ಖುರ್’ಆನಿನ 100ಸಲಹೆಗಳು 

ಖುರ್’ಆನ್ ಇಡೀ ಮಾನವಕುಲಕ್ಕಾಗಿ ಅಲ್ಲಾಹ್’ನು  ಅವತರಿಸಿದ ಗ್ರಂಥವಾಗಿದೆ. ಇದನ್ನು ಸುಮಾರು 23 ವರ್ಷಗಳ ಕಾಲ (13 ವರ್ಷ ಮಕ್ಕಾದಲ್ಲಿ ಮತ್ತು 10 ವರ್ಷಗಳ ಮದೀನಾದಲ್ಲಿ) ಪೈಗಂಬರ್ ಮುಹಮ್ಮದ್(ಸ)ರ ಮೇಲೆ ಅವತರಿಸಲ್ಪಟ್ಟಿದೆ. ಇದು ಅಥವ ಖುರ್’ಆನ್ ಎಂಬುದು ವಿಶ್ವದಲ್ಲಿ ಹೆಚ್ಚು ವ್ಯಾಪಕವಾಗಿ ಓದಲ್ಪಡುವ ಒಂದು ಗ್ರಂಥ. ಇದು ಜಗತ್ತಿನ ಯಶಸ್ಸಿಗೆ ಅವಶ್ಯಕವಾದ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ. ಸನ್ನಿವೇಶದಲ್ಲಿ ಅರ್ಥೈಸಿಕೊಳ್ಳಬಹುದಾದ ರೀತಿಯಲ್ಲಿ ಅದನ್ನು ರಚಿಸಲಾಗಿದೆ. ಇದು ಒಂದು ಘಟನೆಯನ್ನು ಇನ್ನಿತರ, ಸರಳ ಮಾಹಿತಿಯೊಂದಿಗೆ ವಿವರವಾದ ಮಾಹಿತಿಯೊಂದಿಗೆ ಒಂದುಗೂಡಿಸುತ್ತದೆ. [1] [2]

ಪರಿವಿಡಿ

ಖುರ್’ಆನಿನ 100ಸಲಹೆಗಳು

1.            ನೀವು ಸತ್ಯವನ್ನು ಮಿಥ್ಯದ ಜೊತೆ ಬೆರೆಸಬೇಡಿ (ಖುರ್’ಆನ್ 2 : 42)

2.            ನೀವೇನು ಜನರಿಗೆ ಒಳಿತನ್ನು ಆದೇಶಿಸಿ, ಸ್ವತಃ ನಿಮ್ಮನ್ನೇ ಮರೆತು ಬಿಡುತ್ತೀರಾ ? (ಖುರ್’ಆನ್ 2: 44)

3.            ಭೂಮಿಯಲ್ಲಿ ಅಶಾಂತಿ ಹರಡುವವರಾಗಿ ತಿರುಗಬೇಡಿ (ಖುರ್’ಆನ್ 2 ; 60)

4.            ಮಸ್’ಜಿದ್’ಗಳಿಂದ ಜನರನ್ನು ತಡೆಯಬೇಡಿ (ಖುರ್’ಆನ್ 2 : 114)

5.            ಕುರುಡಾಗಿ ಯಾರನ್ನಾದರೂ ಅನುಸರಿಸಬೇಡಿ (ಖುರ್’ಆನ್ 2 : 170)

6.            ಕರಾರು ಅಥವ ಭರವಸೆಯನ್ನು ಮುರಿಯಬೇಡಿ (ಖುರ್’ಆನ್ 2 : 177)

7.            ಲಂಚದಲ್ಲಿ ತೊಡಗಿಸಬೇಡಿ (ಖುರ್’ಆನ್ 2 : 188)

8.            ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹ್’ನ ಮಾರ್ಗದಲ್ಲಿ ಯುದ್ಧ ಮಾಡಿರಿ (ಖುರ್’ಆನ್ 2 ;190)

9.            ಯುದ್ಧದ ಶಿಷ್ಟಾಚಾರಗಳನ್ನು ಇಟ್ಟುಕೊಳ್ಳಿ (ಖುರ್’ಆನ್ 2 :191)

10.          ಅನಾಥರನ್ನು ರಕ್ಷಿಸಿ (ಖುರ್’ಆನ್ 2 : 220)

11.          ಮುಟ್ಟಿನ ಅವಧಿಯಲ್ಲಿ ಲೈಂಗಿಕ ಸಂಭೋಗ ಹೊಂದಬೇಡಿರಿ (ಖುರ್’ಆನ್ 2 : 222)

12.          ತಮ್ಮ ಮಕ್ಕಳಿಗೆ ಪೂರ್ತಿ ಎರಡು ವರ್ಷ ಎದೆ ಹಾಲುಣಿಸಲಿ ನಿಯಮವಿದು (ಖುರ್’ಆನ್ 2 :233)

13.          ಅವರ ಅರ್ಹತೆಯಿಂದ ಆಡಳಿತಗಾರರನ್ನು ಆಯ್ಕೆಮಾಡಿ (ಖುರ್’ಆನ್ 2 : 247)

14.          ಧರ್ಮದಲ್ಲಿ ಬಲವಂತವಿಲ್ಲ  (ಖುರ್’ಆನ್ 2 : 256)

15.          ಜ್ಞಾಪನೆಗಳನ್ನು ಹೊಂದಿರುವ ದಾನವನ್ನು ಅಮಾನ್ಯಗೊಳಿಸಬೇಡಿ (ಖುರ್’ಆನ್ 2 : 264)

16.          ಅವಶ್ಯಕತೆ ಇರುವವರನ್ನು ಹುಡುಕುವ ಮೂಲಕ ಸಹಾಯ ಮಾಡಿ (ಖುರ್’ಆನ್ 2 : 273)

17.          ಬಡ್ಡಿಯನ್ನು ಬಳಸಬೇಡಿ (ಖುರ್’ಆನ್ 2 : 275)

18.          ಇನ್ನು ಅವನು (ಸಾಲ ಪಡೆದವನು) ಕಷ್ಟದಲ್ಲಿದ್ದರೆ, ಸುಸ್ಥಿತಿ ಬರುವ ತನಕ (ಅವನಿಗೆ ) ಕಾಲಾವಕಾಶ ಕೊಡಿರಿ (ಖುರ್’ಆನ್ 2 : 280)

19.          ಸಾಲದ ವ್ಯವಹಾರ ಮಾಡುವಾಗ ಅದನ್ನು ಬರೆದಿಡಿ (ಖುರ್’ಆನ್ 2 : 282)

20.          ಭರವಸೆಯನ್ನು ಇರಿಸಿ (ಖುರ್’ಆನ್ 2 : 283)

21.          ಚಾಡಿ ಮತ್ತು ಅನವಶ್ಯಕ ಗೂಡಾಚಾರಿಕೆ ಮಾಡದಿರಿ (ಖುರ್’ಆನ್ 2 : 283)

22.          ಎಲ್ಲಾ ಪೈಗಂಬರರಲ್ಲಿ ನಂಬಿಕೆಯಿಇಸಿರಿ (ಖುರ್’ಆನ್ 2 : 285)

23.          ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹಾಕದಿರಿ (ಖುರ್’ಆನ್ 2 : 286)

24.          ನೀವು ಭಿನ್ನರಾಗಬೇಡಿರಿ (ಖುರ್’ಆನ್ 3 : 103)

25.          ಕೋಪವನ್ನು ನುಂಗಿಕೊಳ್ಳಿ (ತಡೆಯಿರಿ) (ಖುರ್’ಆನ್ 3 : 134)

26.          ಮಾತಿನಲ್ಲಿ ಒರಟು ಸ್ವಭಾವವಿರದಿರಲಿ (ಖುರ್’ಆನ್ 3 : 159)

27.          ಈ ಜಗತ್ತಿನ ಕುರಿತು ಇದರ ಅದ್ಭುತಗಳ ಮತ್ತು ಸೃಷ್ಟಿ ಬಗ್ಗೆ ಆಳವಾಗಿ ಚಿಂತನೆ ನಡೆಸಿರಿ (ಖುರ್’ಆನ್ 3 : 191)

28.          ಪುರುಷರು ಮತ್ತು ಮಹಿಳೆಯರು ತಮ್ಮ ಕಾರ್ಯಗಳಿಗಾಗಿ ಸಮಾನ ಪ್ರತಿಫಲವನ್ನು ಹೊಂದಿದ್ದಾರೆ (ಖುರ್’ಆನ್ 3 : 195)

29.          ಸತ್ತವರ ಸಂಪತ್ತು ಅವನ ಕುಟುಂಬದ ಸದಸ್ಯರಲ್ಲಿ ವಿತರಿಸಬೇಕು (ಖುರ್’ಆನ್ 4 :7)

30.          ಮಹಿಳೆಯೂ ಸಹ ಪಿತ್ರಾರ್ಜಿತದಲ್ಲಿ ಹಕ್ಕನ್ನು ಹೋದಿದ್ದಾಳೆ (ಖುರ್’ಆನ್ 4 : 7)

31.          ಅನಾಥರ ಸಂಪತ್ತನ್ನು ಅಕ್ರಮವಾಗಿ ಕಬಳಿಸದಿರಿ  (ಖುರ್’ಆನ್ 4 : 10)

32.          ನಿಮ್ಮ ರಕ್ತ ಸಂಬಂಧಿಗಳಲ್ಲಿ ಮದುವೆಯಾಗಬೇಡಿರಿ (ಖುರ್’ಆನ್ 4 : 23)

33.          ನೀವು ಪರಸ್ಪರರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸಬೇಡಿರಿ (ಖುರ್’ಆನ್ 4 : 29)

34.          ಕುಟುಂಬವು ಪುರುಷ ನೇತೃತ್ವದಲ್ಲಿ ಮುನ್ನಡೆಸಬೇಕು (ಖುರ್’ಆನ್ 4 : 34)

35.          ಇತರರೊಂದಿಗೆ ಸೌಜನ್ಯದಿಂದಿರಿ (ಖುರ್’ಆನ್ 4 :36)

36.          ಶೋಚನೀಯವಾಗಿ ಇರದಿರಿ (ಖುರ್’ಆನ್ 4 : 37)

37.          ಅಸೂಯೆ ಪಡದಿರಿ (ಖುರ್’ಆನ್ 4 : 54)

38.          ಜನರ ನಡುವೆ ತೀರ್ಪು ನೀಡುವಾಗ ನ್ಯಾಯಯೋಚಿತವಾಗಿ ತೀರ್ಪು ನೀಡಿರಿ (ಖುರ್’ಆನ್ 4 :58)

39.          ಒಬ್ಬರನ್ನೊಬ್ಬರು ವಧಿಸದಿರಿ (ಖುರ್’ಆನ್ 4 : 92)

40.          ವಂಚಕರ ಪರವಾಗಿ ವಾದಿಸದಿರಿ (ಖುರ್’ಆನ್ 4 : 105)

41.          ನ್ಯಾಯದ ಪರ ಧೃಡವಾಗಿ ನಿಲ್ಲಿರಿ (ಖುರ್’ಆನ್ 4 : 135)

42.          ಸತ್ಕರ್ಮ ಹಾಗೂ ಧರ್ಮ ನಿಷ್ಠೆಯ ಕೆಲಸಗಳಲ್ಲಿ(ಎಲ್ಲರ ಜೊತೆ) ಸಹಕರಿಸಿರಿ (ಖುರ್’ಆನ್ 5 : 2)

43.          ಪಾಪದ ಹಾಗೂ ಅತಿಕ್ರಮದ ಕೆಲಸಗಳಲ್ಲಿ (ಯಾರಜೊತೆಯೂ) ಸಹಕರಿಸಬೇಡಿ (ಖುರ್’ಆನ್ 5 : 2)

44.          ಸತ್ತ ಪ್ರಾಣಿಗಳು, ರಕ್ತ, ಹಾಗೂ ಹಂದಿ ಮಾಂಸವನ್ನು ನಿಷೇಧಿಸಲಾಗಿದೆ (ಖುರ್’ಆನ್ 5 : 3)

45.          ನ್ಯಾಯದ ಪರವಾಗಿ ನಿಲ್ಲಿರಿ (ಖುರ್’ಆನ್ 5 : 8)

46.          ಅಪರಾಧಗಳಿಗೆ ಒಂದು ಆದರ್ಶಪ್ರಾಯ ಅಥವ ತಕ್ಕ ರೀತಿಯಲ್ಲಿ ಶಿಕ್ಷೆ ನೀಡಿ (ಖುರ್’ಆನ್ 5 : 38)

47.          ಪಾಪಿಗಳ ಮತ್ತು ಕಾನೂನುಬಾಹಿರದ ವಿರುದ್ಧ ಹೋರಾಟ (ಖುರ್’ಆನ್ 5 : 63)

48.          ಮಧ್ಯ ಹಾಗೂ ಮಾದಕ ದ್ರವ್ಯಗಳು ನಿಷಿದ್ಧ (ಖುರ್’ಆನ್ 5 : 90)

49.          ಜೂಜಾಟವಾಡದಿರಿ (ಖುರ್’ಆನ್ 5 : 90)

50.          ಇತರರ ದೇವತೆಗಳನ್ನು ಅವಮಾನ ಮಾಡಬೇಡಿ (ಖುರ್’ಆನ್ 6 : 108)

51.          'ಬಹುಮತ ಹೊಂದಿರುವವರು' ಸತ್ಯದ ಮಾನದಂಡವಲ್ಲ (ಖುರ್’ಆನ್ 6  : 116)

52.          ಜನರನ್ನು ಮೋಸಗೊಳಿಸಲು ತೂಕ ಅಥವ ಅಳತೆಯನ್ನು ಕಡಿಮೆ ಮಾಡಬೇಡಿ (ಖುರ್’ಆನ್ 6 : 152)

53.          ಸೊಕ್ಕಿನಿಂದ ಇರಬಾರದು (ಖುರ್’ಆನ್ 7 : 13)

54.          ತಿನ್ನಿರಿ ಮತ್ತು ಕುಡಿಯಿರಿ ಆದರೆ ಅಪವ್ಯಯ ಮಾಡದಿರಿ (ಖುರ್’ಆನ್ 7 ; 31)

55.          ಪ್ರಾರ್ಥನೆ ಸಮಯದಲ್ಲಿ ಉತ್ತಮ ಉಡುಪುಗಳನ್ನು ಧರಿಸಿರಿ (ಖುರ್’ಆನ್ 7 ; 31)

56.          ಇತರರ ತಪ್ಪುಗಳಿಗಾಗಿ ಅವರನ್ನು ಕ್ಷಮಿಸಿರಿ (ಖುರ್’ಆನ್ 7 : 199)

57.          ಯುದ್ಧದಲ್ಲಿ ಬೆನ್ನು ತೋರಿಸಿ ಹಿಂತಿರುಗಬೇಡಿರಿ (ಖುರ್’ಆನ್ 8 : 15)

58.          ರಕ್ಷಣೆ ಪಡೆಯಲು ಬಯಸುವವರನ್ನು ರಕ್ಷಿಸಿ ಮತ್ತು ಸಹಾಯ ಮಾಡಿ (ಖುರ್’ಆನ್ 9 : 6)

59.          ಶುದ್ಧರಾಗಿರಿ ಅಥವ ನಿರ್ಮಲರಾಗಿರಿ (ಖುರ್’ಆನ್ 9 : 108)

60.          ಅಲ್ಲಾಹ್’ನ ಅನುಗ್ರಹದ ಕುರಿತು ನೀವೆಂದೂ ನಿರಾಶರಾಗದಿರಿ (ಖುರ್’ಆನ್ 12 : 87)

61.          ಅಜ್ಞಾನದಿಂದ ಮಾಡಿದ ತಪ್ಪುಗಳನ್ನು ಅಲ್ಲಾಹ್’ನು ಖಂಡಿತವಾಗಿ ಕ್ಷಮಿಸುವನು (ಖುರ್’ಆನ್ 16 : 119)

62.          ನೀವು (ಜನರನ್ನು) ಯುಕ್ತಿಯೊಂದಿಗೆ ಹಾಗೂ ಸದುಪದೇಶದೊಂದಿಗೆ ನಿಮ್ಮ ಒಡೆಯನ ಕಡೆಗೆ ಕರೆಯಿರಿ (ಖುರ್’ಆನ್ 16 :125)

63.          ಯಾವೊಬ್ಬನೂ ಇನ್ನೊಬ್ಬನ ಪಾಪದ ಹೊರೆಯನ್ನು ಹೊರಲಾರನು (ಖುರ್’ಆನ್ 17 :15)

64.          ತಂದೆ ತಾಯಿಯ ಜೊತೆ ಕರ್ತವ್ಯ ನಿಷ್ಟೆ ಅಥವ ಸೌಜನ್ಯಶೀಲರಾಗಿರ ಬೇಕು (ಖುರ್’ಆನ್ 17 : 23)

65.          ಹೆತ್ತವರಿಗೆ ಅಗೌರವದ ಒಂದು ಮಾತನ್ನೂ ಹೇಳದಿರಿ (ಖುರ್’ಆನ್ 17 : 23)

66.          ಹಣವನ್ನು ಅತಿಯಾಗಿ ಅಥವ ಅಳತೆಯಿಲ್ಲದಂತೆ ಖರ್ಚು ಮಾಡದಿರಿ (ಖುರ್’ಆನ್ 17 : 29)

67.          ನೀವು ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ (ಖುರ್’ಆನ್ 17 :31)

68.          ನೀವು ವೈಭಿಚಾರದ ಹತ್ತಿರವೂ ಸುಳಿಯಬೇಡಿ (ಖುರ್’ಆನ್ 17 : 32)

69.          ನಿನಗೆ ಅರಿವಿಲ್ಲದ ವಿಷಯದ ಬೆನ್ನು ಹಿಡಿಯಬೇಡ (ಖುರ್’ಆನ್ 17 : 36)

70.          ಜನರೊಂದಿಗೆ ಸೌಮ್ಯವಾದ ಮಾತನ್ನೇ ಆಡಿರಿ (ಖುರ್’ಆನ್ 20 : 44)

71.          ಅನಗತ್ಯ ಕಾರ್ಯಗಳಿಂದ  ದೂರವಿರಿ (ಖುರ್’ಆನ್ 23 :3)

72.          ಅನುಮತಿಯಿಲ್ಲದೆ ಇತರರ ಮನೆಯೊಳಗೆ ಪ್ರವೇಶಿಸಬೇಡಿ (ಖುರ್’ಆನ್ 24 : 27)

73.          ಅಲ್ಲಾಹ್’ನನ್ನು ಮಾತ್ರ ನಂಬುವವರಿಗೆ ಅಲ್ಲಾಹ್ ಭದ್ರತೆಯನ್ನು ಒದಗಿಸುವನು (ಖುರ್’ಆನ್ 24 : 55)

74.          ಅನುಮತಿಯಿಲ್ಲದೆ ಪೋಷಕರ ಅಥವ ತಂದೆ ತಾಯಿಯರ ಖಾಸಗಿ ಕೊಠಡಿ ಪ್ರವೇಶಿಸಬೇಡಿ (ಖುರ್’ಆನ್ 24 : 58)

75.          ಭೂಮಿಯ ಮೇಲೆ ವಿನಯದ ನಡಿಗೆ ನಡೆಯಿರಿ (ಖುರ್’ಆನ್ 25 :63)

76.          ಈ ಜಗತ್ತಿನಲ್ಲಿನ ನಿಮ್ಮ ಭಾಗವನ್ನು ನಿರ್ಲಕ್ಷಿಸಬೇಡಿರಿ (ಖುರ್’ಆನ್ 28 : 77)

77.          ಅಲ್ಲಾಹ್’ನ ಜೊತೆ ಬೇರಾವ ದೇವರನ್ನೂ ಪ್ರಾರ್ಥಿಸಬೇಡಿರಿ (ಖುರ್’ಆನ್ 28 :88)

78.          ಸಲಿಂಗಕಾಮದಲ್ಲಿ ತೊಡಗಿಸಬೇಡಿ (ಖುರ್’ಆನ್ 29 :29)

79.          ಒಳಿತನ್ನು ಆದೇಶಿಸಿರಿ ಕೆಡುಕಿನಿಂದ ತಡೆಯಿರಿ (ಖುರ್’ಆನ್ 31 : 17)

80.          ಭೂಮಿಯಲ್ಲಿ ದರ್ಪದ ನಡಿಗೆ ನಡೆಯಬೇಡ (ಖುರ್’ಆನ್ 31 : 18)

81.          ನಿನ್ನ ಧ್ವನಿಯನ್ನು ತಗ್ಗಿಸಿಡು (ಖುರ್’ಆನ್ 31 :19)

82.          ಮಹಿಳೆಯರು ತಮ್ಮ ಮೆಚ್ಚನ್ನು ಪ್ರದರ್ಶಿಸಬಾರದು (ಖುರ್’ಆನ್ 33 :33)

83.          ಅಲ್ಲಾಹ್’ನು ಖಂಡಿತ ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ (ಖುರ್’ಆನ್ 39 : 53)

84.          ಅಲ್ಲಾಹ್’ನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ (ಖುರ್’ಆನ್ 39 : 53)

85.          ನೀವು ಕೆಡಕನ್ನು ಒಳಿತಿನಿಂದ ದೂರೀಕರಿಸಿರಿ (ಖುರ್’ಆನ್ 41 :34)

86.          ಸಮಾಲೋಚನೆಯ ಮೂಲಕ ವ್ಯವಹಾರಗಳನ್ನು ನಿರ್ಧರಿಸಿ (ಖುರ್’ಆನ್ 42 :38)

87.          ಜನರ ನಡುವೆ ಸಂಧಾನವನ್ನೇರ್ಪಡಿಸಲು ಪ್ರಯತ್ನಿಸಿ (ಖುರ್’ಆನ್ 49 : 9)

88.          ಇತರರನ್ನು ಗೇಲಿ ಮಾಡಬಾರದು (ಖುರ್’ಆನ್ 49 : 11)

89.          ಅನುಮಾನ, ಸಂಶಯಗಳಿಂದ ದೂರವಿರಿ (ಖುರ್’ಆನ್ 49 :12)

90.          ಅನವಶ್ಯಕ ಗೂಡಾಚಾರಿಕೆ ಮತ್ತು ಚಾಡಿ ಮಾಡದಿರಿ (ಖುರ್’ಆನ್ 49 :12)

91.          ನಿಮ್ಮಲ್ಲಿ ಧರ್ಮ ನಿಷ್ಟರೇ ಅತ್ಯಂತ ಶ್ರೇಷ್ಠರು ನೀತಿಯುಳ್ಳವರು (ಖುರ್’ಆನ್ 49 :13)

92.          ಅತಿಥಿಗಳನ್ನು ಆದರಿಸಿ (ಖುರ್’ಆನ್ 51 : 26)

93.          ಸತ್ಕಾರ್ಯಕ್ಕಾಗಿ ಖರ್ಚು ಮಾಡಿರಿ (ಖುರ್’ಆನ್ 57 : 7)

94.          ಧರ್ಮದಲ್ಲಿ ಸನ್ಯಾಸವಿಲ್ಲ (ಖುರ್’ಆನ್ 57 ; 27)

95.          ಅಲ್ಲಾಹ್’ನು ಜ್ಞಾನಿಗಳಿಗೆ ಉನ್ನತ ಸ್ಥಾನಗಳನ್ನು ನೀಡುವನು (ಖುರ್’ಆನ್ 58 : 11)

96.          ಮುಸ್ಲಿಮೇತರರೊಂದಿಗೆ ಒಂದು ಉತ್ತಮ ರೀತಿಯಲ್ಲಿ ಮತ್ತು ನ್ಯಾಯೋಚಿತ ರೀತಿಯಲ್ಲಿ ವ್ಯವಹರಿಸಿರಿ (ಖುರ್’ಆನ್ 60 : 8)

97.          ಅಪ್ರಾಮಾಣಿಕತನದಿಂದ (ಸಣ್ಣತನದಿಂದ) ತಮ್ಮನ್ನು ರಕ್ಷಿಸಿಕೊಳ್ಳಿ (ಖುರ್’ಆನ್ 64 : 16)

98.          ಅಲ್ಲಾಹ್’ನೊಂದಿಗೆ ಕ್ಷಮೆಯಾಚಿಸಿರಿ. ಅವನು ಕ್ಷಮಿಸುವನು ಮತ್ತು ಕರುಣಾಮಯಿಯಾಗಿದ್ದಾನೆ (ಖುರ್’ಆನ್ 73 : 20)

99.          ಕೇಳುವವರನ್ನು ಹಿಮ್ಮೆಟ್ಟಿಸಬೇಡಿ (ಖುರ್’ಆನ್ 93 :10)

100.        ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡಿರಿ (ಖುರ್’ಆನ್ 107 : 3) [3]

ಉಲ್ಲೇಖಗಳು

[1] http://www.islamweb.net/emainpage/index.php?page=articles&id=135454,

[2] http://sadisblog.wordpress.com/2012/05/05/the-definition-of-the-holy-quran-3/

[3] http://quran.com/

995 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ