ಅದೇ ಪ್ರಶ್ನೆಯನ್ನು ಮತ್ತೆ ಕೇಳಿದನು, ಆಗ ಮುಹಮ್ಮದ್(ಸ)ರು “ದಿನಕ್ಕೆ ಎಪ್ಪತ್ತು(70) ಬಾರಿ ಕ್ಷಮಿಸಬೇಕು” ಎಂದರು (ಅಬುದಾವುದ್ : 5164)

ಪಶು ಪ್ರಾಣಿಗಳೊಂದಿಗೆ ದಯೆ

   ಆಯಿಷ (ರ ಅ)ರವರು ಉಲ್ಲೇಖಿಸಿದರು, ಒಂದು ಬಾರಿ ಅವರು ಕುದುರೆಯೊಂದರ ಮೇಲೆ ಸವಾರಿ ಮಾಡುತ್ತಿರುವಾಗ ಅವರಿಗೆ ಕಷ್ಟವಾಗುತ್ತಿತ್ತು, ಆಗ ಕುದುರೆಯನ್ನು ಹೊಡೆಯಲಾರಂಭಿಸಿದರು, ಆಗ ಮುಹಮ್ಮದ್(ಸ)ರು ಹೀಗೆ ಹೇಳಿದರು; “ನಿನ್ನಲ್ಲಿ ದಯೇ ನಮ್ರತೆ ಎಂಬುದು ಇರಬೇಕು” ಎಂದರು. (ಮುಸ್ಲಿಮ್)

   ಮುಹಮ್ಮದ್(ಸ) ಹೇಳಿದರು; ಒಬ್ಬ ಸ್ತ್ರೀ ನರಕಕ್ಕೆ ಹೋಗುವ ಕಾರಣವೆಂದರೆ ಒಂದು ಬೆಕ್ಕು ಆಕೆ ಆ ಬೆಕ್ಕನ್ನು ಕಟ್ಟಿ ಹಾಕಿದ್ದಳು ಅವಳು ಆ ಬೆಕ್ಕಿಗೆ ತಿನ್ನಲೂ ಕೊಡಲಿಲ್ಲ ಕೈ ಬಿಡಲೂ ಇಲ್ಲ” (ಸಹಿಹ್ ಬುಖಾರಿ)

  ಒಬ್ಬ ವ್ಯಕ್ತಿಯು ಒಂದು ಮೇಕೆಯನ್ನು ದಿಬಃ (ಕೊಯ್ಯಲು) ಮಾಡಲು ನೆಲಕ್ಕುರುಳಿಸಿದನು, ನಂತರ ತನ್ನ ಕತ್ತಿಯನ್ನು ಚೂಪುಗೊಳಿಸಲು ಆರಂಭಿಸಿದನು ಆಗ ಮುಹಮ್ಮದ್(ಸ)ರು ನೋಡಿ ಹೇಳಿದರು “ನೀನೇನು ಇದಕ್ಕೆ ಎರಡು ಬಾರಿ ಹೊಡೆಯುವೆಯಾ? ಅದನ್ನು ನೆಲಕ್ಕುರುಳಿಸುವ ಮುನ್ನ ಕತ್ತಿಯನ್ನು ಚುಪುಗೊಳಿಸು” ಎಂದರು ( ಬುಖಾರಿ ಮುಸ್ಲಿಮ್)

ಆಧಾರ

914 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ